ಜೈ ಮೆಹ್ತಾ ಅವರ ಎರಡನೇ ಪತ್ನಿ ಆಗಲು ಜೂಹಿ ಚಾವ್ಲಾ ನಿರ್ಧರಿಸಿದ್ದೇಕೆ?

ಜೂಹಿ ಚಾವ್ಲಾ 1986ರಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ‘ಸಲ್ತನತ್’ ಅವರು ನಟಿಸಿದ ಮೊದಲ ಸಿನಿಮಾ. ಆ ಬಳಿಕ ಹಲವು ಸಿನಿಮಾಗಳಲ್ಲಿ ಜೂಹಿ ನಟಿಸಿದರು. ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಉದ್ಯಮಿ ಜೈ ಮೆಹ್ತಾ ಅವರನ್ನು ವಿವಾಹವಾದರು.

ಜೈ ಮೆಹ್ತಾ ಅವರ ಎರಡನೇ ಪತ್ನಿ ಆಗಲು ಜೂಹಿ ಚಾವ್ಲಾ ನಿರ್ಧರಿಸಿದ್ದೇಕೆ?
ಜೈ ಮೆಹ್ತಾ-ಜೂಹಿ ಚಾವ್ಲಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Nov 13, 2023 | 12:40 PM

90ರ ದಶಕದಲ್ಲಿ ಬೇಡಿಕೆಯ ನಟಿ ಆಗಿದ್ದರು ನಟಿ ಜೂಹಿ ಚಾವ್ಲಾ (Juhi Chawla). ಸದ್ಯ ಅವರು ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರು ತಮ್ಮ ವೈಯಕ್ತಿಕ ಬದುಕಿನ ವಿಚಾರದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಈಗ ನಟಿ ಜೂಹಿ ಚಾವ್ಲಾ ಅವರ ವೈಯಕ್ತಿಕ ಜೀವನ ಮತ್ತೆ ಚರ್ಚೆಯಾಗುತ್ತಿದೆ. ಜೂಹಿ ಚಾವ್ಲಾ ಅವರು ಉದ್ಯಮಿ ಜೈ ಮೆಹ್ತಾ ಅವರನ್ನು 1995ರಲ್ಲಿ ವಿವಾಹವಾದರು. ಮದುವೆಯಾಗಿ ಆರು ವರ್ಷಗಳಾದರೂ ನಟಿ ತಮ್ಮ ವಿವಾಹ ವಿಚಾರವನ್ನು ಯಾರಿಗೂ ಹೇಳಲಿಲ್ಲ. ಇದಕ್ಕೆ ಕಾರಣವನ್ನು ಸ್ವತಃ ನಟಿಯೇ ಸಂದರ್ಶನವೊಂದರಲ್ಲಿ ಹೇಳಿದ್ದರು.

ಜೂಹಿ ಚಾವ್ಲಾ 1986ರಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ‘ಸಲ್ತನತ್’ ಅವರು ನಟಿಸಿದ ಮೊದಲ ಸಿನಿಮಾ. ಆ ಬಳಿಕ ಹಲವು ಸಿನಿಮಾಗಳಲ್ಲಿ ಜೂಹಿ ನಟಿಸಿದರು. ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಉದ್ಯಮಿ ಜೈ ಮೆಹ್ತಾ ಅವರನ್ನು ವಿವಾಹವಾದರು. ಆದರು ಇದು ಗುಟ್ಟಾಗಿ ಇತ್ತು. ಜೂಹಿ ಚಾವ್ಲಾ ಗರ್ಭಿಣಿಯಾದಾಗ ಮದುವೆಯ ಬಗ್ಗೆ ಎಲ್ಲರಿಗೂ ತಿಳಿಯಿತು.

ಸಂದರ್ಶನವೊಂದರಲ್ಲಿ, ನಟಿ ಸ್ವತಃ ಮದುವೆಯ ಬಗ್ಗೆ ಬಹಿರಂಗಪಡಿಸಿದ್ದರು. ‘ನಾನು ಮದುವೆಯಾದಾಗ ವೃತ್ತಿಜೀವನದ ಉತ್ತುಂಗದಲ್ಲಿದ್ದೆ. ಮದುವೆಯ ಬಗ್ಗೆ ಹೇಳಿದರೆ ನನ್ನ ವೃತ್ತಿಜೀವನ ಕೊನೆಗೊಳ್ಳುತ್ತಿತ್ತು’ ಎಂದು ಅವರು ಹೇಳಿದ್ದರು. ಜೂಹಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.

ಜೈ ಮೆಹ್ತಾ ಎರಡನೇ ಪತ್ನಿ ಜೂಹಿ ಚಾವ್ಲಾ

ಜೂಹಿ ಚಾವ್ಲಾ ಜೈ ಮೆಹ್ತಾ ಅವರ ಎರಡನೇ ಪತ್ನಿ. ಜೈ ಮೆಹ್ತಾ ಅವರ ಮೊದಲ ಪತ್ನಿ ವಿಮಾನ ಅಪಘಾತದಲ್ಲಿ ಮೃತಪಟ್ಟರು. ಜೈ ಮೆಹ್ತಾ ತಮ್ಮ ಮೊದಲ ಹೆಂಡತಿಯ ಮರಣದ ನಂತರ ಸಂಪೂರ್ಣವಾಗಿ ಕುಗ್ಗಿ ಹೋದರು. ಆಗ ಜೂಹಿ ಚಾವ್ಲಾ ಜೈ ಮೆಹ್ತಾ ಅವರನ್ನು ಬೆಂಬಲಿಸಿದರು. ಆಗ ಇಬ್ಬರ ಮಧ್ಯೆ ಆಪ್ತತೆ ಮೂಡಿತು. ನಂತರ ಜೈ ಮೆಹ್ತಾ ಮತ್ತು ಜೂಹಿ ಚಾವ್ಲಾ ವಿವಾಹವಾದರು.

ಜೂಹಿ ಚಾವ್ಲಾ ಮತ್ತು ಜೈ ಮೆಹ್ತಾ ವೈವಾಹಿಕ ಜೀವನದಲ್ಲಿ ಸಂತೋಷವಾಗಿದ್ದಾರೆ. ಇಬ್ಬರ ನಡುವೆ ಆರು ವರ್ಷಗಳ ಅಂತರವಿದೆ. ಮದುವೆಯ ನಂತರ, ಜೂಹಿ ಚಾವ್ಲಾ ಇಬ್ಬರು ಮಕ್ಕಳಿಗೆ ಜನ್ಮ ನೀಡಿದರು. ಜೂಹಿ ಮಗಳ ಹೆಸರು ಜಾನ್ವಿ ಮೆಹ್ತಾ ಮತ್ತು ಮಗನ ಹೆಸರು ಅರ್ಜುನ್ ಮೆಹ್ತಾ.

ಇದನ್ನೂ ಓದಿ: ಜೂಹಿ ಚಾವ್ಲಾ ಪುತ್ರಿ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡಿದ ನಟ ಶಾರುಖ್​ ಖಾನ್​; ಫೋಟೋ ವೈರಲ್​

ಜೂಹಿ ಚಾವ್ಲಾ ಕೆಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಪೋಷಕ ಪಾತ್ರ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಜೂಹಿ ಚಿತ್ರರಂಗದಿಂದ ದೂರವಾಗಿದ್ದರೂ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:33 pm, Mon, 13 November 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ