500 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಅನಿಮಲ್’; ವೀಕೆಂಡ್​ನಲ್ಲಿ ಭರ್ಜರಿ ಕಮಾಯಿ

‘ಅನಿಮಲ್’ ಚಿತ್ರ ದಿನ ಕಳೆದಂತೆ ಹೆಚ್ಚಿನ ಗಳಿಕೆ ಮಾಡುತ್ತಲೇ ಬಂತು. ಈ ಸಿನಿಮಾ ಭಾನುವಾರ 12 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ ಭಾರತದಲ್ಲಿ 500 ಕೋಟಿ ರೂಪಾಯಿ ಆಗಿದೆ.

500 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಅನಿಮಲ್’; ವೀಕೆಂಡ್​ನಲ್ಲಿ ಭರ್ಜರಿ ಕಮಾಯಿ
ರಣಬೀರ್ ಕಪೂರ್
Follow us
ರಾಜೇಶ್ ದುಗ್ಗುಮನೆ
|

Updated on:Dec 18, 2023 | 8:31 AM

‘ಅನಿಮಲ್’ ಸಿನಿಮಾದಿಂದ (Animal Movie) ನಿರ್ದೇಶಕ ಸಂದೀಪ್ ರೆಡ್ಡಿ ವಂಗ, ಕಲಾವಿದರಾದ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮೊದಲಾದವರು ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರ ಭಾನುವಾರ (ಡಿಸೆಂಬರ್ 17) ಭರ್ಜರಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಭಾರತದ ಬಾಕ್ಸ್ ಆಫೀಸ್ ಕಲೆಕ್ಷನ್ 500 ಕೋಟಿ ರೂಪಾಯಿ ಆಗಿದೆ. ಗಳಿಕೆ ವಿಚಾರದಲ್ಲಿ ಈ ಚಿತ್ರ ಮತ್ತಷ್ಟು ದಾಖಲೆ ಬರೆಯುವ ಸಾಧ್ಯತೆ ಇದೆ. ಈ ವರ್ಷ 500 ಕೋಟಿ ಕ್ಲಬ್ ಸೇರಿದ ನಾಲ್ಕನೇ ಹಿಂದಿ ಸಿನಿಮಾ ಎನ್ನುವ ಖ್ಯಾತಿ ‘ಅನಿಮಲ್’ ಚಿತ್ರಕ್ಕೆ ಸಿಕ್ಕಿದೆ.

ಡಿಸೆಂಬರ್ 1ರಂದು ‘ಅನಿಮಲ್’ ಸಿನಿಮಾ ರಿಲೀಸ್ ಆಯಿತು. ಮೊದಲ ದಿನ ಸಿನಿಮಾ ಅಬ್ಬರದ ಗಳಿಕೆ ಮಾಡಿತು. ವಿಮರ್ಶಕರಿಂದ ಚಿತ್ರಕ್ಕೆ ನೆಗೆಟಿವ್ ಪ್ರಚಾರ ಸಿಕ್ಕರೂ ಸಿನಿಮಾ ಗಳಿಕೆ ಮೇಲೆ ಯಾವುದೇ ಪ್ರಭಾವ ಉಂಟಾಗಿಲ್ಲ. ಈ ಚಿತ್ರ ದಿನ ಕಳೆದಂತೆ ಹೆಚ್ಚಿನ ಗಳಿಕೆ ಮಾಡುತ್ತಲೇ ಬಂತು. ಈ ಸಿನಿಮಾ ಭಾನುವಾರ 12 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ ಭಾರತದಲ್ಲಿ 500 ಕೋಟಿ ರೂಪಾಯಿ ಆಗಿದೆ.

ವಿಶ್ವ ಬಾಕ್ಸ್ ಆಫೀಸ್​ನಲ್ಲೂ ‘ಅನಿಮಲ್’ ಸಿನಿಮಾ ಅಬ್ಬರದ ಗಳಿಕೆ ಮಾಡುತ್ತಿದೆ. ಈ ಚಿತ್ರ ವಿಶ್ವ ಮಟ್ಟದಲ್ಲಿ 800 ಕೋಟಿ ರೂಪಾಯಿ ಗಳಿಸಿದೆ. ಅಂದರೆ, ವಿದೇಶದಲ್ಲಿ ಈ ಚಿತ್ರ 17 ದಿನಕ್ಕೆ 300 ಕೋಟಿ ರೂಪಾಯಿ ಗಳಿಸಿದೆ. ಅಮೆರಿಕ ಮೊದಲಾದ ಕಡೆಗಳಲ್ಲಿ ಈ ಚಿತ್ರ ಉತ್ತಮ ಗಳಿಕೆ ಮಾಡುತ್ತಿದೆ. ಇದು ರಣಬೀರ್ ಹಾಗೂ ರಶ್ಮಿಕಾ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ‘ಅನಿಮಲ್ ಸಿನಿಮಾದ ಕೆಲ ದೃಶ್ಯಗಳು ನನಗೆ ಇಷ್ಟ ಆಗಿಲ್ಲ’; ನೇರವಾಗಿ ಹೇಳಿದ ಸನ್ನಿ ಡಿಯೋಲ್

‘ಅನಿಮಲ್’ ಸಿನಿಮಾದಿಂದ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಶಕ್ತಿ ಕಪೂರ್ ಮೊದಲಾದವರ ಖ್ಯಾತಿ ಹೆಚ್ಚಿದೆ. ನಟಿ ತೃಪ್ತಿ ದಿಮ್ರಿ ಅವರು ಈ ಚಿತ್ರದಿಂದ ದೊಡ್ಡ ಗೆಲುವು ಕಂಡಿದ್ದಾರೆ. ಬೋಲ್ಡ್ ಪಾತ್ರದ ಮೂಲಕ ಅವರು ಗೆದ್ದು ಬೀಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:25 am, Mon, 18 December 23

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್