ಕೆಟ್ಟಾಕೊಳಕಾಗಿ ಕೇಕ್ ತಯಾರಿಸುವ ಈ ವಿಡಿಯೋ ನೋಡಿದರೆ ಇನ್ನೆಂದೂ ಅದನ್ನು ಜೀವನದಲ್ಲಿ ಮುಟ್ಟುವುದಿಲ್ಲ!
ವೈರಲ್ ವಿಡಿಯೋದಲ್ಲಿ ಕೇಕ್ ತಯಾರಿಸುವ ಪ್ರಕ್ರಿಯೆಯನ್ನು ತೋರಿಸಲಾಗಿದೆ. ಬೇಕರಿ ಅಂಗಡಿಗಳಿಗೆ ಜನ ಎಡತಾಕುವುದು ಸಾಮಾನ್ಯ. ಕಚೇರಿಯಲ್ಲಿದ್ದಾಗ ಚಹಾ ವಿರಾಮದ ನೆಪದಲ್ಲಿ ಕಿರಾಣಿ ಗೂಡಂಗಡಿಗೆ ತೆರಳಿ ಈ ರೀತಿಯ ಕೇಕ್ ಅನ್ನು ತಿಂಡಿ ಪದಾರ್ಥವಾಗಿ ತಿನ್ನುತ್ತಾರೆ. ಆದರೆ, ಅಂತಹ ಕೇಕ್ ಅನ್ನು ತಯಾರಿಸುವ ರೀತಿ ನೋಡಿದರೆ ತಿನ್ನುವುದು ಹಾಗಿರಲಿ ಇನ್ನು ಮುಂದೆ ನೀವು ಕಣ್ಣೆತ್ತಿಯೂ ನೋಡುವುದಿಲ್ಲ...
ಪ್ರತಿದಿನ ನಾವು ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿಚಿತ್ರ, ನಾವೀನ್ಯ ಮತ್ತು ವಿಭಿನ್ನ ವೀಡಿಯೊಗಳನ್ನು ನೋಡುತ್ತೇವೆ. ಈ ವೀಡಿಯೊಗಳಲ್ಲಿ ಹೆಚ್ಚಿನವು ಆಹಾರಕ್ಕೆ ಸಂಬಂಧಿಸಿರುತ್ತದೆ ಎಂಬುದು ಸತ್ಯ. ಯಾವುದೇ ಪರಿಸ್ಥಿತಿಯಲ್ಲಿಯೂ ಆಹಾರದ ವಿಷಯ ಜನರನ್ನು ಆಕರ್ಷಿಸುತ್ತದೆ. ಹಾಗಾಗಿ ಎಷ್ಟೇ ಫುಡ್ ವೀಡಿಯೋಗಳಿದ್ದರೂ ವೀಕ್ಷಕರ ಕೊರತೆ ಇರುವುದಿಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ಎಲ್ಲಾ ಆಹಾರದ ವೀಡಿಯೊಗಳು ಆನಂದಿಸುವಂತಹವಲ್ಲ. ಕೆಲವು ನಮಗೆ ಹೊಸ ಮಾಹಿತಿ ಮತ್ತು ಹೊಸ ಅನುಭವಗಳನ್ನು ನೀಡುತ್ತವೆ. ಸದ್ಯ ಇದೇ ಬೇಕರಿಯಲ್ಲಿ ಕೇಕ್ ಮಾಡುವ ಪ್ರಕ್ರಿಯೆಗೆ (Cake Making) ಸಂಬಂಧಿಸಿದ ವಿಡಿಯೋವೊಂದು (Unhygienic Conditions) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.
ವೈರಲ್ ವಿಡಿಯೋದಲ್ಲಿ ಕೇಕ್ ತಯಾರಿಸುವ ಪ್ರಕ್ರಿಯೆಯನ್ನು ತೋರಿಸಲಾಗಿದೆ. ಬೇಕರಿ ಅಂಗಡಿಗಳಿಗೆ ಜನ ಎಡತಾಕುವುದು ಸಾಮಾನ್ಯ. ಕಚೇರಿಯಲ್ಲಿದ್ದಾಗ ಚಹಾ ವಿರಾಮದ ನೆಪದಲ್ಲಿ ಕಿರಾಣಿ ಗೂಡಂಗಡಿಗೆ ತೆರಳಿ ಈ ರೀತಿಯ ಕೇಕ್ ಅನ್ನು ತಿಂಡಿ ಪದಾರ್ಥವಾಗಿ ತಿನ್ನುತ್ತಾರೆ. ಆದರೆ, ಅಂತಹ ಕೇಕ್ ಅನ್ನು ತಯಾರಿಸುವ ರೀತಿ ನೋಡಿದರೆ ತಿನ್ನುವುದು ಹಾಗಿರಲಿ ಇನ್ನು ಮುಂದೆ ನೀವು ಕಣ್ಣೆತ್ತಿಯೂ ನೋಡುವುದಿಲ್ಲ… ಯಾಕೆಂದರೆ… ಕೇಕ್ ಅನ್ನು ತುಂಬಾ ಕಳಪೆಯಾಗಿ, ನೈರ್ಮಲ್ಯದ ಬಗ್ಗೆ ಕಾಳಜಿಯನ್ನೂ ತೋರದೆ ತಯಾರಿಸಲಾಗುತ್ತದೆ. ಸಂಪೂರ್ಣ ಅನೈರ್ಮಲ್ಯದಲ್ಲಿ ಕೇಕ್ ತಯಾರಿಸುತ್ತಿರುವುದನ್ನು ನೋಡಿದ ಮೇಲೆ ನೀವೂ ಅದನ್ನೇ ಹೇಳುತ್ತೀರಿ..
View this post on Instagram
ಸಣ್ಣ ಗೃಹ ಕೈಗಾರಿಕೆಯಲ್ಲಿ ಕೇಕ್ ತಯಾರಿಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿನ ಅನೈರ್ಮಲ್ಯ ವಾತಾವರಣದಲ್ಲಿ ಕೇಕ್ ತಯಾರಿಸಿದ್ದಲ್ಲದೆ, ಕೇಕ್ ತಯಾರಿಸುವ ಕಾರ್ಮಿಕರು ಹಲವು ಬಾರಿ ಕೇಕ್ ಬ್ಯಾಟರ್ ನಲ್ಲಿ ಕೈ ಮುಳುಗಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಇದು ನಿಸ್ಸಂಶಯವಾಗಿ ನೋಡುವುದಕ್ಕೆ ಆತಂಕಕಾರಿ ದೃಶ್ಯಾಳಿಯಾಗಿದೆ. ಅಂಗಡಿಗಳಿಂದ ಖರೀದಿಸಿದ ಕೇಕ್ ಗಳನ್ನು ಹೀಗೆಲ್ಲಾ ಕೆಟ್ಟಾಕೊಳಕಾಗಿ ತಯಾರಿಸುತ್ತಾರೆಯೇ ಎಂದು ಹಲವರು ವಿಡಿಯೋದಡಿ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಈ ಹೆಡ್ ಪೋನ್ ಬೆಲೆ ಕೇಳಿದ್ರೆ ನೀವು ಶಾಕ್ ಆಗುವುದಂತೂ ಖಂಡಿತಾ
ಇಂತಹ ನೈರ್ಮಲ್ಯರಹಿತವಾಗಿ ಆಹಾರ ತಯಾರಿಸುವವರನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಹೊಣೆ ಅಧಿಕಾರಿಗಳ ಮೇಲಿದೆಯಾದರೂ ಆಹಾರ ತಯಾರಿಕೆಗೆ ಸಂಬಂಧಿಸಿದ ಸ್ಥಳಗಳಲ್ಲಿ ನಿಗಾವಹಿಸಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದು ಹಲವರು ಆತಂಕ ವ್ಯಕ್ತಪಡಿಸಿದರು.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:18 am, Mon, 4 March 24