- Kannada News Photo gallery Cricket photos Mumbai Indians regain the top spot RCB fell to the fourth position check WPL 2024 Points Table
WPL 2024 Points Table: ಸತತ ಎರಡು ಸೋಲು: ದಿಢೀರ್ ನಾಲ್ಕನೇ ಸ್ಥಾನಕ್ಕೆ ಕುಸಿದ ಆರ್ಸಿಬಿ, ಈ ಬಾರಿ ಕೂಡ ಕಪ್…
Womens Premier League 2024 - Points Table: ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಿಢೀರ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಎರಡು ಸೋಲು ಕಂಡು ಆರ್ಸಿಬಿ ಒಟ್ಟು 4 ಅಂಕ ಸಂಪಾದಿಸಿದೆ.
Updated on: Mar 03, 2024 | 7:09 AM

ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ರೋಚಕತೆ ಸೃಷ್ಟಿಸಿದೆ. ಫೆಬ್ರವರಿ 23ಕ್ಕೆ ಆರಂಭವಾದ ಟೂರ್ನಿಯಲ್ಲಿ ಈಗಾಗಲೇ ಒಂಬತ್ತು ಪಂದ್ಯಗಳು ಮುಕ್ತಾಯಗೊಂಡಿದೆ. ಶನಿವಾರ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ಸೋಲು ಕಂಡಿತು. ಇದೀಗ ಸತತ ಎರಡು ಸೋಲಿನೊಂದಿಗೆ ಮಂಧಾನ ಪಡೆಯ ಹಾದಿ ಕಠಿಣ ಆಗಿದೆ. ಇಲ್ಲಿದೆ ನೋಡಿ ಡಬ್ಲ್ಯೂಪಿಎಲ್ 2024 ಪಾಯಿಂಟ್ಸ್ ಟೇಬಲ್.

ಹರ್ಮನ್ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ಆರ್ಸಿಬಿ ವಿರುದ್ಧದ ಜಯದ ಮೂಲಕ ಅಗ್ರಸ್ಥಾನಕ್ಕೇರಿದೆ. ಇವರು ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರು ಗೆಲುವು ಹಾಗೂ ಒಂದು ಪಂದ್ಯದಲ್ಲಿ ಸೋಲುಂಡು 6 ಅಂಕ ಸಂಪಾದಿಸಿದೆ. ಮುಂಬೈ ರನ್ರೇಟ್ +0.402 ಆಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಅಗ್ರಸ್ಥಾನದಿಂದ ಎರಡನೇ ಸ್ಥಾನಕ್ಕೆ ಇಳಿದಿದೆ. ಇವರು ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಸೋಲು ಕಂಡು 4 ಅಂಕ ಪಡೆದುಕೊಂಡಿದೆ. ಡೆಲ್ಲಿ ರನ್ರೇಟ್ +1.271 ಆಗಿದೆ.

ಯುಪಿ ವಾರಿಯರ್ಸ್ ತಂಡ ಮೂರನೇ ಸ್ಥಾನದಲ್ಲಿದೆ. ಸತತ ಎರಡು ಪಂದ್ಯಗಳಲ್ಲಿ ಸೋತ ಬಳಿಕ ಗೆಲುವಿನ ಲಯಕ್ಕೆ ಮರಳಿರುವ ಯುಪಿ, ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಗೆಲುವು ಮತ್ತು ಎರಡು ಸೋಲು ಕಂಡು 4 ಅಂಕ ಪಡೆದುಕೊಂಡಿದೆ. ಯುಪಿ ರನ್ರೇಟ್ +0.211 ಆಗಿದೆ.

ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಿಢೀರ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಎರಡು ಸೋಲು ಕಂಡು ಆರ್ಸಿಬಿ ಒಟ್ಟು 4 ಅಂಕ ಸಂಪಾದಿಸಿ 4ನೇ ಸ್ಥಾನದಲ್ಲಿದೆ. ಬೆಂಗಳೂರಿನ ರನ್ರೇಟ್ -0.015 ಆಗಿದೆ.

ಮಹಿಳಾ ಪ್ರೀಮಿಯರ್ ಲೀಗ್ 2024ನೇ ಆವೃತ್ತಿಯಲ್ಲಿ ಗುಜರಾತ್ ಗೈಂಟ್ಸ್ ತಂಡದ ಸ್ಥಿತಿ ಉತ್ತಮವಾಗಿಲ್ಲ. ಆಡಿರುವ ಮೂರು ಪಂದ್ಯಗಳ ಪೈಕಿ ಮೂರರಲ್ಲೂ ಸೋತಿದ್ದು ಯಾವುದೇ ಅಂಕ ಸಂಪಾದಿಸಿಲ್ಲ. ಗುಜರಾತ್ -1.995 ರನ್ರೇಟ್ ಆಗಿದೆ.
