AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಕೆಲ್​-ಈಶಾನಿ ಬ್ರೇಕಪ್​; ಅಳುತ್ತಿದ್ದ ತಂಗಿಗೆ ಬೈಯ್ದು ಬುದ್ಧಿ ಹೇಳಿದ ವಿನಯ್​ ಗೌಡ

ಒಂದಷ್ಟು ದಿನ ಮೈಕೆಲ್​ ಅಜಯ್​​ ಮತ್ತು ಈಶಾನಿ ಅವರು ದೊಡ್ಮನೆಯಲ್ಲಿ ಒಟ್ಟೊಟ್ಟಿಗೆ ಕಾಲ ಕಳೆದರು. ಆದರೆ ನಂತರದಲ್ಲಿ ಇಬ್ಬರ ನಡುವೆ ಮೈಮನಸ್ಸು ಮೂಡಲು ಆರಂಭ ಆಯಿತು. ಅಂತಿಮವಾಗಿ ಅವರು ಬ್ರೇಕಪ್​ ಮಾಡಿಕೊಂಡಿದ್ದಾರೆ. ಇದರಿಂದ ಬಿಗ್ ಬಾಸ್​ ಮನೆ ಬಿಟ್ಟು ಹೊರಗೆ ಬರಬೇಕು ಎಂಬಷ್ಟರಮಟ್ಟಿಗೆ ಈಶಾನಿಗೆ ನೋವಾಗಿದೆ.

ಮೈಕೆಲ್​-ಈಶಾನಿ ಬ್ರೇಕಪ್​; ಅಳುತ್ತಿದ್ದ ತಂಗಿಗೆ ಬೈಯ್ದು ಬುದ್ಧಿ ಹೇಳಿದ ವಿನಯ್​ ಗೌಡ
ಮೈಕೆಲ್​ ಅಜಯ್​, ಈಶಾನಿ, ವಿನಯ್​ ಗೌಡ
ಮದನ್​ ಕುಮಾರ್​
|

Updated on: Nov 13, 2023 | 10:40 PM

Share

ಬಿಗ್​ ಬಾಸ್ (Bigg Boss Kannada)​ ಮನೆಯಲ್ಲಿ ಸಂಬಂಧಗಳು ಬೆಳೆಯುತ್ತವೆ. ಹಾಗೆಯೇ, ಬೆಳೆದ ಸಂಬಂಧಗಳು ಮುರಿದುಹೋಗುತ್ತವೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ಮೈಕೆಲ್​ ಅಜಯ್​ ಮತ್ತು ಈಶಾನಿ (Eshani) ನಡುವೆ ಪ್ರೀತಿ ಹುಟ್ಟಿತ್ತು. ಆದರೆ ಆ ಪ್ರೀತಿ ಈಗ ಬ್ರೇಕಪ್​ನಲ್ಲಿ ಅಂತ್ಯವಾಗಿದೆ. ಮೈಕೆಲ್​ (Michael Ajay) ಬ್ರೇಕಪ್​ ಮಾಡಿಕೊಂಡಿದ್ದಕ್ಕೆ ಈಶಾನಿ ಅವರು ಕಣ್ಣೀರು ಹಾಕಿದ್ದಾರೆ. ಅವರಿಗೆ ತುಂಬ ನೋವಾಗಿದೆ. ಬಿಗ್​ ಬಾಸ್​ ಮನೆ ಬಿಟ್ಟು ಹೋಗುವುದಾಗಿಯೂ ಈಶಾನಿ ಹೇಳಿದ್ದಾರೆ. ಇದನ್ನೆಲ್ಲ ಕೇಳಿಸಿಕೊಂಡ ವಿನಯ್​ ಗೌಡ ಅವರಿಗೆ ಕೋಪ ಬಂದಿದೆ. ಅಳುತ್ತಿದ್ದ ಈಶಾನಿಗೆ ವಿನಯ್​ ಗೌಡ ಬೈಯ್ದು ಬುದ್ಧಿ ಹೇಳಿದ್ದಾರೆ.

ಈಶಾನಿಯನ್ನು ವಿನಯ್​ ಗೌಡ ಅವರು ತಂಗಿ ಎಂದು ಈ ಮೊದಲೇ ಕರೆದಿದ್ದರು. ಹಾಗಾಗಿ ಈಶಾನಿಯ ಬಗ್ಗೆ ಅವರು ಕಾಳಜಿ ವಹಿಸಿದ್ದಾರೆ. ಮೊದಲು ಮೈಕೆಲ್​ ಜೊತೆ ಈಶಾನಿಗೆ ಲವ್​ ಆಗಿದೆ ಎಂಬುದು ತಿಳಿದಾಗಲೂ ಅವರು ಖುಷಿಪಟ್ಟಿದ್ದರು. ಆದರೆ ಈಗ ಈಶಾನಿ ಬ್ರೇಕಪ್​ ಮಾಡಿಕೊಂಡು ಅಳುತ್ತಿರುವುದು ವಿನಯ್​ಗೆ ಸರಿ ಎನಿಸಿಲ್ಲ. ಹಾಗಾಗಿ ಅವರು ಬುದ್ಧಿ ಹೇಳಿ ಸರಿಯಾದ ದಾರಿಗೆ ತರುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada: ‘ಡ್ರೋನ್​ ಪ್ರತಾಪ್​ ಹೀರೋ, ವಿನಯ್​ ಗೌಡ ವಿಲನ್​’; ಸ್ಪರ್ಧಿಗಳ ವರ್ತನೆ ಬಗ್ಗೆ ಮುಲಾಜಿಲ್ಲದೇ ಮಾತಾಡಿದ ಸುದೀಪ್​

ಒಂದಷ್ಟು ದಿನ ಮೈಕೆಲ್​ ಅಜಯ್​​ ಮತ್ತು ಈಶಾನಿ ಅವರು ಒಟ್ಟೊಟ್ಟಿಗೆ ಕಾಲ ಕಳೆದರು. ಆದರೆ ನಂತರದಲ್ಲಿ ಇಬ್ಬರ ನಡುವೆ ಮೈಮನಸ್ಸು ಮೂಡಲು ಆರಂಭ ಆಯಿತು. ಈಶಾನಿಯನ್ನು ಸೈಕೋ ಎಂದು ಕೂಡ ಮೈಕಲ್​ ಕರೆದಿದ್ದರು. ‘ನನಗೆ ನೀನು ಭಾವನಾತ್ಮಕವಾಗಿ ಬೆಂಬಲ ನೀಡುತ್ತಿಲ್ಲ’ ಎಂದು ಕೂಡ ಈಶಾನಿ ಕಣ್ಣೀರು ಹಾಕಿದ್ದರು. ಈಗ ಅವರು ಮೈಕಲ್​ ಜೊತೆ ಬ್ರೇಕಪ್​ ಮಾಡಿಕೊಂಡು, ಆ ನೋವಿನಲ್ಲಿ ‘ಬಿಗ್​ ಬಾಸ್​’ ಮನೆಯಿಂದಲೇ ಹೊರಗೆ ಹೋಗೋಕೆ ನಿರ್ಧರಿಸಿದ್ದಾರೆ. ಆದರೆ ಅದಕ್ಕೆ ವಿನಯ್​ ಗೌಡ ಅವಕಾಶ ಮಾಡಿಕೊಟ್ಟಿಲ್ಲ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ನೈಜೀರಿಯಾ ಕನ್ನಡಿಗ ಮೈಕೆಲ್​ ಅಜಯ್​; ಏನು ಇವರ ಹಿನ್ನೆಲೆ?

ಈಶಾನಿ ಅಂದುಕೊಂಡಿರುವ ಪ್ರೀತಿ ನಿಜವಾದ ಪ್ರೀತಿಯೇ ಅಲ್ಲ. ಮೈಕೆಲ್​ ಏನು ಎಂಬುದು ಈಶಾನಿಗೆ ಸರಿಯಾಗಿ ತಿಳಿದೇ ಇಲ್ಲ. ತಾವು ಬಿಗ್​ ಬಾಸ್​ ಮನೆಗೆ ಬಂದ ಉದ್ದೇಶ ಏನು ಎಂಬುದೇ ಈಶಾನಿಗೆ ಮರೆತು ಹೋಗಿದೆ. ಈ ಎಲ್ಲ ವಿಚಾರಗಳನ್ನು ಮೈಕೆಲ್​ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. ವಿನಯ್​ ಹೇಳಿದ ಮಾತು ಕೇಳಿ ಈಶಾನಿಗೆ ಹೌದು ಎನಿಸಿದೆ. ಇನ್ಮೇಲೆ ಟಾಸ್ಕ್​ ಮೇಲೆ ಪೂರ್ತಿ ಗಮನ ನೀಡುವುದಾಗಿ ಈಶಾನಿ ಹೇಳಿದ್ದಾರೆ. ಇನ್ಮುಂದೆ ಈಶಾನಿ ಮತ್ತು ಮೈಕೆಲ್​ ನಡುವಿನ ಸಂಬಂಧ ಹೇಗೆ ಇರಲಿದೆ ಎಂಬುದನ್ನು ಕಾದು ನೋಡಬೇಕು. ಕಲರ್ಸ್​ ಕನ್ನಡದಲ್ಲಿ ಪ್ರತಿ ರಾತ್ರಿ 9.30ಕ್ಕೆ ಎಪಿಸೋಡ್​ ಪ್ರಸಾರ ಆಗುತ್ತಿದೆ. 24 ಗಂಟೆಯೂ ‘ಜಿಯೋ ಸಿನಿಮಾ’ ಮೂಲಕ ಉಚಿತವಾಗಿ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಹಾಸನದಲ್ಲಿ ಬೆಚ್ಚಿಬೀಳಿಸಿದ ಸರಣಿ ಹೃದಯಘಾತ ಪ್ರಕರಣಗಳು
ಹಾಸನದಲ್ಲಿ ಬೆಚ್ಚಿಬೀಳಿಸಿದ ಸರಣಿ ಹೃದಯಘಾತ ಪ್ರಕರಣಗಳು
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್‌ನ ಅಪರಾಧ ಚಟುವಟಿಕೆಗಳು
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್‌ನ ಅಪರಾಧ ಚಟುವಟಿಕೆಗಳು