ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗುವ ನಿರ್ಧಾರ ತಳೆದ ವರ್ತೂರು ಸಂತೋಷ್

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10 ರಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಯಾರಿಗೆ ಜನರ ಮತ ಕಡಿಮೆ ಬಂದಿದೆಯೋ ಅವರು ಮನೆಯಿಂದ ಹೊರಗೆ ಹೋಗುವುದು ಸಾಮಾನ್ಯ. ಆದರೆ ಸೇಫ್ ಆಗಿದ್ದರೂ ಸಹ ವರ್ತೂರು ಸಂತೋಷ್ ಮನೆಯಿಂದ ಹೊರಗೆ ಹೋಗುವ ನಿರ್ಣಯ ಮಾಡಿದರು.

ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗುವ ನಿರ್ಧಾರ ತಳೆದ ವರ್ತೂರು ಸಂತೋಷ್
Follow us
ಮಂಜುನಾಥ ಸಿ.
|

Updated on:Nov 12, 2023 | 11:32 PM

ಬಿಗ್​ಬಾಸ್ (Bigg Boss) ಮನೆಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಪ್ರತಿ ವಾರಾಂತ್ಯಕ್ಕೆ ಒಬ್ಬ ಸ್ಪರ್ಧಿ ಮನೆಗೆ ಹೋಗುವುದು ಸಾಮಾನ್ಯ. ಯಾರು ಮನೆಗೆ ಹೋಗುತ್ತಾರೆ ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಮತಗಳ ಮೂಲಕ. ಆದರೆ ಈ ಬಾರಿ ಸೇಫ್ ಆದ ಸ್ಪರ್ಧಿಯೊಬ್ಬರು ಮನೆಗೆ ಹೋಗಿದ್ದಾರೆ. ಅವರೇ ವರ್ತೂರು ಸಂತೋಷ್. ಭಾರಿ ದೊಡ್ಡ ಸಂಖ್ಯೆಯ ಮತಗಳು ಬಿದ್ದಿದ್ದರೂ ಸಹ ವರ್ತೂರು ಸಂತೋಷ್ ಅವರು ತಮಗೆ ಇಲ್ಲಿ ಸರಿಬರುತ್ತಿಲ್ಲ, ನಾನು ಮನೆಯಿಂದ ಹೊರಗೆ ಹೋಗುತ್ತೀನಿ ಎಂದರು. ಸುದೀಪ್​ರ ಮನವಿಯ ಬಳಿಕವೂ ಮನಸ್ಸು ಬದಲಿಸಲಿಲ್ಲ. ಆದರೆ ವರ್ತೂರು ಸಂತೋಷ್ ಅವರು ಹೊರಗೆ ಹೋದರೋ ಇಲ್ಲವೋ ಎಂಬುದು ಭಾನುವಾರದ ಎಪಿಸೋಡ್​ನಲ್ಲಿ ಸ್ಪಷ್ಟವಾಗಲಿಲ್ಲ.

ವರ್ತೂರು ಸಂತೋಷ್ ಅವರು ಭಾನುವಾರದ ಎಪಿಸೋಡ್​ನ ಬ್ರೇಕ್​ನ ಸಮಯದಲ್ಲಿಯೇ ತಾನು ಈ ಬಾರಿ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ನಿಶ್ಚಯಿಸಿಬಿಟ್ಟಿದ್ದರು. ನೀತು ಹಾಗೂ ತುಕಾಲಿ ಸಂತೋಷ್​ಗೆ ಸಹ ಹೇಳಿ, ನಾನು ಈ ವಾರ ಹೊರಗೆ ಹೋಗುತ್ತೇನೆ. ನೀವಿಬ್ಬರೂ ಚೆನ್ನಾಗಿ ಆಡಿ, ಹೊರಗೆ ಬಂದಾಗ ಭೇಟಿ ಆಗೋಣ ಏನಾದರೂ ಮಾಡೋಣ ಎಂದೆಲ್ಲ ಹೇಳಿ ವಿದಾಯವನ್ನು ಸಹ ಹೇಳಿದರು.

ಸುದೀಪ್​ ನಾಮಿನೇಷನ್ ಪ್ರಕ್ರಿಯೆ ಹಂತಕ್ಕೆ ಬಂದಾಗ ನೀತು, ಇಶಾನಿ, ವರ್ತೂರು ಸಂತೋಷ್ ಸ್ನೇಹಿತ್ ಉಳಿದಿದ್ದರು. ಸ್ನೇಹಿತ್ ಮೊದಲಿಗೆ ಬಚಾವ್ ಆದರು. ಬಳಿಕ ವರ್ತೂರು ಸಂತೋಷ್ ಅವರು ಸೇಫ್ ಆಗಿದ್ದಾರೆ ಎಂದು ಸುದೀಪ್ ಘೋಷಣೆ ಮಾಡಿದರು. ಆದರೆ ಆಗ ಮಾತನಾಡಿದ ವರ್ತೂರು ಸಂತೋಷ್ ನನಗೆ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ ನನ್ನನ್ನು ಹೊರಗೆ ಕಳಿಸಿ ಎಂದು ಸುದೀಪ್ ಬಳಿ ಮನವಿ ಮಾಡಿದರು.

ಇದನ್ನೂ ಓದಿ:ಬಿಗ್​ಬಾಸ್ ಕನ್ನಡ ಸೀಸನ್ 10 ಗೆಲ್ತಾರಾ ನಮ್ರತಾ: ಆರ್ಯವರ್ಧನ್ ಹೇಳಿದ್ದೇನು?

ಆದರೆ ಸುದೀಪ್ ಅದಕ್ಕೆ ಒಪ್ಪಲಿಲ್ಲ ಬದಲಿಗೆ ವರ್ತೂರು ಸಂತೋಷ್ ಮನವೊಲಿಸಲು ಪ್ರಯತ್ನಿಸಿದರು. ನೀವು ಮನೆಯ ಒಳಗೆ ಬರುವಾಗ ರೈತರ ಪರವಾಗಿ ಮಾತನಾಡಲು ಬರುತ್ತಿದ್ದೀನಿ ಎಂದಿರಿ ಆದರೆ ಈಗ ವಾಪಸ್ ಹೋಗುವ ಮಾತನ್ನಾಡುತ್ತಿದ್ದೀರಿ, ನಿಮಗೆ 34.15 ಲಕ್ಷ ಮತಗಳು ಬಂದಿವೆ. ಎಷ್ಟೋಂದು ಜನ ಸಮಯ ತೆಗೆದು ನಿಮಗಾಗಿ ಮತ ಚಲಾಯಿಸುತ್ತಿದ್ದಾರೆ. ನೀವು ಮನೆಯಲ್ಲಿಯೇ ಉಳಿಯಬೇಕು ಎಂದು ಬಯಸುತ್ತಿದ್ದಾರೆ ಹೀಗಿರುವಾಗ ನೀವು ಹೊರಗೆ ಹೋದರೆ ಅವರೆಲ್ಲರ ಪ್ರೀತಿಗೆ ಅವಮಾನ ಮಾಡಿದಂತೆ ಎಂದರು.

ಆದರೆ ಸಂತೋಷ್, ನನ್ನ ಜೀವನದಲ್ಲಿ ಒಂದು ಘಟನೆ ನಡೆಯಿತು, ಅದರಿಂದ ಹೊರಗೆ ಬರಲೆಂದು ನಾನು ಇಲ್ಲಿಗೆ ಬಂದೆ ಆದರೆ ನನಗೆ ಇಲ್ಲಿ ಇರಲಾಗುತ್ತಿಲ್ಲ, ನನ್ನ ಮನಸ್ಸಿಗೆ ನೆಮ್ಮದಿ ಇಲ್ಲ. ನಾನು ಹೊರಗೆ ಹೋಗಲೇ ಬೇಕು, ನಾನು ನಿಮಗೆ, ಈ ವೇದಿಕೆ ಅವಮಾನ ಮಾಡುತ್ತಿಲ್ಲ, ಆದರೆ ನಾನು ಮನಃಪೂರ್ವಕವಾಗಿ ಆಡಲಾಗುತ್ತಿಲ್ಲ, ನನಗೆ ಹೊರಗಿನ ಚಿಂತೆ ಕಾಡುತ್ತಿದೆ. ನಾನು ಕಷ್ಟದಲ್ಲಿದ್ದಾಗ ಜನರು ಬೆಂಬಲಕ್ಕೆ ನಿಂತರು, ಕುಟುಂಬದವರು ನಿಂತರು, ಅವರನ್ನು ಬಿಟ್ಟು ಇಲ್ಲಿ ಸೇಫ್ ಆಗಿಬಿಟ್ಟಿದ್ದೀನಿ ಅನ್ನಿಸುತ್ತಿದೆ ನಾನು ಹೋಗಲೇ ಬೇಕು ಎಂದರು.

ಸುದೀಪ್ ಅವರು, ಕೂಡಲೇ ಇನ್ನುಳಿದ ಎರಡು ನಾಮಿನೇಷನ್​ಗಳಾದ ಇಶಾನಿ ಹಾಗೂ ನೀತು ಅವರ ನಾಮಿನೇಷನ್ ಅನ್ನು ಕ್ಯಾನ್ಸಲ್ ಮಾಡಿದರು. ನೀವು ಮನೆಯ ಒಳಗೆ ಇರಬೇಕು ಎಂಬುದು ಜನರು ಕೊಟ್ಟಿರುವ ತೀರ್ಪು, ನಿಮಗೆ ಮತ ಹಾಕಿದ ಜನರನ್ನೆಲ್ಲ ಒಂದೆಡೆ ಸೇರಿಸಿದರೆ ಅದು ಸಾಗರವೇ ಆಗಿಬಿಡುತ್ತದೆ ಅವರ ಮಾತಿಗೆ ವಿರುದ್ಧ ಹೋಗುವುದು ಸರಿಯಲ್ಲ ಎಂದರು. ಆಗಲೂ ಸಂತೋಷ್ ಒಪ್ಪದಿದ್ದಾಗ ಸುದೀಪ್, ಸಂತೋಷ್​ಗೆ ಮತ ಹಾಕಿದ ಜನರಿಗೆ ಕ್ಷಮೆ ಕೇಳಿದರು. ನಾನು ಜನರ ತೀರ್ಪಿನ ವಿರುದ್ಧ ಹೋಗುವುದಿಲ್ಲ, ಹಾಗಾಗಿ ಈ ನಿರ್ಣಯವನ್ನು ನಿಮಗೆ ಬಿಡುತ್ತೇನೆ, ನೀವು ಇಲ್ಲೇ ಉಳಿಯುವ ನಿರ್ಧಾರ ಮಾಡಿದರೆ ಮುಂದಿನ ವಾರ ಸಿಗೋಣ ಎಂದು ಹೇಳಿ, ಪ್ರೇಕ್ಷಕರಲ್ಲಿ ಕ್ಷಮೆ ಕೇಳಿ ಹೊರಟು ಬಿಟ್ಟರು ಸುದೀಪ್.

ಆ ಬಳಿಕ ವರ್ತೂರು ಸಂತೋಷ್ ಅವರನ್ನು ಮನೆಯ ಸದಸ್ಯರು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ವರ್ತೂರು ಸಂತೋಷ್ ಅಲ್ಲಿಯೂ ತಮ್ಮ ಪಟ್ಟು ಸಡಿಸಲಿಲ್ಲ. ನನ್ನ ಜನಕ್ಕೆ ನಾನು ಉತ್ತರ ಕೊಟ್ಟುಕೊಳ್ಳುತ್ತೇನೆ ಎಂದರು. ಆದರೆ ಭಾನುವಾರದ ಎಪಿಸೋಡ್​ನಲ್ಲಿ ವರ್ತೂರು ಸಂತೋಷ್ ಹೊರಗೆ ಹೋಗಿದ್ದನ್ನು ತೋರಿಸಲಿಲ್ಲ, ಅವರು ಹೊರಗೆ ಹೋದರೇ ಇಲ್ಲವೇ ಎಂಬ ಸ್ಪಷ್ಟನೆ ಭಾನುವಾರದ ಎಪಿಸೋಡ್​ನಲ್ಲಿ ಸಿಗಲಿಲ್ಲ. ಬಹುಷಃ ಸೋಮವಾರದ ಎಪಿಸೋಡ್​ನಲ್ಲಿ ಉತ್ತರ ಸಿಗಬಹುದು.

Published On - 11:31 pm, Sun, 12 November 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ