Viral Video: ರಜನಿಕಾಂತ್ ಅಭಿಯಾನದ ಮುತ್ತು ಚಿತ್ರದ ʼಒರುವನ್ ಒರುವನ್ʼ ಹಾಡನ್ನು ಹಾಡಿದ 77ರ ವಿದೇಶಿ ವೃದ್ಧ 

ಜಪಾನಿನ ಮಿತ್ಸುಬಿಷಿ ಕಾರ್ಪೊರೇಷನ್ ಲಿಮಿಟೆಡ್ ನ  ಸೀನಿಯರ್ ಎಕ್ಸಿಕ್ಯೂಟಿವ್  77 ವರ್ಷ ವಯಸ್ಸಿನ ಕುಬೋಕಿ ಸ್ಯಾನ್ ಎಂಬವರು ತನ್ನ ಇಳಿ ವಯಸ್ಸಿನಲ್ಲೂ  ರಜನಿಕಾಂತ್ ಅವರ ಮುತ್ತು ಚಿತ್ರದ ಒರುವನ್ ಒರುವನ್  ಗೀತೆಯನ್ನು ಬಹಳ ಸೊಗಸಾಗಿ ಹಾಡುವ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. 

Viral Video: ರಜನಿಕಾಂತ್ ಅಭಿಯಾನದ ಮುತ್ತು ಚಿತ್ರದ ʼಒರುವನ್ ಒರುವನ್ʼ ಹಾಡನ್ನು ಹಾಡಿದ 77ರ ವಿದೇಶಿ ವೃದ್ಧ 
ವೈರಲ್​​ ವಿಡಿಯೋ ಇಲ್ಲಿದೆ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 04, 2024 | 4:59 PM

1995ರಲ್ಲಿ ಬಿಡುಗಡೆಯಾಗಿದ್ದ ರಜನಿಕಾಂತ್ ಅವರ ಮುತ್ತು ಸಿನೆಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ, ಆಗಿನ ಕಾಲದಲ್ಲಿಯೇ ಸುಮಾರು 30 ಕೋಟಿಗೂ ಹೆಚ್ಚು ಹಣ ಗಳಿಸಿತ್ತು. ವಿಶೇಷವಾಗಿ ಜಪಾನಿನಲ್ಲಿಯೂ  ಈ ಸಿನೆಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ ನಂತರ  ರಜನಿಕಾಂತ್ ಅವರ ಎಲ್ಲಾ ಸಿನಿಮಾಗಳಿಗೂ ಜಪಾನಿನಲ್ಲಿ ಪ್ರತ್ಯೇಕ ಅಭಿಮಾನಿ ಬಳಗವೇ ಸೃಷ್ಟಿಯಾಗಿತ್ತು. ಇದೀಗ ಈ ಮುತ್ತು ಚಿತ್ರದ ಒರುವನ್ ಒರುವನ್ ಗೀತೆಯನ್ನು 77ರ ಹರೆಯದ ಜಪಾನಿಗರೊಬ್ಬರು ಹಾಡಿದ್ದು, ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ  ವೈರಲ್ ಆಗುತ್ತಿದೆ.

ಫಾರಿನರ್ಸ್ ಭಾರತೀಯ ಹಾಡು ಹಾಡಿದರೆ ಅದನ್ನು ಕೇಳುವುದೆಂದರೆ ಭಾರತೀಯರಾದ ನಮಗೆ  ವಿಶೇಷ ಕ್ರೇಜ್. ಇಂತಹ ಕೆಲವೊಂದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ  ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಕುಬೋಕಿ ಸ್ಯಾನ್ ಅವರ ವಿಡಿಯೋ ಕೂಡಾ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪಾಂಡಿಚೇರಿ ವಿಶ್ವವಿದ್ಯಾನಿಲಯವು ಇತ್ತೀಚಿಗೆ ಆಯೋಜಿಸಿದ್ದ GLOBIZZʼ24 ಎಂಬ ಕಾರ್ಯಕ್ರಮದಲ್ಲಿ ಜಪಾನಿನ ಮಿತ್ಸುಬಿಷಿ ಕಾರ್ಪೊರೇಷನ್ ಲಿಮಿಟೆಡ್ ನ ಸೀನಿಯರ್ ಎಕ್ಸಿಕ್ಯೂಟಿವ್   77 ವರ್ಷದ ಕುಬೋಕಿ ಸ್ಯಾನ್ ಎಂಬವರು ರಜನಿಕಾಂತ್ ಅವರ ಮುತ್ತು ಚಿತ್ರದ ಒರುವನ್ ಒರುವನ್  ಹಿಟ್ ಸಾಂಗ್  ಹಾಡುವ ಮೂಲಕ ಅಲ್ಲಿದ್ದ ವಿದ್ಯಾರ್ಥಿಗಳನ್ನು ಮನರಂಜಿಸಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವನ್ನು ಅನಂತ್ ರೂಪನಗುಡಿ (@Ananth_IRAS) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು,  ಪಾಂಡಿಚೇರಿ ವಿಶ್ವವಿದ್ಯಾನಿಲಯವು ಆಯೋಜಿಸಿದ್ದ GLOBIZZʼ24 ಕಾರ್ಯಕ್ರಮದಲ್ಲಿ ಜಪಾನಿನ ಮಿತ್ಸುಬಿಷಿ ಕಾರ್ಪೋರೇಷನ್ ಲಿಮಿಟೆಡ್ ನ  77 ವರ್ಷ ವಯಸ್ಸಿನ ಶ್ರೀ ಕುಬೋಕಿ ಸ್ಯಾನ್ ವರು ರಜನಿಕಾಂತ್ ಅವರ ಮುತ್ತು ಚಿತ್ರದ ಅದ್ಭುತ ಗೀತೆಯೊಂದನ್ನು ಹಾಡುವ ಮೂಲಕ ಎಂ.ಬಿ.ಎ ವಿದ್ಯಾರ್ಥಿಗಳನ್ನು ಮನರಂಜಿಸಿದರು ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಕುಬೋಕಿ ಸ್ಯಾನ್ ಅವರು ತಮ್ಮ ಇಳಿ ವಯಸ್ಸಿನಲ್ಲೂ ಬಹಳ ಉತ್ಸಾಹದಿಂದ ಹಾಡುತ್ತಾ ಎಂ.ಬಿ.ಎ ವಿದ್ಯಾರ್ಥಿಗಳನ್ನು ಮನರಂಜಿಸಿದಂತಹ ದೃಶ್ಯವನ್ನು ಕಾಣಬಹುದು.   ಸ್ಟೇಜ್ ಮೇಲೆ ಮೈ ಕ್ ಹಿಡಿದು ನಿಂತಂತಹ ಕುಬೋಕಿ ಸ್ಯಾನ್ 1995 ರಲ್ಲಿ ತೆರೆಕಂಡಂತಹ ರಜನಿಕಾಂತ್ ನಟನೆಯ ಮುತ್ತು ಚಿತ್ರದ ʼಒರುವನ್ ಒರುವನ್  ಮುತಲಾಲಿ ಉಲಗಿಲ್ ಮಾತ್ರವನ್ ತೋಝಿಲಾಲಿʼ ಎಂಬ ಎಂಬ ಹಾಡನ್ನು ಬಹಳ ಸೊಗಸಾಗಿ ಹಾಡುತ್ತಾ ವಿದ್ಯಾರ್ಥಿಗಳನ್ನು ಮನರಂಜಿಸಿದ್ದಾರೆ. ಇಳಿ ವಯಸ್ಸಿನಲ್ಲೂ ಇವರ ಉತ್ಸಾಹವನ್ನು ಕಂಡು ಕಾರ್ಯಕ್ರಮದಲ್ಲಿ ನೆರೆದಿದ್ದವರೆಲ್ಲರೂ ಚಪ್ಪಾಳೆ ತಟ್ಟಿ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ಕೆಟ್ಟಾಕೊಳಕಾಗಿ ಕೇಕ್ ತಯಾರಿಸುವ ಈ ವಿಡಿಯೋ ನೋಡಿದರೆ ಇನ್ನೆಂದೂ ಅದನ್ನು ಜೀವನದಲ್ಲಿ ಮುಟ್ಟುವುದಿಲ್ಲ!

ಮಾರ್ಚ್ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಮೂರುವರೆ ಲಕ್ಷಕ್ಕೂ  ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಜಪಾನಿಗರಿಂದ ನಾವು ಕಲಿಯಬೇಕಾದ ವಿಷಯಗಳು ತುಂಬಾನೇ ಇವೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸಂಗೀತಕ್ಕೆ ಯಾವುದೇ ಭಾಷೆಯ ಗಡಿಯಿಲ್ಲ, ಅದು ನಮ್ಮ ಆತ್ಮವನ್ನು ಸ್ಪರ್ಶಿಸುವ ಮೂಲಕ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರುತ್ತದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼ77 ರ ಹರೆಯದಲ್ಲೂ ಇವರ ಉತ್ಸಾಹವನ್ನು ಕಂಡು ಬಹಳ ಸಂತೋಷವಾಯಿತುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಇವರ ಹಾಡಂತೂ ತುಂಬಾನೇ ಅದ್ಭುತವಾಗಿತ್ತು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್