‘ನಾನೂ ಅನಿಮಲ್​ ರೀತಿಯ ಸಿನಿಮಾ ಮಾಡ್ಬೇಕು’: ಹುಮಾ ಖುರೇಷಿ

ಕೆಲವರಿಗೆ ‘ಅನಿಮಲ್​’ ಸಿನಿಮಾ ಇಷ್ಟ ಆಗಿಲ್ಲ. ಆದರೆ ಕೆಲವು ಸೆಲೆಬ್ರಿಟಿಗಳಿಗೆ ಈ ಚಿತ್ರ ಸಖತ್​ ಹಿಡಿಸಿದೆ. ನಟಿ ಹುಮಾ ಖುರೇಶಿ ಅವರು ‘ಅನಿಮಲ್​’ ಚಿತ್ರವನ್ನು ಹೊಗಳಿದ್ದಾರೆ. ಇಂಥ ಸಿನಿಮಾಗಳು ನಿರ್ಮಾಣ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಾವು ಕೂಡ ಈ ರೀತಿಯ ಸಿನಿಮಾದಲ್ಲಿ ನಟಿಸುವ ಬಯಕೆ ಹೊಂದಿರುವುದಾಗಿ ಹುಮಾ ಖುರೇಶಿ ಹೇಳಿದ್ದಾರೆ.

‘ನಾನೂ ಅನಿಮಲ್​ ರೀತಿಯ ಸಿನಿಮಾ ಮಾಡ್ಬೇಕು’: ಹುಮಾ ಖುರೇಷಿ
ಹುಮಾ ಖುರೇಶಿ
Follow us
ಮದನ್​ ಕುಮಾರ್​
|

Updated on: Feb 12, 2024 | 4:36 PM

ರಣಬೀರ್​ ಕಪೂರ್​ (Ranbir Kapoor) ನಟನೆಯ ‘ಅನಿಮಲ್​’ (Animal) ಸಿನಿಮಾವನ್ನು ಅನೇಕರು ಟೀಕಿಸಿದ್ದಾರೆ. ಈ ಸಿನಿಮಾದಲ್ಲಿ ಮಹಿಳೆಯರನ್ನು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗಿದೆ ಎಂಬ ಆರೋಪ ಇದೆ. ಕೆಟ್ಟ ಭಾಷೆಯ ಬಳಕೆ, ಅತಿಯಾದ ಕ್ರೌರ್ಯ ಇದೆ ಎಂಬ ಕಾರಣದಿಂದಲೂ ಅನೇಕರು ತಕರಾರು ತೆಗೆದಿದ್ದಾರೆ. ಆದರೆ ಕೆಲವು ಸೆಲೆಬ್ರಿಟಿಗಳಿಗೆ ಈ ಸಿನಿಮಾ ತುಂಬ ಇಷ್ಟ ಆಗಿದೆ. ರಣವೀರ್​ ಸಿಂಗ್​, ಅಲ್ಲು ಅರ್ಜುನ್​ ಮುಂತಾದವರು ಈ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಈಗ ಬಾಲಿವುಡ್​ ನಟಿ ಹುಮಾ ಖುರೇಶಿ (Huma Qureshi) ಕೂಡ ಅನಿಮಲ್​’ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ತಾವೂ ಕೂಡ ಇಂಥ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

‘ನಾನು ಅನಿಮಲ್​ ಸಿನಿಮಾ ನೋಡಿ ತುಂಬ ಇಷ್ಟಪಟ್ಟಿದ್ದೇನೆ. ಈ ಸಿನಿಮಾದಲ್ಲಿನ ಸಾಹಸ, ಸಂಗೀತ ಎಲ್ಲವೂ ಚೆನ್ನಾಗಿದೆ. ಇದೊಂದು ಕೌಶಲ್ಯಭರಿತ ಸಿನಿಮಾ. ಎಲ್ಲ ರೀತಿಯ ಸಿನಿಮಾಗಳು ನಿರ್ಮಾಣ ಆಗಬೇಕು. ಅದನ್ನು ನೋಡಬೇಕಾ ಅಥವಾ ಬೇಡವಾ ಎಂಬುದು ಪ್ರೇಕ್ಷಕರ ಆಯ್ಕೆಗೆ ಬಿಟ್ಟಿದ್ದು. ಕೈಯಲ್ಲಿ ಮಷಿನ್​ ಗನ್​ ಹಿಡಿದು, ಸಾವಿರಾರು ಜನರನ್ನು ಸಾಯಿಸುವ ಪಾತ್ರ ಇರುವಂತಹ ಸಿನಿಮಾವನ್ನು ನಾನು ಕೂಡ ಮಾಡಬೇಕು’ ಎಂದು ಹುಮಾ ಖುರೇಶಿ ಹೇಳಿದ್ದಾರೆ.

ಇದನ್ನೂ ಓದಿ: ‘ಅನಿಮಲ್​’ ನಿರ್ದೇಶಕನಿಂದ ಬಂದ ಆಫರ್​ ತಿರಸ್ಕರಿಸಿದ ಕಂಗನಾ ರಣಾವತ್​

‘ಇಷ್ಟೊಂದು ವಿನಾಶಕಾರಿ ಆಗಿರುವಂತಹ ಪಾತ್ರ ಮಾಡುವುದು ಎಗ್ಸೈಟಿಂಗ್​ ಆಗಿರುತ್ತದೆ. ಅದರಲ್ಲಿ ಏನೋ ಇದೆ. ಅದೇನು ಎಂಬುದು ನನಗೆ ತಿಳಿದಿಲ್ಲ. ಸಿನಿಮಾಗಳು ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಬಗ್ಗೆ ಎರಡು ರೀತಿಯ ಚರ್ಚೆ ಇದೆ. ಒಂದು ವೇಳೆ ಸಿನಿಮಾಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ನಿಜವೇ ಆಗಿದ್ದರೆ ನಾವು ಬಹಳ ಕಾಲದಿಂದ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದೇವೆ. ಈಗಾಗಲೇ ಸಮಾಜ ಸುಧಾರಣೆ ಆಗಿರಬೇಕಿತ್ತು. ಹಾಗೆಯೇ ಸಮಾಜ ಹಾಳಾಗುವುದಿಲ್ಲ ಕೂಡ. ಯಾವ ಸಿನಿಮಾವನ್ನಾದರೂ ಮಾಡಿ. ಜನರಿಗೆ ಇಷ್ಟವಾದರೆ ಅದನ್ನು ನೋಡುತ್ತಾರೆ’ ಎಂಬುದು ಹುಮಾ ಖುರೇಶಿ ವಾದ.

ಇದನ್ನೂ ಓದಿ: 7 ವರ್ಷದ ಮಗನಿಗೆ ‘ಅನಿಮಲ್​’ ಸಿನಿಮಾ ತೋರಿಸಿದ ಸಂದೀಪ್​ ರೆಡ್ಡಿ ವಂಗ

‘ಅನಿಮಲ್​’ ಸಿನಿಮಾಗೆ ಸಂದೀಪ್​ ರೆಡ್ಡಿ ವಂಗ ನಿರ್ದೇಶನ ಮಾಡಿದ್ದಾರೆ. ರಣಬೀರ್​ ಕಪೂರ್​, ಬಾಬಿ ಡಿಯೋಲ್​, ಅನಿಲ್​ ಕಪೂರ್​, ತೃಪ್ತಿ ದಿಮ್ರಿ, ರಶ್ಮಿಕಾ ಮಂದಣ್ಣ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 2023ರ ಡಿಸೆಂಬರ್​ 1ರಂದು ತೆರೆಕಂಡ ಈ ಚಿತ್ರಕ್ಕೆ ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಅಂದಾಜು 900 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಈಗ ಒಟಿಟಿಯಲ್ಲೂ ವೀಕ್ಷಣೆಗೆ ಲಭ್ಯವಾಗಿದೆ. ‘ಅನಿಮಲ್​’ ಗೆಲುವಿನ ಬಳಿಕ ನಿರ್ದೇಶಕ ಸಂದೀಪ್​ ರೆಡ್ಡಿ ವಂಗ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ರಣಬೀರ್​ ಕಪೂರ್​, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್​, ತೃಪ್ತಿ ದಿಮ್ರಿ ಅವರ ಜನಪ್ರಿಯತೆ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ