AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗಲ್ಲಿ ಬಾಯ್​’ ಸಿನಿಮಾಗೆ 5 ವರ್ಷ; ಸಂಭ್ರಮಿಸಿದ, ಸಿದ್ಧಾಂತ್​, ರಣವೀರ್​ ಸಿಂಗ್​

5 ವರ್ಷಗಳು ಕಳೆದರೂ ನಟ ಸಿದ್ಧಾಂತ್​ ಚತುರ್ವೇದಿ ಅವರ ಮನಸ್ಸಿನಲ್ಲಿ ‘ಗಲ್ಲಿ ಬಾಯ್​’ ಸಿನಿಮಾದ ನೆನಪುಗಳು ಹಸಿರಾಗಿವೆ. ಹಾಗೆಯೇ ನಟ ರಣವೀರ್ ಸಿಂಗ್​ ಕೂಡ ನೆನಪಿನ ಪುಟ ತೆರೆದಿದ್ದಾರೆ. ನಿರ್ದೇಶಕಿ ಜೋಯಾ ಅಖ್ತರ್​ ಅವರು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಸಹ ಈ ಸಿನಿಮಾದ ಬಗ್ಗೆ ಪುನಃ ಮಾತನಾಡುತ್ತಿದ್ದಾರೆ.

‘ಗಲ್ಲಿ ಬಾಯ್​’ ಸಿನಿಮಾಗೆ 5 ವರ್ಷ; ಸಂಭ್ರಮಿಸಿದ, ಸಿದ್ಧಾಂತ್​, ರಣವೀರ್​ ಸಿಂಗ್​
ಸಿದ್ಧಾಂತ್​ ಚತುರ್ವೇದಿ, ರಣವೀರ್​ ಸಿಂಗ್​, ಆಲಿಯಾ ಭಟ್​
ಮದನ್​ ಕುಮಾರ್​
|

Updated on: Feb 15, 2024 | 12:34 PM

Share

ಫೆಬ್ರವರಿ 14 ಎಂದರೆ ನಟ ಸಿದ್ಧಾಂತ್​​ ಚತುರ್ವೇದಿ (Siddhant Chaturvedi) ಅವರಿಗೆ ತುಂಬ ಸ್ಪೆಷಲ್​. ಅದು ಪ್ರೇಮಿಗಳು ದಿನ. ಆ ಕಾರಣಕ್ಕಾಗಿ ಅವರಿಗೆ ಫೆ.14 ವಿಶೇಷವಲ್ಲ. ಅವರಿಗೆ ಈ ದಿನ ಸ್ಪೆಷಲ್​ ಎನಿಸಲು ಕಾರಣ ‘ಗಲ್ಲಿ ಬಾಯ್​’ (Gully Boy) ಸಿನಿಮಾ. ಹೌದು, 5 ವರ್ಷಗಳ ಹಿಂದೆ ಫೆಬ್ರವರಿ 14ರಂದು ಆ ಸಿನಿಮಾ ಬಿಡುಗಡೆ ಆಗಿತ್ತು. ಒಂದು ಡಿಫರೆಂಟ್​ ಆದಂತಹ ಕಥಾಹಂದರ ಇರುವ ಆ ಚಿತ್ರಕ್ಕೆ ಜೋಯಾ ಅಖ್ತರ್​ ಅವರು ನಿರ್ದೇಶನ ಮಾಡಿದ್ದರು. ಪ್ರೇಕ್ಷಕರ ಮನ ಗೆದ್ದ ‘ಗಲ್ಲಿ ಬಾಯ್​’ ಸಿನಿಮಾ ತೆರೆಕಂಡು ಈಗ 5 ವರ್ಷಗಳು ಪೂರ್ಣಗೊಂಡಿವೆ. ಆ ಖುಷಿಯಲ್ಲಿ ನಟ ಸಿದ್ಧಾಂತ್​ ಚತುರ್ವೇದಿ, ರಣವೀರ್​ ಸಿಂಗ್​ (Ranvir Singh) ಅವರು ಕೆಲವು ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಕಿರುತೆರೆ ನಟನಾಗಿದ್ದ ಸಿದ್ಧಾಂತ್​ ಚತುರ್ವೇದಿ ಅವರಿಗೆ ಹೊಸ ಜೀವನ ನೀಡಿದ್ದೇ ‘ಗಲ್ಲಿ ಬಾಯ್​’ ಸಿನಿಮಾ. ಆ ಕಾರಣದಿಂದ ಈ ಚಿತ್ರದ ಬಗ್ಗೆ ಅವರಿಗೆ ಸಖತ್​ ಗೌರವ. ‘ನಾನು ಜನಿಸಿದ ದಿನ ಇದು’ ಎಂದು ಫೆಬ್ರವರಿ 14ರ ಬಗ್ಗೆ ಅವರು ಹೆಮ್ಮೆಯಿಂದ ಪೋಸ್ಟ್​ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಮಾಡಿದ ರ‍್ಯಾಪ್​ ಸಿಂಗರ್ ಪಾತ್ರ ಬಹಳ ಫೇಮಸ್​ ಆಯಿತು. ಆ ಬಳಿಕ ಅವರಿಗೆ ಹೊಸ ಹೊಸ ಅವಕಾಶಗಳು ಸಿಗಲು ಆರಂಭಿಸಿದವು.

‘ಗಲ್ಲಿ ಬಾಯ್​’ ಸಿನಿಮಾದಲ್ಲಿ ಸಿದ್ಧಾಂತ್​ ಚತುರ್ವೇದಿ ಹೀರೋ ಅಲ್ಲ. ಬದಲಿಗೆ, ಅವರು ಮಾಡಿರುವುದು ಒಂದು ಪೋಷಕ ಪಾತ್ರವಷ್ಟೇ. ಆದರೂ ಆ ಪಾತ್ರಕ್ಕೆ ಜನಮೆಚ್ಚುಗೆ ಸಿಕ್ಕಿತು. ಆ ಪಾತ್ರದಲ್ಲಿನ ನಟನೆಗೆ ಫಿಲ್ಮ್​ ಫೇರ್​ ಅವಾರ್ಡ್​ ಕೂಡ ಸಿಕ್ಕಿತು. ಒಟ್ಟಾರೆ ಈ ಸಿನಿಮಾಗೆ ‘65ನೇ ಫಿಲ್ಮ್​ಫೇರ್ ಅವಾರ್ಡ್ಸ್’​ನಲ್ಲಿ 13 ಪ್ರಶಸ್ತಿಗಳು ಸಿಕ್ಕವು. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ 140 ಕೋಟಿ ರೂಪಾಯಿ ಗಳಿಸಿತ್ತು.

ಸಿದ್ಧಾಂತ್​ ಚತುರ್ವೇದಿ ಇನ್​ಸ್ಟಾಗ್ರಾಮ್​ ಪೋಸ್ಟ್:

ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ ರಣವೀರ್​ ಸಿಂಗ್​ ಮತ್ತು ಆಲಿಯಾ ಭಟ್​ ಅವರ ನಟನೆ ನೋಡಿ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದರು. ಈಗಲೂ ಅನೇಕರು ಫೇವರಿಟ್​ ಲಿಸ್ಟ್​ನಲ್ಲಿ ಈ ಸಿನಿಮಾ ಇದೆ. ಬಡ ಹುಡುಗನ ಪಾತ್ರದಲ್ಲಿ ರಣವೀರ್​ ಸಿಂಗ್​ ಕಾಣಿಸಿಕೊಂಡಿದ್ದರೆ, ವೈದ್ಯಕೀಯ ವಿದ್ಯಾರ್ಥಿನಿಯಾಗಿ ಆಲಿಯಾ ಭಟ್​ ನಟಿಸಿದರು. ಇಬ್ಬರ ಕಾಂಬಿನೇಷನ್​ ಚೆನ್ನಾಗಿ ಮೂಡಿಬಂದಿತ್ತು.

ಇದನ್ನೂ ಓದಿ: ‘ಅನಿಮಲ್​’ ಸಿನಿಮಾ ನೋಡಿ 40 ನಿಮಿಷ ಮಾತಾಡಿದ್ದ ರಣವೀರ್​ ಸಿಂಗ್​; ನಿರ್ದೇಶಕರಿಗೆ ಅಚ್ಚರಿ

ನಿರ್ದೇಶಕಿ ಜೋಯಾ ಅಖ್ತರ್​ ಅವರು ‘ಗಲ್ಲಿ ಬಾಯ್​’ ಸಿನಿಮಾದ ಒಂದು ಪ್ರಮುಖ ದೃಶ್ಯದ ಬಗ್ಗೆ ಮಾತನಾಡಿದ ವಿಡಿಯೋ ತುಣುಕನ್ನು ಐಎಂಬಿಡಿ ಹಂಚಿಕೊಂಡಿದೆ. ಅದನ್ನು ರಣವೀರ್​ ಸಿಂಗ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಆ ಮೂಲಕ ಅವರು ‘ಗಲ್ಲಿ ಬಾಯ್​’ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಸಿದ್ಧಾಂತ್​ ಚತುರ್ವೇದಿ ಅವರು ಕೂಡ ಶೂಟಿಂಗ್​ ಸಂದರ್ಭದ ಹಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More