AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಂತ್​ ಅಂಬಾನಿ ಮದುವೆಗೆ ಬಂದ ರಿಯಾನಾ ಜತೆ ವಿದೇಶದಿಂದ ಬಂತು 4 ಗಾಡಿ ಲಗೇಜ್​

ಮುಖೇಶ್​ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಯ ಪುತ್ರ ಅನಂತ್​ ಅಂಬಾನಿ ಮದುವೆಗೆ ಸಂಗೀತ ಕಾರ್ಯಕ್ರಮ ನೀಡಲು ಖ್ಯಾತ ಸಿಂಗರ್​ ರಿಯಾನಾ ಆಗಮಿಸಿದ್ದಾರೆ. ರಿಯಾನಾ ಅವರು ತಮ್ಮ ಜೊತೆ ನಾಲ್ಕು ದೊಡ್ಡ ಗಾಡಿಗಳಷ್ಟು ಲಗೇಜ್​ ತಂದಿದ್ದಾರೆ. ಗುಜರಾತ್​ನ ಜಾಮ್​ನಗರ್​ ವಿಮಾನ ನಿಲ್ದಾಣದಲ್ಲಿ ಈ ಲಗೇಜ್​ಗಳನ್ನು ಕೊಂಡೊಯ್ಯುತ್ತಿರುವ ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಅನಂತ್​ ಅಂಬಾನಿ ಮದುವೆಗೆ ಬಂದ ರಿಯಾನಾ ಜತೆ ವಿದೇಶದಿಂದ ಬಂತು 4 ಗಾಡಿ ಲಗೇಜ್​
ರಿಯಾನಾ ಲಗೇಜ್
ಮದನ್​ ಕುಮಾರ್​
|

Updated on: Mar 01, 2024 | 3:02 PM

Share

ವಿಶ್ವಾದ್ಯಂತ ಜನಪ್ರಿಯತೆ ಹೊಂದಿರುವ ಖ್ಯಾತ ಗಾಯಕಿ ರಿಯಾನಾ (Rihanna) ಅವರು ಭಾರತಕ್ಕೆ ಬಂದಿದ್ದಾರೆ. ಮಾರ್ಚ್​ 1ರಿಂದ ಮೂರು ದಿನಗಳ ಕಾಲ ನಡೆಯಲಿರುವ ಅನಂತ್​ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚೆಂಟ್​ ಅವರ ಪ್ರೀ-ವೆಡ್ಡಿಂಗ್​ ಸಮಾರಂಭದಲ್ಲಿ ರಿಯಾನಾ ಭಾಗಿ ಆಗುತ್ತಿದ್ದಾರೆ. ಅದೇ ರೀತಿ ಅನೇಕ ಸೆಲೆಬ್ರಿಟಿಗಳು ಕೂಡ ಈ ಸಮಾರಂಭಕ್ಕೆ ಸಾಕ್ಷಿ ಆಗುತ್ತಿದ್ದಾರೆ. ಬಾಲಿವುಡ್​ ಹಾಗೂ ಹಾಲಿವುಡ್​ನ ಹಲವು ಮಂದಿ ಈಗಾಗಲೇ ಮದುವೆಯ ಸ್ಥಳಕ್ಕೆ ಆಗಮಿಸಿದ್ದಾರೆ. ಜಗತ್ತಿನಾದ್ಯಂತ ಇರುವ ಪ್ರಮುಖ ಉದ್ಯಮಿಗಳಿಗೆ ಹಾಗೂ ರಾಜಕೀಯ ನಾಯಕರಿಗೆ ಆಹ್ವಾನ ನೀಡಲಾಗಿದೆ. ಅವರೆಲ್ಲರಿಗಿಂತ ಹೆಚ್ಚು ಸುದ್ದಿ ಆಗುತ್ತಿರುವುದು ಗಾಯಕಿ ರಿಯಾನಾ. ಅಚ್ಚರಿ ಏನೆಂದರೆ, ವಿದೇಶದಿಂದ ಭಾರತಕ್ಕೆ ಬರುವಾಗ ರಿಯಾನಾ ಅವರು ವಿಮಾನದಲ್ಲಿ ನಾಲ್ಕು ಗಾಡಿ ಲಗೇಜ್​ (Rihanna Luggage) ತಂದಿದ್ದಾರೆ!

ಜಗತ್ತಿನ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ರಿಯಾನಾ ಕೂಡ ಇದ್ದಾರೆ. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಅವರಿಗೆ ಸಖತ್​ ಬೇಡಿಕೆ ಇದೆ. ಅನೇಕ ಕಡೆಗಳಲ್ಲಿ ಅವರು ಸಂಗೀತ ಕಾರ್ಯಕ್ರಮ ನೀಡಿ ಫೇಮಸ್​ ಆಗಿದ್ದಾರೆ. ಈಗ ಅವರು ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಮದುವೆಯಲ್ಲಿ ಮನರಂಜನೆ ನೀಡಲು ಬಂದಿದ್ದಾರೆ. ಜಾಮ್​ನಗರ್​ ವಿಮಾನ ನಿಲ್ದಾಣದಲ್ಲಿ ಅವರ ಲಗೇಜ್​ಗಳು ಎಲ್ಲರ ಕಣ್ಣು ಕುಕ್ಕಿವೆ.

ಹತ್ತಾರು ಬ್ಯಾಗ್​ಗಳನ್ನು ಹಿಡಿದುಕೊಂಡು ಬರುವ ಅತಿಥಿಗಳನ್ನು ನೀವು ನೋಡಿರುತ್ತೀರಿ. ಆದರೆ ನಾಲ್ಕು ದೊಡ್ಡ ಗಾಡಿಯಲ್ಲಿ ಲಗೇಜ್​ ತುಂಬಿಕೊಂಡು ಬಂದವರನ್ನು ನೋಡಿರಲಿಕ್ಕಿಲ್ಲ. ಹಾಗಾಗಿ ಎಲ್ಲೆಲ್ಲೂ ರಿಯಾನಾ ಅವರದ್ದೇ ಸುದ್ದಿ ಆಗುತ್ತಿದೆ. ವಿಮಾನ ನಿಲ್ದಾಣದ ಹೊರಗೆ ನಾಲ್ಕು ಗಾಡಿಯಲ್ಲಿ ಲಗೇಜ್​ಗಳನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್​ ಆಗಿದೆ. ಅದನ್ನು ನೋಡಿ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅಂಬಾನಿ ಮಗನ ಮದುವೆಗೆ ಬಂದ ಗಾಯಕಿ ರಿಯಾನಾಗೆ 74 ಕೋಟಿ ರೂಪಾಯಿ ಸಂಭಾವನೆ

‘ರಿಯಾನಾ ಅವರು ತಮ್ಮ ಮನೆಯನ್ನೇ ಮಡಚಿಕೊಂಡು ಹೀಗೆ ವಿಮಾನದಲ್ಲಿ ತುಂಬಿಕೊಂಡು ಬಂದಿದ್ದಾರಾ’ ಎಂದು ಕೆಲವರು ಪ್ರಶ್ನಿಸಿದ್ದಾರೆ. ರಿಯಾನಾ ಅವರ ಜೊತೆ ಅವರ ಮ್ಯೂಸಿಕ್​ ಸಾಧನಗಳು ಕೂಡ ಬಂದಿವೆ. ವೇದಿಕೆಗೆ ಬೇಕಾದ ಪರಿಕರಗಳನ್ನು ಸಹ ಅವರು ತಂದಿದ್ದಾರೆ ಎನ್ನಲಾಗಿದೆ. ಅಲ್ಲದೇ, ಅವರ ತಂಡದ ಹಲವರು ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಒಟ್ಟಿಯಲ್ಲಿ ಈ ದೊಡ್ಡ ದೊಡ್ಡ ಲಗೇಜ್​ ಬಾಕ್ಸ್​ಗಳನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ರಿಯಾನಾ ಲಗೇಜ್ ವಿಡಿಯೋ:

ಇನ್ನೊಂದು ಶಾಕಿಂಗ್​ ವಿಚಾರ ಏನೆಂದರೆ, ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ಮದುವೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಲು ರಿಯಾನಾ ಅವರಿಗೆ 74 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ. ಈ ಸುದ್ದಿ ಕೇಳಿ ಎಲ್ಲರೂ ಹುಬ್ಬೇರಿಸಿದ್ದಾರೆ. ಇನ್ನೂ ಹಲವು ಕಲಾವಿದರು ಮೂರು ದಿನದ ಪ್ರೀ-ವೆಡ್ಡಿಂಗ್​ ಕಾರ್ಯಕ್ರಮದಲ್ಲಿ ಮನರಂಜನೆ ನೀಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ