ರಾಮ್ ಚರಣ್ ಅನ್ನು ಅವಮಾನಿಸಿದರೇ ಶಾರುಖ್ ಖಾನ್? ಇಲ್ಲಿದೆ ಸತ್ಯ
Shah Rukh Khan-Ram Charn: ಅನಂತ್ ಅಂಬಾನಿ-ರಾಧಿಕಾರ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ರಾಮ್ ಚರಣ್ ಅನ್ನು ಅವಮಾನಿಸಿದ್ದಾರೆ ಎನ್ನಲಾಗುತ್ತಿದೆ. ನಿಜಕ್ಕೂ ನಡೆದಿರುವುದೇನು?
ಅನಂತ್ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಂಭ್ರಮದಲ್ಲಿ ಹಲವು ತಾರೆಯರು ಭಾಗಿಯಾಗಿದ್ದು ಮನೊರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಾರುಖ್ ಖಾನ್ (Shah Rukh Khan), ಆಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ ಮೂವರು ಒಟ್ಟಿಗೆ ವೇದಿಕೆ ಮೇಲೆ ‘ನಾಟು-ನಾಟು’ ಹಾಡಿಗೆ ಸ್ಟೆಪ್ ಸಹ ಹಾಕಿದ್ದಾರೆ. ಆದರೆ ಈ ಡ್ಯಾನ್ಸ್ ಕಾರ್ಯಕ್ರಮದ ವೇಳೆ ಶಾರುಖ್ ಖಾನ್ ತೆಲುಗು ನಟ ರಾಮ್ ಚರಣ್ ಅವರಿಗೆ ಅಪಮಾನ ಮಾಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಉಪಾಸನಾರ ಮೇಕಪ್ ಮ್ಯಾನ್, ಶಾರುಖ್ ಖಾನ್, ರಾಮ್ ಚರಣ್ಗೆ ಅಪಮಾನ ಮಾಡಿದ್ದಾಗಿಯೂ ಇದರಿಂದ ಉಪಾಸನಾ ತೀವ್ರವಾಗಿ ಬೇಸರಗೊಂಡಿದ್ದಾಗಿಯೂ ಹೇಳಿದ್ದರು. ಆದರೆ ಅಸಲಿ ವಿಷಯ ಬೇರೆಯೇ ಇದೆ.
ಶಾರುಖ್, ಸಲ್ಮಾನ್, ಆಮಿರ್ ಖಾನ್ ಅವರುಗಳು ವೇದಿಕೆ ಮೇಲೆ ‘ನಾಟು-ನಾಟು’ ಡ್ಯಾನ್ಸ್ ಸ್ಟೆಪ್ ಹಾಕಲು ಯತ್ನಿಸಿ ವಿಫಲರಾದರು. ಆಗ ಶಾರುಖ್ ಖಾನ್, ರಾಮ್ ಚರಣ್ ಅವರನ್ನು ವೇದಿಕೆಗೆ ಕರೆದರು. ಆದರೆ ಕರೆಯುವಾಗ ಇಡ್ಲಿ-ಸಾಂಬಾರ್ ರಾಮ್ ಚರಣ್ ಎಂದು ಶಾರುಖ್ ಖಾನ್ ಕರೆದರು ಎನ್ನಲಾಗುತ್ತಿದೆ. ದಕ್ಷಿಣ ಭಾರತದವರು ಎಂಬ ಕಾರಣಕ್ಕೆ ರಾಮ್ ಚರಣ್ಗೆ ಶಾರುಖ್ ಖಾನ್ ಇಡ್ಲಿ ಸಾಂಬಾರ್ ಎಂದು ಕರೆದಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿದೆ. ಆದರೆ ಶಾರುಖ್ ಖಾನ್, ಇಡ್ಲಿ ಎಂದು ಕರೆದಿದ್ದಕ್ಕೆ ಬೇರೆಯದೇ ಕಾರಣವಿದೆ.
ಇದನ್ನೂ ಓದಿ:Viral Video: ವೇದಿಕೆಗೆ ಎಂಟ್ರಿ ಕೊಡುತ್ತಿದ್ದಂತೆ ಜೈ ಶ್ರೀರಾಮ್ ಎಂದು ಘೋಷ ಕೂಗಿದ ಶಾರುಖ್ ಖಾನ್
ಶಾರುಖ್ ಖಾನ್ ಈ ಹಿಂದೆ ತಮ್ಮ ಸಿನಿಮಾ ಒಂದರಲ್ಲಿ ಫೈಟ್ ದೃಶ್ಯದ ವೇಲೆ ಡೈಲಾಗ್ ಒಂದನ್ನು ಹೇಳಿದ್ದರು. ಅದೇ ಡೈಲಾಗ್ ಅನ್ನು ವೇದಿಕೆ ಮೇಲೆ ಹೇಳಿ ರಾಮ್ ಚರಣ್ ಅವರನ್ನು ಕರೆದಿದ್ದರು. ಸಿನಿಮಾದಲ್ಲಿ ‘ನಾರಕೊಂಡ, ನಾರಚಪ್ಪ ಎಂದು ಆರಂಭವಾಗುವ ಡೈಲಾಗ್ ಕೊನೆಯಲ್ಲಿ ರೆಂಡು ಪ್ಲೇಟ್ ಇಡ್ಲಿ ರಜನೀಕಾಂತ್’ ಎಂದು ಕೊನೆಯಾಗುತ್ತದೆ. ಈ ಸಂಭಾಷಣೆ ಒಂದು ರೀತಿ ರಜನೀಕಾಂತ್ ಅವರಿಗೆ ಎಲಿವೇಷನ್ ನೀಡುವಂತೆ ಇದೆ. ಅದೇ ಡೈಲಾಗ್ ಅನ್ನು ವೇದಿಕೆಯ ಮೇಲೆ ಹೇಳಿದ್ದ ಶಾರುಖ್ ಖಾನ್ ಕೊನೆಯಲ್ಲಿ ರಜನೀಕಾಂತ್ ಬದಲಿಗೆ ರಾಮ್ ಚರಣ್ ಎಂದಿದ್ದರು.
Context in this scene is very clear that @iamsrk elevated Rajinikanth as one of the face of South Cinema at that time
Now he used the same dialogue for @AlwaysRamCharan to elevate him as face of South cinema
The message is clear just hail #RamCharan 🔥 pic.twitter.com/OR80QVvWnE
— Ravikumar JSP (@RavikumarJSP) March 4, 2024
ಶಾರುಖ್ ಖಾನ್ಗೆ ದಕ್ಷಿಣ ಭಾರತ ಚಿತ್ರರಂಗದೊಟ್ಟಿಗೆ ಉತ್ತಮ ನಂಟಿದೆ. ‘ಚೆನ್ನೈ ಎಕ್ಸ್ಪ್ರೆಸ್’ ಸಿನಿಮಾದಲ್ಲಿ ಈಗಾಗಲೇ ಕೆಲವು ದಕ್ಷಿಣದ ನಟರ ಜೊತೆ ಕೆಲಸ ಮಾಡಿದ್ದಾರೆ. ಇತ್ತೀಚೆಗಷ್ಟೆ ‘ಜವಾನ್’ ಸಿನಿಮಾನಲ್ಲಿಯೂ ಹಲವು ದಕ್ಷಿಣ ಭಾರತದ ನಟರು, ತಂತ್ರಜ್ಞರೊಟ್ಟಿಗೆ ಕೆಲಸ ಮಾಡಿದ್ದಾರೆ. ‘ಜವಾನ್’ ಸಿನಿಮಾದ ಪ್ರೀ ರಿಲೀಸ್ಗೆ ಚೆನ್ನೈಗೆ ಬಂದಿದ್ದ ಶಾರುಖ್ ಖಾನ್, ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ತಮಗಿರುವ ಗೌರವ, ಪ್ರೀತಿಯ ಬಗ್ಗೆ ಮಾತನಾಡಿದ್ದರು. ಇದೆಲ್ಲದರ ಜೊತೆಗೆ ರಾಮ್ ಚರಣ್ ಬಗ್ಗೆಯೂ ಶಾರುಖ್ ಖಾನ್ಗೆ ಪ್ರೀತಿ-ಗೌರವಗಳಿವೆ. ಹೀಗಿರುವಾಗ ಶಾರುಖ್ ಖಾನ್, ರಾಮ್ ಚರಣ್ ಅವರನ್ನು ಅವಮಾನಿಸುವುದು ದೂರದ ಮಾತೆಂದೆನಿಸುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:33 pm, Tue, 5 March 24