AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷದ ಹಿಂದಷ್ಟೇ ಮದ್ವೆಯಾಗಿದ್ದ ಧಾರವಾಡ ವ್ಯಕ್ತಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಪತ್ನಿ ಕಿರುಕುಳಕ್ಕೆ ಮನನೊಂದು ಪತಿಯೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಇಂಥದ್ದೇ ಒಂದು ಪ್ರಕರಣ ಧಾರವಾಡದಲ್ಲಿಯೂ ನಡೆದಿರೋದು ತಡವಾಗಿ ಬೆಳಕಿಗೆ ಬಂದಿದೆ. ಕುಡಿತದ ನಶೆಯಲ್ಲಿ ಆಗಿದೆ ಎನ್ನಲಾದ ಆತ್ಯಹತ್ಯೆಯೊಂದರ ಹಿಂದೆ ಈಗ ಪತ್ನಿಯ ಕಿರುಕುಳದ ಸಂಶಯ ಬಂದಿದೆ. ಸಾಯುವ ಮುನ್ನ ಬರೆದಿಟ್ಟಿದ್ದ ಡೆತ್​ನೋಟ್​ ಪತ್ತೆಯಾಗಿದ್ದು, ಕೇಸ್​ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ವರ್ಷದ ಹಿಂದಷ್ಟೇ ಮದ್ವೆಯಾಗಿದ್ದ ಧಾರವಾಡ ವ್ಯಕ್ತಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
Dharwad Shivaraj Suicide Case
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ರಮೇಶ್ ಬಿ. ಜವಳಗೇರಾ|

Updated on: Jan 17, 2025 | 10:08 PM

Share

ಧಾರವಾಡ, (ಜನವರಿ 17): ಕುಡಿತದ ನಶೆಯಲ್ಲಿ ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಶಿವರಾಜ್ ಎತ್ತಿನಗುಡ್ಡ ಆತ್ಯಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವರ್ಷದ ಹಿಂದಷ್ಟೆ ಮದುವೆಯಾಗಿದ್ದ ಶಿವರಾಜ್, 2024ರ ನವೆಂಬರ್ 16 ರಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಡಿದ ನಶೆಯಲ್ಲಿ ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಪತ್ನಿ ಗರಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಇದೊಂದು ಸಾಮಾನ್ಯ ಅತ್ಮಹತ್ಯೆ ಎಂದು ಕೇಸ್ ಕ್ಲೋಸ್ ಮಾಡಿದ್ದರು. ಆದ್ರೆ, ಇದೀಗ ಶಿವರಾಜ್ ಎತ್ತಿನಗುಡ್ಡ ಸಾಯುವ ಮುನ್ನ ಬರೆದಿಟ್ಟಿದ್ದ ಡೆತ್​ ನೋಟ್​ ಪತ್ತೆಯಾಗಿದ್ದು, ತನ್ನ ಸಾವಿಗೆ ಪತ್ನಿಯ ಕಿರುಕುಳ ಕಾರಣ ಎಂಬುವುದನ್ನು ನಮೂದಿಸಿದ್ದ. ಇದೀಗ ಡೆತ್​ನೋಟ್​ನಲ್ಲಿದ್ದ ಬರಹ ಮೃತ ಶಿವರಾಜ್ ಎನ್ನುವುದು ದೃಢಪಟ್ಟಿದೆ.

ಎಫ್.ಎಸ್.ಎಲ್ ನಲ್ಲಿ ಸಾಬೀತಾಗುತ್ತಿದ್ದಂತೆಯೇ ಈಗ ಪೊಲೀಸರು ಮೃತನ ಸೋದರಿ ಕಡೆಯಿಂದ ಹೊಸ ಎಫ್​ಐ.ಆರ್ ದಾಖಲಿಸಿಕೊಂಡಿದ್ದಾರೆ. ಮದುವೆಯಾದ ಮೊದಲಿನಿಂದಲೂ ಯಲ್ಲವ್ವ, ನೀನು ನನಗೆ ಸರಿಯಾದ ಜೋಡಿಯಲ್ಲ ಎಂದು ಪತಿಗೆ ನಿಂದಿಸುತ್ತಿದ್ದಳಂತೆ. ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರೋ ಈಕೆ, ಧಾರವಾಡದಲ್ಲಿಯೇ ಮನೆ ಮಾಡು ಎಂದಿದ್ದಾಳೆ. ಕೊನೆಗೆ ಧಾರವಾಡದಲ್ಲಿ ಮನೆ ಮಾಡಿದ್ದಾನೆ. ಆದರೆ ಅಲ್ಲಿಂದಲೂ ಬಿಟ್ಟು ತವರು ಸೇರಿದ್ದಳು. ಕರೆಯಲು ಹೋದರೆ ಹಿಯಾಳಿಸಿ ಕಳುಹಿಸಿದ್ದಳಂತೆ. ಶಿವರಾಜ್ ಇದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ಎನ್ನುವ ಸಹೋದರಿಯರು, ಈಗ ತನ್ನ ಅಣ್ಣನ ಸಾವಿಗೆ ಕಾರಣವಾಗಿರೋ ಯಲ್ಲವ್ವಳ ವಿರುದ್ಧ ಕಠಿಣ ಕ್ರಮ ಆಗಬೇಕೆಂದು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಮಾವ ಎನ್ನುವ ಕಾಮ‌ ಕ್ರಿಮಿಯ ಸಂಗ ಮಾಡಿ ಸಾವಿನ ಮನೆ ಸೇರಿದ ಸೊಸೆ ಟೆಕ್ಕಿ

ಶಿವರಾಜ್ ಎತ್ತಿನಗುಡ್ಡ (35). ಧಾರವಾಡ ತಾಲೂಕಿನ ಬೇಲೂರು ಗ್ರಾಮದ ವ್ಯಕ್ತಿ. ವರ್ಷದ ಹಿಂದಷ್ಟೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಹೈಸ್ಕೂಲ್ ಶಿಕ್ಷಕಿ ಯಲ್ಲವ್ವ ಬೆಂಗೇರಿ ಎಂಬಾಕೆಯೊಂದಿಗೆ ಮದುವೆಯಾಗಿದ್ದ. ಈ ಜೋಡಿ ಮದುವೆಯಾದ ಮೇಲೆ ಸುಖ ಸಂಸಾರ ಮಾಡಬೇಕಿತ್ತು. ಆದರೆ, ಅದೇನಾಯ್ತೋ ಗೊತ್ತಿಲ್ಲ. ಕೇವಲ ಹದಿನೈದೇ ದಿನದಲ್ಲಿ ಪತಿ, ಪತ್ನಿ ಮಧ್ಯೆ ಬಿರುಕು ಉಂಟಾಗಿ ಪತ್ನಿ ಪತಿಯನ್ನ ಬಿಟ್ಟು ತವರು ಮನೆಗೆ ಸೇರಿದ್ದಳು. ಇತ್ತ ಮನನೊಂದ ಶಿವರಾಜ್ 2024ರ ನವೆಂಬರ್ 16 ರಂದು ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದ. ಈ ವೇಳೆ ಮೃತನ ಪತ್ನಿ ಯಲ್ಲವ್ವ, ಪತಿ ಏಕಾಂಗಿಯಾಗಿ ವಾಸವಿದ್ದ.

ಅದೇ ಚಿಂತೆಯಲ್ಲಿ ಮದ್ಯದ ಚಟಕ್ಕೆ ಅಂಟಿಕೊಂಡು ನಶೆಯಲ್ಲಿ ನೇಣು ಹಾಕಿಕೊಂಡಿದ್ದಾನೆ ಎಂದು ಗರಗ ಠಾಣೆಗೆ ದೂರು ಕೊಟ್ಟಿದ್ದಳಂತೆ. ಪೊಲೀಸರು ಇದೊಂದು ಸಾಮಾನ್ಯ ಅತ್ಮಹತ್ಯೆ ಅಂತಾ ಕೇಸ್ ಕ್ಲೋಸ್ ಮಾಡಿದ್ದರು. ಆದರೆ ಇದಾದ ನಾಲ್ಕೈದು ದಿನಕ್ಕೆ ಮೃತನ ಸಹೋದರಿಯರ ಕೈಗೆ ಶಿವರಾಜ್ ನ ಡೆತ್ ನೋಟ್ ಸಿಕ್ಕಿದ್ದು, ಅದನ್ನು ಪೊಲೀಸರಿಗೆ ನೀಡಿದಾಗ, ಎಫ್.ಎಸ್.ಎಲ್.ಗೆ ಕಳುಹಿಸಲಾಗಿತ್ತು. ಈಗ ಅದು ಶಿವರಾಜ್ ನ ಕೈಬರಹದ್ದೇ ಎನ್ನುವುದು ಸಾಬೀತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ