ರಾಮನ ಭಕ್ತರಿಗೆ ಅಪಮಾನ: ಹಳೆ ಟ್ವೀಟ್​ಗೆ ಕ್ಷಮೆ ಕೇಳಿದ ‘12th ಫೇಲ್’ ನಟ

Vikrant Massey: ‘12th ಫೇಲ್’ ಸಿನಿಮಾದ ನಟ ವಿಕ್ರಾಂತ್ ಮಸ್ಸಿಯ ಹಳೆಯ ಟ್ವೀಟ್ ಒಂದು ವೈರಲ್ ಆಗಿದ್ದು ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದು, ಟ್ವೀಟ್​ಗೆ ಪ್ರತಿಯಾಗಿ ವಿಕ್ರಾಂತ್ ಮಸ್ಸಿ ಕ್ಷಮೆ ಕೇಳಿದ್ದಾರೆ.

ರಾಮನ ಭಕ್ತರಿಗೆ ಅಪಮಾನ: ಹಳೆ ಟ್ವೀಟ್​ಗೆ ಕ್ಷಮೆ ಕೇಳಿದ ‘12th ಫೇಲ್’ ನಟ
Follow us
ಮಂಜುನಾಥ ಸಿ.
|

Updated on: Feb 21, 2024 | 3:37 PM

12th ಫೇಲ್’ (12th Fail) ಸಿನಿಮಾ ಬಹುದೊಡ್ಡ ಹಿಟ್ ಆಗಿದೆ. ಸಿನಿಮಾಕ್ಕೆ ಪ್ರೇಕ್ಷಕರ ಹಾಗೂ ವಿಮರ್ಶಕರ ಆದರ ದೊರೆತಿದೆ. ಸಿನಿಮಾದ ನಾಯಕ ವಿಕ್ರಾಂತ್ ಮಸ್ಸಿನ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ‘12th ಫೇಲ್’ ಸಿನಿಮಾದ ಯಶಸ್ಸಿನ ಬಳಿಕ ಹಲವು ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಆದರೆ ಈ ನಡುವೆ ವಿಕ್ರಾಂತ್ ಮಸ್ಸಿಯ ಹಳೆಯ ಟ್ವೀಟ್ ಒಂದು ವೈರಲ್ ಆಗಿದ್ದು, ವಿಕ್ರಾಂತ್ ಮಸ್ಸಿ ಹಿಂದೂ ವಿರೋಧಿ ಎಂಬ ಆರೋಪ ಎದುರಾಗಿದೆ. ತಮ್ಮ ಹಳೆಯ ಟ್ವೀಟ್ ವೈರಲ್ ಆಗುತ್ತಿದ್ದಂತೆ ವಿಕ್ರಾಂತ್ ಮಸ್ಸಿ ಕ್ಷಮೆ ಸಹ ಕೇಳಿದ್ದಾರೆ. ಹಾಗಿದ್ದರೆ ಏನಿತ್ತು ವಿಕ್ರಾಂತ್ ಮಸ್ಸಿ ಮಾಡಿದ ಟ್ವೀಟ್​ನಲ್ಲಿ?

2018ರಲ್ಲಿ ವಿಕ್ರಾಂತ್ ಮಸ್ಸಿ ಟ್ವೀಟ್​ ಒಂದನ್ನು ಮಾಡಿದ್ದರು. ಟ್ವೀಟ್​ನಲ್ಲಿ ರಾಮನ ಭಕ್ತರಿಗೆ ಅಪಮಾನವಾಗುವಂಥಹಾ ಸಾಲುಗಳಿದ್ದವು. ಹಿಂದೂ ಕಾರ್ಯಕರ್ತರು ಬಾಲಕಿಯೊಬ್ಬರನ್ನು ಅತ್ಯಾಚಾರ ಮಾಡಿದ ಸುದ್ದಿಗಾಗಿ ರಚಿಸಲಾದ ಕಾರ್ಟೂನ್ ಒಂದನ್ನು ವಿಕ್ರಾಂತ್ ಮಸ್ಸಿ ಹಂಚಿಕೊಂಡಿದ್ದರು, ಕಾರ್ಟೂನ್​ನಲ್ಲಿ, ಸೀತಾಮಾತೆ, ರಾಮನೊಂದಿಗೆ, ‘ಪುಣ್ಯಕ್ಕೆ ನನ್ನನ್ನು ರಾವಣ ಅಪಹರಣ ಮಾಡಿದ, ನಿನ್ನ ಭಕ್ತರು ಅಪಹರಣ ಮಾಡಿದ್ದರೆ ಕಷ್ಟವಾಗುತ್ತಿತ್ತು’ ಎಂಬ ಸಾಲಿತ್ತು. ಕಾರ್ಟೂನು ಹಂಚಿಕೊಂಡಿದ್ದ ವಿಕ್ರಾಂತ್ ಮಸ್ಸಿ, ‘ಅರ್ಧ ಬೆಂದ ಆಲೂಗಡ್ಡೆ, ಅರ್ಧ ಬೆಂದ ರಾಷ್ಟ್ರೀಯವಾದಿಗಳು ದೇಹಕ್ಕೆ ನೋವನ್ನೇ ನೀಡುತ್ತವೆ’ ಎಂದು ವಿಕ್ರಾಂತ್ ಮಸ್ಸಿ ಬರೆದುಕೊಂಡಿದ್ದರು.

ಇದನ್ನೂ ಓದಿ:‘12th ಫೇಲ್​’ ನಿರ್ದೇಶಕನ ಹೆಂಡತಿ ಮೇಲೆ ಸರಣಿ ಆರೋಪ ಮಾಡಿದ ಕಂಗನಾ ರಣಾವತ್​

2018ರ ಆ ಟ್ವೀಟ್ ಇದೀಗ ವೈರಲ್ ಆಗಿದ್ದು, ಅದರ ಬೆನ್ನಲ್ಲೆ ಕ್ಷಮೆ ಕೇಳಿರುವ ವಿಕ್ರಾಂತ್ ಮಸ್ಸಿ, ‘2018ರ ನನ್ನ ಆ ಟ್ವೀಟ್​ ಬಗ್ಗೆ ಕೆಲವು ಮಾತುಗಳನ್ನು ಹೇಳುವುದಕ್ಕಿದೆ. ಹಿಂದೂ ಧರ್ಮಕ್ಕೆ ಅಪಮಾನ ಮಾಡುವ ಅಥವಾ ಕೇಡು ಬಯಸುವ ಉದ್ದೇಶ ನನದ್ದಾಗಿರಲಿಲ್ಲ. ನನ್ನ ಸಹಜ ಬೇಸರವನ್ನು ವ್ಯಂಗ್ಯದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೆ, ಆದರೆ ನಾನು ಆ ಕಾರ್ಟೂನ್ ಅನ್ನು ನನ್ನ ಟ್ವೀಟ್​ ಜೊತೆಗೆ ಸೇರಿಸಬಾರದಿತ್ತು. ಯಾರಿಗೇ ಆಗಲಿ ನನ್ನ ಟ್ವೀಟ್​ನಿಂದ ನೋವಾಗಿದ್ದರೆ ಅಂಥಹವರಿಗೆ ಮನಃಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ನಿಮಗೆಲ್ಲರಿಗೂ ತಿಳಿದೇ ಇರುವಂತೆ, ನಾನು ಎಲ್ಲಾ ನಂಬಿಕೆಗಳನ್ನ ಮತ್ತು ಧರ್ಮಗಳನ್ನು ಸಾಧ್ಯವಾದಷ್ಟು ಹೆಚ್ಚಿನ ಗೌರವಿಸುತ್ತೇನೆ. ನಾವೆಲ್ಲರೂ ಸಮಯದೊಂದಿಗೆ ಬೆಳೆಯುತ್ತೇವೆ ಮತ್ತು ನಮ್ಮ ತಪ್ಪುಗಳಿಂದ ಕಲಿಯುತ್ತೇವೆ’ ಎಂದಿದ್ದಾರೆ ವಿಕ್ರಾಂತ್ ಮಸ್ಸಿ.

‘12th ಫೇಲ್’ ಸಿನಿಮಾದಲ್ಲಿ ವಿಕ್ರಾಂತ್ ಮಸ್ಸಿಯ ನಟನೆಗೆ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ. ‘12th ಫೇಲ್’ ಸಿನಿಮಾದ ಬಳಿಕ ವಿಕ್ರಾಂತ್ ಮಸ್ಸಿಯ ಹಲವಾರು ಸಿನಿಮಾ ಆಫರ್​ಗಳು ಬಂದಿವೆ. ಪ್ರಸ್ತುತ ಐದು ಸಿನಿಮಾಗಳಿವೆ ವಿಕ್ರಾಂತ್ ಮಸ್ಸಿ ಬಳಿ. ‘ಯಾರ್ ಜಿಗ್ರಿ’, ‘ಸೆಕ್ಟರ್ 36’, ‘ಫಿರ್ ಆಯಿ ಹಸೀನ್ ದಿಲ್​ರುಬಾ’, ‘ದಿ ಸಾಬರ್​ಮತಿ ರಿಪೋರ್ಟ್’, ‘ಟಿಎಂಇ’ ಸಿನಿಮಾಗಳಲ್ಲಿ ವಿಕ್ರಾಂತ್ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್