ಅನಂತ್ ಅಂಬಾನಿ ಧರಿಸಿದ್ದ 10 ಕೋಟಿ ರೂಪಾಯಿ ವಾಚ್ ನೋಡಿ ದಿಗ್ಭ್ರಮೆಗೊಂಡ ಜುಕರ್​ಬರ್ಗ್ ಪತ್ನಿ

ಅನಂತ್ ಕೈಯಲ್ಲಿದ್ದ ವಾಚ್ ನೋಡಿ ಜುಕರ್​​ಬರ್ಗ್ ಮನಸ್ಸು ಬದಲಾಗಿದೆ. ‘ನಾನು ಎಂದಿಗೂ ವಾಚ್​​ಗಳನ್ನು ಖರೀದಿಸಲು ಬಯಸಲಿಲ್ಲ. ಆದರೆ ಅನಂತ್‌ ಅವರ ಕೈಯಲ್ಲಿದ್ದ ವಾಚ್ ನೋಡಿ ನನ್ನ ಮನಸ್ಸು ಬದಲಾಯಿತು. ವಾಚ್ ಚೆನ್ನಾಗಿ ಕಾಣುತ್ತದೆ’ ಎಂದಿದ್ದಾರೆ ಮಾರ್ಕ್​ ಜುಕರ್​ಬರ್ಗ್. ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಪ್ರತಿಕ್ರಿಯೆಗಳು ಬರುತ್ತಿವೆ.

ಅನಂತ್ ಅಂಬಾನಿ ಧರಿಸಿದ್ದ 10 ಕೋಟಿ ರೂಪಾಯಿ ವಾಚ್ ನೋಡಿ ದಿಗ್ಭ್ರಮೆಗೊಂಡ ಜುಕರ್​ಬರ್ಗ್ ಪತ್ನಿ
ಅನಂತ್ ಅಂಬಾನಿ ಧರಿಸಿದ್ದ 10 ಕೋಟಿ ರೂಪಾಯಿ ವಾಚ್ ನೋಡಿ ದಿಗ್ಭ್ರಮೆಗೊಂಡ ಜುಕರ್​ಬರ್ಗ್ ಪತ್ನಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 04, 2024 | 11:54 AM

ಸಾಮಾಜಿಕ ಜಾಲತಾಣದಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ವಿವಾಹಪೂರ್ವ ಕಾರ್ಯಕ್ರಮದ ಬಗ್ಗೆ ಚರ್ಚೆ ಆಗುತ್ತಿದೆ. ಈ ಕಾರ್ಯಕ್ರಮ ಮಾರ್ಚ್ 1ರಿಂದ ಮಾರ್ಚ್ 3ರವರೆಗೆ ನಡೆದಿದೆ. ಕಾರ್ಯಕ್ರಮವು ಜಾಮ್‌ನಗರದಲ್ಲಿ ಅತ್ಯಂತ ಅದ್ದೂರಿಯಾಗಿ ನಡೆಯಿತು. ಈ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ದೇಶ-ವಿದೇಶದ ಖ್ಯಾತನಾಮರು ಪಾಲ್ಗೊಂಡಿದ್ದರು. ಅನಿಲ್ ಕಪೂರ್, ಸಲ್ಮಾನ್ ಖಾನ್, ಶಾರುಖ್ ಖಾನ್, ರಣಬೀರ್ ಕಪೂರ್ (Ranbir Kapoor), ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಸೈಫ್ ಅಲಿ ಖಾನ್, ಕರೀನಾ ಕಪೂರ್ ಸೇರಿದಂತೆ ಬಾಲಿವುಡ್ ಇಂಡಸ್ಟ್ರಿಯ ಎಲ್ಲಾ ತಾರೆಯರು ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ತಕ್ಷಣ ಬಾಲಿವುಡ ಸೆಲೆಬ್ರಿಟಿಗಳೆಲ್ಲ ಮುಂಬೈಗೆ ಹೊರಟಿದ್ದಾರೆ. ಅಮೆರಿಕದ ಸಿಂಗರ್ ಏಕಾನ್ ಭಾಗವಹಿಸಿದ್ದರು. ಅದೇ ರೀತಿ ಫೇಸ್‌ಬುಕ್ ಸಹ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ತಮ್ಮ ಪತ್ನಿ ಪ್ರಿಸ್ಸಿಲ್ಲಾ ಚಾನ್ ಜೊತೆ ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿ ಆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಜುಕರ್‌ಬರ್ಗ್ ಪತ್ನಿ ಪ್ರಿಸ್ಸಿಲ್ಲಾ ಚಾನ್ ಅವರು ಅನಂತ್ ಅಂಬಾನಿ ಅವರ ಕೈಯಲ್ಲಿರುವ ದುಬಾರಿ ವಾಚ್‌ನಿಂದ ದಿಗ್ಭ್ರಮೆಗೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅನಂತ್ ಅವರು ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಅವರೊಂದಿಗೆ ನಿಂತು ಮಾತನಾಡುತ್ತಿದ್ದರು. ಕಾಡಿನಲ್ಲಿ ಒಂದು ಸುತ್ತು ಹಾಕಿ ಬರುವ ಬಗ್ಗೆ ಅನಂತ್ ಕೇಳಿದ್ದಾರೆ. ಅಲ್ಲಿಗೆ ಪ್ರಯಾಣಿಸಲು ವ್ಯವಸ್ಥೆ ಮಾಡುವ ಬಗ್ಗೆ ಅನಂತ್ ಮಾತನಾಡಿದ್ದಾರೆ. ಆಗ ಇದ್ದಕ್ಕಿದ್ದಂತೆ ಪ್ರಿಸ್ಸಿಲ್ಲಾರ ಕಣ್ಣು ಅನಂತ್ ಅವರ ದುಬಾರಿ ವಾಚ್​​ನತ್ತ ಹೋಗಿದೆ. ಅವರಿಗೆ ಆ ವಾಚ್ ತುಂಬಾ ಇಷ್ಟ ಆಗುತ್ತದೆ. ಅನಂತ್ ಅವರ ಕೈಯಲ್ಲಿರುವ ವಾಚ್​ನ ಮೆಚ್ಚುತ್ತಾ, ‘ಇದು ತುಂಬಾ ಅದ್ಭುತವಾದ ವಾಚ್. ಈ ವಾಚ್​​ನ ಯಾವ ಕಂಪನಿ ತಯಾರಿಸಿದೆ?’ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅನಂತ್, ರಿಶಾರ್​ ಮಿಲ್ ಕಂಪನಿಯ ವಾಚ್ ಎಂದಿದ್ದಾರೆ.

ಅನಂತ್ ಕೈಯಲ್ಲಿದ್ದ ವಾಚ್ ನೋಡಿ ಜುಕರ್​​ಬರ್ಗ್ ಮನಸ್ಸು ಬದಲಾಗಿದೆ. ‘ನಾನು ಎಂದಿಗೂ ವಾಚ್​​ಗಳನ್ನು ಖರೀದಿಸಲು ಬಯಸಲಿಲ್ಲ. ಆದರೆ ಅನಂತ್‌ ಅವರ ಕೈಯಲ್ಲಿದ್ದ ವಾಚ್ ನೋಡಿ ನನ್ನ ಮನಸ್ಸು ಬದಲಾಯಿತು. ವಾಚ್ ಚೆನ್ನಾಗಿ ಕಾಣುತ್ತದೆ’ ಎಂದಿದ್ದಾರೆ ಮಾರ್ಕ್​ ಜುಕರ್​ಬರ್ಗ್. ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಪ್ರತಿಕ್ರಿಯೆಗಳು ಬರುತ್ತಿವೆ. ‘ಮಾರ್ಕ್ ಜುಕರ್‌ಬರ್ಗ್ ಕೂಡ ಅಂಬಾನಿ ಮುಂದೆ ಬಡವರಾಗಿದ್ದಾರೆ’ ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು ‘ಮೊದಲ ಬಾರಿಗೆ ಇಂತಹ ಶ್ರೀಮಂತರ ಹರಟೆ ಕೇಳುತ್ತಿದ್ದೇನೆ’ ಎಂದು ಕೆಲವರು ಹೇಳಿದ್ದಾರೆ. ‘ಪವರ್ ಆಫ್ ಮೋಟಾ ಭಾಯ್’ ಎಂದೂ ಬಳಕೆದಾರರು ಬರೆದಿದ್ದಾರೆ.

ಇದನ್ನೂ ಓದಿ: ಅನಂತ್ ಅಂಬಾನಿ ಮದುವೆ: ಸ್ವರ್ಗವನ್ನು ಧರೆಗಿಳಿಸಿದ ಮುಖೇಶ್ ಅಂಬಾನಿ, ಇಲ್ಲಿವೆ ಚಿತ್ರಗಳು

ಅನಂತ್ ಅಂಬಾನಿ ಅವರ ಕೈಯಲ್ಲಿ ಇದ್ದಿದ್ದ ವಾಚ್​ನ ಬೆಲೆ ಬರೋಬ್ಬರಿ 10 ಕೋಟಿ ರೂಪಾಯಿ ಎನ್ನಲಾಗಿದೆ. ರಿಶಾರ್​ ಮಿಲ್ ಅತ್ಯಂತ ದುಬಾರಿ ವಾಚ್​​ಗಳನ್ನು ತಯಾರಿಸುತ್ತದೆ. ಇದು ಸ್ವಿಜರ್​ಲೆಂಡ್​ನ ಕಂಪನಿ ಆಗಿದೆ. ಇಂಗ್ಲಿಷ್​ನಲ್ಲಿ ಇದರ ಸ್ಪೆಲ್ಲಿಂಗ್ Richard Mille ಎಂದಿದ್ದರೂ ಇದನ್ನು ಉಚ್ಚಾರ ಮಾಡುವುದು ರಿಶಾರ್​ ಮಿಲ್ ಎಂದಾಗಿದೆ. ಮಾರ್ಕ್​ ಜುಕರ್​ ಬರ್ಗ್ ಕೂಡ ಶ್ರೀಮಂತರೇ. ಆದರೆ, ಅವರಿಗೆ ದುಬಾರಿ ವಸ್ತುಗಳ ಮೇಲೆ ಮೋಹ ಇಲ್ಲ. ಅವರು ಸದಾ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ