AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಟು ನಾಟು ಸ್ಟೆಪ್​ ಹಾಕಲಾಗದೇ ಸೋತ ಆಮಿರ್​, ಸಲ್ಲು, ಶಾರುಖ್​; ಮುಜುಗರ ತಪ್ಪಿಸಲು ಮಾಡಿದ್ದೇನು?

ಅಕ್ಷಯ್​ ಕುಮಾರ್ ಹಾಗೂ ಟೈಗರ್​ ಶ್ರಾಫ್​ ಅವರು ‘ನಾಟು ನಾಟು..’ ಸ್ಟೆಪ್​ ಕಾಪಿ ಮಾಡಿದ ಕಾರಣಕ್ಕಾಗಿ ಇತ್ತೀಚೆಗೆ ಟ್ರೋಲ್​ ಆಗಿದ್ದರು. ಈಗ ಆಮಿರ್​ ಖಾನ್​, ಸಲ್ಮಾನ್​ ಖಾನ್​ ಹಾಗೂ ಶಾರುಖ್​ ಖಾನ್​ ಅವರು ಇದೇ ಹಾಡಿನ ಡ್ಯಾನ್ಸ್​ ಮಾಡಲಾಗದೇ ಸೋತಿದ್ದಾರೆ. ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರ ಪ್ರೀ-ವೆಡ್ಡಿಂಗ್​ ಸಮಾರಂಭ ಒಂದು ವಿಡಿಯೋ ಸಖತ್​ ವೈರಲ್​ ಆಗಿದೆ.

ನಾಟು ನಾಟು ಸ್ಟೆಪ್​ ಹಾಕಲಾಗದೇ ಸೋತ ಆಮಿರ್​, ಸಲ್ಲು, ಶಾರುಖ್​; ಮುಜುಗರ ತಪ್ಪಿಸಲು ಮಾಡಿದ್ದೇನು?
ಆಮಿರ್​ ಖಾನ್​, ಸಲ್ಮಾನ್​ ಖಾನ್​, ಶಾರುಖ್​ ಖಾನ್​,
ಮದನ್​ ಕುಮಾರ್​
|

Updated on: Mar 03, 2024 | 2:50 PM

Share

ಉದ್ಯಮಿ ಮುಖೇಶ್​ ಅಂಬಾನಿ ಅವರ ಪುತ್ರ ಅನಂತ್​ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚೆಂಟ್​ ಅವರ ಪ್ರೀ-ವೆಡ್ಡಿಂಗ್​ ಸಮಾರಂಭ ಬಹಳ ಜೋರಾಗಿ ನಡೆದಿದೆ. ದೇಶ ವಿದೇಶದ ಅನೇಕ ಸೆಲೆಬ್ರಿಟಿಗಳು ಈ ಇವೆಂಟ್​ನಲ್ಲಿ ಭಾಗಿಯಾಗಿ ಮನರಂಜನಾ ಕಾರ್ಯಕ್ರಮ ನೀಡಿದ್ದಾರೆ. ವಿಶ್ವದ ಗಣ್ಯಾತಿಗಣ್ಯರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ವಿಶ್ವ ವಿಖ್ಯಾತ ಸಿಂಗರ್​ ರಿಯಾನಾ ಅವರು ಭರ್ಜರಿ ಮನರಂಜನೆ ನೀಡಿದ್ದಾರೆ. ಅದೇ ರೀತಿ, ಶಾರುಖ್​ ಖಾನ್ (Shah Rukh Khan)​, ಸಲ್ಮಾನ್​ ಖಾನ್​ ಹಾಗೂ ಆಮಿರ್​ ಖಾನ್ ಅವರು ಒಟ್ಟಿಗೆ ವೇದಿಕೆ ಏರಿ ಡ್ಯಾನ್ಸ್​ ಮಾಡಿದ್ದಾರೆ. ಆದರೆ ಅವರು ‘ನಾಟು ನಾಟು..’ (Naatu Naatu) ಹಾಡಿಗೆ ಡ್ಯಾನ್ಸ್ ಮಾಡಲಾಗದೇ ಸೋತಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ಸೃಷ್ಟಿಸಿದ ಕ್ರೇಜ್​ ಅಷ್ಟಿಷ್ಟಲ್ಲ. ರಾಮ್​ ಚರಣ್​ ಹಾಗೂ ಜೂನಿಯರ್​ ಎನ್​ಟಿಆರ್​ ಅವರು ಆ ಹಾಡಿನಲ್ಲಿ ಡ್ಯಾನ್ಸ್​ ಮಾಡಿದ ರೀತಿ ಕಂಡು ಎಲ್ಲರೂ ಬೆರಗಾಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ಆ ರೀತಿ ಡ್ಯಾನ್ಸ್​ ಮಾಡಲು ಪ್ರಯತ್ನಿಸಿ ಸೋತಿದ್ದಾರೆ. ಆಮಿರ್​ ಖಾನ್, ಸಲ್ಮಾನ್​ ಖಾನ್​, ಶಾರುಖ್​ ಖಾನ್​ ಅವರು ವೇದಿಕೆ ಏರಿದಾಗ ‘ನಾಟು ನಾಟು..’ ಹಾಡು ಪ್ಲೇ ಮಾಡಲಾಗಿದೆ. ಅದಕ್ಕೆ ಸರಿಯಾಗಿ ಡ್ಯಾನ್ಸ್​ ಮಾಡಲು ಈ ಮೂವರು ಸೂಪರ್​ ಸ್ಟಾರ್​ಗಳಿಗೆ ಸಾಧ್ಯವಾಗಿಲ್ಲ.

ವೈರಲ್​ ವಿಡಿಯೋ:

ವೇದಿಕೆಯಲ್ಲಿ ಸಾಂಗ್ ಪ್ಲೇ ಆಗುತ್ತಲೇ ಇತ್ತು. ‘ನಾಟು ನಾಟು..’ ಹಾಡಿಗೆ ಡ್ಯಾನ್ಸ್​ ಮಾಡಲು ಸಾಧ್ಯವಾಗದೇ ಸೋತಾಗ ಆ ಮುಜುಗರದ ಸನ್ನಿವೇಶದಿಂದ ಪಾರಾಗಲು ಸಲ್ಮಾನ್​ ಖಾನ್​ ಅವರು ಕೂಡಲೇ ಒಂದು ಪ್ಲಾನ್​ ಮಾಡಿದರು. ‘ನಾಟು ನಾಟು..’ ಹಾಡಿಗೆ ಅವರು ತಮ್ಮ ಸಿನಿಮಾದ ಬೇರೆ ಬೇರೆ ಫೇಮಸ್​ ಹುಕ್​ ಸ್ಟೆಪ್​ಗಳನ್ನು ಹಾಕಿದರು. ಅದೇ ರೀತಿ ಆಮಿರ್​ ಖಾನ್​ ಹಾಗೂ ಶಾರುಖ್​ ಖಾನ್​ ಕೂಡ ತಮ್ಮ ಸಿನಿಮಾಗಳ ಫೇಮಸ್​ ಡ್ಯಾನ್ಸ್ ಸ್ಟೆಪ್​​ಗಳನ್ನು ಮಾಡಿದರು.

ಇದನ್ನೂ ಓದಿ: ಅನಂತ್​ ಅಂಬಾನಿ ಮದುವೆಗೆ ಬಂದ ರಿಯಾನಾ ಜತೆ ವಿದೇಶದಿಂದ ಬಂತು 4 ಗಾಡಿ ಲಗೇಜ್​

ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ಪ್ರೀ-ವೆಡ್ಡಿಂಗ್​ ಸಮಾರಂಭ ಜಾಮ್​ನಗರದಲ್ಲಿ ಮೂರು ದಿನಗಳ ಕಾಲ ನಡೆದಿದೆ. ಮಾರ್ಚ್​ 1ರಿಂದ ಮಾರ್ಚ್​ 3ರ ತನಕ ಅದ್ದೂರಿಯಾಗಿ ನಡೆದ ಈ ಸಮಾರಂಭಕ್ಕೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಸಿಂಗರ್​ ರಿಯಾನಾ ಅವರಿಗೆ ಬರೋಬ್ಬರಿ 73 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಸುದ್ದಿ ಆಗಿದೆ. ಈ ಸಮಾರಂಭದ ಅದ್ದೂರಿತನವನ್ನು ಕಂಡು ಎಲ್ಲರೂ ಬೆರಗಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ