Ranveer Singh: ಮಿತಿ ಮೀರಿತು ‘ಡಾನ್ 3’ ಸಿನಿಮಾ ಬಜೆಟ್; ಇಲ್ಲಿದೆ ವಿವರ

ಇತ್ತೀಚೆಗೆ ಬಾಲಿವುಡ್ ಸಿನಿಮಾಗಳು ದೊಡ್ಡ ಯಶಸ್ಸು ಕಾಣುತ್ತಿವೆ. ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಂಡ ‘ಪಠಾಣ್’, ‘ಜವಾನ್’ ಸಿನಿಮಾಗಳು 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿವೆ. ‘ಅನಿಮಲ್’, ‘ಗದರ್’ ಮೊದಲಾದ ಚಿತ್ರಗಳ ಕಲೆಕ್ಷನ್ ಕೂಡ 500 ಕೋಟಿ ರೂಪಾಯಿ ದಾಟಿದೆ. ಅದೇ ರೀತಿ ‘ಡಾನ್ 3’ ಸಿನಿಮಾ ಕೂಡ ದೊಡ್ಡ ಬಜೆಟ್​ನಲ್ಲಿ ರೆಡಿ ಮಾಡಲು ಪ್ಲ್ಯಾನ್ ನಡೆದಿದೆ.

Ranveer Singh: ಮಿತಿ ಮೀರಿತು ‘ಡಾನ್ 3’ ಸಿನಿಮಾ ಬಜೆಟ್; ಇಲ್ಲಿದೆ ವಿವರ
ರಣವೀರ್ ಸಿಂಗ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 24, 2024 | 8:25 AM

ರಣವೀರ್ ಸಿಂಗ್ (Ranveer Singh) ಅವರು ಡಾನ್ ಆಗಿ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್’ ಹಾಗೂ ‘ಡಾನ್ 2’ ಸಿನಿಮಾಗಳು ಗೆದ್ದ ಬಳಿಕ ‘ಡಾನ್ 3’ ಸಿನಿಮಾನ ತೆರೆಮೇಲೆ ತರೋಕೆ ಸಿದ್ಧತೆ ನಡೆದಿದೆ. ಕಿಯಾರಾ ಅಡ್ವಾಣಿ ಅವರು ರಣವೀರ್ ಸಿಂಗ್​ಗೆ ಜೊತೆಯಾಗಿದ್ದಾರೆ. ಈ ಸಿನಿಮಾದ ಬಜೆಟ್ ಬಗ್ಗೆ ಒಂದು ಹೊಸ ಸುದ್ದಿ ಕೇಳಿ ಬರುತ್ತಿದೆ. ಈ ಚಿತ್ರದ ಬಜೆಟ್ 300 ಕೋಟಿ ರೂಪಾಯಿ ಸಮೀಪಿಸಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಬಾಲಿವುಡ್ ಸಿನಿಮಾಗಳು ದೊಡ್ಡ ಯಶಸ್ಸು ಕಾಣುತ್ತಿವೆ. ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಂಡ ‘ಪಠಾಣ್’, ‘ಜವಾನ್’ ಸಿನಿಮಾಗಳು 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿವೆ. ‘ಅನಿಮಲ್’, ‘ಗದರ್’ ಮೊದಲಾದ ಚಿತ್ರಗಳ ಕಲೆಕ್ಷನ್ ಕೂಡ 500 ಕೋಟಿ ರೂಪಾಯಿ ದಾಟಿದೆ. ಅದೇ ರೀತಿ ‘ಡಾನ್ 3’ ಸಿನಿಮಾ ಕೂಡ ದೊಡ್ಡ ಬಜೆಟ್​ನಲ್ಲಿ ರೆಡಿ ಮಾಡಲು ಪ್ಲ್ಯಾನ್ ನಡೆದಿದೆ. ಈ ಚಿತ್ರದ ಬಜೆಟ್ 275 ಕೋಟಿ ರೂಪಾಯಿ ಇದೆ ಎಂದು ಹೇಳಲಾಗುತ್ತಿದೆ.

‘ಡಾನ್ ಚಿತ್ರದ ಮೊದಲ ಹಾಗೂ ಎರಡನೇ ಭಾಗಕ್ಕೆ ಶಾರುಖ್ ಖಾನ್ ಹೀರೋ ಆಗಿದ್ದರು. ಈ ಚಿತ್ರವನ್ನು ಸಾಧಾರಣ ಬಜೆಟ್​ನಲ್ಲಿ ಸಿದ್ಧಗೊಳಿಸಲಾಗಿತ್ತು. ಆದರೆ ಡಾನ್ ಸರಣಿಯ ಮೂರನೇ ಚಿತ್ರವನ್ನು ಗ್ಲೋಬಲ್ ಸಿನಿಮಾ ಆಗಿ ಮಾಡುವ ಉದ್ದೇಶವನ್ನು ಫರ್ಹಾನ್ ಹೊಂದಿದ್ದಾರೆ. ಈ ಚಿತ್ರದಲ್ಲಿ ವಿಶ್ವದರ್ಜೆಯ  ತಂತ್ರಜ್ಞರು ಇರಲಿದ್ದಾರೆ’ ಎಂದು ಮೂಲಗಳು ಹೇಳಿರುವುದಾಗಿ ವರದಿ ಆಗಿದೆ.

‘ಡಾನ್’ ಸರಣಿಯಲ್ಲಿ ಹೀರೋಗೆ ನೆಗೆಟಿವ್ ಶೇಡ್ ಇರಲಿದೆ. ಅದು ‘ಡಾನ್ 3’ ಸಿನಿಮಾದಲ್ಲೂ ಅದು  ಮುಂದುವರಿಯಲಿದೆ. ರಣವೀರ್ ಸಿಂಗ್ ಅವರು ‘ಡಾನ್ 3’ ಚಿತ್ರದಲ್ಲಿ ವಿಲನ್ ರೀತಿಯ ಪಾತ್ರ ನಿರ್ವಹಿಸಲಿದ್ದಾರೆ. ಹಳೆಯ ಸರಣಿಗೆ ಹೊಸ ಹೀರೋನ ಆಗಮನ ಆಗಿರುವುದರಿಂದ ಈ ದೊಡ್ಡ ಬಜೆಟ್ ಹೂಡಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ರಿವೀಲ್ ಆಗಲಿದೆ.

ಇದನ್ನೂ ಓದಿ: ಅಡಲ್ಟ್ ಜಾಹೀರಾತು, ನ್ಯೂಡ್ ಫೋಟೋಶೂಟ್; ಏಳು ಬಾರಿ ಸುದ್ದಿ ಆಗಿದ್ದ ರಣವೀರ್ ಸಿಂಗ್  

ಶಾರುಖ್ ಖಾನ್ ಅವರನ್ನು ರಣವೀರ್ ಸಿಂಗ್ ರಿಪ್ಲೇಸ್ ಮಾಡಿದ್ದಾರೆ ಎನ್ನುವಾಗಲೇ ಕಿಂಗ್ ಖಾನ್ ಅಭಿಮಾನಿಗಳಿಗೆ ಬೇಸರ ಮೂಡಿತ್ತು. ಈ ಸರಣಿ ಹಿಟ್ ಆಗುವುದಿಲ್ಲ ಎಂದು ಅನೇಕರು ಭವಿಷ್ಯ ನುಡಿದಿದ್ದರು. ಆದರೆ, ಆ ರೀತಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಫರ್ಹಾನ್ ಅಖ್ತರ್ ಮೇಲಿದೆ. ಈ ಮೊದಲು ಅಮಿತಾಭ್ ಬಚ್ಚನ್ ಅವರು ‘ಡಾನ್’ ಸಿನಿಮಾ ಮಾಡಿದ್ದರು. ಅವರ ಸ್ಥಾನವನ್ನು ಶಾರುಖ್ ಖಾನ್ ತುಂಬಿದಾಗ ಜನರು ಒಪ್ಪಿಕೊಂಡರು. ಈಗಲೂ ಅದೇ ರೀತಿ ಆಗಲಿದೆ ಎಂಬುದು ಫರ್ಹಾನ್ ಅಖ್ತರ್ ಅಭಿಪ್ರಾಯ. ಸದ್ಯ ಸಿನಿಮಾಗೆ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೇ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಅದಕ್ಕೂ ಮೊದಲೇ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ