ತರಾತುರಿಯಲ್ಲಿ ಎಂಎಸ್​​ಪಿ ತರಲು ಸಾಧ್ಯವಿಲ್ಲ; ಸರ್ಕಾರದೊಂದಿಗೆ ಮಾತುಕತೆಗೆ ರೈತರು ಮುಂದಾಗಬೇಕು:ಕೇಂದ್ರ ಕೃಷಿ ಸಚಿವ ಮುಂಡಾ

ನಾವು ಕೆಲವು ವಿಷಯಗಳನ್ನು ಘೋಷಿಸಬೇಕೆಂದು ಅವರು ಬಯಸುತ್ತಾರೆ. ಸರ್ಕಾರವು ಚರ್ಚೆಯ ನಂತರವೇ ಘೋಷಣೆ ಮಾಡಲಾಗುತ್ತದೆ. ಪ್ರಬುದ್ಧ ಚರ್ಚೆಗಾಗಿ, ನಾವು ಪ್ರತಿ ಮಧ್ಯಸ್ಥಗಾರರ ಹಿತಾಸಕ್ತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. "ನಾವು ರಾಷ್ಟ್ರಮಟ್ಟದಲ್ಲಿ ಏನಾದರೂ ಮಾಡುತ್ತೇವೆ ಎಂದು ಭಾವಿಸೋಣ, ನೀವು ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅದೇ ಜನರು ನಾಳೆ ಅದು ಸರಿಯಾಗಿಲ್ಲ ಅಂತಾರೆ ಎಂದು ಕೇಂದ್ರ ಕೃಷಿ ಸಚಿವ ಹೇಳಿದ್ದಾರೆ.

ತರಾತುರಿಯಲ್ಲಿ ಎಂಎಸ್​​ಪಿ ತರಲು ಸಾಧ್ಯವಿಲ್ಲ; ಸರ್ಕಾರದೊಂದಿಗೆ ಮಾತುಕತೆಗೆ ರೈತರು ಮುಂದಾಗಬೇಕು:ಕೇಂದ್ರ ಕೃಷಿ ಸಚಿವ ಮುಂಡಾ
ಅರ್ಜುನ್ ಮುಂಡಾ
Follow us
ರಶ್ಮಿ ಕಲ್ಲಕಟ್ಟ
|

Updated on:Feb 13, 2024 | 7:12 PM

ದೆಹಲಿ ಫೆಬ್ರುವರಿ 13: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಖಾತರಿಪಡಿಸುವ ಕಾನೂನನ್ನು ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸದೆ ತರಾತುರಿಯಲ್ಲಿ ತರಲು ಸಾಧ್ಯವಿಲ್ಲ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ (Arjun Munda)ಮಂಗಳವಾರ ಹೇಳಿದ್ದ ಪ್ರತಿಭಟನಾನಿರತ ರೈತ ಗುಂಪುಗಳು (Farmer’s Protest) ಈ ಬಗ್ಗೆ ಸರ್ಕಾರದೊಂದಿಗೆ ರಚನಾತ್ಮಕ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದರು. ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಮುಂಡಾ ಪ್ರತಿಭಟನಾ ನಿರತ ರೈತರಿಗೆ ರಾಜಕೀಯ ಲಾಭಕ್ಕಾಗಿ ತಮ್ಮ ಪ್ರತಿಭಟನೆಯನ್ನು ಬಳಸುವ ಕೆಲವು ಅಂಶಗಳ ಬಗ್ಗೆ “ಅರಿವು ಮತ್ತು ಎಚ್ಚರಿಕೆ” ನೀಡಿದ್ದಾರೆ.

ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಚಂಡೀಗಢದಲ್ಲಿ ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ ರೈತರ ಗುಂಪುಗಳೊಂದಿಗೆ ಎರಡು ಸುತ್ತಿನ ಚರ್ಚೆ ನಡೆಸಿದ ಸಚಿವರ ನಿಯೋಗದ ಭಾಗವಾಗಿದ್ದಾರೆ ಮುಂಡಾ. ಆದರೆ, ಮಾತುಕತೆ ಅನಿರ್ದಿಷ್ಟವಾಗಿಯೇ ಉಳಿದಿದ್ದರಿಂದ ರೈತ ಸಂಘಟನೆಗಳು ಮಂಗಳವಾರದಿಂದ ‘ದೆಹಲಿ ಚಲೋ’ ಮೆರವಣಿಗೆ ಆರಂಭಿಸಿವೆ.

ಎರಡು ಸುತ್ತಿನ ಚರ್ಚೆಯಲ್ಲಿ ಅವರ ಹಲವು ಬೇಡಿಕೆಗಳಿಗೆ ನಾವು ಒಪ್ಪಿಗೆ ಸೂಚಿಸಿದ್ದೇವೆ. ಆದರೆ ಕೆಲವು ವಿಷಯಗಳಲ್ಲಿ ಒಪ್ಪಂದಕ್ಕೆ ಬರಲಿಲ್ಲ. ಮಾತುಕತೆಗಳು ಇನ್ನೂ ನಡೆಯುತ್ತಿವೆ ಎಂದು ಮುಂಡಾ ಹೇಳಿದರು. ಆಡಳಿತಾತ್ಮಕ ಮಟ್ಟದಲ್ಲಿ ಮಾಡಬಹುದಾದ ಅವರ ಹಲವು ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಒಪ್ಪಿಗೆ ನೀಡಿದೆ ಎಂದರು.

ಆದಾಗ್ಯೂ, ಎಂಎಸ್‌ಪಿಯನ್ನು ಖಾತರಿಪಡಿಸುವ ನೀತಿಗೆ ರಾಜ್ಯ ಸರ್ಕಾರಗಳು ಸೇರಿದಂತೆ ಎಲ್ಲಾ ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಸಮಗ್ರ ವಿಧಾನದ ಅಗತ್ಯವಿದೆ ಎಂದು ಸಚಿವರು ಹೇಳಿದರು.

“ಹುಮೇನ್ ಎಂಎಸ್ ಪಿ ಕೆ ಬಾರೆ ಮೇ ಯೇ ದೇಖನಾ ಹೈ ಕಾನೂನ್ ಕಿಸ್ ತರಹ್ ಬನಾನಾ ಹೈ ಔರ್ ಇಸ್ಮೇ ಕ್ಯಾ ಲಾಭ್ ಔರ್ ಕ್ಯಾ ನುಕ್ಸಾನ್ ಹೈ. (ಎಂಎಸ್ ಪಿ ಯಲ್ಲಿ, ನಾವು ಯಾವ ರೀತಿಯ ಕಾನೂನನ್ನು ತರಬೇಕು ಎಂಬುದನ್ನು ನೋಡಬೇಕು. ಅವುಗಳ ಪ್ರಯೋಜನಗಳು ಮತ್ತು ಅನಾನುಕೂಲಗಳು ಯಾವುವು ಎಂಬುದನ್ನು ಅರಿಯಬೇಕಿದೆ)ಎಂದಿದ್ದಾರೆ ಮುಂಡಾ.

ಮೋದಿ ಸರ್ಕಾರವು ಎಲ್ಲಾ ಪಾಲುದಾರರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು “ಮಹತ್ತರ ಕೆಲಸ” ಮಾಡುತ್ತದೆ ಮತ್ತು “ತರಾತುರಿಯಲ್ಲಿ” ಯಾವುದೇ ಘೋಷಣೆಗಳನ್ನು ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ

“ನಾವು ಕೆಲವು ವಿಷಯಗಳನ್ನು ಘೋಷಿಸಬೇಕೆಂದು ಅವರು ಬಯಸುತ್ತಾರೆ. ಸರ್ಕಾರವು ಚರ್ಚೆಯ ನಂತರವೇ ಘೋಷಣೆ ಮಾಡಲಾಗುತ್ತದೆ. ಪ್ರಬುದ್ಧ ಚರ್ಚೆಗಾಗಿ, ನಾವು ಪ್ರತಿ ಮಧ್ಯಸ್ಥಗಾರರ ಹಿತಾಸಕ್ತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ಅವರು ಹೇಳಿದರು. “ನಾವು ರಾಷ್ಟ್ರಮಟ್ಟದಲ್ಲಿ ಏನಾದರೂ ಮಾಡುತ್ತೇವೆ ಎಂದು ಭಾವಿಸೋಣ, ನೀವು ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅದೇ ಜನರು ನಾಳೆ ಅದು ಸರಿಯಾಗಿಲ್ಲ ಅಂತಾರೆ  ಎಂದು ಮುಂಡಾ ಹೇಳಿದರು.

ಪ್ರತಿಭಟನಾನಿರತ ರೈತರೊಂದಿಗೆ ಚರ್ಚೆಯ ಸಂದರ್ಭದಲ್ಲಿ, ರೈತರು ಈಗಾಗಲೇ ಎಂಎಸ್‌ಪಿ ವ್ಯವಸ್ಥೆಯನ್ನು ಬಲಪಡಿಸಲು ನೋಡುತ್ತಿರುವ ಸಂಜಯ್ ಅಗರ್ವಾಲ್ ಅಧ್ಯಕ್ಷತೆಯ ಸಮಿತಿಯ ಭಾಗವಾಗಲು ಅಥವಾ ಹೊಸ ಸಮಿತಿಯ ಭಾಗವಾಗಲು ರೈತರಿಗೆ ವಿನಂತಿಸಲಾಗಿದೆ ಎಂದು ಹೇಳಿದರು. ನಾವು ಸಮಿತಿಯನ್ನು ರಚಿಸುತ್ತೇವೆ ಎಂದು ಹೇಳಿದ್ದೇವೆ ಮತ್ತು ಅದರ ಭಾಗವಾಗುವಂತೆ ಕೇಳಿದ್ದೇವೆ. ಅದಕ್ಕೂ ಅವರು ಸಿದ್ಧರಿಲ್ಲ. ಇಡೀ ಸಮಸ್ಯೆಯನ್ನು ಪ್ರತ್ಯೇಕವಾಗಿ ನೋಡಬಾರದು. ಸ್ಪಷ್ಟವಾದ ನಿಯಮಗಳೊಂದಿಗೆ ಸಮಗ್ರ, ಕಾಲಮಿತಿಯ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ “ಆದರೆ ಅವರು ಇದಕ್ಕೂ ಸಿದ್ಧರಿಲ್ಲ” ಎಂದು ಸಚಿವರು ಹೇಳಿದರು.

ಮೂರು ವಿವಾದಾತ್ಮಕ ಕೃಷಿ-ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ಸರ್ಕಾರವು ಅಂತಹ ಸಮಿತಿಯನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದ ಎಂಟು ತಿಂಗಳ ನಂತರ MSP ಕುರಿತು ಸಂಜಯ್ ಅಗರ್ವಾಲ್ ನೇತೃತ್ವದ ಸಮಿತಿಯನ್ನು ಜುಲೈ 2022 ರಲ್ಲಿ ಸ್ಥಾಪಿಸಲಾಯಿತು. ಇಲ್ಲಿಯವರೆಗೆ, ಇದು 37 ಸಭೆಗಳು ಮತ್ತು ಕಾರ್ಯಾಗಾರಗಳನ್ನು ನಡೆಸಿದೆ.

ಇದನ್ನೂ ಓದಿ: ರೈತರಿಗೆ ತೊಂದರೆ ಕೊಡಬೇಡಿ, ನಾವು ಅವರಿಗೆ ಬೆಂಬಲ ನೀಡುತ್ತಿದ್ದೇವೆ: ಕೇಂದ್ರ ಸರ್ಕಾರಕ್ಕೆ ರಾಕೇಶ್ ಟಿಕಾಯತ್  ಎಚ್ಚರಿಕೆ

ರೈತರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರವು ಯಾವುದೇ ಸಮಯದಲ್ಲಿ ಮಾತುಕತೆಗೆ ಮುಕ್ತವಾಗಿದೆ ಎಂದು ಹೇಳಿದ ಮುಂಡಾ, “ಅವರು (ರೈತರು) ಈಗ ದಿನಾಂಕವನ್ನು ನೀಡುತ್ತಾರೆ” ಎಂದು ಹೇಳಿದರು.

“ನಾವು ಮಾತುಕತೆಗೆ ಸಿದ್ಧ ಎಂದು ಅವರಿಗೆ ಹೇಳಿದ್ದೇವೆ… ಅವರು ಮಾತನಾಡಲು ಬಯಸದಿದ್ದರೆ ಮತ್ತು ಸಮಸ್ಯೆ ಸೃಷ್ಟಿಸುವುದು ಧ್ಯೇಯವಾಕ್ಯವಾಗಿದ್ದರೆ, ರಾಜಕೀಯ ಲಾಭಕ್ಕಾಗಿ ಪರಿಸ್ಥಿತಿಯನ್ನು ಸೃಷ್ಟಿಸಲು ಬಯಸುವವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ನಾನು ರೈತರಿಗೆ ಸಲಹೆ ನೀಡುತ್ತೇನೆ.  “ರೈತರನ್ನು ಮಾನಹಾನಿ ಮಾಡುವ ಪರಿಸ್ಥಿತಿಯನ್ನು ಸೃಷ್ಟಿಸಲು ಅವರಲ್ಲಿ ಕೆಲವು ಅಂಶಗಳು ಇರಬಹುದು ಎಂದು ಅವರು ಅವರ ಬಗ್ಗೆ ಜಾಗರೂಕರಾಗಿರಬೇಕು” ಎಂದು ಅವರು ಹೇಳಿದರು. ಸರ್ಕಾರ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಮತ್ತು ಕಳೆದ 10 ವರ್ಷಗಳಲ್ಲಿ ಕೃಷಿ ಬಜೆಟ್ ಅನ್ನು ವಾರ್ಷಿಕ 27,000 ಕೋಟಿಯಿಂದ 1.24 ಲಕ್ಷ ಕೋಟಿಗೆ ಹೆಚ್ಚಿಸಿದೆ ಎಂದು ಮುಂಡಾ ಒತ್ತಿ ಹೇಳಿದರು. ಎಂಎಸ್‌ಪಿಗೆ ಕಾನೂನು ಖಾತರಿಯ ಜೊತೆಗೆ, ರೈತ ಕಲ್ಯಾಣಕ್ಕಾಗಿ ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ ಮತ್ತು ಸಾಲ ಮನ್ನಾ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ರೈತರು ಒತ್ತಾಯಿಸುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Tue, 13 February 24

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್