ಅನುಷ್ಕಾ ಶರ್ಮಾ ತಮ್ಮನ ಜತೆ ಬ್ರೇಕಪ್: ಈಗ ತೃಪ್ತಿ ಸುತ್ತಾಡುತ್ತಿರುವುದು ಯಾರ ಜೊತೆ?

‘ಅನಿಮಲ್’ ಸಿನಿಮಾದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಅನಿಲ್ ಕಪೂರ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿರುವ ತೃಪ್ತಿ ದಿಮ್ರಿ ಕೂಡ ಸಖತ್ ಜನಪ್ರಿಯತೆ ಪಡೆದಿದ್ದಾರೆ. ಅವರು ಈಗ ಹೊಸ ಬಾಯ್​ಫ್ರೆಂಡ್​ ಜೊತೆ ಅವರು ಸುತ್ತಾಡುತ್ತಿದ್ದಾರಂತೆ.

ಅನುಷ್ಕಾ ಶರ್ಮಾ ತಮ್ಮನ ಜತೆ ಬ್ರೇಕಪ್: ಈಗ ತೃಪ್ತಿ ಸುತ್ತಾಡುತ್ತಿರುವುದು ಯಾರ ಜೊತೆ?
ಸ್ಯಾಮ್ ಮರ್ಚಂಟ್ ಜೊತೆ ತೃಪ್ತಿ ದಿಮ್ರಿ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Dec 18, 2023 | 9:26 PM

ಅನುಷ್ಕಾ ಶರ್ಮಾ ಅವರ ಸಹೋದರ ಕರ್ಣೇಶ್ ಜೊತೆ ನಟಿ ತೃಪ್ತಿ ದಿಮ್ರಿ (Tripti Dimri) ಸುತ್ತಾಟ ನಡೆಸಿದ್ದರು. ಆದರೆ, ಕೆಲವೇ ವರ್ಷಗಳಲ್ಲಿ ಇವರ ಪ್ರೀತಿ ಕೊನೆ ಆಯಿತು. ಈಗ ಕರ್ಣೇಶ್ ಅವರು ನಿರ್ಮಾಣ ಸಂಸ್ಥೆಯ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ತೃಪ್ತಿ ದಿಮ್ರಿ ಅವರು ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಅವರ ಬಾಯ್​ಫ್ರೆಂಡ್ ವಿಚಾರದ ಬಗ್ಗೆ ಚರ್ಚೆ ಜೋರಾಗಿದೆ. ಕರ್ಣೇಶ್ ಶರ್ಮಾ (Karnesh Sharma) ಜೊತೆಗಿನ ಬ್ರೇಕಪ್ ಬಳಿಕ ತೃಪ್ತಿಗೆ ಹೊಸ ಬಾಯ್​ಫ್ರೆಂಡ್ ಸಿಕ್ಕಿರುವುದಾಗಿ ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ.

ಡಿಸೆಂಬರ್ 1ರಂದು ‘ಅನಿಮಲ್’ ಸಿನಿಮಾ ರಿಲೀಸ್ ಆಯಿತು. ರಣಬೀರ್ ಕಪೂರ್ ನಟನೆಯ ಈ ಚಿತ್ರ 17 ದಿನಕ್ಕೆ ಭಾರತದ ಬಾಕ್ಸ್ ಆಫೀಸ್​ನಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಷ್ಟು ದೊಡ್ಡ ಗಳಿಕೆ ಮಾಡೋದು ಅಷ್ಟು ಸುಲಭದ ವಿಚಾರ ಅಲ್ಲ. ‘ಅನಿಮಲ್’ ಸಿನಿಮಾದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಅನಿಲ್ ಕಪೂರ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿರುವ ತೃಪ್ತಿ ಕೂಡ ಸಖತ್ ಜನಪ್ರಿಯತೆ ಪಡೆದಿದ್ದಾರೆ. ಅವರು ಈಗ ಸ್ಯಾಮ್ ಮರ್ಚಂಟ್ ಜೊತೆ ಅವರು ಸುತ್ತಾಡುತ್ತಿದ್ದಾರಂತೆ.

ಅನುಷ್ಕಾ ಶರ್ಮಾ ಸಹೋದರ ಕರ್ಣೇಶ್ ಹಾಗೂ ತೃಪ್ತಿ ನಡುವಿನ ಸಂಬಂಧ ಕೊನೆ ಆಯಿತು. ಇದಾದ ಬಳಿಕ ತೃಪ್ತಿ ಕೆಲ ಸಮಯ ಸಿಂಗಲ್ ಆಗಿದ್ದರು. ಈಗ ಅವರು ಮಾಡೆಲ್ ಹಾಗೂ ಉದ್ಯಮಿ ಸ್ಯಾಮ್ ಜೊತೆ ಪ್ರೀತಿಯಲ್ಲಿದ್ದಾರೆ. ಸ್ಯಾಮ್​​ಗೆ ಇನ್​ಸ್ಟಾಗ್ರಾಮ್​ನಲ್ಲಿ ಎರಡೂವರೆ ಲಕ್ಷ ಹಿಂಬಾಲಕರು ಇದ್ದಾರೆ. ಅವರು ಗೋವಾದಲ್ಲಿ ರೆಸಾರ್ಟ್ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಇವರು ಒಟ್ಟಾಗಿ ಕಾಣಿಸಿಕೊಂಡಿದ್ದು ಸಖತ್ ಸುದ್ದಿ ಆಗುತ್ತಿದೆ.

‘ಅನಿಮಲ್​’ ನಟಿಯ 8 ವರ್ಷದ ಹಳೇ ವಿಡಿಯೋ ವೈರಲ್​; ತೃಪ್ತಿ ದಿಮ್ರಿ ಆಗಲೇ ಬೋಲ್ಡ್​

ತೃಪ್ತಿ ಅವರು ‘ಬುಲ್ ಬುಲ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೆ ‘ಅನಿಮಲ್’ ಚಿತ್ರದಿಂದ ಬೇಡಿಕೆ ಹೆಚ್ಚಿದೆ. ‘ಅನಿಮಲ್’ ಸಿನಿಮಾ ರಿಲೀಸ್​ಗೂ ಮೊದಲು ತೃಪ್ತಿ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 7 ಲಕ್ಷ ಮಂದಿ ಫಾಲೋ ಮಾಡುತ್ತಿದ್ದರು. ಆದರೆ, ಈಗ ಈ ಸಂಖ್ಯೆ 40 ಲಕ್ಷಕ್ಕೆ ಏರಿಕೆ ಆಗಿದೆ. ಅವರಿಗೆ ಹೊಸ ಹೊಸ ಆಫರ್ ಹುಡುಕಿ ಬರುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.