AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SS Rajamouli: ಬದಲಾಯಿತು ರಾಜಮೌಳಿ ತಂಡ; ಪ್ರಮುಖರನ್ನೇ ಕೈಬಿಟ್ಟ ಸ್ಟಾರ್ ನಿರ್ದೇಶಕ

ರಾಜಮೌಳಿ ಚಿತ್ರಗಳಲ್ಲಿ ಸಿನಿಮಾಟೋಗ್ರಫಿಗೆ ವಿಶೇಷ ಪ್ರಾಮುಖ್ಯತೆ ಇರುತ್ತದೆ. ನಿರ್ದೇಶಕ ಆಲೋಚಿಸಿದಂತೆ ದೃಶ್ಯವನ್ನು ಸೆರೆ ಹಿಡಿಯೋದು ಒಂದು ಚಾಲೆಂಜ್. ಇದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದುದು ಸೇಂಥಿಲ್ ಕುಮಾರ್. ಈಗ ಅವರನ್ನು ಕೈ ಬಿಡಲಾಗಿದೆ. ಇದರ ಜೊತೆ ಇನ್ನೂ ಹಲವು ಬದಲಾವಣೆಗಳು ತಂಡದಲ್ಲಿ ಆಗಿವೆ ಎನ್ನಲಾಗುತ್ತಿದೆ.

SS Rajamouli: ಬದಲಾಯಿತು ರಾಜಮೌಳಿ ತಂಡ; ಪ್ರಮುಖರನ್ನೇ ಕೈಬಿಟ್ಟ ಸ್ಟಾರ್ ನಿರ್ದೇಶಕ
ರಾಜಮೌಳಿ-ಕೀರವಾಣಿ
ರಾಜೇಶ್ ದುಗ್ಗುಮನೆ
|

Updated on:Feb 06, 2024 | 8:36 AM

Share

ಸ್ಟಾರ್ ನಿರ್ದೇಶಕ ರಾಜಮೌಳಿ (SS Rajamouli) ಮಾಡುವ ಸಿನಿಮಾಗಳಿಗೆ ಪ್ರೇಕ್ಷಕರನ್ನು ಆಕರ್ಷಿಸುವ ಶಕ್ತಿ ಇದೆ. ಅವರು ನಿರ್ದೇಶನ ಮಾಡುವ ಚಿತ್ರಗಳು ಎಲ್ಲರ ಗಮನ ಸೆಳೆಯುತ್ತವೆ. ಇದಕ್ಕೆ ಅವರ ತಾಂತ್ರಿಕ ವರ್ಗದ ಕೊಡುಗೆಯೂ ಇದೆ. ತಾಂತ್ರಿಕ ವರ್ಗದ ವಿಚಾರದಲ್ಲಿ ಅವರು ಒಂದು ಪದ್ಧತಿ ಇಟ್ಟುಕೊಂಡಿದ್ದರು. ರಾಜಮೌಳಿ ಒಂದು ಸಿನಿಮಾದಲ್ಲಿ ಯಾರದ್ದಾದರೂ ಜೊತೆ ಕೆಲಸ ಮಾಡಿ, ಅವರ ಕೆಲಸ ಇಷ್ಟ ಆಯಿತು ಎಂದರೆ ಮುಂದಿನ ಸಿನಿಮಾಗಳಿಗೆ ಅವರಿಗೇ ಅವಕಾಶ ನೀಡುತ್ತಿದ್ದರು. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಪದ್ಧತಿಯನ್ನು ಅವರು ಕೈ ಬಿಡಲು ಮುಂದಾಗಿದ್ದಾರೆ. ಈ ಬೆಳವಣಿಗೆ ಅಚ್ಚರಿ ತಂದಿದೆ.

ರಾಜಮೌಳಿ ಹಾಗೂ ಮಹೇಶ್ ಬಾಬು ಒಟ್ಟಾಗಿ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ ಸ್ಕ್ರಿಪ್ಟ್ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ. ಮಹೇಶ್ ಬಾಬು ಅವರು ಈಗಾಗಲೇ ವಿದೇಶಕ್ಕೆ ತೆರಳಿ ವಿಶೇಷ ತರಬೇತಿ ಪಡೆದು ಬಂದಿದ್ದಾರೆ. ರಾಜಮೌಳಿ ಅವರು ಶೀಘ್ರವೇ ಸಿನಿಮಾ ಕೆಲಸ ಆರಂಭಿಸಲಿದ್ದಾರೆ. ಈ ಸಿನಿಮಾ ಕೆಲಸಕ್ಕೂ ಮೊದಲು ಅವರು ಹೊಸ ತಾಂತ್ರಿಕವರ್ಗವನ್ನು ಹುಡುಕಿಕೊಂಡಿದ್ದಾರೆ.

ರಾಜಮೌಳಿ ಸಿನಿಮಾಗಳಲ್ಲಿ ಛಾಯಾಗ್ರಹಣಕ್ಕೆ ವಿಶೇಷ ಪ್ರಾಮುಖ್ಯತೆ ಇರುತ್ತದೆ. ಅವರು ಆಲೋಚಿಸಿದಂತೆ ದೃಶ್ಯವನ್ನು ಸೆರೆ ಹಿಡಿಯೋದು ಒಂದು ಚಾಲೆಂಜ್. ಇದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದುದು ಸೇಂಥಿಲ್ ಕುಮಾರ್. ಈಗ ಅವರನ್ನು ಕೈ ಬಿಡಲಾಗಿದೆ. ಅವರ ಬದಲು ಪಿಎಸ್​ ವಿನೋದ್ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ರಾಜಮೌಳಿ ಸಿನಿಮಾಗಳಿಗೆ ಛಾಯಾಗ್ರಹಣದ ಜೊತೆ ವಿಎಫ್​ಎಕ್ಸ್ ಕೂಡ ಮುಖ್ಯ. ಈ ಮೊದಲು ಶ್ರೀನಿವಾಸ್ ಮೋಹನ್ ಅವರು ಇದರ ಮೇಲುಸ್ತುವಾರಿ ನಿರ್ವಹಿಸುತ್ತಿದ್ದರು. ಈಗ ಈ ಜವಾಬ್ದಾರಿ ಕಮಲ್ ಕಣ್ಣನ್ ಪಾಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: SSMB 29: ರಾಜಮೌಳಿ ಜೊತೆಗಿನ ಚಿತ್ರಕ್ಕೆ ಮಹೇಶ್ ಬಾಬು ಪಡೆಯುತ್ತಿರೋ ಸಂಭಾವನೆ ಎಷ್ಟು?

ರಾಜಮೌಳಿ ಸಿನಿಮಾಗಳನ್ನು ಶ್ರೀಕರ್ ಪ್ರಸಾದ್ ಎಡಿಟ್ ಮಾಡುತ್ತಿದ್ದರು. ಪ್ರೊಡಕ್ಷನ್ ಡಿಸೈನರ್ ಆಗಿ ಸಾಬು ಸೈರಿಲ್ ಕೆಲಸ ಮಾಡುತ್ತಿದ್ದರು. ಇವರ ಸ್ಥಾನಕ್ಕೆ ಬೇರೆಯವರು ಬರಲಿದ್ದಾರೆ. ಅವರ ಹುಡುಕಾಟದಲ್ಲಿ ರಾಜಮೌಳಿ ಇದ್ದಾರೆ. ರಾಜಮೌಳಿ ಹಾಗೂ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಹಲವು ವರ್ಷಗಳಿಂದ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಕಾಂಬಿನೇಷನ್ ಮುಂದುವರಿಯಲಿದೆ. ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾಗೆ ಕೀರವಾಣಿ ಸಂಗೀತ ಸಂಯೋಜನೆ ಇರಲಿದೆ. ‘ಆರ್​ಆರ್​ಆರ್’ ಸಿನಿಮಾದ ಸಂಗೀತ ಸಂಯೋಜನೆಗೆ ಕೀರವಾಣಿ ಆಸ್ಕರ್ ಪಡೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:59 am, Tue, 6 February 24

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ