ಮದುವೆಗೂ ಮುನ್ನ ದೈಹಿಕ ಸಂಪರ್ಕ ನಡೆಸೋಕೆ ಇಷ್ಟವಿಲ್ಲ ಎಂದಿದ್ದ ನಟಿ ಶ್ರೀದೇವಿ
ಪ್ರೆಗ್ನೆಂಟ್ ಆದ ಬಳಿಕ ವಿವಾಹ ಆಗುವ ಟ್ರೆಂಡ್ ಜೋರಾಗಿದೆ. ಈ ಸಾಲಿನಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್, ಅಮಲಾ ಪೌಲ್ ಸೇರಿ ಅನೇಕರಿದ್ದಾರೆ. ಶ್ರೀದೇವಿ ಕೂಡ ಮದುವೆಗೂ ಮೊದಲು ಪ್ರೆಗ್ನೆಂಟ್ ಆಗಿದ್ದರು ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಮದುವೆಗೂ ಮೊದಲು ದೈಹಿಕ ಸಂಪರ್ಕ ನಡೆಸೋದು ಅವರಿಗೆ ಇಷ್ಟ ಇರಲಿಲ್ಲ.
ಪ್ರೀತಿ, ಮದುವೆ, ವಿಚ್ಛೇದನ, ಸಂಬಂಧ ಇತ್ಯಾದಿ ವಿಚಾರಗಳು ಸೆಲೆಬ್ರಿಟಿಗಳಿ ತುಂಬಾನೇ ಕಾಮನ್. ಸೆಲೆಬ್ರಿಟಿಗಳು ಸಿನಿಮಾ ಜೊತೆಗೆ ಅವರ ಖಾಸಗಿ ಬದುಕಿನಿಂದ ಕೂಡ ಸುದ್ದಿಯಲ್ಲಿ ಇರುತ್ತಾರೆ. ಅಷ್ಟೇ ಅಲ್ಲ, ಅನೇಕ ಸೆಲೆಬ್ರಿಟಿಗಳು ತಮ್ಮ ಸಂಬಂಧದ ಬಗ್ಗೆ ಓಪನ್ ಆಗಿ ಹೇಳಿದ್ದಿದೆ. ನಟಿ ಶ್ರೀದೇವಿ (Sridevi) ಮದುವೆಗೂ ಮುನ್ನ ಪ್ರೆಗ್ನೆಂಟ್ ಆಗಿದ್ದರು ಎಂಬ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ಈ ಬಗ್ಗೆ ಅವರು ಸಂದರ್ಶನದಲ್ಲಿ ಓಪನ್ ಆಗಿ ಎಲ್ಲವನ್ನೂ ಹೇಳಿಕೊಂಡಿದ್ದರು. ‘ಮದುವೆಗೂ ಮೊದಲು ನನಗೆ ದೈಹಿಕ ಸಂಪರ್ಕ ನಡೆಸೋದು ಇಷ್ಟ ಇಲ್ಲ’ ಎಂದು ಶ್ರೀದೇವಿ ಹೇಳಿದ್ದರು. ಈ ಮೂಲಕ ಪ್ರೆಗ್ನೆಂಟ್ ವಿಚಾರವನ್ನು ಅಲ್ಲ ಗಳೆದಿದ್ದರು.
‘ನನಗೆ ಸೆ*ಕ್ಸ್ ಎಂದಿಗೂ ಮುಖ್ಯವಲ್ಲ ಮತ್ತು ಎಂದಿಗೂ ಮುಖ್ಯ ಆಗುವುದಿಲ್ಲ. ನನ್ನ ಜೀವನದಲ್ಲಿ ಪ್ರೀತಿ ಹೆಚ್ಚು ಮುಖ್ಯ’ ಎಂದು ಶ್ರೀದೇವಿ ಹೇಳಿದ್ದರು. ‘ಪ್ರೀತಿಸುವ ಯುವಕ-ಯುವತಿಯರು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿದ್ದರು. ಶ್ರೀದೇವಿ ಮದುವೆಗೂ ಮುನ್ನ ದೈಹಿಕ ಸಂಪರ್ಕವನ್ನು ನಡೆಸುವುದನ್ನು ಖಂಡಿಸುತ್ತಿದ್ದರು.
ಪ್ರೆಗ್ನೆಂಟ್ ಆದ ಬಳಿಕ ಮದುವೆ ಆಗುವ ಟ್ರೆಂಡ್ ಜೋರಾಗಿದೆ. ಈ ಸಾಲಿನಲ್ಲಿ ನಟಿ ಆಲಿಯಾ ಭಟ್, ಅಮಲಾ ಪೌಲ್ ಸೇರಿ ಅನೇಕರಿದ್ದಾರೆ. ಶ್ರೀದೇವಿ ಕೂಡ ಮದುವೆಗೂ ಮೊದಲು ಪ್ರೆಗ್ನೆಂಟ್ ಆಗಿದ್ದರು ಎನ್ನಲಾಗಿತ್ತು. ಇಂತಹ ಚರ್ಚೆಗಳು ಆಗಾಗ ನಡೆಯುತ್ತಿದ್ದವು. ಆದರೆ ಇದೆಲ್ಲ ಕೇವಲ ವದಂತಿ ಎಂದು ಬೋನಿ ಕಪೂರ್ ಸ್ಪಷ್ಟನೆ ನೀಡಿದ್ದರು.
ಬೋನಿ ಕಪೂರ್ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. ‘ಶ್ರೀದೇವಿ ಮತ್ತು ನನ್ನ ಮದುವೆಯ ನಂತರವೇ ಜಾನ್ವಿ ಜನಿಸಿದಳು’ ಎಂದು ಬೋನಿ ಕಪೂರ್ ಹೇಳಿದ್ದರು. ‘ಶ್ರೀದೇವಿ ತುಂಬಾ ಧಾರ್ಮಿಕರಾಗಿದ್ದರು. ನಾನು ಕಷ್ಟದಲ್ಲಿದ್ದಾಗ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಶ್ರೀದೇವಿ ಬರಿಗಾಲಿನಲ್ಲಿ ಭೇಟಿ ನೀಡುತ್ತಿದ್ದರು’ ಎಂದು ಅವರು ಹೇಳಿಕೊಂಡಿದ್ದರು.
ಇದನ್ನೂ ಓದಿ: ಶ್ರೀದೇವಿ ಸಾವಿನ ಬಗ್ಗೆ ಬೋನಿ ಕಪೂರ್ ಮೇಲೆ ಮೂಡಿತ್ತು ಅನುಮಾನ; ಮೌನಕ್ಕೆ ಕಾರಣ ನೀಡಿದ್ದ ನಿರ್ಮಾಪಕ
ಶ್ರೀದೇವಿ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಂದಿಗೂ ಶ್ರೀದೇವಿಯವರ ಅನೇಕ ಸಿನಿಮಾಗಳನ್ನು ಅಭಿಮಾನಿಗಳು ಅಷ್ಟೇ ಆಸಕ್ತಿಯಿಂದ ನೋಡುತ್ತಾರೆ. ಅವರು ದುಬೈಗೆ ತೆರಳಿದ್ದಾಗ ಬಾತ್ಟಬ್ನಲ್ಲಿ ಮುಳುಗಿ ಮೃತಪಟ್ಟರು. ಇದು ಅನೇಕರಿಗೆ ಶಾಕಿಂಗ್ ಎನಿಸಿತ್ತು. ಅವರನ್ನು ಕೊಲೆ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿ ಬಂತು. ಆದರೆ, ಅವರದ್ದು ಆಕಸ್ಮಿಕ ಸಾವು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ಮದುವೆ ಬಗ್ಗೆ
ಬೋನಿ ಕಪೂರ್ ಈ ಮೊದಲು ಮೋನಾ ಕಪೂರ್ ಅವರನ್ನು ಮದುವೆ ಆಗಿದ್ದರು. ಇವರ ವಿವಾಹ ನಡೆದಿದ್ದು 1983ರಲ್ಲಿ. 1996ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಅಚ್ಚರಿ ಎಂದರೆ ಅದೇ ವರ್ಷ ಬೋನಿ ಶ್ರೀದೇವಿಯನ್ನು ಮದುವೆ ಆದರು. ಶ್ರೀದೇವಿಯನ್ನು ಮದುವೆ ಆಗಬೇಕು ಎನ್ನುವ ಕಾರಣಕ್ಕೆ ಅವರು ಮೋನಾಗೆ ವಿಚ್ಛೇದನ ನೀಡಿದರು. ಮದುವೆ ಆಗಿ ಸರಿಯಾಗಿ ಒಂಭತ್ತು ತಿಂಗಳಿಗೆ ಜಾನ್ವಿ ಜನಿಸಿದರು. ಜಾನ್ವಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಅವರಿಗೆ ದಕ್ಷಿಣ ಭಾರತದಿಂದ ಸಾಕಷ್ಟು ಆಫರ್ಗಳು ಬರುತ್ತಿವೆ. ಶ್ರೀದೇವಿ ರೀತಿ ಅವರಿಗೆ ನಟನೆ ಬರುವುದಿಲ್ಲ ಎಂದು ಅನೇಕ ಬಾರಿ ಟೀಕೆಗೆ ಒಳಗಾಗಿದ್ದು ಇದೆ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ