ಅಂಬಾನಿ ಮದುವೆಯಲ್ಲಿ ಮಿಂಚು ಹರಿಸಿದ ಏಕಾನ್: ಪಡೆದ ಸಂಭಾವನೆಯೆಷ್ಟು?
Ambani: ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ಪಾಪ್ ಗಾಯಕ ಏಕಾನ್ ಅನ್ನು ಕರೆಸಲಾಗಿದೆ. ಅಂದಹಾಗೆ ಏಕಾನ್ಗೆ ನೀಡಿರುವ ಸಂಭಾವನೆ ಎಷ್ಟು ಕೋಟಿ?
ಮುಖೇಶ್ ಅಂಬಾನಿ-ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಪ್ರೀ ವೆಡ್ಡಿಂಗ್ ಸಡಗರ ಜಾಮ್ನಗರ್ನಲ್ಲಿ ಜೋರಾಗಿ ನಡೆಯುತ್ತಿದೆ. ಹಾಲಿವುಡ್, ಬಾಲಿವುಡ್ ನ ಹಲವು ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್, ಮೈಕ್ರೋಸಾಫ್ಟ್ ಮಾಲೀಕ ಬಿಲ್ ಗೇಟ್ಸ್ ಸೇರಿದಂತೆ ವಿಶ್ವದ ಹಲವು ಟಾಪ್ ಉದ್ಯಮಿಗಳು ಸಹ ವಿವಾಹ ಪೂರ್ವ ಸಂಭ್ರಮಕ್ಕೆ ಹಾಜರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಹಾಲಿವುಡ್ ಪಾಪ್ ಗಾಯಕಿ ರಿಯಾನಾ ಅದ್ಭುತವಾಗಿ ಪ್ರದರ್ಶನ ನೀಡಿ ಹೋಗಿದ್ದಾರೆ. ಇದೀಗ ಮತ್ತೊಬ್ಬ ಜನಪ್ರಿಯ ಪಾಪ್ ಗಾಯಕ ಏಕಾನ್ ಅನಂತ್ ಅಂಬಾನಿ ಮದುವೆಯಲ್ಲಿ ಹಾಡಿ-ಕುಣಿದು ಕುಪ್ಪಳಿಸಿದ್ದಾರೆ.
ಏಕಾನ್, ಹಾಲಿವುಡ್ನ ಅತ್ಯಂತ ಜನಪ್ರಿಯ ಪಾಪ್ ಗಾಯಕ. ‘ಲೋನ್ಲಿ’, ‘ಬ್ಯೂಟಿಫುಲ್’, ‘ಸ್ಮ್ಯಾಕ್ ದಾಟ್’, ‘ಬೊನಾನ್ಜಾ’ ಇನ್ನೂ ಹಲವು ಸೂಪರ್-ಡೂಪರ್ ಹಿಟ್ ಹಾಡುಗಳನ್ನು ಏಕಾನ್ ಹಾಡಿದ್ದಾರೆ. ನಿನ್ನೆಯಷ್ಟೆ ಏಕಾನ್ ಅನಂತ್ ಹಾಗೂ ರಾಧಿಕಾರ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ್ದು, ಬಾಲಿವುಡ್ನ ತಾರೆಯರನ್ನು ಕುಣಿಸಿದ್ದಾರೆ, ತಾವೂ ಸಹ ಸಖತ್ ಕುಣಿದು ಎಂಜಾಯ್ ಮಾಡಿದ್ದಾರೆ.
ಇದನ್ನೂ ಓದಿ:ಅಂಬಾನಿಯ ಭಾವಿ ಸೊಸೆಗೆ ಸೀರೆ ಉಡಿಸಿ ಬರೋಬ್ಬರಿ 2ಲಕ್ಷ ರೂ ಸಂಭಾವಣೆ ಪಡೆದ ಬೆಂಗಳೂರಿನ ಮಹಿಳೆ
ಏಕಾನ್ಗೆ ಭಾರತ ಹೊಸದೇನೂ ಅಲ್ಲ. ಈ ಹಿಂದೆ ಶಾರುಖ್ ಖಾನ್ ನಟಿಸಿ, ನಿರ್ಮಾಣವೂ ಮಾಡಿದ್ದ ‘ರಾ-ಒನ್’ ಸಿನಿಮಾದಲ್ಲಿ ‘ಚಮಕ್ ಚಲ್ಲೊ’ ಹಾಡನ್ನು ಏಕಾನ್ ಹಾಡಿದ್ದರು. ಆಗಲೂ ಬಾಲಿವುಡ್ನ ಹಲವು ಸ್ಟಾರ್ಗಳೊಟ್ಟಿಗೆ ಪಾರ್ಟಿ ಸಹ ಮಾಡಿದ್ದರು ಏಕಾನ್. ಇದೀಗ ಮತ್ತೊಮ್ಮೆ ಭಾರತಕ್ಕೆ ಬಂದು ಬಾಲಿವುಡ್ ತಾರೆಯರೊಟ್ಟಿಗೆ ಬೆರೆತಿದ್ದಾರೆ. ಪ್ರೀ ವೆಡ್ಡಿಂಗ್ನಲ್ಲಿ ಪ್ರದರ್ಶನ ನೀಡುವ ವೇಳೆ ಶಾರುಖ್ ಖಾನ್ರನ್ನು ವೇದಿಕೆಗೆ ಎಳೆತಂದು ಡ್ಯಾನ್ಸ್ ಮಾಡಿಸಿದ್ದಾರೆ. ಸಲ್ಮಾನ್ ಖಾನ್ ಜೊತೆ ಜುಗಲ್ಬಂಧಿ ಸಹ ಮಾಡಿದ್ದಾರೆ.
ಅನಂತ್-ರಾಧಿಕಾ ಪ್ರೀ ವೆಡ್ಡಿಂಗ್ನಲ್ಲಿ ಪ್ರದರ್ಶನ ನೀಡಲು ಏಕಾನ್ಗೆ ಸುಮಾರು 30 ಕೋಟಿ ರೂಪಾಯಿಗಳನ್ನು ಸಂಭಾವನೆ ರೂಪದಲ್ಲಿ ನೀಡಲಾಗಿದೆ ಎನ್ನಲಾಗುತ್ತಿದೆ. ಏಕಾನ್, ವಿಶ್ವದ ದುಬಾರಿ ಪಾಪ್ ಗಾಯಕರಲ್ಲಿ ಒಬ್ಬರು, ಹಾಗಾಗಿ ಭಾರಿ ಮೊತ್ತದ ಸಂಭಾವನೆ ನೀಡಿ ಅವರನ್ನು ಕರೆಸಿ ಖಾಸಗಿ ಕಾರ್ಯಕ್ರಮ ಕೊಡಿಸಲಾಗಿದೆ. ಕೆಲವು ದಿನಗಳ ಹಿಂದೆ ಪ್ರದರ್ಶನ ನೀಡಿದ ರಿಯಾನಾಗೆ ಸುಮಾರು 74 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿತ್ತಂತೆ. ಪ್ರೀ ವೆಡ್ಡಿಂಗ್ಗೆ ರಿಯಾನಾ, ಏಕನ್ ಅವರುಗಳನ್ನು ಕರೆಸಿರುವ ಅಂಬಾನಿ, ಮದುವೆಗೆ ಟೇಲರ್ ಸ್ವಿಫ್ಟ್ ಅನ್ನೇ ಕರೆಸುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ