1000 ಗಿಡ ನೆಟ್ಟು ಮಗಳ ಜನ್ಮದಿನ ಆಚರಿಸಿದ ‘ಪ್ರೇಮಲೋಕ’ ಸುಂದರಿ ಜೂಹಿ ಚಾವ್ಲಾ

ಪರಿಸರದ ಬಗ್ಗೆ ನಟಿ ಜೂಹಿ ಚಾವ್ಲಾ ಅವರು ಕಾಳಜಿ ಹೊಂದಿದ್ದಾರೆ. ಮಗಳಿಗೆ ಮತ್ತು ಮುಂದಿನ ತಲೆಮಾರಿನ ಜನರಿಗೆ ಶುದ್ಧ ಗಾಳಿ ಸಿಗಲಿ ಎಂಬ ಉದ್ದೇಶದಿಂದ ಅವರು ಈ ಒಳ್ಳೆಯ ಕಾರ್ಯ ಮಾಡಿದ್ದಾರೆ. ಮಗಳು ಜಾಹ್ನವಿ ಮೆಹ್ತಾ ಹುಟ್ಟುಹಬ್ಬದ ಸಲುವಾಗಿ ಸಾವಿರ ಗಿಡಗಳನ್ನು ನೆಟ್ಟಿರುವುದಾಗಿ ಜೂಹಿ ಚಾವ್ಲಾ ಹೇಳಿದ್ದಾರೆ. ಅವರು ಮಾಡಿದ ಈ ಕೆಲಸವನ್ನು ಅಭಿಮಾನಿಗಳು ಪ್ರಶಂಸಿಸಿದ್ದಾರೆ.

1000 ಗಿಡ ನೆಟ್ಟು ಮಗಳ ಜನ್ಮದಿನ ಆಚರಿಸಿದ ‘ಪ್ರೇಮಲೋಕ’ ಸುಂದರಿ ಜೂಹಿ ಚಾವ್ಲಾ
ಕುಟುಂಬದ ಜೊತೆ ಜೂಹಿ ಚಾವ್ಲಾ
Follow us
ಮದನ್​ ಕುಮಾರ್​
|

Updated on: Feb 21, 2024 | 8:24 AM

ನಟಿ ಜೂಹಿ ಚಾವ್ಲಾ (Juhi Chawla) ಅವರು ಈಗ ಸಿನಿಮಾಗಳ ಆಯ್ಕೆಯಲ್ಲಿ ಸಖತ್​ ಚ್ಯೂಸಿ ಆಗಿದ್ದಾರೆ. ಒಂದು ಕಾಲದಲ್ಲಿ ಟಾಪ್​ ನಟಿಯರಲ್ಲಿ ಒಬ್ಬರಾಗಿದ್ದ ಅವರು ಈಗ ಸಂಪೂರ್ಣವಾಗಿ ಸಂಸಾರದ ಕಡೆ ಗಮನ ಹರಿಸಿದ್ದಾರೆ. ಇತ್ತೀಚೆಗೆ ಅವರು ಮಗಳ (Juhi Chawla Daughter) ಜನ್ಮದಿನವನ್ನು ವಿಶೇಷವಾಗಿ ಸೆಲೆಬ್ರೇಟ್​ ಮಾಡಿದ್ದಾರೆ ಆ ಮೂಲಕ ಅವರು ಸುದ್ದಿ ಆಗಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮಕ್ಕಳ ಬರ್ತ್​ಡೇ ಎಂದರೆ ಅದ್ದೂರಿತನ ಇರುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಡಂಭರದ ಪ್ರದರ್ಶನ ಮಾಡಲಾಗುತ್ತದೆ. ಆದರೆ ಜೂಹಿ ಚಾವ್ಲಾ ಅವರು ಅಂಥದ್ದಕ್ಕೆಲ್ಲ ಬ್ರೇಕ್​ ಹಾಕಿದ್ದಾರೆ. ಪುತ್ರಿ ಜಾಹ್ನವಿ ಮೆಹ್ತಾ (Jahnavi Mehta) ಹುಟ್ಟುಹಬ್ಬಕ್ಕೆ ಸಾವಿರ ಗಿಡ ನೆಡುವ ಮೂಲಕ ಜೂಹಿ ಚಾವ್ಲಾ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ.

ಜೂಹಿ ಚಾವ್ಲಾ ಅವರ ಪುತ್ರಿ ಜಾಹ್ನವಿ ಮೆಹ್ತಾ ಈಗ 23ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಸಿನಿಮಾದಲ್ಲಿ ಆಸಕ್ತಿ ಇಲ್ಲ. ತಾಯಿಯಂತೆ ನಟಿಯಾಗಬೇಕು ಎಂದು ಜಾಹ್ನವಿ ಮೆಹ್ತಾ ಬಯಸಿಲ್ಲ. ಬದಲಿಗೆ ಅವರು ಬರಹಗಾರ್ತಿ ಆಗಬೇಕು ಎಂದು ತೀರ್ಮಾನಿಸಿದ್ದಾರೆ. ಆ ಕಾರಣದಿಂದ ಸ್ಟಾರ್​ ಕಿಡ್​ಗಳ ಗುಂಪಿನಲ್ಲಿ ಅವರು ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಈಗ ಅವರ ಹುಟ್ಟುಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಗಿದೆ.

ಹುಟ್ಟುಹಬ್ಬದ ದಿನ ಪೋಷಕರು ಏನು ಗಿಫ್ಟ್​ ನೀಡುತ್ತಾರೆ ಎಂಬ ಕುತೂಹಲ ಮಕ್ಕಳಿಗೆ ಇರುತ್ತದೆ. ಒಂದೆರಡು ವರ್ಷಕ್ಕೆ ಹಾಳಾಗುವಂತಹ ಗಿಫ್ಟ್​ ನೀಡುವ ಬದಲು, ಜೀವನ ಪೂರ್ತಿ ಜೊತೆಯಾಗಿ ಇರುವಂತಹ ಉಡುಗೊರೆ ನೀಡಲು ಜೂಹಿ ಚಾವ್ಲಾ ನಿರ್ಧರಿಸಿದ್ದಾರೆ. ಮಗಳ ಜನ್ಮದಿನದ ಪ್ರಯುಕ್ತ ಅವರು ಸಾವಿರ ಗಿಡಗಳನ್ನು ನೆಟ್ಟಿರುವುದಾಗಿ ಹೇಳಿದ್ದಾರೆ. ಆ ಮೂಲಕ ಅವರು ಪರಿಸರ ಪ್ರೇಮ ತೋರಿದ್ದಾರೆ.

ಇದನ್ನೂ ಓದಿ: ಜೂಹಿ ಚಾವ್ಲಾ ಮದುವೆ ಆಗಲು ಹೊರಟಿದ್ದ ಸಲ್ಲು; ತಂದೆಯಿಂದಲೇ ಬಂದಿತ್ತು ವಿರೋಧ

‘ನನ್ನ ಪುಟ್ಟ ಗೊಂಬೆ ಜಾಹ್ನವಿ ಸಲುವಾಗಿ, ಆಕೆಯ ಜನ್ಮದಿನದಂದು 1000 ಮರಗಳು. ಅವಳು ಮತ್ತು ಅವಳ ಪೀಳಿಗೆಯವರು ಶುದ್ಧವಾದ ಗಾಳಿ ಉಸಿರಾಡಲಿ, ನಕ್ಕು ನಲಿಯಲು ಅಳಿಲು, ಹಕ್ಕಿ, ಚಿಟ್ಟೆಗಳು ಬರಲಿ ಎಂಬ ಹಾರೈಕೆ ಮತ್ತು ಬಯಕೆ ನಮ್ಮದು. ಹ್ಯಾಪಿ ಬರ್ತ್​ಡೇ’ ಎಂದು ಜೂಹಿ ಚಾವ್ಲಾ ಅವರು ಪೋಸ್ಟ್​ ಮಾಡಿದ್ದಾರೆ. ಮಗಳ ಜೊತೆ ಇರುವ ಫೋಟೋ ಮತ್ತು ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಕಮೆಂಟ್​ ಮಾಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಜೂಹಿ ಚಾವ್ಲಾ ಅವರು ತುಂಬ ಬ್ಯುಸಿ ನಟಿ ಆಗಿದ್ದರು. ಹಿಂದಿ, ಕನ್ನಡ, ತಮಿಳು, ತೆಲುಗು, ಬೆಂಗಾಲಿ ಮುಂತಾದ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆದರು. ಕನ್ನಡದಲ್ಲಿ ಅವರು ನಟಿಸಿದ ‘ಪ್ರೇಮಲೋಕ’, ‘ಕಿಂದರಿ ಜೋಗಿ’ ಸಿನಿಮಾಗಳು ಈಗಲೂ ಅಭಿಮಾನಿಗಳ ಫೇವರಿಟ್​ ಲಿಸ್ಟ್​ನಲ್ಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ