AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಂದರಿಯ ಬಲೆಗೆ ಬಿದ್ದ 57ರ ವ್ಯಕ್ತಿ: ಪೊಲೀಸರ ಸೋಗಿನಲ್ಲಿ ಹನಿಟ್ರ್ಯಾಪ್​, ಪ್ರಮುಖ ಆರೋಪಿ ಸೇರಿ ಗ್ಯಾಂಗ್​ ಅರೆಸ್ಟ್

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಹನಿಟ್ರ್ಯಾಪ್‌ನಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಒಬ್ಬ 57 ವರ್ಷದ ವ್ಯಕ್ತಿಗೆ ಬಲೆ ಬೀಸಿ, ಸಾವಿರಾರು ರೂ ಹಣ ಮತ್ತು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾರೆ. ಪೊಲೀಸರ ಸೋಗಿನಲ್ಲಿ ಬ್ಲ್ಯಾಕ್‌ಮೇಲ್ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸುಂದರಿಯ ಬಲೆಗೆ ಬಿದ್ದ 57ರ ವ್ಯಕ್ತಿ: ಪೊಲೀಸರ ಸೋಗಿನಲ್ಲಿ ಹನಿಟ್ರ್ಯಾಪ್​, ಪ್ರಮುಖ ಆರೋಪಿ ಸೇರಿ ಗ್ಯಾಂಗ್​ ಅರೆಸ್ಟ್
ನಯನಾ ಮತ್ತು ಗ್ಯಾಂಗ್​
Jagadisha B
| Edited By: |

Updated on:Jan 18, 2025 | 6:13 PM

Share

ಬೆಂಗಳೂರು, ಜನವರಿ 18: ಪೊಲೀಸರ ಸೋಗಿನಲ್ಲಿ ಹನಿಟ್ರ್ಯಾಪ್ (Honeytrap)​ ಪ್ರಕರಣವೊಂದರಲ್ಲಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ನಯನಾ ಸೇರಿದಂತೆ ಸಂತೋಷ್, ಅಜಯ್ ಮತ್ತು ಜಯರಾಜ್ ಎಂಬುವವರನ್ನು ಅರೆಸ್ಟ್​ ಮಾಡಲಾಗಿದೆ. ಪ್ರಕರಣ ದಾಖಲಾದಾಗಿನಿಂದ ನಗರದ ಬೇರೆ ಬೇರೆ ಕಡೆ ನಯನಾ ತಲೆ ಮರೆಸಿಕೊಂಡಿದ್ದಳು. ಸದ್ಯ ವಿಚಾರಣೆ ನಡೆಸಿರುವ ಪೊಲೀಸರು, ಒಬ್ಬರಿಗೆ ಮಾತ್ರ ಈ ರೀತಿ ಹನಿಟ್ರ್ಯಾಪ್ ಮಾಡಿರುವುದು ಬೆಳಕಿಗೆ ಬಂದಿದೆ. ನಯನಾ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ‌ ಮಾಡಲಾಗಿದೆ.

ಆರೋಪಿ ನಯನಾ ತನ್ನ ಸ್ನೇಹಿತನ ಮೂಲಕ 57 ವರ್ಷದ ಸಿವಿಲ್ ಕಂಟ್ರ್ಯಾಕ್ಟರ್​​ ಪರಿಚಯ ಮಾಡಿಕೊಂಡಿದ್ದಾಳೆ. ಬಳಿಕ ಗೆಳೆತನವಾಗಿ ಆಕೆ ಕೇಳಿದಾಗಲೆಲ್ಲಾ ಐದು-ಹತ್ತು ಸಾವಿರ ರೂ. ಹಣವನ್ನ ಕೊಡುತ್ತಿದ್ದರಂತೆ. ಮಾಗಡಿ ರಸ್ತೆಯಲ್ಲಿ ಹೋಗುತ್ತಿರುವಾಗ ಕಂಟ್ರ್ಯಾಕ್ಟರ್ ಸಿಕ್ಕಿದ್ದು, ಟೀ‌ ಕುಡಿದುಕೊಂಡು ಹೋಗಿ ಅಂತ ಮನೆಗೆ ಕರೆದಿದ್ದಾಳೆ. ಸ್ಮೈಲಿಗೆ ಕರಗಿದ ವ್ಯಕ್ತಿ ನೇರವಾಗಿ ಅವಳ ಸ್ಕೂಟಿ ಫಾಲೋ ಮಾಡಿಕೊಂಡು ಮನೆಗೆ ಹೋಗಿದ್ದಾರೆ.

ಇದನ್ನೂ ಓದಿ: ಮೈಸೂರು: ಎಟಿಎಂ ಮಷಿನ್​ಗೆ ಹಣ ತುಂಬದೆ ಲಕ್ಷಾಂತರ ರೂ ವಂಚನೆ, ಆಡಿಟ್​ ವೇಳೆ ಬಯಲು

ಇನ್ನು ಆಕೆಯ ಮನೆಯಲ್ಲಿದ್ದಾಗ ಪೊಲೀಸರ ಸೋಗಿನಲ್ಲಿ ಎಂಟ್ರಿ ಕೊಟ್ಟಿದ್ದ ಅಪರಿಚಿತರು, ವ್ಯಭಿಚಾರ ನಡೆಸ್ತಿದ್ದೀರಿ ಅಂತ ಬ್ಲಾಕ್ ಮೇಲ್​ ಮಾಡಿ, ನಂತರ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ ಫೋಟೊ ತೆಗೆದುಕೊಂಡಿದ್ದಾರೆ.

ಕೆಳಗಡೆ ಮೇಡಂ ಇದಾರೆ ಇಲ್ಲೇ ಸೆಟಲ್ ಮಾಡಿಕೂ ಅಂತ ವ್ಯಕ್ತಿಗೆ ಬೆದರಿಕೆ ಹಾಕಿದ್ದಾರೆ. 29 ಸಾವಿರ ರೂ. ನಗದು, ಫೋನ್ ಪೇನಲ್ಲಿ 26 ಸಾವಿರ ರೂ. ಹಾಗೂ ಮೈ ಮೇಲಿದ್ದ ಸುಮಾರು 5 ಲಕ್ಷ ರೂ. ಚಿನ್ನದ ಸರ, ಉಂಗುರ, ಬ್ರಾಸ್ ಲೈಟ್ ಕಿತ್ತುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಪ್ರೀತಿಸುವ ನಾಟಕವಾಡಿ 10ಕ್ಕೂ ಹೆಚ್ಚು ಮಹಿಳೆಯರೊಂದಿಗೆ ರಾಸಲೀಲೆ, ಆರೋಪಿ ಅರೆಸ್ಟ್​

ಇದಾದ ನಂತರ ಸುಂದರಿ ನಯನಾಗೆ ಕಂಟ್ರಾಕ್ಟರ್​, ಬಾ ಹೋಗಿ ಪೊಲೀಸ್​ ದೂರು ಕೊಡೋಣವೆಂದಿದ್ದಾರೆ. ಆ ಸಮಯದಲ್ಲಿ ಆಕೆ ಹೊಸ ವರಸೆ ತೆಗೆದಿದ್ದಾಳೆ. ಸ್ಟೇಷನ್ ಕಂಪ್ಲೇಂಟ್ ಅಂತ ಹೋದರೆ ಮಗುನಾ ಕರ್ಕೊಂಡು ನಿಮ್ಮ ಮನೆಗೆ ಬರುತ್ತೇನೆ ಎಂದು ಮತ್ತೆ ಬ್ಲಾಕ್ ಮೇಲ್ ಮಾಡಿದ್ದಾಳೆ. ಇದಾದ ನಂತರ ಬ್ಯಾಡರಹಳ್ಳಿ ಠಾಣೆಗೆ ಬಂದ ನೊಂದ ಕಂಟ್ರಾಕ್ಟರ್ ಧೈರ್ಯ ಮಾಡಿ ದೂರು ನೀಡಿದ್ದಾರೆ. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:11 pm, Sat, 18 January 25