AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ಹಠ ಕಾಣುತ್ತಿಲ್ಲ’; ಎಂದ ಸುದೀಪ್; ‘ನನಗೆ ಅದು ತುಂಬಾ ಕಾಡುತ್ತಿದೆ’ ಎಂದ ಸಂತೋಷ್

‘ಸಂತೋಷ್ ಅವರೇ ನೀವು ಬಿಗ್ ಬಾಸ್ ಮನೆ ಒಳಗೆ ಹೋಗುವಾಗ ರೈತರ ಪರ ಎಂದೆಲ್ಲ ಹೇಳಿಕೊಂಡು ಹೋದಿರಿ. ಮೊದಲು ಇದ್ದ ಹಠ ಈಗ ಕಾಣುತ್ತಿಲ್ಲ’ ಎಂದರು ಸುದೀಪ್.

‘ನಿಮ್ಮ ಹಠ ಕಾಣುತ್ತಿಲ್ಲ’; ಎಂದ ಸುದೀಪ್; ‘ನನಗೆ ಅದು ತುಂಬಾ ಕಾಡುತ್ತಿದೆ’ ಎಂದ ಸಂತೋಷ್
ಸುದೀಪ್-ಸಂತೋಷ್
Follow us
ರಾಜೇಶ್ ದುಗ್ಗುಮನೆ
|

Updated on: Nov 13, 2023 | 7:33 AM

‘ಬಿಗ್ ಬಾಸ್ ಕನ್ನಡ’ ಸೀಸನ್ 10ರಲ್ಲಿ ಹಲವು ವಿಚಾರಗಳು ಸಖತ್ ಚರ್ಚೆಯಲ್ಲಿವೆ. ಅದರಲ್ಲೂ ವರ್ತೂರು ಸಂತೋಷ್ ಅವರ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಈ ಕಾರಣಕ್ಕೆ ಅವರು ಬಿಗ್ ಬಾಸ್​ನಿಂದ (Bigg Boss) ಹೊರಗೆ ಬರಬೇಕಾಯಿತು. ಈಗ ಮರಳಿ ಅವರು ದೊಡ್ಮನೆ ಸೇರಿದ್ದಾರೆ. ಅಲ್ಲಿ ಅವರಿಗೆ ಭಯ ಕಾಡುತ್ತಿದೆ. ತಾವು ಹೊರಗೆ ಬರುವುದಾಗಿ ವರ್ತೂರು ಸಂತೋಷ್ ಅವರು ಹಠ ಹಿಡಿದಿದ್ದಾರೆ.

‘ವರ್ತೂರು ಸಂತೋಷ್ ಅವರೇ ನೀವು ಸೇವ್ ಆಗಿದ್ದೀರಿ’ ಎಂದರು ಸುದೀಪ್. ವೋಟ್ ಹಾಕಿದವರಿಗೆ ವರ್ತೂರು ಸಂತೋಷ್ ಅವರು ಧನ್ಯವಾದ ತಿಳಿಸಿದರು. ‘ಸಂತೋಷ್ ಅವರೇ ನೀವು ಬಿಗ್ ಬಾಸ್ ಮನೆ ಒಳಗೆ ಹೋಗುವಾಗ ರೈತರ ಪರ ಎಂದೆಲ್ಲ ಹೇಳಿಕೊಂಡು ಹೋದಿರಿ. ಮೊದಲು ಇದ್ದ ಹಠ ಈಗ ಕಾಣುತ್ತಿಲ್ಲ’ ಎಂದರು ಸುದೀಪ್.

‘ಹೊರಗೆ ಒಂದು ಘಟನೆ ನಡೆಯಿತು. ಆ ಘಟನೆಯಿಂದ ಹೊರಗೆ ಬರೋಕೆ ಸಾಧ್ಯವೇ ಆಗುತ್ತಿಲ್ಲ. ಹೊರಗೆ ನಮ್ಮವರನ್ನು ಬಿಟ್ಟು ಬಂದು, ನಾನು ಇಲ್ಲಿ ಸೇಫ್ ಆಗಿದ್ದೇನೆ ಅನಿಸುತ್ತಿದೆ’ ಎಂದರು ವರ್ತೂರು ಸಂತೋಷ್. ‘ಇಲ್ಲಿ ಎಲ್ಲವೂ ಚೆನ್ನಾಗಿದೆ. ಕುಟುಂಬದವರ ಟಚ್​ನಲ್ಲಿ ಇದ್ದೇವೆ. ಎಲ್ಲರೂ ಚೆನ್ನಾಗಿದ್ದಾರೆ. ನಾನು ಇದನ್ನು ನಂಬಿಸೋಕೆ ಹೇಳುತ್ತಿಲ್ಲ. ಹೊರಗೆ ಎಲ್ಲವೂ ನಾರ್ಮಲ್ ಆಗಿದೆ. ಇದೇ ವಿಚಾರ ಇಟ್ಟುಕೊಂಡು ನೀವು ದೊಡ್ಮನೆಯಿಂದ ಹೊರಬಂದರೆ ನೀವು ಬೇಸರ ಮಾಡಿಕೊಳ್ಳಬೇಕಾಗುತ್ತದೆ’ ಎಂದರು ಸುದೀಪ್.

ಇದನ್ನೂ ಓದಿ: ‘ಸೇವ್ ಆದರೂ ಹೊರಹೋಗ್ತೀನಿ ಎಂದ ಸಂತೋಷ್’; ಇದು ಸಾಧ್ಯವಿಲ್ಲ ಎಂದು ವೇದಿಕೆಯಿಂದ ಹೊರನಡೆದ ಸುದೀಪ್

ಆದರೆ, ಸಂತೋಷ್ ಅವರು ಸುದೀಪ್ ಮಾತನ್ನು ಕೇಳಲೇ ಇಲ್ಲ. ಹಲವು ನಿಮಿಷಗಳ ಕಾಲ ಸುದೀಪ್ ಅವರು ಸಂತೋಷ್ ಅವರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಅವರು ಇದಕ್ಕೆ ಒಪ್ಪಲೇ ಇಲ್ಲ. ದೊಡ್ಮನೆಯಿಂದ ಹೊರ ಹೋಗುತ್ತೇನೆ ಎಂದು ಪದೇ ಪದೇ ಹೇಳಿದರು. ಕೊನೆಗೆ ಸುದೀಪ್ ಅವರು ಬೇಸರದಿಂದ ಹೊರ ನಡೆದರು. ಈ ಮೂಲಕ ಯಾರು ಬಿಗ್ ಬಾಸ್​ನಿಂದ ಹೊರ ಹೋದರು ಅನ್ನೋದನ್ನು ತೋರಿಸಲೇ ಇಲ್ಲ. ಎಲಿಮಿನೇಷನ್ ಇಲ್ಲದೆ ಭಾನುವಾರದ ಎಪಿಸೋಡ್ ಮುಗಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ