ರಣವೀರ್ ಅಲ್ಲ, ‘ಡಾನ್ 3’ ಆಫರ್ ಮೊದಲು ಹೋಗಿದ್ದು ಈ ಸ್ಟಾರ್ ನಟನಿಗೆ

Don 3: ಬಹುನಿರೀಕ್ಷಿತ ಬಾಲಿವುಡ್ ಸಿನಿಮಾ ‘ಡಾನ್ 3’ ಆಫರ್ ಮೊದಲು ಹೋಗಿದ್ದು ರಣವೀರ್ ಸಿಂಗ್​ಗೆ ಅಲ್ಲ ಬದಲಿಗೆ ಬಾಲಿವುಡ್​ನ ಸ್ಟಾರ್ ಯುವನಟನಿಗೆ. ಯಾರದು?

ರಣವೀರ್ ಅಲ್ಲ, ‘ಡಾನ್ 3’ ಆಫರ್ ಮೊದಲು ಹೋಗಿದ್ದು ಈ ಸ್ಟಾರ್ ನಟನಿಗೆ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Feb 11, 2024 | 6:24 PM

ನಟ ರಣವೀರ್ ಸಿಂಗ್ (Ranveer Singh) ಅವರು ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್ 3’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಈ ಮೊದಲು ಶಾರುಖ್ ಖಾನ್ ಮಾಡಿದ್ದ ‘ಡಾನ್’ (2006) ಹಾಗೂ ‘ಡಾನ್ 2’ (2011) ಸಿನಿಮಾಗಳು ಹಿಟ್ ಆಗಿದ್ದವು. ಈಗ ಈ ಸ್ಥಾನಕ್ಕೆ ರಣವೀರ್ ಬಂದಿದ್ದಾರೆ. ಈಗ ಕೇಳಿ ಬರುತ್ತಿರುವ ಹೊಸ ಮಾಹಿತಿ ಏನೆಂದರೆ ರಣವೀರ್ ಸಿಂಗ್ ಅವರು ಈ ಚಿತ್ರಕ್ಕೆ ಮೊದಲ ಆಯ್ಕೆ ಆಗಿರಲಿಲ್ಲ. ಆ ಬಗ್ಗೆ ಇಲ್ಲಿದೆ ವಿವರ.

ಫರ್ಹಾನ್ ಅಖ್ತರ್ ಅವರು ‘ಡಾನ್’ ಸರಣಿ ನಿರ್ದೇಶನ ಮಾಡಿದ್ದಾರೆ. ಅವರು ‘ಡಾನ್ 3’ ಚಿತ್ರಕ್ಕೆ ಕಥೆ ಸಿದ್ಧಪಡಿಸಿಕೊಂಡು ಶಾರುಖ್ ಖಾನ್ ಬಳಿ ಹೋಗಿದ್ದರು. ಆದರೆ, ಈ ಸಿನಿಮಾದ ಕಥೆ ಶಾರುಖ್ ಖಾನ್​ಗೆ ಇಷ್ಟ ಆಗಿಲ್ಲ. ಹೀಗಾಗಿ ಅವರು ಆಫರ್​ನ ರಿಜೆಕ್ಟ್ ಮಾಡಿದರು. ನಂತರ ಅವರು ಹೋಗಿದ್ದು ರಣಬೀರ್ ಕಪೂರ್ ಬಳಿ!

ರಣಬೀರ್ ಕಪೂರ್ ಅವರು ಆ ಸಂದರ್ಭದಲ್ಲಿ ‘ಅನಿಮಲ್’ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಇದ್ದರು. ಈ ವೇಳೆ ಅವುರ ರಣಬೀರ್​ನ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ, ಸಿನಿಮಾ ಮಾಡಲು ಅವರು ಒಪ್ಪಿಲ್ಲ. ರಣಬೀರ್ ರಿಮೇಕ್​ ಸಿನಿಮಾಗಳನ್ನು ಇಷ್ಟಪಡುವುದಿಲ್ಲ. ಅದೇ ರೀತಿ ಬೇರೆಯವರು ಮಾಡಿರೋ ಸಿನಿಮಾಗಳನ್ನು ಮುಂದುವರಿಸಿಕೊಂಡು ಹೋಗಲು ಅವರಿಗೆ ಇಷ್ಟ ಇಲ್ಲ. ಹೀಗಾಗಿ, ಅವರು ಈ ಸಿನಿಮಾದ ಭಾಗವಾಗಲು ನಿರಾಕರಿಸಿದರು.

ಇದನ್ನೂ ಓದಿ:ಬಾಲಿವುಡ್ ನಟಿ ಕೃತಿ ಸೆನನ್ ಧರಿಸಿರುವ ಈ ಉಡುಪಿನ ಬೆಲೆ ಎಷ್ಟು ಲಕ್ಷ ಗೊತ್ತೆ?

ನಂತರ ಫರ್ಹಾನ್ ಅವರು ಒಂದು ಚಾನ್ಸ್ ತೆಗೆದುಕೊಳ್ಳಲು ಹೋಗಿದ್ದು ರಣವೀರ್ ಸಿಂಗ್ ಬಳಿ. ಅವರು ಅಚ್ಚರಿ ಎಂಬಂತೆ ಈ ಚಿತ್ರವನ್ನು ಒಪ್ಪಿಕೊಂಡರು. ಹೀಗಾಗಿ ‘ಡಾನ್ 3’ಗೆ ಅವರು ಫೈನಲ್ ಆದರು. ರಣವೀರ್ ಅವರು ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಅವರಿಗೆ ಒಂದು ಗೆಲುವಿನ ರುಚಿ ಸಿಗಬೇಕಿದೆ. ಈ ಕಾರಣಕ್ಕೆ ಅವರು ಈ ಚಿತ್ರವನ್ನು ಒಪ್ಪಿಕೊಂಡರು.

ರಣವೀರ್ ಸಿಂಗ್ ಅವರು ‘ಡಾನ್’ ಆಗುತ್ತಿರುವುದಕ್ಕೆ ಅನೇಕರಿಗೆ ಅಸಮಾಧಾನ ಇದೆ. ಶಾರುಖ್ ಖಾನ್ ಮಾಡಿದ ಪಾತ್ರವನ್ನು ಅವರು ಹೇಗೆ ನಿರ್ವಹಿಸಲು ಸಾಧ್ಯ ಎಂಬುದು ಅನೇಕರ ಪ್ರಶ್ನೆ. ಈ ಬಗ್ಗೆ ಫರ್ಹಾನ್ ಅಖ್ತರ್ ಅವರ ಕಡೆಯಿಂದ ಉತ್ತರ ಸಿಕ್ಕಿತ್ತು. ‘ಅಮಿತಾಭ್ ಬಚ್ಚನ್ ಮಾಡಿದ ಡಾನ್ ಪಾತ್ರವನ್ನು ಶಾರುಖ್ ಖಾನ್ ಮಾಡಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡಿತ್ತು. ಆದರೆ, ಶಾರುಖ್​ನ ಜನರು ಒಪ್ಪಿಕೊಂಡರು. ಈಗಲೂ ಹಾಗೆಯೇ ಆಗುತ್ತದೆ’ ಎಂದಿದ್ದರು ಅವರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:06 pm, Sat, 10 February 24