ಮೂವರು ಖಾನ್ಗಳನ್ನು ಭರಿಸುವ ತಾಕತ್ತು ಯಾರಿಗೂ ಇಲ್ಲ ಎಂದಿದ್ದ ಶಾರುಖ್; ಸುಳ್ಳು ಮಾಡಿದ ಅಂಬಾನಿ
ಶಾರುಖ್ ಖಾನ್, ಆಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎನ್ನುವ ಆಸೆ ಅನೇಕರಿಗೆ ಇದೆ. ಈ ಬಗ್ಗೆ 2013ರಲ್ಲೇ ಶಾರುಖ್ಗೆ ಪ್ರಶ್ನೆ ಮಾಡಲಾಗಿತ್ತು. ಆದರೆ, ಇದು ಸಾಧ್ಯವಿಲ್ಲ ಎಂದು ಹೇಳಿದ್ದರು ಶಾರುಖ್ ಖಾನ್. ಅಂಥ ನಿರ್ಮಾಪಕರೇ ಇಲ್ಲ ಎಂದಿದ್ದರು. ಇದು ಸುಳ್ಳಾಗಿದೆ.
ಶಾರುಖ್ ಖಾನ್, ಸಲ್ಮಾನ್ ಖಾನ್ (Salman Khan) ಹಾಗೂ ಆಮಿರ್ ಖಾನ್ ಬಾಲಿವುಡ್ನ ಮೂರು ದೊಡ್ಡ ಸ್ಟಾರ್ಗಳು. ಇವರು ಪ್ರತಿ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಪಡೆಯುತ್ತಾರೆ. ಇವರ ಸಿನಿಮಾಗಳು ಕೂಡ ದೊಡ್ಡ ಮಟ್ಟದಲ್ಲಿ ಬಿಸ್ನೆಸ್ ಮಾಡುತ್ತವೆ. ಇವರನ್ನು ಒಂದೇ ಸಿನಿಮಾದಲ್ಲಿ ನೋಡೋದು ಹಾಗಿರಲಿ ಒಂದೇ ಕಾರ್ಯಕ್ರಮಕ್ಕೆ ಇವರನ್ನು ಕರೆತರೋದು ಕೂಡ ಕಷ್ಟದ ಕೆಲಸ. ಇವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ ಆಗಲು ಕೋಟಿ ಕೋಟಿ ಪಡೆಯುತ್ತಾರೆ. ಆದರೆ, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಮದುವೆ ಕಾರ್ಯಕ್ರಮದಲ್ಲಿ ಇವರು ಒಟ್ಟಾಗಿ ಹೆಜ್ಜೆ ಹಾಕಿದ್ದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಈ ವೇಳೆ ಶಾರುಖ್ ಖಾನ್ ಹೇಳಿದ ಮಾತನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ.
ಅನಂತ್ ಅಂಬಾನಿ ಹಾಗೂ ರಾಧಿಕಾ ಜುಲೈನಲ್ಲಿ ಮದುವೆ ಆಗುತ್ತಿದ್ದಾರೆ. ಅದಕ್ಕೂ ಮೊದಲು ವಿವಾಹ ಪೂರ್ವ ಸಮಾರಂಭ ಹಮ್ಮಿಕೊಂಡಿದ್ದರು ಮುಕೇಶ್ ಅಂಬಾನಿ. ಈ ಕಾರ್ಯಕ್ರಮ ನಡೆಯೋ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ಹಾಗೂ ವಿದೇಶದ ಗಣ್ಯರು ಹಾಜರಿ ಹಾಕಿದ್ದಾರೆ. ಆಮಿರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಕೂಡ ಆಗಮಿಸಿದ್ದರು. ಇವರು ಒಟ್ಟಿಗೆ ವೇದಿಕೆ ಏರಿದ್ದಾರೆ. ಅವರು ‘ನಾಟು ನಾಟು..’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಶಾರುಖ್ ಖಾನ್ ಹೇಳಿದ ಮಾತನ್ನು ಈಗ ನೆನಪಿಸಿಕೊಳ್ಳಲಾಗುತ್ತಿದೆ.
ಶಾರುಖ್ ಹೇಳಿದ್ದು ಏನು?
ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಆಮಿರ್ ಖಾನ್ ಅವರನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎನ್ನುವ ಆಸೆ ಅನೇಕರಿಗೆ ಇದೆ. ಈ ಬಗ್ಗೆ 2013ರಲ್ಲೇ ಪ್ರಶ್ನೆ ಮಾಡಲಾಗಿತ್ತು. ಆದರೆ, ಇದು ಸಾಧ್ಯವಿಲ್ಲ ಎಂದು ಹೇಳಿದ್ದರು ಶಾರುಖ್ ಖಾನ್. ಅಂಥ ನಿರ್ಮಾಪಕರೇ ಇಲ್ಲ ಎಂದಿದ್ದರು. ಆಮಿರ್ ಖಾನ್ ಪ್ರಶಸ್ತಿ ಸಮಾರಂಭಕ್ಕೆ ಬರಲ್ಲ. ಹೀಗಾಗಿ ಈ ಮೂವರನ್ನು ಒಟ್ಟಿಗೆ ನೋಡೋಕೆ ಸಾಧ್ಯವೇ ಆಗುತ್ತಿರಲಿಲ್ಲ. ಆದರೆ, ಅಂಬಾನಿ ಇದನ್ನು ಸುಳ್ಳು ಮಾಡಿದ್ದಾರೆ.
ವೈರಲ್ ವಿಡಿಯೋ:
the 3 Khans dancing on Naatu Naatu. Shah Rukh Khan, Salman and Aamir together after a long time at Ambani pre wedding event ✨️ pic.twitter.com/lJH9LHHBpm
— sohom (@AwaaraHoon) March 2, 2024
ಡ್ಯಾನ್ಸ್ ಮಾಡೋಕೆ ಆಗಿಲ್ಲ..
‘ನಾಟು ನಾಟು’ ಹಾಡನ್ನು ಕಾಪಿ ಮಾಡೋದು ಅಷ್ಟು ಸುಲಭವಲ್ಲ. ಆದಾಗ್ಯೂ ಕಾಪಿ ಮಾಡಲು ಶಾರುಖ್, ಸಲ್ಮಾನ್ ಹಾಗೂ ಆಮಿರ್ ಪ್ರಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಹಾಡಿಗೆ ಡ್ಯಾನ್ಸ್ ಮಾಡಲು ಸಾಧ್ಯವಾಗದೇ ಸೋತಾಗ ಆ ಮುಜುಗರದ ಸನ್ನಿವೇಶದಿಂದ ಪಾರಾಗಲು ಸಲ್ಮಾನ್ ಖಾನ್ ‘ನಾಟು ನಾಟು..’ ಹಾಡಿಗೆ ತಮ್ಮ ಸಿನಿಮಾದ ಬೇರೆ ಸ್ಟೆಪ್ಗಳನ್ನು ಹಾಕಿದರು. ಅದೇ ರೀತಿ ಆಮಿರ್ ಖಾನ್ ಹಾಗೂ ಶಾರುಖ್ ಖಾನ್ ಕೂಡ ತಮ್ಮ ಸಿನಿಮಾಗಳ ಫೇಮಸ್ ಡ್ಯಾನ್ಸ್ ಸ್ಟೆಪ್ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ: ಇವಾಂಕಾ ಟ್ರಂಪ್ಗೆ ಅಮಿತಾಭ್ ಬಚ್ಚನ್ನ ಪರಿಚಯಿಸಿದ ಮುಕೇಶ್ ಅಂಬಾನಿ
ಅಂಬಾನಿ ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ರಿಲಾಯನ್ಸ್ ಸಂಸ್ಥೆ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಾರೆ. ಅವರು ಈ ಮೂವರನ್ನು ಒಟ್ಟಿಗೆ ತೆರೆಮೇಲ ತರಲಿ ಎಂದು ಕೋರಿಕೊಳ್ಳುತ್ತಾ ಇದ್ದಾರೆ. ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ‘ಟೈಗರ್ Vs ಪಠಾಣ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ