ಶಾರುಖ್ ಖಾನ್ ಕೈಗೆ ಕಿಸ್ ಕೊಟ್ಟ ಅಭಿಮಾನಿ; ನಟನ ರಿಯಾಕ್ಷನ್ ಹೇಗಿತ್ತು?
ಮಂಗಳವಾರ ಸಂಜೆ ಶಾರುಖ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಾಪರಾಜಿಗಳು ಅವರಿಗಾಗಿ ಕಾಯುತ್ತಿದ್ದರು. ಅವರು ತಮ್ಮದೇ ಸ್ಟೈಲ್ನಲ್ಲಿ ಏರ್ಪೋರ್ಟ್ಗೆ ಎಂಟ್ರಿ ನೀಡಿದ್ದಾರೆ. ಅಂದು ಪಾಪರಾಜಿಯೊಬ್ಬರ ಬರ್ತ್ಡೇ ಆಗಿತ್ತು. ಅವರು ಶಾರುಖ್ನ ದೊಡ್ಡ ಅಭಿಮಾನಿ ಕೂಡ ಹೌದು. ಅವರಿಗೆ ಶಾರುಖ್ ವಿಶ್ ಮಾಡಿದ್ದಾರೆ.
ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಅವರನ್ನು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಸೆಲ್ಫಿಗಾಗಿ ಬೇಡಿಕೆ ಇಡುತ್ತಾರೆ. ಅವರು ಒಳ್ಳೆಯ ಮೂಡ್ನಲ್ಲಿ ಇದ್ದರೆ ಸೆಲೆಬ್ರಿಟಿಗಳು ಪೋಸ್ ನೀಡುತ್ತಾರೆ. ಆದರೆ, ಕೆಲವೊಮ್ಮೆ ಮೂಡ್ ಸರಿ ಇಲ್ಲ ಎಂದರೆ ಅತ್ತ ಮುಖ ಹಾಕದೆ ಮಾಯವಾಗಿ ಬಿಡುತ್ತಾರೆ. ಅಭಿಮಾನಿಗಳ ವರ್ತನೆಯಿಂದ ಸೆಲೆಬ್ರಿಟಿಗಳು ಸಿಟ್ಟಾಗಿದ್ದೂ ಇದೆ. ಕೆಲವೊಮ್ಮೆ ಖುಷಿ ಖುಷಿಯಿಂದ ಪೋಸ್ ಕೊಟ್ಟಿದ್ದೂ ಇದೆ. ಇದೆಲ್ಲವೂ ಅವರ ಮೂಡ್ಮೇಲೆ ನಿರ್ಧಾರ ಆಗುತ್ತದೆ. ಈಗ ಶಾರುಖ್ ಖಾನ್ಗೆ ಅಭಿಮಾನಿಯೋರ್ವ ಕಿಸ್ ಮಾಡಿದ್ದಾನೆ. ಇದಕ್ಕೆ ಶಾರುಖ್ ಖಾನ್ (Shah Rukh Khan) ಕೂಲ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ (ಫೆಬ್ರವರಿ 13) ಸಂಜೆ ಶಾರುಖ್ ಖಾನ್ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಾಪರಾಜಿಗಳು ಅವರಿಗಾಗಿ ಕಾಯುತ್ತಿದ್ದರು. ಅವರು ತಮ್ಮದೇ ಸ್ಟೈಲ್ನಲ್ಲಿ ಏರ್ಪೋರ್ಟ್ಗೆ ಎಂಟ್ರಿ ಕೊಟ್ಟರು. ಅಂದು ಪಾಪರಾಜಿಯೊಬ್ಬರ ಬರ್ತ್ಡೇ ಆಗಿತ್ತು. ಅವರು ಶಾರುಖ್ನ ದೊಡ್ಡ ಅಭಿಮಾನಿ ಕೂಡ. ಶಾರುಖ್ ತೆರಳಿ ಆ ಫೋಟೋಗ್ರಾಫರ್ಗೆ ವಿಶ್ ಮಾಡಿದ್ದಾರೆ. ಇದರಿಂದ ಆ ಪಾಪರಾಜಿ ಖುಷಿಯಾಗಿದ್ದಾರೆ.
ಶಾರುಖ್ ಖಾನ್ ಅವರಿಗೆ ಪಾಪರಾಜಿ ಹ್ಯಾಂಡ್ಶೇಖ್ ಮಾಡಿದರು. ನಂತರ ಅವರ ಕೈನ ತೆಗೆದುಕೊಂಡು ಕಿಸ್ ಮಾಡಿದರು ಪಾಪರಾಜಿ. ಈ ವಿಡಿಯೋ ಸಾಕಷ್ಟು ಗಮನ ಸೆಳೆಯುತ್ತಿದೆ. ಎಲ್ಲರೂ ಆ ವ್ಯಕ್ತಿಯನ್ನು ಲಕ್ಕಿ ಎಂದು ಕರೆದಿದ್ದಾರೆ. ಈ ವಿಡಿಯೋಗೆ ಎಲ್ಲ ಕಡೆಗಳಿಂದ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. ಇದನ್ನು ಶಾರುಖ್ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ. ಶಾರುಖ್ ಖಾನ್ ಅವರು ಕೂಲ್ ಆಗಿ ನಡೆದುಕೊಂಡಿದ್ದಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಕತಾರ್ನಿಂದ ನೌಕಾಪಡೆಯ ಮಾಜಿ ಸಿಬ್ಬಂದಿಗಳ ಬಿಡುಗಡೆಯಲ್ಲಿ ನಟ ಶಾರುಖ್ ಖಾನ್ ಪಾತ್ರವಿಲ್ಲ
ಭಾರತೀಯ ನೌಕಾಪಡೆಯ ಎಂಟು ಸಿಂಬ್ಬಂದಿಯನ್ನು ಇತ್ತೀಚೆಗೆ ಕತಾರ್ ಬಿಡುಗಡೆ ಮಾಡಿತ್ತು. ಇದರ ಹಿಂದೆ ಶಾರುಖ್ ಖಾನ್ ಅವರ ಪಾತ್ರವಿದೆ ಎಂದು ಸುದ್ದಿ ಆಗಿತ್ತು. ಶಾರುಖ್ ಇತ್ತೀಚೆಗೆ ಮಧ್ಯಪ್ರಾಚ್ಯ ದೇಶಕ್ಕೆ ಭೇಟಿ ನೀಡಿದ್ದು ಈ ಸುದ್ದಿ ಹುಟ್ಟಲು ಮುಖ್ಯ ಕಾರಣ. ಆದರೆ, ಇದರಲ್ಲಿ ಶಾರುಖ್ ಖಾನ್ ಪಾತ್ರವಿಲ್ಲ ಎಂದು ಅವರ ತಂಡ ಸ್ಪಷ್ಟಪಡಿಸಿದೆ. ಇದಕ್ಕೆ ಕಾರಣ ಆಗಿದ್ದು ಭಾರತದ ಅಧಿಕಾರಿಗಳು ಎಂದು ಮಾಹಿತಿ ನೀಡಲಾಗಿದೆ.
ಶಾರುಖ್ ಕೈಗೆ ಕಿಸ್ ಮಾಡಿದ ಅಭಿಮಾನಿ
View this post on Instagram
ಸದ್ಯ ಶಾರುಖ್ ಖಾನ್ ಅವರು ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಸಿನಿಮಾ ಗೆದ್ದಿದೆ. ಅವರ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ. ಅವರು ಸಾಕಷ್ಟು ಎಚ್ಚರಿಕೆಯಿಂದ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ