ವರ್ತೂರು ಸಂತೋಷ್​ಗೆ ಬಿಗ್​ ಬಾಸ್​ನಲ್ಲಿ ಬಿಗ್ ಸರ್​ಪ್ರೈಸ್; ಅವರು ಉಳಿದುಕೊಳ್ಳೋದು ಪಕ್ಕಾ

ವೀಕೆಂಡ್​ನಲ್ಲಿ ಸಂತೋಷ್ ಅವರು ಮನೆಗೆ ಹೋಗುತ್ತೇನೆ ಎಂದರು. ಆದರೆ, ಇದಕ್ಕೆ ಸುದೀಪ್ ಅವಕಾಶ ನೀಡುವುದಿಲ್ಲ ಎಂದರು. ಅವರ ಮನಸ್ಸು ಗೊಂದಲದಲ್ಲೇ ಇತ್ತು. ಈಗ ಬಿಗ್ ಬಾಸ್ ಕಡೆಯಿಂದ ಅವರಿಗೆ ಸರ್​ಪ್ರೈಸ್ ಸಿಕ್ಕಿದೆ.

ವರ್ತೂರು ಸಂತೋಷ್​ಗೆ ಬಿಗ್​ ಬಾಸ್​ನಲ್ಲಿ ಬಿಗ್ ಸರ್​ಪ್ರೈಸ್; ಅವರು ಉಳಿದುಕೊಳ್ಳೋದು ಪಕ್ಕಾ
ವರ್ತೂರು ಸಂತೋಷ್
Follow us
ರಾಜೇಶ್ ದುಗ್ಗುಮನೆ
|

Updated on: Nov 13, 2023 | 2:42 PM

‘ಬಿಗ್ ಬಾಸ್​’ನಿಂದ ನಾನು ಹೊರ ಹೋಗುತ್ತೇನೆ ಎಂದು ವರ್ತೂರು ಸಂತೋಷ್ (Varthur Santosh) ಅವರು ಹಠ ಹಿಡಿದು ಕುಳಿತಿದ್ದರು. ಸುದೀಪ್ ಅವರು ಪರಿಪರಿಯಾಗಿ ಕೇಳಿಕೊಂಡರೂ ಅವರು ಕೇಳೋಕೆ ಸಿದ್ಧರಿರಲಿಲ್ಲ. ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಮುಖ್ಯ ಕಲಾವಿದೆ ಸುಷ್ಮಾ ರಾವ್ ಅವರು ಬಿಗ್ ಬಾಸ್​ಗೆ ಬಂದು ಸಂತೋಷ್ ಅವರ ಮನ ಒಲಿಸಲು ಪ್ರಯತ್ನಿಸದರೂ ಮನಸ್ಸು ಬದಲಾಗಿರಲಿಲ್ಲ. ಈಗ ಬಿಗ್ ಬಾಸ್​ನಲ್ಲಿ ಅವರಿಗೆ ಸರ್​ಪ್ರೈಸ್ ಸಿಕ್ಕಿದೆ. ದೊಡ್ಮನೆಯಲ್ಲಿ ಅಮ್ಮನ ಕೈತುತ್ತು ಸಿಕ್ಕಿದೆ.

‘ಬಿಗ್ ಬಾಸ್’ ಒಳಗೆ ವರ್ತೂರು ಸಂತೋಷ್ ಅವರು ಎಂಟ್ರಿ ಕೊಟ್ಟರು. ಅವರ ಕತ್ತಿನಲ್ಲಿದ್ದ ಹುಲಿಯ ಉಗುರು ಎಲ್ಲರ ಕಣ್ಣುಕುಕ್ಕಿತು. ವನ್ಯಜೀವಿ ಸಂರಕ್ಷಣೆ ಆ್ಯಕ್ಟ್ ಅಡಿಯಲ್ಲಿ ಅವರನ್ನು ಬಂಧಿಸಲಾಯಿತು. 14 ದಿನ ನ್ಯಾಯಾಂಗ ಬಂಧನವನ್ನೂ ವಿಧಿಸಲಾಯಿತು. ಕೆಲವೇ ದಿನಗಳಲ್ಲಿ ಅವರಿಗೆ ಜಾಮೀನು ಸಿಕ್ಕಿತು. ಜಾಮೀನು ಪಡೆದು ಹೊರ ಬಂದ ಅವರು ನೇರವಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ.

ಅಲ್ಲಿ ಮೊದಲ ವಾರ ಅವರು ನಾರ್ಮಲ್ ಆಗಿದ್ದರು. ಎರಡನೇ ವಾರ ಅವರು ಡಲ್ ಹೊಡೆದಿದ್ದಾರೆ. ವೀಕೆಂಡ್​ನಲ್ಲಿ ಅವರು ಮನೆಗೆ ಹೋಗುತ್ತೇನೆ ಎಂದರು. ಆದರೆ, ಇದಕ್ಕೆ ಸುದೀಪ್ ಅವಕಾಶ ನೀಡುವುದಿಲ್ಲ ಎಂದರು. ಅವರ ಮನಸ್ಸು ಗೊಂದಲದಲ್ಲೇ ಇತ್ತು. ಈಗ ಬಿಗ್ ಬಾಸ್ ಕಡೆಯಿಂದ ಅವರಿಗೆ ಸರ್​ಪ್ರೈಸ್ ಸಿಕ್ಕಿದೆ.

ಇದನ್ನೂ ಓದಿ: ‘ಕಾಲಿಗೆ ಬೀಳ್ತೀನಿ, ಇಲ್ಲೇ ಉಳಿದುಕೊಳ್ಳಿ’; ವರ್ತೂರು ಸಂತೋಷ್​ಗೆ ತುಕಾಲಿ ಮನವಿ

ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲರ ಮನೆಯಿಂದ ಊಟ ಬಂದಿತ್ತು. ವರ್ತೂರು ಸಂತೋಷ್​ಗೆ ಮಾತ್ರ ಈ ಭಾಗ್ಯ ಸಿಗಲಿಲ್ಲ. ಇದನ್ನು ನೋಡಿ ಅವರಿಗೆ ಸಾಕಷ್ಟು ಬೇಸರ ಆಯಿತು. ಆ ಬಳಿಕ ಮನೆಯಿಂದ ಊಟವನ್ನು ಹಿಡಿದುಕೊಂಡು ಬಿಗ್ ಬಾಸ್ ಒಳಗೆ ಬಂದರು ವರ್ತೂರು ಸಂತೋಷ್ ತಾಯಿ. ಇದನ್ನು ನೋಡಿ ಖುಷಿಯಾದರು ಅವರು. ‘ನನ್ನ ಆಸೆಯನ್ನು ನೆರವೇರಿಸುತ್ತಾನೆ ನನ್ನ ಮಗ’ ಎಂದು ವರ್ತೂರು ಸಂತೋಷ್ ತಾಯಿ ಹೇಳಿದ್ದಾರೆ. ಈ ಮೂಲಕ ಸಂತೋಷ್ ಮನೆಯಲ್ಲಿ ಉಳಿದುಕೊಳ್ಳೋದು ಬಹುತೇಕ ಖಚಿತ ಆಗಿದೆ. ಈ ಎಪಿಸೋಡ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಆಗಲಿದೆ. 24 ಗಂಟೆ ಲೈವ್ ನೋಡೋಕೆ ಅವಕಾಶ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್