AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿವುಡ್​ನಲ್ಲಿ ಆಂಜನೇಯನ ಕತೆ, ‘ಮಂಕಿ ಮ್ಯಾನ್’ ಟ್ರೈಲರ್ ನೋಡಿದಿರಾ?

Monkey Man: ಆಂಜನೇಯನ ಕುರಿತು ಇತ್ತೀಚೆಗಷ್ಟೆ ‘ಹನುಮಾನ್’ ಸಿನಿಮಾ ಬಂದು ಯಶಸ್ವಿಯಾಗಿದೆ. ಇದೀಗ ಹಾಲಿವುಡ್​ನಲ್ಲಿ ಸಹ ಆಂಜನೇಯನ ವೈಭವ ಸಾರುವ ಸಿನಿಮಾ ಬರುತ್ತಿದೆ.

ಹಾಲಿವುಡ್​ನಲ್ಲಿ ಆಂಜನೇಯನ ಕತೆ, ‘ಮಂಕಿ ಮ್ಯಾನ್’ ಟ್ರೈಲರ್ ನೋಡಿದಿರಾ?
ಮಂಜುನಾಥ ಸಿ.
|

Updated on:Feb 14, 2024 | 8:33 PM

Share

ಭಾರತದ ಪುರಾಣ ಕತೆಗಳ ಬಗ್ಗೆ, ಕತೆಗಳ ಪಾತ್ರಗಳ ಬಗ್ಗೆ ಸಿನಿಮಾ ಮಾಡುವ ಹೊಸ ಟ್ರೆಂಡ್ ಪ್ರಾರಂಭವಾಗಿದೆ. ರಾಜಮೌಳಿಯವರ (Rajamouli) ‘ಬಾಹುಬಲಿ’ ಸಹ ಪೌರಾಣಿಕ ಕತೆಯನ್ನು ಆಧಾರವಾಗಿಟ್ಟುಕೊಂಡೇ ಮಾಡಲಾಗಿತ್ತು. ಇತ್ತೀಚೆಗೆ ‘ಆದಿಪುರುಷ್’ ಸಿನಿಮಾವನ್ನು ರಾಮಾಯಣದ ಕತೆಯ ಆಧಾರದ ಮೇಲೆ ನಿರ್ಮಿಸಲಾಯ್ತು. ಇದೀಗ ಮತ್ತೊಂದು ರಾಮಾಯಣ ಸಿನಿಮಾ ನಿರ್ಮಾಣದ ಹಂತದಲ್ಲಿದೆ. ತೆಲುಗಿನಲ್ಲಿ ಹನುಮಾನ್ ಪಾತ್ರವನ್ನು ಆಧಾರವಾಗಿಟ್ಟುಕೊಂಡು ‘ಹನುಮ್ಯಾನ್’ (Hanuman) ಸಿನಿಮಾ ಬಂದಿದೆ. ಇದೀಗ ಹಾಲಿವುಡ್​ನಲ್ಲಿ ಸಹ ಆಂಜನೇಯನ ಮಹಾನತೆಯನ್ನು, ವೀರತ್ವ, ಶೂರತ್ವವನ್ನು ಎಳೆಯಾಗಿ ಇಟ್ಟುಕೊಂಡು ಸಿನಿಮಾ ಒಂದನ್ನು ನಿರ್ಮಿಸಲಾಗಿದ್ದು, ಶೀಘ್ರವೇ ಸಿನಿಮಾ ಬಿಡುಗಡೆ ಆಗಲಿದೆ.

ಹಾಲಿವುಡ್​ನಲ್ಲಿ ‘ಸ್ಪೈಡರ್​ಮ್ಯಾನ್’, ‘ಸೂಪರ್ ಮ್ಯಾನ್’, ‘ಬ್ಯಾಟ್​ಮ್ಯಾನ್’, ‘ಐರನ್ ಮ್ಯಾನ್’ ಹೀಗೆ ಹಲವು ಸೂಪರ್​ಹೀರೋಗಳು ಜನಪ್ರಿಯ. ಇದೀಗ ಅದೇ ಸಾಲಿಗೆ ಸೇರಲು ‘ಮಂಕಿ ಮ್ಯಾನ್’ ರೆಡಿಯಾಗಿದೆ. ಈ ಮಂಕಿ ಮ್ಯಾನ್​ ಸಿನಿಮಾದ ಮೂಲ ಭಾರತದ ದೇವರು ಆಂಜನೇಯ. ಸಿನಿಮಾದ ಕತೆ ನಡೆಯುವುದು ಸಹ ಭಾರತದಲ್ಲಿಯೇ. ಸಿನಿಮಾದ ನಟ, ನಿರ್ದೇಶಕ, ಬಹುತೇಕ ಪಾತ್ರಧಾರಿಗಳು ಸಹ ಭಾರತೀಯ ಮೂಲದವರೇ. ಸಂಗೀತ ಸಹ ಅಪ್ಪಟ ಭಾರತೀಯ ಸಂಗೀತವೇ.

‘ಸ್ಪಂ ಡಾಗ್ ಮಿಲೇನಿಯರ್’, ‘ದಿ ಲಾಸ್ಟ್ ಏರ್​ಬೆಂಡರ್ಸ್’, ‘ಮ್ಯಾನ್ ಹೂ ನ್ಯೂ ಇನ್​ಫಿನಿಟಿ’, ‘ಹೋಟೆಲ್ ಮುಂಬೈ’, ‘ದಿ ಗ್ರೀನ್ ನೈಟ್’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿರುವ ಭಾರತೀಯ ಮೂಲದ ದೇವ್ ಪಟೇಲ್ ‘ಮಂಕಿ ಮ್ಯಾನ್’ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ನಿರ್ದೇಶನವನ್ನು ಸಹ ಅವರೇ ಮಾಡಿರುವುದು ವಿಶೇಷ. ಸಿನಿಮಾದಲ್ಲಿ ಹಲವು ಭಾರತೀಯ ನಟರಿದ್ದಾರೆ.

ಇದನ್ನೂ ಓದಿ:25 ದಿನಗಳಲ್ಲಿ 300 ಕೋಟಿ ರೂಪಾಯಿ ಗಳಿಸಿದ ‘ಹನುಮಾನ್​’ ಸಿನಿಮಾ

ಕನ್ನಡದ ‘ಫ್ರೆಂಚ್ ಬಿರಿಯಾನಿ’ ಸಿನಿಮಾನಲ್ಲಿ ನಟಿಸಿರುವ ನಟರೊಬ್ಬರು ಸಹ ‘ಮಂಕಿ ಮ್ಯಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಶೋಭಿತಾ ಧುಲಿಪಾಲ ಸಿನಿಮಾದ ನಾಯಕಿ, ಜೊತೆಗೆ ಮಕರಂದ್ ದೇಶ್​ಪಾಂಡೆ, ಇನ್ನೂ ಕೆಲವು ಭಾರತೀಯ ನಟರಿದ್ದಾರೆ. ಸಂಗೀತ ನಿರ್ದೇಶಕ ಹಷ್ಕ್, ‘ಮಂಕಿ ಮ್ಯಾನ್’ ಸಿನಿಮಾದಲ್ಲಿ ಭಾರತೀಯ ಸಂಗೀತವನ್ನೇ ಬಳಸಿಕೊಂಡಿದ್ದಾರೆ.

ಬಾಲ್ಯದಲ್ಲಿಯೇ ಸಾಕಷ್ಟು ನೋವು, ಸಂಕಷ್ಟ, ದೌರ್ಜನ್ಯವನ್ನು ಉಂಡ ಬಾಲಕನೊಬ್ಬ ಆಂಜನೇಯನನ್ನು ತನ್ನ ಗುರುವೆಂದು ಭಾವಿಸಿ ಆಂಜನೇಯನನ್ನೇ ಆದರ್ಶವಾಗಿಟ್ಟುಕೊಂಡು ಆತನಂತೆ ಬಲಹೀನರ ರಕ್ಷಣೆಗೆ ಆತನಂತೆ ಕೋತಿಯ ಮುಖವಾಡ ಧರಿಸಿ ದುಷ್ಟರ ವಿರುದ್ಧ ಹೋರಾಡುವ ಕತೆಯನ್ನು ‘ಮಂಕಿ ಮ್ಯಾನ್’ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಕೆಲವು ಅದ್ಭುತ ಆಕ್ಷನ್ ದೃಶ್ಯಗಳಿವೆ. ಸಿನಿಮಾದ ಟ್ರೈಲರ್​ ಈಗಾಗಲೇ ಬಿಡುಗಡೆ ಆಗಿದ್ದು ಸಿನಿಮಾ ಏಪ್ರಿಲ್ ಐದರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:31 pm, Wed, 14 February 24

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್