‘ಭೂಲ್ ಭುಲಯ್ಯ 3’ಗೆ ವಿದ್ಯಾ ಬಾಲನ್ ಎಂಟ್ರಿ; ಮಂಜುಲಿಕಾನ ಸ್ವಾಗತಿಸಿದ ಕಾರ್ತಿಕ್ ಆರ್ಯನ್
‘ಭೂಲ್ ಭುಲಯ್ಯ’ ಸರಣಿಯ ಸಿನಿಮಾಗಳು ದೊಡ್ಡ ಗೆಲುವು ಕಂಡಿವೆ. ಈ ಸರಣಿಯ ಎರಡನೇ ಭಾಗ 2022ರಲ್ಲಿ ರಿಲೀಸ್ ಆಗಿ 180 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ‘ಭೂಲ್ ಭುಲಯ್ಯ 3’ ತಂಡ ಕೂಡ ಗೆಲ್ಲುವ ಭರವಸೆಯಲ್ಲಿ ಇದೆ. ಈಗ ವಿದ್ಯಾ ಬಾಲನ್ ಅವರು ಸೆಟ್ ಸೇರಿಕೊಂಡಿದ್ದಾರೆ.
‘ಭೂಲ್ ಭುಲಯ್ಯ’ ಸಿನಿಮಾ (Bhool Bhulaiyaa) ಸರಣಿ ಬಾಲಿವುಡ್ನಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದೆ. ಮೊದಲ ಪಾರ್ಟ್ನಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದರು. ಎರಡನೇ ಪಾರ್ಟ್ಗೆ ಕಾರ್ತಿಕ್ ಆರ್ಯನ್ ಅವರ ಆಗಮನ ಆಗಿತ್ತು. ಹಾಹರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಮೂರನೇ ಪಾರ್ಟ್ ಸಿದ್ಧವಾಗುತ್ತಿದೆ. ವಿಶೇಷ ಎಂದರೆ ಈ ಚಿತ್ರಕ್ಕೆ ಈಗ ವಿದ್ಯಾ ಬಾಲನ್ ಅವರ ಎಂಟ್ರಿ ಆಗಿದೆ. ‘ಭೂಲ್ ಭುಲಯ್ಯ’ ಚಿತ್ರದಲ್ಲಿ ಅವರು ಮಂಜುಲಿಕಾ ಪಾತ್ರ ಮಾಡಿದ್ದರು.
ಈ ಚಿತ್ರದ ನಾಯಕ ಕಾರ್ತಿಕ್ ಆರ್ಯನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ‘ಭೂಲ್ ಭುಲಯ್ಯ’ ಚಿತ್ರದ ‘ಅಮಿ ಜೆ ತೊಮಾರ್’ ಹಾಡಿಗೆ ವಿದ್ಯಾ ಬಾಲನ್ ಡ್ಯಾನ್ಸ್ ಮಾಡಿದ ವಿಡಿಯೋನ ಹಂಚಿಕೊಂಡಿದ್ದಾರೆ. ‘ಮಂಜುಲಿಕಾ ಅವರು ಭೂಲ್ ಭುಲಯ್ಯ ಲೋಕಕ್ಕೆ ಮರಳುತ್ತಿದ್ದಾರೆ. ವಿದ್ಯಾ ಬಾಲನ್ ಅವರೇ ನಿಮಗೆ ಸ್ವಾಗತ. ಈ ದೀಪಾವಳಿ ಅದ್ಭುತವಾಗಿರುತ್ತದೆ’ ಎಂದಿದ್ದಾರೆ ಕಾರ್ತಿಕ್ ಆರ್ಯನ್. ಈ ವಿಚಾರ ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ.
ಭೂಲ್ ಭುಲಯ್ಯ ಬಗ್ಗೆ ಮಾಡಿದ ಪೋಸ್ಟ್..
View this post on Instagram
‘ಭೂಲ್ ಭುಲಯ್ಯ’ ಹಾಗೂ ‘ಭೂಲ್ ಭುಲಯ್ಯ 2’ ಸಿನಿಮಾಗಳು ದೊಡ್ಡ ಗೆಲುವು ಕಂಡಿವೆ. ಎರಡನೇ ಭಾಗ 2022ರಲ್ಲಿ ರಿಲೀಸ್ ಆಗಿ 180 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ‘ಭೂಲ್ ಭುಲಯ್ಯ 3’ ಸಿನಿಮಾ ಕೂಡ ಗೆಲ್ಲುವ ಭರವಸೆಯಲ್ಲಿ ಇದೆ. ಈಗ ವಿದ್ಯಾ ಬಾಲನ್ ಅವರು ಸೆಟ್ ಸೇರಿಕೊಂಡಿರುವುದು ಚಿತ್ರ ತಂಡದ ಖುಷಿ ಹೆಚ್ಚಿಸಿದೆ. ಹಾರರ್ ಹಾಗೂ ಕಾಮಿಡಿಯನ್ನು ಒಟ್ಟಿಗೆ ಎಂಜಾಯ್ ಮಾಡಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ‘ಭೂಲ್ ಭುಲಯ್ಯ 2’ ಚಿತ್ರ ಗೆಲ್ಲಿಸಿದ ಕಾರ್ತಿಕ್ ಆರ್ಯನ್ಗೆ ನಾಲ್ಕು ಕೋಟಿ ರೂಪಾಯಿ ಕಾರ್ ಗಿಫ್ಟ್
‘ಭೂಲ್ ಭುಲಯ್ಯ’ ಚಿತ್ರವನ್ನು ಭೂಷಣ್ ಕುಮಾರ್ ನಿರ್ದೇಶನ ಮಾಡಿದ್ದರು. ಎರಡನೇ ಭಾಗಕ್ಕೆ ಅವರು ಅಕ್ಷಯ್ ಕುಮಾರ್ ಅವರನ್ನು ಸೇರಿಸಿಕೊಂಡಿಲ್ಲ. ಬದಲಿಗೆ ಕಾರ್ತಿಕ್ ಆರ್ಯನ್ಗೆ ಅವಕಾಶ ನೀಡಿದರು. ಆದಾಗ್ಯೂ ಸಿನಿಮಾನ ಜನರು ಇಷ್ಟಪಟ್ಟಿದ್ದಾರೆ. ಈಗ ಮೂರನೇ ಭಾಗಕ್ಕೆ ಅನೀಸ್ ಬಾಜ್ಮೀ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಘೋಷಣೆ ಮಾಡುವಾಗಲೇ ಸಿನಿಮಾನ ದೀಪಾವಳಿಗೆ ರಿಲೀಸ್ ಮಾಡುವುದಾಗಿ ತಂಡ ಹೇಳಿಕೊಂಡಿತ್ತು. ಇದಕ್ಕೆ ತಕ್ಕಂತೆ ಕೆಲಸಗಳು ನಡೆಯುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:26 am, Tue, 13 February 24