AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ಖರೀದಿಸಿದ ಶಾರುಖ್ ಖಾನ್ ಪುತ್ರಿ, ಬೆಲೆ ಎಷ್ಟು ಕೋಟಿ

Suhana Khan: ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇತ್ತೀಚೆಗಷ್ಟೆ ನಟಿಯಾಗಿ ಬಾಲಿವುಡ್​ಗೆ ಎಂಟ್ರಿ ನೀಡಿದ್ದಾರೆ. ಇದೀಗ ಕೋಟ್ಯಂತರ ರೂಪಾಯಿ ಹಣ ತೆತ್ತು ಮುಂಬೈ ಬಳಿ ಆಸ್ತಿಯೊಂದನ್ನು ಖರೀದಿಸಿದ್ದಾರೆ.

ಆಸ್ತಿ ಖರೀದಿಸಿದ ಶಾರುಖ್ ಖಾನ್ ಪುತ್ರಿ, ಬೆಲೆ ಎಷ್ಟು ಕೋಟಿ
ಮಂಜುನಾಥ ಸಿ.
|

Updated on: Feb 23, 2024 | 6:23 PM

Share

ಶಾರುಖ್ ಖಾನ್ (Shah Rukh Khan) ಪುತ್ರಿ ಸುಹಾನಾ ಖಾನ್ (Suhana Khan) ಈಗ ಬಾಲಿವುಡ್ ನಟಿಯಾಗಿದ್ದಾರೆ. ‘ದಿ ಆರ್ಚಿಸ್’ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ನೀಡಿದ್ದಾರೆ. ಸಿನಿಮಾ ಬಿಡುಗಡೆಗೆ ಮುನ್ನ ಭಾರಿ ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಆದರೆ ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಆದ ಈ ಸಿನಿಮಾ ಅಷ್ಟೇನೂ ಜನಮೆಚ್ಚುಗೆಗೆ ಪಾತ್ರವಾಗಲಿಲ್ಲ. ಸಿನಿಮಾದಲ್ಲಿ ಬಹುತೇಕ ಸ್ಟಾರ್ ನಟರ ಮಕ್ಕಳು, ಮೊಮ್ಮಕ್ಕಳೇ ಇದ್ದರು. ಅದರಲ್ಲಿ ಕೆಲವರಷ್ಟೆ ಮಿಂಚಿದರು. ಅವರಲ್ಲಿ ಶಾರುಖ್ ಪುತ್ರಿ ಸುಹಾನಾ ಖಾನ್ ಸಹ ಒಬ್ಬರು.

ಸುಹಾನಾ ಖಾನ್ ತಮ್ಮ ಮೊದಲ ಸಿನಿಮಾದ ಬಳಿಕ ಒಂದಷ್ಟು ಹೊಸ ಸಿನಿಮಾ ಅವಕಾಶಗಳನ್ನು ಪಡೆದಿದ್ದಾರೆ ಎನ್ನಲಾಗುತ್ತಿದೆ. ನಟನೆಗೆ ಎಂಟ್ರಿ ಕೊಟ್ಟು ಸಂಭಾವನೆ ಪಡೆಯಲು ಆರಂಭಿಸಿದಂತೆ ಹೂಡಿಕೆಯನ್ನು ಸಹ ಪ್ರಾರಂಭ ಮಾಡಿದ್ದಾರೆ ಸುಹಾನಾ ಖಾನ್. ಮುಂಬೈ ಹೊರವಲಯದಲ್ಲಿ ದೊಡ್ಡ ರಿಯಲ್ ಎಸ್ಟೇಟ್ ಹೂಡಿಕೆಯನ್ನು ನಟಿ ಸುಹಾನಾ ಖಾನ್ ಮಾಡಿದ್ದಾರೆ.

ಮುಂಬೈ ಸಮೀಪದ ಅಲಿಭಾಗ್​ನಲ್ಲಿ ದೊಡ್ಡ ಜಮೀನನ್ನು ಸುಹಾನಾ ಖಾನ್ ಖರೀದಿ ಮಾಡಿದ್ದಾರೆ. ಅದೂ ಕೋಟ್ಯಂತರ ರೂಪಾಯಿ ಹಣ ತೆತ್ತು. ಸುಮಾರು ಎರಡು ಎಕರೆ ಜಮೀನನನ್ನು ಸುಹಾನಾ ಖಾನ್ ಖರೀದಿ ಮಾಡಿದ್ದಾರೆ. ಈ ಜಮೀನಿನ ಅಳತೆ 78,361 ಚದರ ಅಡಿಗಳಿವೆ. ಈ ಜಮೀನು ನೊಂದಾವಣಿ ಮಾಡಿಸಿಕೊಳ್ಳಲು 57 ಲಕ್ಷ ರೂಪಾಯಿ ಶುಲ್ಕವನ್ನು ಸುಹಾನಾ ಖಾನ್ ತುಂಬಿದ್ದು, ದಾಖಲೆಯಲ್ಲಿರುವಂತೆ ಒಟ್ಟು ಆಸ್ತಿಯ ಮೌಲ್ಯ 12.91 ಕೋಟಿ ರೂಪಾಯಿಗಳು ಎನ್ನಲಾಗುತ್ತಿದೆ.

ಇದನ್ನೂ ಓದಿ:ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ ಶಾರುಖ್ ಪುತ್ರಿ ಸುಹಾನಾ ಖಾನ್

ಶಾರುಖ್ ಖಾನ್ ಕುಟುಂಬದ ಎಲ್ಲರೂ (ಬಾಲಕ ಅಬ್​ರಾಮ್ ಬಿಟ್ಟು) ಸ್ವಂತ ಉದ್ಯಮ, ಹೂಡಿಕೆಗಳನ್ನು ಮಾಡುತ್ತಿದ್ದಾರೆ. ಶಾರುಖ್ ಖಾನ್, ನಟನೆ ಜೊತೆಗೆ ನಿರ್ಮಾಣ ಸಂಸ್ಥೆ, ಸ್ಟುಡಿಯೋ, ರಿಯಲ್ ಎಸ್ಟೇಟ್​ ಮೇಲೆ ಹೂಡಿಕೆ, ಕೆಲವು ಸ್ಟಾರ್ಟ್​ಅಪ್​ ಗಳ ಮೇಲೆ ಹೂಡಿಕೆಗಳನ್ನು ಮಾಡಿದ್ದಾರೆ. ಶಾರುಖ್​ ಖಾನ್​ರ ಪತ್ನಿ ಗೌರಿ ಖಾನ್, ಜನಪ್ರಿಯ ಒಳಾಂಗಣ ವಿನ್ಯಾಸಕಿಯಾಗಿದ್ದು ಒಳಾಂಗಣ ವಿನ್ಯಾಸದ ಸಂಸ್ಥೆಯೊಂದರ ಮಾಲಕಿಯಾಗಿದ್ದಾರೆ. ಇತ್ತೀಚೆಗೆ ‘ಟೋರಿ’ ಹೆಸರಿನ ಐಶಾರಾಮಿ ರೆಸ್ಟೊರೆಂಟ್ ಒಂದನ್ನು ಮುಂಬೈನಲ್ಲಿ ಪ್ರಾರಂಭ ಮಾಡಿದ್ದಾರೆ. ಇನ್ನು ಪುತ್ರ ಆರ್ಯನ್ ಖಾನ್ ಡಿವೋಲ್ ಹೆಸರಿನ ಬ್ರ್ಯಾಂಡ್ ಅನ್ನು ಪ್ರಾರಂಭಿಸಿದ್ದು, ಸ್ಟೈಲಿಷ್ ಉಡುಪುಗಳು, ಗೆಜೆಟ್​ಗಳು ಜೊತೆಗೆ ವೋಡ್ಕಾ ಸಹ ಮಾರಾಟ ಮಾಡುತ್ತಾರೆ. ಸುಹಾನಾ ಖಾನ್ ಇನ್​ಸ್ಟಾ ಮಾಡೆಲ್ ಆಗಿದ್ದು ಸೌಂದರ್ಯವರ್ಧಕ ಸಂಸ್ಥೆಯೊಂದರಲ್ಲಿ ಹೂಡಿಕೆ ಮಾಡಿದ್ದಾರೆ. ಇದೀಗ ರಿಯಲ್ ಎಸ್ಟೇಟ್ ಹೂಡಿಕೆ ಆರಂಭಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್