ಕತಾರ್‌ನಿಂದ ನೌಕಾಪಡೆಯ ಮಾಜಿ ಸಿಬ್ಬಂದಿಗಳ ಬಿಡುಗಡೆಯಲ್ಲಿ ನಟ ಶಾರುಖ್ ಖಾನ್ ಪಾತ್ರವಿಲ್ಲ
“ಕತಾರ್‌ನಿಂದ ಭಾರತದ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡುವಲ್ಲಿ ಶಾರುಖ್ ಖಾನ್ ಅವರ ಉದ್ದೇಶಿತ ಪಾತ್ರದ ಬಗ್ಗೆ ವರದಿಗಳ ಬಗ್ಗೆ, ಶಾರುಖ್ ಖಾನ್ ಅವರ ಕಚೇರಿಯು ಅವರ ಪಾಲ್ಗೊಳ್ಳುವಿಕೆಯ ಅಂತಹ ಯಾವುದೇ ಸಮರ್ಥನೆಗಳು ಆಧಾರರಹಿತವಾಗಿವೆ ಎಂದು ಹೇಳುತ್ತದೆ, ಈ ಯಶಸ್ವಿ ನಿರ್ಣಯದ ಕಾರ್ಯಗತಗೊಳಿಸುವಿಕೆಗೆ ಕಾರಣರಾದವರು ಭಾರತದ ಅಧಿಕಾರಿಗಳು ಮಾತ್ರ ಎಂದು ಪೂಜಾ ದದ್ಲಾನಿ ಸಾಮಾಜಿಕ ಮಾಧ್ಯಮಗಳಲ್ಲಿ ಕಿಂಗ್ ಖಾನ್ ಕಚೇರಿಯ ಹೇಳಿಕೆ ಹಂಚಿಕೊಂಡಿದ್ದಾರೆ.
ಮುಂಬೈ ಫೆಬ್ರುವರಿ 13: ಇತ್ತೀಚೆಗೆ ಕತಾರ್‌ನಿಂದ (Qatar) ಭಾರತೀಯ ನೌಕಾಪಡೆಯ (Indian Navy veterans)ಎಂಟು ಸಿಂಬ್ಬಂದಿಗಳು ಬಿಡುಗಡೆಯಾಗಿದ್ದು, ಈ ಕಾರ್ಯದಲ್ಲಿ ಶಾರುಖ್ ಖಾನ್ (Shah Rukh Khan)ಪಾತ್ರವಿದೆ ಎಂದು ಸುದ್ದಿಯಾಗಿತ್ತು. ಆದರೆ ಇದರಲ್ಲಿ ಕಿಂಗ್ ಖಾನ್ದ್ದು ಏನೂ ಪಾತ್ರವಿಲ್ಲ ಎಂದು ಶಾರುಖ್ ಖಾನ್ ಕಚೇರಿ ಸ್ಪಷ್ಟ ಪಡಿಸಿದೆ. ಎಂಟು ಮಾಜಿ ನಾವಿಕರನ್ನು ಬೇಹುಗಾರಿಕೆ ಆರೋಪದ ಮೇಲೆ ಕತಾರ್ ಬಂಧಿಸಿದ್ದು, ಭಾರತ ಸರ್ಕಾರದ ಮಧ್ಯಸ್ಥಿಕೆಯ ನಂತರ ಬಿಡುಗಡೆಯಾಯಿತು. ಆದಾಗ್ಯೂ, ಶಾರುಖ್ ಇತ್ತೀಚೆಗೆ ಮಧ್ಯಪ್ರಾಚ್ಯ ದೇಶಕ್ಕೆ ಭೇಟಿ ನೀಡಿದ್ದರಿಂದ ಈ ವಿಷಯದಲ್ಲಿ ಅವರ ಪಾತ್ರವಿದೆ ಎಂದು ಸುದ್ದಿ ಹಬ್ಬಿತ್ತು.
ಶಾರುಖ್ ಖಾನ್ ಹೇಳಿಕೆ
ವರದಿಗಳನ್ನು ನಿರಾಕರಿಸಿದ ಶಾರುಖ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ನಟನ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ “ಕತಾರ್‌ನಿಂದ ಭಾರತದ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡುವಲ್ಲಿ ಶಾರುಖ್ ಖಾನ್ ಅವರ ಉದ್ದೇಶಿತ ಪಾತ್ರದ ಬಗ್ಗೆ ವರದಿಗಳ ಬಗ್ಗೆ, ಶಾರುಖ್ ಖಾನ್ ಅವರ ಕಚೇರಿಯು ಅವರ ಪಾಲ್ಗೊಳ್ಳುವಿಕೆಯ ಅಂತಹ ಯಾವುದೇ ಸಮರ್ಥನೆಗಳು ಆಧಾರರಹಿತವಾಗಿವೆ ಎಂದು ಹೇಳುತ್ತದೆ, ಈ ಯಶಸ್ವಿ ನಿರ್ಣಯದ ಕಾರ್ಯಗತಗೊಳಿಸುವಿಕೆಗೆ ಕಾರಣರಾದವರು ಭಾರತದ ಅಧಿಕಾರಿಗಳು ಮಾತ್ರ. ಈ ವಿಷಯದಲ್ಲಿ ಖಾನ್ ಅವರು ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ. ರಾಜತಾಂತ್ರಿಕತೆ ಮತ್ತು ರಾಜ್ಯಕಾರ್ಯವನ್ನು ಒಳಗೊಂಡಿರುವ ಎಲ್ಲಾ ವಿಷಯಗಳನ್ನು ನಮ್ಮ ಅತ್ಯಂತ ಸಮರ್ಥ ನಾಯಕರು ಉತ್ತಮವಾಗಿ ಕಾರ್ಯಗತಗೊಳಿಸುತ್ತಾರೆ. ಖಾನ್, ಇತರ ಅನೇಕ ಭಾರತೀಯರಂತೆ ನೌಕಾಪಡೆಯ ಅಧಿಕಾರಿಗಳು ಮನೆಯಲ್ಲಿ ಸುರಕ್ಷಿತವಾಗಿರುವುದಕ್ಕೆ ಸಂತೋಷಪಡುತ್ತಾರೆ ಮತ್ತು ಅವರಿಗೆ ಶುಭ ಹಾರೈಸುತ್ತಾರೆ” ಎಂದು ಹೇಳಿಕೆಯಲ್ಲಿದೆ.
From the office of Mr. Shah Rukh Khan pic.twitter.com/s7Kwwhmd6j
— Pooja Dadlani (@pooja_dadlani) February 13, 2024
ಕತಾರ್‌ನಲ್ಲಿ ಏನಾಯಿತು?
ಕಳೆದ ವರ್ಷ ಡಿಸೆಂಬರ್‌ನಲ್ಲಿ, ಕತಾರ್‌ನ ನ್ಯಾಯಾಲಯವು ನಿವೃತ್ತ ಭಾರತೀಯ ನೌಕಾಪಡೆಯ ಎಲ್ಲಾ ಎಂಟು ಸಿಬ್ಬಂದಿಗೆ ನೀಡಲಾದ ಮರಣದಂಡನೆಯನ್ನು ಕಡಿಮೆಗೊಳಿಸಿತು. ಈ ಎಂಟು ಭಾರತೀಯರು ಅಕ್ಟೋಬರ್ 2022 ರಿಂದ ಕತಾರ್‌ನಲ್ಲಿ ಜೈಲಿನಲ್ಲಿದ್ದರು. ಜಲಾಂತರ್ಗಾಮಿ ಕಾರ್ಯಾಚರಣೆಯಲ್ಲಿ ಇವರು ರಾಷ್ಟ್ರದ ಮೇಲೆ ಬೇಹುಗಾರಿಕೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪದ ಮೇಲೆ ಕತಾರ್ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತು. ಫೆಬ್ರವರಿ 12 ರಂದು, ಎಂಟು ಮಾಜಿ ನೌಕಾಪಡೆಯ ಅಧಿಕಾರಿಗಳಲ್ಲಿ ಏಳು ಮಂದಿ ಭಾರತಕ್ಕೆ ಮರಳಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಅಧಿಕೃತ ಹೇಳಿಕೆಯ ಮೂಲಕ ತಿಳಿಸಿದೆ.
ಇದನ್ನೂ ಓದಿ:ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳ ಬಿಡುಗಡೆ
ಕತಾರ್‌ನಲ್ಲಿ ಶಾರುಖ್
ಶಾರುಖ್ ಇತ್ತೀಚೆಗೆ ಕೆಲಸಕ್ಕೆ ಸಂಬಂಧಿಸಿದ ಕಾರಣಗಳಿಗಾಗಿ ಕತಾರ್‌ನಲ್ಲಿದ್ದರು. ಅವರು ದೋಹಾದಲ್ಲಿ ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಾಸಿಮ್ ಅಲ್ ಥಾನಿ ಅವರನ್ನು ಭೇಟಿಯಾದರು. ಅವರು ವಿಶೇಷ ಅತಿಥಿಯಾಗಿ ಎಎಫ್‌ಸಿ ಫೈನಲ್‌ನಲ್ಲಿಯೂ ಭಾಗವಹಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ