ಅನುಷ್ಕಾ ಮಗ ಅಕಾಯ್​ಗೆ ನೇರವಾಗಿ ಸಿಗುತ್ತಾ ಬ್ರಿಟಿಷ್ ನಾಗರಿಕತ್ವ? ಇಲ್ಲಿದೆ ಉತ್ತರ

ಖ್ಯಾತ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟರ್​ ವಿರಾಟ್ ಕೊಹ್ಲಿ ಅವರು ತಮಗೆ ಗಂಡು ಮಗು ಜನಿಸಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಅನುಷ್ಕಾ ಅವರು ಮಗುವಿಗೆ ಜನ್ಮ ನೀಡಿದ್ದು ಇಂಗ್ಲೆಂಡ್​ನಲ್ಲಿ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಆಗುತ್ತಿದೆ. ಅಕಾಯ್​ಗೆ ನೇರವಾಗಿ ಬ್ರಿಟಿಷ್ ನಾಗರಿಕತ್ವ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಎಷ್ಟು ನಿಜ?

ಅನುಷ್ಕಾ ಮಗ ಅಕಾಯ್​ಗೆ ನೇರವಾಗಿ ಸಿಗುತ್ತಾ ಬ್ರಿಟಿಷ್ ನಾಗರಿಕತ್ವ? ಇಲ್ಲಿದೆ ಉತ್ತರ
ವಿರಾಟ್​ ಕೊಹ್ಲಿ, ಅನುಷ್ಕಾ ಶರ್ಮಾ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Feb 23, 2024 | 1:38 PM

ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ದಂಪತಿಗೆ ಇತ್ತೀಚೆಗೆ ಗಂಡು ಮಗು ಜನಿಸಿದೆ. ಈ ಮೂಲಕ ದಂಪತಿ ಎರಡು ಮಕ್ಕಳ ಪಾಲಕರಾಗಿದ್ದಾರೆ. ವಮಿಕಾಗೆ ಈಗಾಗಲೇ ಮೂರು ವರ್ಷ ತುಂಬಿದೆ. ಈ ಬೆನ್ನಲ್ಲೇ ಮತ್ತೊಂದು ಮಗುವಿನ ಜನನ ಆಗಿರುವುದು ಅಭಿಮಾನಿಗಳ ಖುಷಿ ಹೆಚ್ಚಿದೆ. ಇತ್ತೀಚೆಗೆ ಅನುಷ್ಕಾ ಶರ್ಮಾ (Anushka Sharma) ಹಾಗೂ ವಿರಾಟ್ ಕೊಹ್ಲಿ ಅವರು ತಮಗೆ ಗಂಡು ಮಗು ಹುಟ್ಟಿರುವ ವಿಚಾರ ರಿವೀಲ್ ಮಾಡಿದ್ದಾರೆ. ಅನುಷ್ಕಾಗೆ ಮಗು ಜನಿಸಿದ್ದು ಇಂಗ್ಲೆಂಡ್​ನಲ್ಲಿ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ಅಕಾಯ್​ಗೆ ನೇರವಾಗಿ ಬ್ರಿಟಿಷ್ ನಾಗರಿಕತ್ವ (British citizenship) ಸಿಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಇದು ಎಷ್ಟು ನಿಜ? ಅಸಲಿಗೆ ಅಕಾಯ್​ಗೆ ಬ್ರಿಟಿಷ್ ನಾಗರಿಕತ್ವ ಸಿಗಬಹುದೇ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅನುಷ್ಕಾ ಹಾಗೂ ವಿರಾಟ್ ದಂಪತಿ ಕೆಲವು ವಾರಗಳಿಂದ ಇಂಗ್ಲೆಂಡ್​ನಲ್ಲಿ ಉಳಿದುಕೊಂಡಿದ್ದರು. ಅಕಾಯ್ ಇಂಗ್ಲೆಂಡ್​ನಲ್ಲಿ ಜನಿಸಿದರೂ ನೇರವಾಗಿ ಆತನಿಗೆ ಬ್ರಿಟಿಷ್ ಸಿಟಿಜನ್​ಶಿಪ್ ಸಿಗುವುದಿಲ್ಲ. ಅಲ್ಲಿನ ನಿಯಮಗಳ ಪ್ರಕಾರ ತಂದೆ ಅಥವಾ ತಾಯಿಯಲ್ಲಿ ಒಬ್ಬರು ಇಂಗ್ಲೆಂಡ್​ನವರಾಗಿರಬೇಕು ಅಥವಾ ಬಹಳ ಸಮಯದಿಂದ ಇಂಗ್ಲೆಂಡ್​ನಲ್ಲಿ ಸೆಟಲ್ ಆಗಿರಬೇಕು. ಹಾಗಿದ್ದಾಗ ಮಾತ್ರ ಮಗುವಿಗೆ ಅಲ್ಲಿನ ನಾಗರಿಕತ್ವ ಸಿಗಲು ಸಾಧ್ಯ. ವಿರಾಟ್ ಹಾಗೂ ಅನುಷ್ಕಾ ಇಬ್ಬರೂ ಭಾರತೀಯ ಪ್ರಜೆಗಳು. ಹೀಗಾಗಿ, ಅಕಾಯ್ ಬ್ರಿಟಿಷ್ ನಾಗರಿಕತ್ವ ಪಡೆಯಲು ಆಸಕ್ತಿ ತೋರಿಸುವುದು ಅನುಮಾನವೇ. ಹೀಗಾಗಿ ಆತನೂ ಭಾರತೀಯನೇ ಆಗಲಿದ್ದಾನೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ತಮ್ಮನ ಜತೆ ಬ್ರೇಕಪ್: ಈಗ ತೃಪ್ತಿ ಸುತ್ತಾಡುತ್ತಿರುವುದು ಯಾರ ಜೊತೆ?

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇತ್ತೀಚೆಗೆ ಈ ಸಿಹಿ ಸುದ್ದಿ ಘೋಷಣೆ ಮಾಡಿದರು. ಕರೀನಾ ಕಪೂರ್ ಖಾನ್, ಆಲಿಯಾ ಭಟ್, ರಣವೀರ್ ಸಿಂಗ್, ಮೀರಾ ಕಪೂರ್, ಅಯುಷ್ಮಾನ್ ಖುರಾನಾ ಸೇರಿ ಅನೇಕ ಸೆಲೆಬ್ರಿಟಿಗಳು ಈ ದಂಪತಿಗೆ ಶುಭ ಕೋರಿದ್ದಾರೆ. ವಮಿಕಾ ಜನಿಸಿದ ಬಳಿಕ ಆಕೆಯ ಫೋಟೋ ಕ್ಲಿಕ್ ಮಾಡದಂತೆ ಕೊಹ್ಲಿ ಹಾಗೂ ಅನುಷ್ಕಾ ಕೋರಿಕೊಂಡಿದ್ದಾರೆ. ಅವರ ಮಾತಿಗೆ ಮಾಧ್ಯಮದವರು ಹಾಗೂ ಪಾಪರಾಜಿಗಳು ಗೌರವ ನೀಡಿದ್ದಾರೆ. ಹೀಗಾಗಿ, ಅಧಿಕೃತವಾಗಿ ವಮಿಕಾ ಮುಖ ಇನ್ನೂ ರಿವೀಲ್ ಆಗಿಲ್ಲ. ಅವಳು 2021ರಲ್ಲಿ ಜನಿಸಿದ್ದಾಳೆ. ಈಗ ಅವರು ಮಗನ ಮುಖವನ್ನು ರಿವೀಲ್ ಮಾಡುವುದು ಅನುಮಾನವೇ.

ಅನುಷ್ಕಾ ಶರ್ಮಾ ಅವರು ನಟನೆಗೆ ಕಂಬ್ಯಾಕ್ ಮಾಡೋದು ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. 2018ರಲ್ಲಿ ರಿಲೀಸ್ ಆದ ‘ಜೀರೋ’ ಸಿನಿಮಾ ಬಳಿಕ ಅವರ ನಟನೆಯ ಯಾವುದೇ ಚಿತ್ರ ರಿಲೀಸ್ ಆಗಿಲ್ಲ. ಅವರು ‘ಚಕ್ದಾ ಎಕ್ಸ್​ಪ್ರೆಸ್’ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಕೆಲಸಗಳು ವಿಳಂಬ ಆಗಿದೆ. ಸಿನಿಮಾದ ಶೂಟಿಂಗ್ 2022ರಲ್ಲೇ ಪೂರ್ಣಗೊಂಡಿದೆ ಎನ್ನಲಾಗಿದೆ. ಆದರೆ, ಚಿತ್ರದ ರಿಲೀಸ್ ಬಗ್ಗೆ ತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ