AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡಲ್ಟ್ ಜಾಹೀರಾತು, ನ್ಯೂಡ್ ಫೋಟೋಶೂಟ್; ಏಳು ಬಾರಿ ಸುದ್ದಿ ಆಗಿದ್ದ ರಣವೀರ್ ಸಿಂಗ್  

ನಟಿಯರು ಅರೆ ಬೆತ್ತಲಾಗಿ ಫೋಟೋಶೂಟ್ ಮಾಡಿಸಿ ಸುದ್ದಿ ಆಗುತ್ತಾರೆ. ಆದರೆ, ಹೀರೋಗಳು ಈ ರೀತಿ ಸುದ್ದಿ ಆಗಿದ್ದು ಬಹಳ ಕಡಿಮೆ. ರಣವೀರ್ ಸಿಂಗ್ 2022ರಲ್ಲಿ ಈ ರೀತಿ ಕಾಂಟ್ರೋವರ್ಸಿ ಒಂದನ್ನು ಮಾಡಿಕೊಂಡಿದ್ದರು. ಅವರು ಸಂಪೂರ್ಣ ಬೆತ್ತಲಾಗಿ ಶೂಟ್ ಮಾಡಿಸಿದ್ದರು. ಈ ಕಾರಣಕ್ಕೆ ಅವರ ಮೇಲೆ ಕೇಸ್ ಕೂಡ ದಾಖಲಾಗಿತ್ತು.

ಅಡಲ್ಟ್ ಜಾಹೀರಾತು, ನ್ಯೂಡ್ ಫೋಟೋಶೂಟ್; ಏಳು ಬಾರಿ ಸುದ್ದಿ ಆಗಿದ್ದ ರಣವೀರ್ ಸಿಂಗ್  
ರಣವೀರ್ ಸಿಂಗ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 18, 2024 | 8:30 AM

Share

ರಣವೀರ್ ಸಿಂಗ್ (Ranveer Singh) ಹಾಗೂ ಜಾನಿ ಸಿನ್ಸ್ ಜಾಹೀರಾತು ಸಾಕಷ್ಟು ಸುದ್ದಿ ಆಗಿತ್ತು. ಲೈಂಗಿಕ ಶಕ್ತಿ ಹೆಚ್ಚಿಸೋ ಜಾಹೀರಾತು ಇದಾಗಿದೆ. ಈ ಜಾಹೀರಾತು ಧಾರಾವಾಹಿ ಶೈಲಿಯಲ್ಲಿ ಮೂಡಿ ಬಂದಿದೆ. ಇದು ಸಾಕಷ್ಟು ಚರ್ಚೆ ಆಗುತ್ತಿದೆ. ಕಿರುತೆರೆ ಮಂದಿ ಇದನ್ನು ವಿರೋಧಿಸಿದ್ದಾರೆ. ರಣವೀರ್ ಸಿಂಗ್ ಅವರು ಈ ರೀತಿ ಟೀಕೆಗೆ ಒಳಗಾಗುತ್ತಿರುವುದು ಇದೇ ಮೊದಲೇನು ಅಲ್ಲ. ರಣವೀರ್ ಸಿಂಗ್ ಹಲವು ಸಂದರ್ಭದಲ್ಲಿ ಈ ರೀತಿ ಚರ್ಚೆ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ರಣವೀರ್ ಸಿಂಗ್ ನ್ಯೂಡ್ ಶೂಟ್

ನಟಿ ಮಣಿಯರು ಅರೆ ಬೆತ್ತಲಾಗಿ ಫೋಟೋಶೂಟ್ ಮಾಡಿಸಿ ಸುದ್ದಿ ಆಗುತ್ತಾರೆ. ಆದರೆ, ಹೀರೋಗಳು ಈ ರೀತಿ ಸುದ್ದಿ ಆಗಿದ್ದು ಕಡಿಮೆ. ರಣವೀರ್ ಸಿಂಗ್ 2022ರಲ್ಲಿ ಈ ರೀತಿ ಕಾಂಟ್ರೋವರ್ಸಿ ಒಂದನ್ನು ಮಾಡಿಕೊಂಡಿದ್ದರು. ಅವರು ಸಂಪೂರ್ಣ ಬೆತ್ತಲಾಗಿ ಶೂಟ್ ಮಾಡಿಸಿದ್ದರು. ಈ ಕಾರಣಕ್ಕೆ ಅವರ ಮೇಲೆ ಕೇಸ್ ಕೂಡ ದಾಖಲಾಗಿತ್ತು. ನ್ಯೂಡಿಟಿಯನ್ನು ಅವರು ಬೆಂಬಲಿಸುತ್ತಿದ್ದಾರೆ ಎನ್ನುವ ಆರೋಪ ಅವರ ಮೇಲೆ ಬಂತು.

ಕಾಂಡೋಮ್ ಜಾಹೀರಾತು

ರಣವೀರ್ ಸಿಂಗ್ ಅವರು ಅಡಲ್ಟ್ ಫಿಲ್ಮ್ ಸ್ಟಾರ್ ಜಾನಿ ಸಿನ್ಸ್ ಜೊತೆ ಜಾಹೀರಾತು ಮಾಡಿದ್ದಾರೆ. ಈ ರೀತಿ ಜಾಹೀರಾತು ಮಾಡಿದ್ದು ಇದೇ ಮೊದಲೇನು ಅಲ್ಲ. 2022ರಲ್ಲಿ ರಣವೀರ್ ಸಿಂಗ್ ಅವರು ಕಾಂಡೋಮ್ ಜಾಹೀರಾತಲ್ಲಿ ನಟಿಸಿ ಸುದ್ದಿ ಆಗಿದ್ದರು. ಶೋಭಿತಾ ಧುಲಿಪಾಲ್ ಜೊತೆ ಅವರು ತೆರೆ ಹಂಚಿಕೊಂಡು ವಿವಾದ ಮಾಡಿಕೊಂಡರು.

ಎಐಬಿ ರೋಸ್ಟ್ ಕಾಂಟ್ರೋವರ್ಸಿ

ಅದು 2015ರ ಸಮಯ. ರಣವೀರ್ ಸಿಂಗ್ ಎಐಬಿ ರೋಸ್ಟ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಒಬ್ಬರು ಮತ್ತೊಬ್ಬರನ್ನು ರೋಸ್ಟ್ ಮಾಡಬೇಕಿತ್ತು.  ಈ ವೇದಿಕೆ ಮೇಲೆ ಅಡಲ್ಟ್​ ಜೋಕ್​ಗಳನ್ನು ಅತೀವವಾಗಿ ಬಳಕೆ ಮಾಡಲಾಗಿತ್ತು. ಈ ವಿಚಾರದಲ್ಲಿ ಅವರನ್ನು ಸಾಕಷ್ಟು ಮಂದಿ ಟೀಕೆ ಮಾಡಿದ್ದರು

ಫ್ಯಾಷನ್ ಚಾಯ್ಸ್

ರಣವೀರ್ ಸಿಂಗ್ ಅವರು ಮಾತಿನ ಮೂಲಕ ಮಾತ್ರವಲ್ಲ ಬಟ್ಟೆ ಮೂಲಕವೂ ಆಗಾಗ ಸುದ್ದಿ ಆಗುತ್ತಾರೆ. ಅವರು ಅನೇಕ ಬಾರಿ ತಮ್ಮ ವಿಚಿತ್ರ ವೇಷದ ಕಾರಣಕ್ಕೆ ಸುದ್ದಿ ಆಗಿದ್ದಾರೆ. ಬಾಜಿರಾವ್ ಮಸ್ತಾನಿ ಸಿನಿಮಾ ಪ್ರಮೋಷನ್ ಸಂದರ್ಭದಲ್ಲಿ ಅವರು ಸ್ಕರ್ಟ್ ಧರಿಸಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ಇದನ್ನೂ ಓದಿ: ನೀಲಿ ಚಿತ್ರಗಳ ನಟ ಜಾನಿ ಸಿನ್ಸ್ ಜೊತೆ ಅಭಿನಯಿಸಿದ ರಣವೀರ್ ಸಿಂಗ್; ವಿಡಿಯೋ ವೈರಲ್

ಮೂಗುತ್ತಿ

ರಣವೀರ್ ಸಿಂಗ್ ಅವರು ಮೂಗುತ್ತಿ ಧರಿಸಿ ಮ್ಯಾಗಜಿನ್ ಒಂದರ ಕವರ್ ಪೇಜ್​ಗೆ ಪೋಸ್ ನೀಡಿದ್ದರು. ಈ ಕಾರಣಕ್ಕೆ ಅವರು ಸುದ್ದಿ ಆಗಿದ್ದರು. ಒಂದು ವರ್ಗದ ಜನರು ಅವರನ್ನು ಸಾಕಷ್ಟು ಟೀಕೆ ಮಾಡಿದ್ದರು.

ಮುಂಬೈ ನಗರದಲ್ಲಿ ಡ್ಯಾನ್ಸ್

ರಣವೀರ್ ಸಿಂಗ್ ಅವರು ಹೃತಿಕ್ ರೋಷನ್ ಅವರ ಅಭಿಮಾನಿ. 2014ರಲ್ಲಿ ಹೃತಿಕ್ ನಟನೆಯ ‘ಬ್ಯಾಂಗ್ ಬ್ಯಾಂಗ್’ ಸಿನಿಮಾ ಪ್ರಮೋಷನ್​ನಲ್ಲಿ ರಣವೀರ್ ಸಿಂಗ್ ಭಾಗಿ ಆಗಿದ್ದರು. ಅವರು ಮುಂಬೈ ಬೀದಿಗಳಲ್ಲಿ ಡ್ಯಾನ್ಸ್ ಮಾಡಿ ಸಾಕಷ್ಟು ಸುದ್ದಿ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ