ರೈತರಿಗೆ ತೊಂದರೆ ಕೊಡಬೇಡಿ, ನಾವು ಅವರಿಗೆ ಬೆಂಬಲ ನೀಡುತ್ತಿದ್ದೇವೆ: ಕೇಂದ್ರ ಸರ್ಕಾರಕ್ಕೆ ರಾಕೇಶ್ ಟಿಕಾಯತ್ ಎಚ್ಚರಿಕೆ
ಹಲವಾರು ರೈತ ಸಂಘಗಳಿವೆ ಮತ್ತು ಅವರಿಗೆ ಬೇರೆ ಬೇರೆ ಸಮಸ್ಯೆಗಳಿವೆ... ದೆಹಲಿಗೆ ಪಾದಯಾತ್ರೆ ಮಾಡುವ ರೈತರಿಗೆ ಸರ್ಕಾರ ಸಮಸ್ಯೆ ಸೃಷ್ಟಿಸಿದರೆ, ನಾವು ಅವರಿಂದ ದೂರವಿಲ್ಲ, ನಾವು ಅವರಿಗೆ ಬೆಂಬಲ ನೀಡುತ್ತೇವೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಬಿಕೆಯು ದೇಶದ ದೊಡ್ಡ ರೈತ ಒಕ್ಕೂಟಗಳಲ್ಲಿ ಒಂದಾಗಿದೆ. ಮಂಗಳವಾರ ಪ್ರಾರಂಭವಾದ ಆಂದೋಲನದಲ್ಲಿ ಅದು ಸೇರಿಕೊಂಡರೆ, ಕೇಂದ್ರವು ಎದುರಿಸುತ್ತಿರುವ ಸಮಸ್ಯೆಯ ಪ್ರಮಾಣವು ಮತ್ತಷ್ಚು ಹೆಚ್ಚಾಗಲಿದೆ
ದೆಹಲಿ ಫೆಬ್ರುವರಿ 13: ‘ದೆಹಲಿ ಚಲೋ‘ (Delhi Chalo)ಆಂದೋಲನ ವೇಳೆ ಮಂಗಳವಾರ ಪಂಜಾಬ್-ಹರ್ಯಾಣ ಗಡಿಯಲ್ಲಿರುವ ಶಂಭು ಎಂಬಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದನ್ನು ರೈತ ನಾಯಕ ರಾಕೇಶ್ ಟಿಕಾಯತ್ (Rakesh Tikait) ಖಂಡಿಸಿದ್ದಾರೆ. 2020/21ರ ಸರ್ಕಾರದ ” ಕಪ್ಪು ಕೃಷಿ ಕಾನೂನು” (black farm laws) ವಿರುದ್ಧದ ಪ್ರತಿಭಟನೆಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ರಾಕೇಶ್ ಟಿಕಾಯತ್, ಇದು ರೈತರು ಮತ್ತು ಪೊಲೀಸ್ ಪಡೆಗಳ ನಡುವೆ ಘರ್ಷಣೆಯನ್ನು ಪ್ರಚೋದಿಸುತ್ತದೆ ಎಂದು ಹೇಳಿದ್ದಾರೆ. “ಹಲವಾರು ರೈತ ಸಂಘಗಳಿವೆ ಮತ್ತು ಅವರಿಗೆ ಬೇರೆ ಬೇರೆ ಸಮಸ್ಯೆಗಳಿವೆ… ದೆಹಲಿಗೆ ಪಾದಯಾತ್ರೆ ಮಾಡುವ ರೈತರಿಗೆ ಸರ್ಕಾರ ಸಮಸ್ಯೆ ಸೃಷ್ಟಿಸಿದರೆ, ನಾವು ಅವರಿಂದ ದೂರವಿಲ್ಲ, ನಾವು ಅವರಿಗೆ ಬೆಂಬಲ ನೀಡುತ್ತೇವೆ ಎಂದು ರೈತ ಮುಖಂಡ ಟಿಕಾಯತ್ ಹೇಳಿದ್ದಾರೆ. ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರು ಸ್ಥಾಪಿಸಿದ ಉತ್ತರ ಪ್ರದೇಶ ಮೂಲದ ಸಂಸ್ಥೆಯಾದ ಭಾರತೀಯ ಕಿಸಾನ್ ಯೂನಿಯನ್‌ನ ಮುಖ್ಯಸ್ಥರಾಗಿದ್ದಾರೆ. ಈ ತಿಂಗಳು ಸಿಂಗ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಲಾಗಿದೆ.
ಬಿಕೆಯು ದೇಶದ ದೊಡ್ಡ ರೈತ ಒಕ್ಕೂಟಗಳಲ್ಲಿ ಒಂದಾಗಿದೆ. ಮಂಗಳವಾರ ಪ್ರಾರಂಭವಾದ ಆಂದೋಲನದಲ್ಲಿ ಅದು ಸೇರಿಕೊಂಡರೆ, ಕೇಂದ್ರವು ಎದುರಿಸುತ್ತಿರುವ ಸಮಸ್ಯೆಯ ಪ್ರಮಾಣವು ಮತ್ತಷ್ಚು ಹೆಚ್ಚಾಗಲಿದೆ. ಬಿಕೆಯು ರಾಷ್ಟ್ರೀಯ ಅಧ್ಯಕ್ಷರಾದ ಟಿಕಾಯತ್ ಅವರ ಸಹೋದರ ನರೇಶ್ ಟಿಕಾಯಿತ್ ಅವರು ರೈತರೊಂದಿಗೆ ಕುಳಿತು ಮಾತುಕತೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. “ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ… ಸರ್ಕಾರವು ಚರ್ಚೆಗಳನ್ನು ನಡೆಸಬೇಕು. ರೈತರಿಗೆ ಗೌರವವನ್ನು ನೀಡಬೇಕು … ಈ ಸಮಸ್ಯೆಯನ್ನು ಪರಿಹರಿಸಲು ಯೋಚಿಸಬೇಕು ಮತ್ತು ಪ್ರಯತ್ನಿಸಬೇಕು ಎಂದು ಅವರು ಹೇಳಿದ್ದಾರೆ.
#WATCH | On farmers’ ‘Delhi chalo’ protest, farmer leader Rakesh Tikait says, “MSP guarantee law and Swaminathan Committee report, Electricity amendment bill and debt waiver are the issues of the farmers across the country. There are several farmer unions and they have different… pic.twitter.com/UCcVGDsRPo
— ANI (@ANI) February 13, 2024
ಕಳೆದ ತಿಂಗಳು ರಾಕೇಶ್ ಟಿಕಾಯತ್ ರೈತರ ಬೇಡಿಕೆಗಳಿಗೆ ಒತ್ತಾಯಿಸಿ ಫೆಬ್ರವರಿ 16 ರಂದು ಭಾರತ್ ಬಂದ್‌ಗೆ ಕರೆ ನೀಡಿದ್ದರು. ಕಳೆದ ವರ್ಷ ಜೂನ್‌ನಲ್ಲಿ, ಕನಿಷ್ಠ ಬೆಂಬಲ ಬೆಲೆಗಳ ಮೇಲೆ ಕಾನೂನು ಖಾತರಿಯ ಬೇಡಿಕೆಯನ್ನು ಪರಿಹರಿಸದಿದ್ದರೆ, ಈಗ ರದ್ದಾದ ಕೃಷಿ ಕಾನೂನುಗಳ ವಿರುದ್ಧದ ಹೋರಾಟಕ್ಕಿಂತ ದೊಡ್ಡ ಆಂದೋಲನ ಮಾಡುವುದಾಗಿ ಟಿಕಾಯತ್ ಬೆದರಿಕೆ ಹಾಕಿದ್ದರು.
ಎಂಎಸ್‌ಪಿಗಾಗಿ ದೆಹಲಿಯಲ್ಲಿನ ಆಂದೋಲನಕ್ಕಿಂತ ದೊಡ್ಡ ಆಂದೋಲನವನ್ನು (ಈಗ ರದ್ದುಪಡಿಸಿದ ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನ) ಕೈಗೊಳ್ಳಬೇಕಾಗುತ್ತದೆ ”ಎಂದು ಅವರು ಹರ್ಯಾಣದ ಕರ್ನಾಲ್‌ನಲ್ಲಿ ಮಾತನಾಡಿದ್ದ ಟಿಕಾಯತ್ ಹೇಳಿದ್ದರು.
ರೈತರ ‘ದೆಹಲಿ ಚಲೋ’ 2.0 ಇಂದು ಶಂಭು ಗಡಿ ಕ್ರಾಸಿಂಗ್‌ನಲ್ಲಿ ಆರಂಭವಾಗಿದ್ದು, ಮಧ್ಯಾಹ್ನದ ಹೊತ್ತಿಗೆ ರೈತರು ದೆಹಲಿಯತ್ತ ಬರುತ್ತಿದ್ದಂತೆ ಅಶ್ರುವಾಯು ಪ್ರಯೋಗ ನಡೆದಿದೆ. ಪ್ರತಿಭಟನಾ ನಿರತ ರೈತರ ಬೇಡಿಕೆಗಳಲ್ಲಿ ಪ್ರಮುಖವಾದದ್ದು, ಮಾರುಕಟ್ಟೆಯ ಅನಿಶ್ಚಿತತೆಯನ್ನು ಎದುರಿಸುತ್ತಿರುವ ರೈತರಿಗೆ ನಿರ್ಣಾಯಕ ಆರ್ಥಿಕ ಜೀವನಾಡಿಯಾಗಿರುವ ಬೆಳೆಗಳಿಗೆ ಎಂಎಸ್‌ಪಿ ಅಥವಾ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವುದು. ನಾಲ್ಕು ವರ್ಷಗಳ ಹಿಂದೆ ನಡೆದ ಪ್ರತಿಭಟನೆಗಳಲ್ಲಿ ಎಂಎಸ್‌ಪಿಗೆ ಕಾನೂನು ಬೆಂಬಲವೂ ಸೇರಿತ್ತು.
ಇದನ್ನೂ ಓದಿ:6 ತಿಂಗಳ ಪಡಿತರ, ಟ್ರಾಲಿಗಳಲ್ಲಿ ಡೀಸೆಲ್: ದೀರ್ಘಕಾಲದ ಆಂದೋಲನಕ್ಕೆ ಸಜ್ಜಾಗಿ ಬಂದ ಪಂಜಾಬ್ ರೈತರು
ಇತರ ಪ್ರಮುಖ ಬೇಡಿಕೆಗಳೆಂದರೆ 2020 ರ ವಿದ್ಯುತ್ ಕಾಯಿದೆಯನ್ನು ರದ್ದುಗೊಳಿಸುವುದು, ಯುಪಿಯ ಲಖಿಂಪುರ ಖೇರಿಯಲ್ಲಿ ಸಾವನ್ನಪ್ಪಿದ ರೈತರಿಗೆ ಪರಿಹಾರ ಮತ್ತು ಕೊನೆಯ ಪ್ರತಿಭಟನೆಯಲ್ಲಿ ಭಾಗಿಯಾದವರ ವಿರುದ್ಧ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ