ಮಿಸ್ಟರಿ ಆಗಿಯೇ ಉಳಿದಿದೆ ಈ ಸೆಲೆಬ್ರಿಟಿಗಳ ಸಾವಿನ ರಹಸ್ಯ
ಹಲವು ಸೆಲೆಬ್ರಿಟಿಗಳು ಅಪಘಾತದಲ್ಲಿ ನಿಧನ ಹೊಂದದಿದರೆ ಇನ್ನೂ ಕೆಲವರು ಅನಾರೋಗ್ಯದಿಂದ ಮೃತಪಟ್ಟಿರುತ್ತಾರೆ. ಇನ್ನೂ ಕೆಲವರು ಮಿಸ್ಟರಿ ರೀತಿಯಲ್ಲಿ ಮೃತಪಟ್ಟಿರುತ್ತಾರೆ. ಅವರ ಸಾವಿನ ಹಿಂದಿನ ರಹಸ್ಯ ಭೇದಿಸಲು ಈವರೆಗೂ ಅನೇಕರಿಗೆ ಸಾಧ್ಯವಾಗಿಲ್ಲ. ಈ ಸಾಲಿನಲ್ಲಿ ನಟಿ ಶ್ರೀದೇವಿ ಕೂಡ ಇದ್ದಾರೆ.
ಅನೇಕ ಸೆಲೆಬ್ರಿಟಿಗಳು ಅವಧಿಗೂ ಮೊದಲೇ ನಿಧನ ಹೊಂದಿದ ಉದಾಹರಣೆ ಸಾಕಷ್ಟಿದೆ. ಈ ಸಾಲಿನಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಇದ್ದಾರೆ. ಕೆಲವರು ಅಪಘಾತದಲ್ಲಿ ನಿಧನ ಹೊಂದದಿದರೆ ಇನ್ನೂ ಕೆಲವರು ಅನಾರೋಗ್ಯದಿಂದ ಮೃತಪಟ್ಟಿರುತ್ತಾರೆ. ಇನ್ನೂ ಕೆಲವರು ಮಿಸ್ಟರಿ ರೀತಿಯಲ್ಲಿ ಮೃತಪಟ್ಟಿರುತ್ತಾರೆ. ಅವರ ಸಾವಿನ ಹಿಂದಿನ ರಹಸ್ಯೆ ಭೇದಿಸಲು ಈವರೆಗೂ ಅನೇಕರಿಗೆ ಸಾಧ್ಯವಾಗಿಲ್ಲ. ನಟಿ ಶ್ರೀದೇವಿ (Sridevi) ನಿಧನ ಹೊಂದಿ ನಾಳೆಗೆ (ಫೆಬ್ರವರಿ 24) ಆರು ವರ್ಷ ಪೂರ್ಣಗೊಳಲ್ಲಿದೆ. ಮಿಸ್ಟರಿಯಾಗಿಯೇ ಉಳಿದ ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಶ್ರೀದೇವಿ
ಶ್ರೀದೇವಿ ಅವರು 2018ರ ಫೆಬ್ರವರಿ 24ರಂದು ಮೃತಪಟ್ಟರು. ಅವರು ಬಾತ್ಟಬ್ನಲ್ಲಿ ಆಕಸ್ಮಿಕವಾಗಿ ಮುಳುಗಿ ಸತ್ತರು ಎಂದು ಹೇಳಲಾಯಿತು. ಇದು ಹೇಗೆ ಸಾಧ್ಯ ಎಂಬ ಅನುಮಾನ ಈಗಲೂ ಇದೆ. ಮದುವೆ ಸಮಾರಂಭಕ್ಕಾಗಿ ದುಬೈಗೆ ತೆರಳಿದ್ದರು. ಎಲ್ಲರೂ ಮರಳಿ ಬಂದರೂ ಶ್ರೀದೇವಿ ಮಾತ್ರ ಅಲ್ಲಿಯೇ ಇದ್ದರು. ಅದೇ ದಿನ ಬೋನಿ ಕಪೂರ್ ದುಬೈಗೆ ಮರಳುವವರಿದ್ದರು. ಆದಾಗಲೇ ಶ್ರಿದೇವಿ ಮೃತಪಟ್ಟಿದ್ದರು. ಆರಂಭದಲ್ಲಿ ಎಲ್ಲರೂ ಬೋನಿ ಕಪೂರ್ ಬಗ್ಗೆ ಅನುಮಾನ ಹೊರ ಹಾಕಿದ್ದರು.
ಸುಸಾಂತ್ ಸಿಂಗ್ ರಜಪೂತ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಶವ 2020ರ ಜೂನ್ 14ರಂದು ಮುಂಬೈನಲ್ಲಿರುವ ತಮ್ಮ ಫ್ಲ್ಯಾಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಯಿತು. ಅವರು ಖಿನ್ನತೆಗೆ ಒಳಗಾಗಿದ್ದರಿಂದ ಮೃತಪಟ್ಟರು ಎಂದು ಊಹಿಸಲಾಯಿತು. ಈ ದಿನ ಕಟ್ಟಡದಲ್ಲಿ ಯಾವುದೇ ಸಿಸಿಟಿವಿ ಕೆಲಸ ಮಾಡುತ್ತಿರಲಿಲ್ಲ. ಇದು ಕೆಲವರಿಗೆ ಅನುಮಾನ ಮೂಡಿಸಿತು. ಇನ್ನೂ ಕೆಲವು ವಿಚಾರಗಳು ಅನುಮಾನ ಮೂಡಿಸಿದವು. ಈ ಪ್ರಕರಣ ಮುಂಬೈ ಪೊಲೀಸರಿಂದ ಸಿಸಿಬಿ ಕೈ ಸೇರಿದೆ. ಅವರು ಪ್ರಕರಣದ ವಿಚಾರಣೆ ನಡೆಸುತ್ತಲೇ ಇದ್ದಾರೆ. ಇದು ಕೊಲೆಯೋ ಅಥವಾ ಸಾವೋ ಎಂಬ ಅನುಮಾನ ಈಗಲೂ ಇದೆ.
ಜಿಯಾ ಖಾನ್
ಜಿಯಾ ಖಾನ್ ಅವರು 2013ರ ಜೂನ್ 3ರಂದು ಮೃತಪಟ್ಟರು. ಅವರು ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಯಿತು. ಈ ಸಂದರ್ಭದಲ್ಲಿ ಅವರ ತಾಯಿ ಹಾಗೂ ತಂಗಿ ಮನೆಯಲ್ಲಿ ಇರಲಿಲ್ಲ. ಅವರ ಸಾವಿನ ನಂತರ ಆರು ಪುಟಗಳ ಲೆಟರ್ ಒಂದು ಸಿಕ್ಕಿತ್ತು. ಇದರಲ್ಲಿ ಅವರು ಸೂರಜ್ ಪಾಂಚೋಲಿ ಹೆಸರನ್ನು ಉಲ್ಲೇಖ ಮಾಡಿದ್ದರು. ಜಿಯಾ ಹಾಗೂ ಸೂರಜ್ ರಿಲೇಶನ್ಶಿಪ್ನಲ್ಲಿ ಇದ್ದರು. ತಮಗೆ ಹಿಂಸೆ ನೀಡುತ್ತಿದ್ದುದಾಗಿ ಜಿಯಾ ಆರೋಪ ಮಾಡಿದ್ದರು. ಪ್ರಕರಣದ ತನಿಖೆಯಲ್ಲಿ ಇದು ಆತ್ಮಹತ್ಯೆ ಅಲ್ಲ ಎಂದೇ ಬಂದಿತ್ತು.
ಸಿಲ್ಕ್ ಸ್ಮಿತಾ
ವಿಜಯಲಕ್ಷ್ಮಿ ವಡ್ಲಪಾಟಿ ಇವರ ಹೆಸರು. ಸಿನಿಮಾ ರಂಗದಲ್ಲಿ ಸಿಲ್ಕ್ ಸ್ಮಿತಾ ಎಂದೇ ಫೇಮಸ್ ಆದರು. ಅವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಅವರು 1996ರ ಸೆಪ್ಟೆಂಬರ್ 22ರಂದು ಮೃತಪಟ್ಟರು. ಸಿನಿಮಾ ಶೂಟಿಂಗ್ ಮುಗಿಸಿ ಅವರು ಹೋಟೆಲ್ಗೆ ಮರಳಿದರು. ಅವರು ಗೆಳತಿ ಒಬ್ಬರಿಗೆ ಕರೆ ಮಾಡಿ ಒಂದು ವಿಚಾರವನ್ನು ಚರ್ಚೆ ಮಾಡಬೇಕು ಎಂದುಕೊಂಡಿದ್ದರು. ಆದರೆ, ಮುಂಜಾನೆ ವೇಳೆಗೆ ಅವರು ಮೃತಪಟ್ಟರು. ಇದು ಮಿಸ್ಟರಿಯಾಗಿಯೇ ಇದೆ.
ಪರ್ವೀನ್ ಬಾಬಿ
ಪರ್ವೀನ್ ಬಾಬಿ ಅವರು 2005ರ ಜನವರಿ 22ರಂದು ನಿಧನ ಹೊಂದಿದರು. ಅವರು ಉಳಿದುಕೊಂಡಿದ್ದ ಕಟ್ಟಡದಲ್ಲಿ ಮೂರು ದಿನಗಳಿಂದ ಗ್ರೋಸರಿ ಹಾಗೂ ನ್ಯೂಸ್ಪೇಪರ್ ಕಲೆಕ್ಟ್ ಮಾಡಿಕೊಳ್ಳದೇ ಇದ್ದಿದ್ದು ಅನುಮಾನ ಆಗಿತ್ತು. ಅವರು ಮೃತಪಟ್ಟು 72 ಗಂಟೆ ಮೇಲಾಗಿತ್ತು. ಅವರ ದೇಹದಲ್ಲಿ ಯಾವುದೇ ಆಹಾರ ಇರಲಿಲ್ಲ. ಅವರು ಸಾವಿಗೂ ಮೊದಲು ಮೂರು ದಿನ ಯಾವುದೇ ಆಹಾರ ಸೇವನೆ ಮಾಡಿರಲಿಲ್ಲ ಎನ್ನಲಾಗಿದೆ. ಯಾರೋ ತಮ್ಮನ್ನು ಕೊಲೆ ಮಾಡಬಹುದು ಎಂದು ಅವರು ಭಯ ಕಾಡುತ್ತಿತ್ತು. ಅವರು ಆರ್ಥಿಕವಾಗಿಯೂ ನಷ್ಟ ಅನುಭವಿಸಿದ್ದರು.
ದಿವ್ಯಾ ಭಾರತಿ
ದಿವ್ಯಾ ಭಾರತಿ ಅವರು 1993ರಲ್ಲಿ. ಅವರು ಬಾಲ್ಕನಿಯಿಂದ ಬಿದ್ದು ಮೃತಪಟ್ಟರು. ದಿವ್ಯಾ ಅವರನ್ನು ಭೇಟಿ ಮಾಡಲು ಬಂದ ನೀತಾ ಲುಲ್ಲಾ ಅವರ ಎದುರೇ ದಿವ್ಯಾ ಮೃತಪಟ್ಟಿದ್ದರು. ಅಂಡರ್ವರ್ಲ್ಡ್ ಮಾಫಿಯಾಗೂ ಇವರಿಗೂ ಯಾವುದೋ ಸಂಬಂಧ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಮದುವೆಗೂ ಮುನ್ನ ದೈಹಿಕ ಸಂಪರ್ಕ ನಡೆಸೋಕೆ ಇಷ್ಟವಿಲ್ಲ ಎಂದಿದ್ದ ನಟಿ ಶ್ರೀದೇವಿ
ಗುರದತ್
ಗುರುದತ್ ಅವರು ಭಾರತದ ಖ್ಯಾತ ನಿರ್ದೇಶಕರು. ಅವರು 1964ರ ಅಕ್ಟೋಬರ್ 10ರಂದು ಮೃತಪಟ್ಟರು. ಅವರದ್ದು ಆತ್ಮಹತ್ಯೆಯೋ ಅಥವಾ ಅಚಾನಕ್ಕಾಗಿ ಸಂಭವಿಸಿದ ಸಾವೋ ಎಂಬುದು ಇನ್ನೂ ಮಿಸ್ಟರಿಯಾಗಿಯೇ ಇದೆ. ಅವರು ಮದ್ಯ ಸೇವಿಸಿ ನಿದ್ರೆ ಮಾತ್ರೆ ಕುಡಿಯುತ್ತಿದ್ದರು. ಅವರು ಹೆಚ್ಚಿನ ಮಾತ್ರೆ ಸೇವಿಸಿದ್ದರು ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ