Updated on:Mar 03, 2024 | 9:57 PM
ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ವಿವಾಹ ಜಾಮ್ನಗರ್ನಲ್ಲಿ ಬಲು ಅದ್ಧೂರಿಯಾಗಿ ನಡೆಯುತ್ತಿದೆ. ಪ್ರಸ್ತುತ ಪ್ರೀ ವೆಡ್ಡಿಂಗ್ ಸಂಭ್ರಮಗಳು ಜಾರಿಯಲ್ಲಿವೆ.
ಭಾರತದ ಅತ್ಯಂತ ದುಬಾರಿ, ಅತ್ಯಂತ ಐಶಾರಾಮಿ ಮದುವೆ ಅನಂತ್ ಅಂಬಾನಿಯ ಈ ಮದುವೆ. ಬಾಲಿವುಡ್ ಹಾಲಿವುಡ್ ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿಯಾಗಿದ್ದಾರೆ.
ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಹಾಲಿವುಡ್ ಪಾಪ್ ತಾರೆಗಳನ್ನು ಮುಖೇಶ್ ಅಂಬಾನಿ ಕರೆಸಿದ್ದಾರೆ.
ಪ್ರೀ ವೆಡ್ಡಿಂಗ್, ಮದುವೆ, ಆರತಕ್ಷತೆ ಹೀಗೆ ಹಲವು ಕಾರ್ಯಕ್ರಮಗಳಿಗೆ ಹಲವು ವೇದಿಕೆಗಳ ನಿರ್ಮಾಣ ಮಾಡಿದ್ದು, ಒಂದಕ್ಕಿಂತ ಒಂದು ಅದ್ಭುತವಾಗಿವೆ.
ಅನಂತ್ ಅಂಬಾನಿಯ ಪ್ರೀ ವೆಡ್ಡಿಂಗ್ ನಡೆಯುತ್ತಿರುವ ಸ್ಥಳದ ಕೆಲವು ಚಿತ್ರಗಳನ್ನು ಕೆಲವು ಸೆಲೆಬ್ರಿಟಿಗಳು ಹಂಚಿಕೊಂಡಿದ್ದು, ವಾವ್ ಎನಿಸುವಂತಿವೆ.
ವಿದೇಶದ ನುರಿತ, ಪ್ರಖ್ಯಾತ ಡಿಸೈನರ್ಗಳನ್ನು ಕರೆಸಿ ಹಲವು ಹಾಲ್ಗಳನ್ನು ಭಿನ್ನ-ಭಿನ್ನ ರೀತಿಯಲ್ಲಿ ಮುಖೇಶ್ ಅಂಬಾನಿ ಡಿಸೈನ್ ಮಾಡಿಸಿದ್ದಾರೆ.
ಮದುವೆ ಕಾರ್ಯಕ್ರಮಕ್ಕೆ ಮಾತ್ರವೇ ಅಲ್ಲದೆ ಆಗಮಿಸಿದ ಅತಿಥಿಗಳು ಉಳಿದುಕೊಳ್ಳುವ ಸ್ಥಳಗಳು, ಪಾರ್ಟಿ ಸ್ಥಳ, ಊಟದ ಸ್ಥಳಗಳ ವಿನ್ಯಾಸವನ್ನೂ ಅದ್ಧೂರಿಯಾಗಿ ಮಾಡಲಾಗಿದೆ.
ಕೆಲವು ವರದಿಗಳ ಪ್ರಕಾರ ಈ ಮದುವೆ ಕಾರ್ಯಕ್ರಮಕ್ಕೆ ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳನ್ನು ಅಂಬಾನಿ ಖರ್ಚು ಮಾಡಿದ್ದಾರೆ.
Published On - 8:39 pm, Sat, 2 March 24