AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಆಗಲಿದೆ ‘ಶಕ್ತಿಮಾನ್’ ಧಾರಾವಾಹಿ, ನಾಯಕ ಯಾರು?

Shaktiman: 90ರ ದಶಕದ ಜನಪ್ರಿಯ ಧಾರಾವಾಹಿ ‘ಶಕ್ತಿಮಾನ್’ ಈಗ ಸಿನಿಮಾ ಆಗುತ್ತಿದೆ. ಬಾಲಿವುಡ್ ಸ್ಟಾರ್ ನಟ ಶಕ್ತಿಮಾನ್ ಪಾತ್ರದಲ್ಲಿ ನಟಿಸಲಿದ್ದಾರೆ.

ಸಿನಿಮಾ ಆಗಲಿದೆ ‘ಶಕ್ತಿಮಾನ್’ ಧಾರಾವಾಹಿ, ನಾಯಕ ಯಾರು?
ಶಕ್ತಿಮಾನ್
ಮಂಜುನಾಥ ಸಿ.
|

Updated on: Feb 15, 2024 | 3:42 PM

Share

ಹಾಲಿವುಡ್​ನಲ್ಲಿ (Hollywood) ‘ಸೂಪರ್ ಮ್ಯಾನ್’, ‘ಬ್ಯಾಟ್​ಮ್ಯಾನ್’, ‘ಸ್ಪೈಡರ್​ಮ್ಯಾನ್’, ‘ಐರನ್ ಮ್ಯಾನ್’ ಹೀಗೆ ಹಲವು ಸೂಪರ್ ಹೀರೋಗಳಿದ್ದಾರೆ. ಆದರೆ ಭಾರತ ಚಿತ್ರರಂಗದಲ್ಲಿ ‘ಕ್ರಿಶ್’ ಹೊರತು ಪಡಿಸಿ ಬೇರೆ ಸೂಪರ್ ಹೀರೋಗಳು ಥಟ್ಟನೆ ನೆನಪು ಬರುವುದಿಲ್ಲ. ಆದರೆ ‘ಕ್ರಿಶ್’ ಸಿನಿಮಾ ಸರಣಿ ಪ್ರಾರಂಭವಾಗುವುದಕ್ಕೂ ಮೊದಲಿಗೆ ಭಾರತೀಯರಿಗೆ ಹತ್ತಿರವಾಗಿದ್ದ ಸೂಪರ್ ಹೀರೋ ಎಂದರೆ ಅದು ‘ಶಕ್ತಿಮಾನ್’. 90ರ ದಶಕದಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಎಳೆಯರಿಗಷ್ಟೆ ಅಲ್ಲ ವಯಸ್ಕರಿಗೂ ಬಹಳ ಇಷ್ಟವಾಗಿತ್ತು. ಭಾರತೀಯ ಟಿವಿ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ಧಾರಾವಾಹಿಗಳಲ್ಲಿ ಇದೂ ಸಹ ಒಂದು. ಇದೀಗ ಇದೇ ಪಾತ್ರವನ್ನಿಟ್ಟುಕೊಂಡು ಸಿನಿಮಾ ಬರುತ್ತಿದೆ.

ಭಾರತದ ಅತ್ಯಂತ ಜನಪ್ರಿಯ ಸೂಪರ್ ಹೀರೋ ‘ಶಕ್ತಿಮಾನ್’ ಸಿನಿಮಾ ರೂಪದಲ್ಲಿ ತೆರೆಗೆ ತರಲು ತಂಡವೊಂದು ಸಜ್ಜಾಗಿದ್ದು, ‘ಶಕ್ತಿಮಾನ್’ ಆಗಿ ನಟ ರಣ್ವೀರ್ ಸಿಂಗ್ ನಟಿಸಲಿದ್ದಾರೆ. ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಸೂಪರ್ ಹಿರೋ ಸಿನಿಮಾ ನಿರ್ದೇಶಿಸಿ ಅನುಭವವಿರುವ ಮಲಯಾಳಂ ನಿರ್ದೇಶಕ ಬಾಸಿಲ್ ಜೋಸೆಫ್. ಟೊವಿನೊ ಥಾಮಸ್ ನಟಿಸಿದ್ದ ‘ಮಿನ್ನಲ್ ಮುರಲಿ’ ಸಿನಿಮಾವನ್ನು ನಿರ್ದೇಶಿಸಿದ್ದ ಬಾಸಿಲ್ ಅವರೇ ಈಗ ‘ಶಕ್ತಿಮಾನ್’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಇದನ್ನೂ ಓದಿ:ತಮ್ಮ ಬಗ್ಗೆ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಬಿಚ್ಚಿಟ್ಟ ಐದು ವಿಷಯಗಳು

ಶಕ್ತಿಮಾನ್ ಧಾರಾವಾಹಿಗೆ ಭಾರಿ ದೊಡ್ಡ ಜನಪ್ರಿಯತೆ ಭಾರತೀಯ ಚಿತ್ರರಂಗದಲ್ಲಿದೆ. ಶಕ್ತಿಮಾನ್​ ಪಾತ್ರಕ್ಕೆ ಅದರದ್ದೇ ಆದ ಗೌರವವಿದೆ. ಆ ಗೌರವಕ್ಕೆ, ಲೆಗಸಿಗೆ ಧಕ್ಕೆ ಆಗದಂತೆ ಬಾಸಿಲ್ ಜೋಸೆಫ್ ಜಾಗರೂಕತೆಯಿಂದ ಚಿತ್ರಕತೆ ಸಿದ್ದಪಡಿಸಿದ್ದಾರಂತೆ. ಕಳೆದ ಮೂರು ವರ್ಷಗಳಿಂದಲೂ ಬಾಸಿಲ್ ಜೋಸೆಫ್ ‘ಶಕ್ತಿಮಾನ್’ ಸಿನಿಮಾದ ಚಿತ್ರಕತೆಯಲ್ಲಿ ತೊಡಗಿಕೊಂಡಿದ್ದು ಇದೀಗ ಚಿತ್ರಕತೆ ಪೂರ್ಣವಾಗಿದ್ದು ಸಿನಿಮಾದ ಪ್ರೀಪ್ರೊಡಕ್ಷನ್ ಕಾರ್ಯಗಳು ಪ್ರಾರಂಭವಾಗಿವೆ. ‘ಶಕ್ತಿಮಾನ್’ ಧಾರಾವಾಹಿಯ ಮುಖ್ಯ ಅಂಶಗಳನ್ನು ಹಾಗೆಯೇ ಉಳಿಸಿಕೊಂಡೇ ‘ಶಕ್ತಿಮಾನ್’ ಸಿನಿಮಾ ಮಾಡಲಾಗುತ್ತಿದೆ. ಗಂಗಾಧರ್ ಪಾತ್ರ, ನಾಯಕಿ ಪಾತ್ರಗಳು ಸಿನಿಮಾದಲ್ಲಿಯೂ ಹಾಗೆಯೇ ಇರಲಿವೆ. ಧಾರಾವಾಹಿಯಲ್ಲಿದ್ದ ವಿಲನ್​ಗಳೇ ಸಿನಿಮಾಗಳಲ್ಲಿಯೂ ಇರಲಿದ್ದಾರೆ ಎನ್ನಲಾಗುತ್ತಿದೆ.

ರಣ್ವೀರ್ ಸಿಂಗ್ ಪ್ರಸ್ತುತ ‘ಸಿಂಘಂ ರಿಟರ್ನ್ಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ‘ಡಾನ್ 3’ಯ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಅದಾದ ಬಳಿಕವಷ್ಟೆ ಅವರು ‘ಶಕ್ತಿಮಾನ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಕೆಲವು ಮೂಲಗಳ ಪ್ರಕಾರ ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ‘ಶಕ್ತಿಮಾನ್’ ಸಿನಿಮಾ ಸೆಟ್ಟೇರಲಿದೆ. ಬಾಸಿಲ್ ಸಹ ಇದೀಗ ಹೊಸ ಮಲಯಾಳಂ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ