Viral Video: ವೇದಿಕೆಗೆ ಎಂಟ್ರಿ ಕೊಡುತ್ತಿದ್ದಂತೆ ‘ಜೈ ಶ್ರೀರಾಮ್’ ಎಂದು ಘೋಷ ಕೂಗಿದ ಶಾರುಖ್ ಖಾನ್
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ವೇದಿಕೆಗೆ ಎಂಟ್ರಿ ಕೊಡುತ್ತಿದ್ದಂತೆ ನಟ ಶಾರುಖ್ ಖಾನ್ ಅವರು 'ಜೈ ಶ್ರೀರಾಮ್' ಎಂದು ಘೋಷ ಕೂಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ವೈರಲ್ ಆಗಿದೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪ್ರೀ-ವೆಡ್ಡಿಂಗ್ ಸಮಾರಂಭ ಅಂಬಾನಿ ಅವರ ತವರೂರಾದ ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1 ರಿಂದ 3ರ ವರೆಗೆ ನಡೆಯುತ್ತಿದೆ. ಈ ಅದ್ದೂರಿ ವಿವಾಹ ಸಮಾರಂಭಕ್ಕೆ ಜನಪ್ರಿಯ ಗಾಯಕಿ ರಿಯಾನಾ ಕೂಡ ಆಗಮಿಸಿದ್ದು, ಅವರಿಗೆ ಅಂಬಾನಿ ಕುಟುಂಬ(Ambani family) ದವರು 74 ಕೋಟಿ ರೂಪಾಯಿ ಸಂಭಾವನೆ ನೀಡಿದ್ದು ಭಾರೀ ಸುದ್ದಿಯಲ್ಲಿದೆ. ಇದೀಗಾ ಈ ಕಾರ್ಯಕ್ರಮದಲ್ಲಿ ವೇದಿಕೆಗೆ ಎಂಟ್ರಿ ಕೊಡುತ್ತಿದ್ದಂತೆ ನಟ ಶಾರುಖ್ ಖಾನ್ ಅವರು ‘ಜೈ ಶ್ರೀರಾಮ್’ ಎಂದು ಘೋಷ ಕೂಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ವೈರಲ್ ಆಗಿದೆ.
ಶಾರುಖ್ ಖಾನ್ ‘ಜೈ ಶ್ರೀರಾಮ್’ ಎಂದು ಘೋಷ ಕೂಗಿರುವ ವಿಡಿಯೋ ಇಲ್ಲಿದೆ ನೋಡಿ:
View this post on Instagram
ದೇಶ ವಿದೇಶದ ಅನೇಕ ಸೆಲೆಬ್ರಿಟಿಗಳು ಈ ಇವೆಂಟ್ನಲ್ಲಿ ಭಾಗಿಯಾಗಿ ಮನರಂಜನಾ ಕಾರ್ಯಕ್ರಮ ನೀಡಿದ್ದಾರೆ. ವಿಶ್ವದ ಗಣ್ಯಾತಿಗಣ್ಯರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ವಿಶ್ವ ವಿಖ್ಯಾತ ಸಿಂಗರ್ ರಿಯಾನಾ ಅವರು ಭರ್ಜರಿ ಮನರಂಜನೆ ನೀಡಿದ್ದಾರೆ. ಅದೇ ರೀತಿ, ಶಾರುಖ್ ಖಾನ್ ಸಲ್ಮಾನ್ ಖಾನ್ ಹಾಗೂ ಆಮಿರ್ ಖಾನ್ ಅವರು ಒಟ್ಟಿಗೆ ವೇದಿಕೆ ಏರಿ ಡ್ಯಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ: ಈ ಹೆಡ್ ಪೋನ್ ಬೆಲೆ ಕೇಳಿದ್ರೆ ನೀವು ಶಾಕ್ ಆಗುವುದಂತೂ ಖಂಡಿತಾ
ಶ್ರೇಷ್ಠ ತಾರೆಯರ ಪ್ರದರ್ಶನಗಳನ್ನು ಹೊರತುಪಡಿಸಿ, ಮಾರ್ಚ್ 2 ರ ಸಂಗೀತ ರಾತ್ರಿಯಲ್ಲಿ ಎದ್ದುಕಂಡ ಕ್ಷಣವೆಂದರೆ ಶಾರುಖ್ ಖಾನ್ ಅವರು ಜೈ ಶ್ರೀ ರಾಮ್ ಎಂದು ಹೇಳಿ ವೇದಿಕೆಯಲ್ಲಿ ಅತಿಥಿಗಳನ್ನು ಸ್ವಾಗತಿಸಿದರು. ನಟ ಅತಿಥಿಗಳನ್ನು ಸ್ವಾಗತಿಸುವ ಮತ್ತು ವೇದಿಕೆಯಲ್ಲಿನ ಪ್ರದರ್ಶನಗಳ ಬಗ್ಗೆ ಮಾತನಾಡುವ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ