ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್​ಗೆ ಬಂದ ರಜನೀಕಾಂತ್​ಗೆ ಟೀಕೆ: ಏಕೆ?

Rajinikanth: ನಟ ರಜನೀಕಾಂತ್ ಪತ್ನಿ ಲತಾ ಜೊತೆ ಅನಂತ್ ಅಂಬಾನಿಯ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆದರೆ ಇದೇ ಕಾರಣಕ್ಕೆ ತೀವ್ರ ಟೀಕೆಯನ್ನು ಎದುರಿಸುತ್ತಿದ್ದಾರೆ.

ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್​ಗೆ ಬಂದ ರಜನೀಕಾಂತ್​ಗೆ ಟೀಕೆ: ಏಕೆ?
Follow us
ಮಂಜುನಾಥ ಸಿ.
|

Updated on: Mar 05, 2024 | 3:12 PM

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್​ರ (Anant Ambani) ಪ್ರೀ ವೆಡ್ಡಿಂಗ್ ಅದ್ಧೂರಿಯಾಗಿ ನಡೆಯುತ್ತಿದೆ. ಭಾರತದ ಅತ್ಯಂತ ದುಬಾರಿ ಪ್ರೀ ವೆಡ್ಡಿಂಗ್ ಎನಿಸಿಕೊಂಡಿದೆ. ಇವರಿಬ್ಬರ ಪ್ರೀ ವೆಡ್ಡಿಂಗ್​ನಲ್ಲಿ ಭಾರತದ ಟಾಪ್ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಬಾಲಿವುಡ್​ನ ಬಹುತೇಕ ದೊಡ್ಡ ಸ್ಟಾರ್​ಗಳ ಜೊತೆಗೆ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್​ಗಳು ಸಹ ಭಾಗಿಯಾಗಿದ್ದರು. ಅವರಲ್ಲಿ ನಟ ರಜನೀಕಾಂತ್ ಸಹ ಒಬ್ಬರು. ಆದರೆ ಪ್ರೀ ವೆಡ್ಡಿಂಗ್​ಗೆ ಬಂದ ರಜನೀಕಾಂತ್ ನೆಟ್ಟಿಗರಿಂದ ತೀವ್ರ ಟೀಕೆ ಎದುರಿಸುತ್ತಿದ್ದಾರೆ ಅದಕ್ಕೆ ಕಾರಣವೂ ಇದೆ.

ರಜನೀಕಾಂತ್ ನಿನ್ನೆಯಷ್ಟೆ ಪ್ರೀ ವೆಡ್ಡಿಂಗ್​ಗೆ ಚೆನ್ನೈನಿಂದ ಜಾಮ್​ನಗರ್​ಗೆ ಬಂದಿಳಿದರು. ರಜನೀಕಾಂತ್ ಜೊತೆ ಅವರ ಪತ್ನಿಯೂ ಸಹ ಪ್ರೀ ವೆಡ್ಡಿಂಗ್​ನಲ್ಲಿ ಭಾಗಿಯಾಗಿದ್ದರು. ಏರ್​ಪೋರ್ಟ್​ನಲ್ಲಿ ರಜನೀಕಾಂತ್ ಹಾಗೂ ಅವರ ಪತ್ನಿ ಲತಾ ರಜನೀಕಾಂತ್ ಬಂದಿಳಿದಾಗ ಅವರೊಟ್ಟಿಗೆ ಅವರ ಸಹಾಯಕಿಯನ್ನೂ ಜೊತೆಗೆ ಕರೆತಂದಿದ್ದರು. ಏರ್​ಪೋರ್ಟ್​ನಲ್ಲಿ ಪಾಪರಾಟ್ಜಿಗಳು ರಜನೀಕಾಂತ್​ ಹಾಗೂ ಲತಾರ ಚಿತ್ರ ತೆಗೆಯಲು ಮುಂದಾದಾಗ ಅವರ ಸಹಾಯಕಿಯೂ ಅಲ್ಲಿಯೇ ಇದ್ದರು. ಇದನ್ನು ಗಮನಿಸಿದ ರಜನೀಕಾಂತ್, ಕೂಡಲೇ ಸಹಾಯಕಿಯನ್ನು ಪಕ್ಕಕ್ಕೆ ಸರಿಯುವಂತೆ ಹೇಳಿ ತಮ್ಮ ಪತ್ನಿಯೊಟ್ಟಿಗೆ ಪಾಪರಾಟ್ಜಿಗಳಿಗೆ ಫೋಸು ನೀಡಿದರು.

ಇದನ್ನೂ ಓದಿ:ಬಡವರಿಗಾಗಿ ಆಸ್ಪತ್ರೆ ಕಟ್ಟಿಸಲು ಮುಂದಾದ ರಜನೀಕಾಂತ್: ಎಲ್ಲಿ?

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ರಜನೀಕಾಂತ್ ತಮ್ಮ ಸರಳತೆಗೆ ಖ್ಯಾತರು, ಆದರೆ ಅವರೇ ತಮ್ಮ ಸಹಾಯಕಿಯನ್ನು ದೂರ ಹೋಗುವಂತೆ ಹೇಳಿ ಸ್ಟೇಟಸ್ ಮೇಂಟೇನ್ ಮಾಡುವ ಯತ್ನ ಮಾಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ತಮಿಳು ಸ್ಟಾರ್ ನಟ ವಿಜಯ್​ ರ ಅಭಿಮಾನಿಗಳು ಸಹ ಇದೇ ವಿಡಿಯೋ ಇಟ್ಟುಕೊಂಡು ರಜನೀಕಾಂತ್​ ವಿರುದ್ಧ ಮುಗಿಬಿದ್ದಿದ್ದಾರೆ. ರಜನೀಕಾಂತ್​ರದ್ದು ತೋರಿಕೆಯ ಸರಳತೆ ಎಂದೆಲ್ಲ ಟೀಕೆಗಳು ವ್ಯಕ್ತವಾಗುತ್ತಿವೆ.

ರಜನೀಕಾಂತ್, ಅಂಬಾನಿ ಕುಟುಂಬಕ್ಕೆ ಬಹಳ ಆಪ್ತರು. ಈ ಮೊದಲು ಅಂಬಾನಿ ಕುಟುಂಬದಲ್ಲಿ ನಡೆದ ಕಾರ್ಯಕ್ರಮಗಳಲ್ಲಿಯೂ ರಜನೀಕಾಂತ್ ಭಾಗಿಯಾಗಿದ್ದಾರೆ. ಈಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ರ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೂ ಹಾಜರಿ ಹಾಕಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಿಂದ ಕೆಲವರಷ್ಟೆ ಪ್ರೀ ವೆಡ್ಡಿಂಗ್​ನಲ್ಲಿ ಭಾಗಿಯಾಗಿದ್ದಾರೆ. ರಾಮ್ ಚರಣ್ ಹಾಗೂ ಉಪಾಸನಾ ಹಾಗೂ ರಜನೀಕಾಂತ್ ದಂಪತಿಗಳು ಮಾತ್ರವೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ