ಕಾರ್ತಿಕ್ ಆರ್ಯನ್ ಜೊತೆ ನಟಿಸೋ ಚಾನ್ಸ್ ಪಡೆದ ತೃಪ್ತಿ ದಿಮ್ರಿ; ಹಾರರ್ ಸಿನಿಮಾಗೆ ಆಯ್ಕೆ

ಬಾಲಿವುಡ್​ನ ಯಶಸ್ವಿ ಫ್ರಾಂಚೈಸ್​ಗಳಲ್ಲಿ ಒಂಇದಕ್ಕಱದು ‘ಭೂಲ್ ಭುಲಯ್ಯ’. ಮೊದಲ ಭಾಗದಲ್ಲಿ ಅಕ್ಷಯ್ ಕುಮಾರ್ ಹಾಗೂ ಎರಡನೇ ಭಾಗಕ್ಕೆ ಕಾರ್ತಿಕ್ ಆರ್ಯನ್ ನಟಿಸಿದ್ದರು. ಈಗ ಈ ಚಿತ್ರಕ್ಕೆ ಮೂರನೇ ಪಾರ್ಟ್ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಕಾರ್ತಿಕ್ ಆರ್ಯನ್ ಹೀರೋ. ಈ ಸಿನಿಮಾ ತಂಡಕ್ಕೆ ತೃಪ್ತಿ ಸೇರ್ಪಡೆ ಆಗಿದ್ದಾರೆ.

ಕಾರ್ತಿಕ್ ಆರ್ಯನ್ ಜೊತೆ ನಟಿಸೋ ಚಾನ್ಸ್ ಪಡೆದ ತೃಪ್ತಿ ದಿಮ್ರಿ; ಹಾರರ್ ಸಿನಿಮಾಗೆ ಆಯ್ಕೆ
ತೃಪ್ತಿ
Follow us
ರಾಜೇಶ್ ದುಗ್ಗುಮನೆ
|

Updated on: Feb 22, 2024 | 2:58 PM

ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಇದ್ದರೂ ಅನೇಕ ನಟಿಯರಿಗೆ ಒಳ್ಳೆಯ ಅವಕಾಶಗಳು ಸಿಕ್ಕಿರುವುದಿಲ್ಲ. ಆದರೆ, ಒಂದೇ ಒಂದು ಗೆಲುವಿನಿಂದ ಅವರ ವೃತ್ತಿ ಬದುಕೇ ಬದಲಾಗಿ ಬಿಡುತ್ತದೆ. ಈ ರೀತಿ ವೃತ್ತಿ ಬದುಕು ಬದಲಾದವರ ಸಾಲಿನಲ್ಲಿ ನಟಿ ತೃಪ್ತಿ ದಿಮ್ರಿ ಕೂಡ ಇದ್ದಾರೆ. ‘ಅನಿಮಲ್’ ಸಿನಿಮಾದಲ್ಲಿ (Animal Movie) ಜೋಯಾ ಹೆಸರಿನ ಪಾತ್ರವನ್ನು ತೃಪ್ತಿ ಮಾಡಿದ್ದರು. ಅವರ ಪಾತ್ರ ತೆರೆಮೇಲೆ ಕಡಿಮೆ ಹೊತ್ತು ಕಾಣಿಸಿಕೊಂಡಿದ್ದರೂ ಅವರ ವೃತ್ತಿ ಬದುಕನ್ನೇ ಈ ಚಿತ್ರ ಬದಲಾಯಿಸಿದೆ. ಈಗ ಅವರಿಗೆ ದೊಡ್ಡ ಆಫರ್ ಒಂದು ಸಿಕ್ಕಿದೆ.

‘ಭೂಲ್ ಭುಲಯ್ಯ’ ಬಾಲಿವುಡ್​ನ ಯಶಸ್ವಿ ಫ್ರಾಂಚೈಸ್​ಗಳಲ್ಲಿ ಒಂದು. ಮೊದಲ ಭಾಗದಲ್ಲಿ ಅಕ್ಷಯ್ ಕುಮಾರ್ ಹಾಗೂ ಎರಡನೇ ಭಾಗದಲ್ಲಿ ಕಾರ್ತಿಕ್ ಆರ್ಯನ್ ನಟಿಸಿದ್ದರು. ಈಗ ಈ ಚಿತ್ರಕ್ಕೆ ಮೂರನೇ ಪಾರ್ಟ್ ಸಿದ್ಧವಾಗುತ್ತಿದೆ. ಈ ಚಿತ್ರವನ್ನು ಬರುವ ದೀಪಾವಳಿಗೆ ರಿಲೀಸ್ ಮಾಡೋ ಆಲೋಚನೆ ತಂಡಕ್ಕೆ ಇದೆ. ಈ ಸಿನಿಮಾ ತಂಡಕ್ಕೆ ತೃಪ್ತಿ ಕೂಡ ಸೇರ್ಪಡೆ ಆಗಿದ್ದಾರೆ. ಇದನ್ನೂ ಓದಿ: ‘ಅನಿಮಲ್​’ ಸಿನಿಮಾದ ನಟಿ ತೃಪ್ತಿ ದಿಮ್ರಿ ಬಾಯ್​ಫ್ರೆಂಡ್​ ಫೋಟೋ ವೈರಲ್​

ಮೊದಲ ಭಾಗದಲ್ಲಿ ವಿದ್ಯಾ ಬಾಲನ್ ಅವರು ಮಂಜುಲಿಕಾ ಆಗಿ ನಟಿಸಿದ್ದರು. ಅವರು ಮೂರನೇ ಭಾಗದಲ್ಲೂ ಇರಲಿದ್ದಾರೆ ಎಂದು ತಂಡ ಇತ್ತೀಚೆಗೆ ಘೋಷಣೆ ಮಾಡಿತ್ತು. ಈಗ ತೃಪ್ತಿ ಅವರು ಸೇರ್ಪಡೆ ಆದ ಬಗ್ಗೆ ತಂಡ ಮಾಹಿತಿ ಹಂಚಿಕೊಂಡಿದೆ. ಇದರಿಂದ ತೃಪ್ತಿ ವೃತ್ತಿ ಬದುಕು ಬದಲಾಗೋ ನಿರೀಕ್ಷೆ ಇದೆ. ಒಂದೊಮ್ಮೆ ಈ ಸಿನಿಮಾ ಹಿಟ್ ಆದ ತೃಪ್ತಿ ಕರಿಯರ್​ಗೆ ಮೈಲೇಜ್ ಸಿಗಲಿದೆ. ಅಂದಹಾಗೆ, ಈ ಚಿತ್ರದಲ್ಲಿ ಅವರು ನಿರ್ವಹಿಸುತ್ತಿರೋ ಪಾತ್ರದ ಹೆಸರು ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ. ‘ಭೂಲ್ ಭುಲಯ್ಯ 3’ ಚಿತ್ರಕ್ಕೆ ಅನೀಸ್ ಬಾಜ್ಮೀ ನಿರ್ದೇಶನ ಮಾಡುತ್ತಿದ್ದಾರೆ.

ಕಾರ್ತಿಕ್ ಆರ್ಯನ್ ಪೋಸ್ಟ್..

ಕೆಲವು ವರ್ಷಗಳಿಂದ ತೃಪ್ತಿ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಅವರಿಗೆ ದೊಡ್ಡ ಮಟ್ಟದ ಗೆಲುವು ಸಿಕ್ಕಿರಲಿಲ್ಲ. ಅವರ ವೃತ್ತಿ ಜೀವನವನ್ನು ಬದಲಾಯಿಸಿದ್ದು ‘ಅನಿಮಲ್’ ಸಿನಿಮಾ. ಈ ಚಿತ್ರ ಸೂಪರ್ ಹಿಟ್ ಆದ ಬಳಿಕ ತೃಪ್ತಿ ಜನಪ್ರಿಯತೆ ಕೂಡ ಹೆಚ್ಚಿತು. ಈ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರನ್ನು ಅನೇಕರು ಇಷ್ಟಪಟ್ಟಿದ್ದಾರೆ. ರಣಬೀರ್ ಕಪೂರ್ ನಟನೆಯ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ