AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Child Adoption: ಮಗುವನ್ನು ದತ್ತು ಪಡೆಯೋದು ಅಷ್ಟು ಸುಲಭವಲ್ಲ, ಭಾರತದಲ್ಲಿ ನಿಯಮಗಳೇನು ಗೊತ್ತಾ?   

ಕುಟುಂಬದಲ್ಲಿ ಕಿಲ ಕಿಲ ನಗುವ ಮಕ್ಕಳಿದ್ದರೆ ಮಾತ್ರ ಆ ಕುಟುಂಬವು ಸಂಪೂರ್ಣ ಎಂದು ಹಲವರು ನಂಬುತ್ತಾರೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬ  ದಂಪತಿ ಕೂಡಾ ಮಗುವನ್ನು ಪಡೆಯುವ ಬಯಕೆಯನ್ನು ಹೊಂದಿರುತ್ತಾರೆ. ಆದರೆ ಸಂತಾನ ಭಾಗ್ಯ ಇಲ್ಲದವರು ಮಕ್ಕಳನ್ನು ದತ್ತು ಪಡೆಯಲು ಮುಂದಾಗ್ತಾರೆ. ಆದರೆ ಮಕ್ಕಳನ್ನು ದತ್ತು ಪಡೆಯೋದು ಅಷ್ಟು ಸುಲಭದ ಕೆಲಸವಲ್ಲ. ಭಾರತದಲ್ಲಿ ಮಗುವನ್ನು ದತ್ತು ಪಡೆಯಲು ಅದರದ್ದೇ ಆದ ನಿಯಮ ಪ್ರಕ್ರಿಯೆಗಳಿವೆ. 

Child Adoption: ಮಗುವನ್ನು ದತ್ತು ಪಡೆಯೋದು ಅಷ್ಟು ಸುಲಭವಲ್ಲ, ಭಾರತದಲ್ಲಿ ನಿಯಮಗಳೇನು ಗೊತ್ತಾ?   
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 04, 2024 | 5:52 PM

Share

ಮನೆಯಲ್ಲಿ ಮಕ್ಕಳಿದ್ರೇನೆ ಚಂದ. ನಾವು ಎಷ್ಟೇ ಒತ್ತಡದಲ್ಲಿದ್ದರೂ ಮನೆಗೆ ಬಂದು ಆ ಮುಗ್ಧ ಮಕ್ಕಳ ತುಂಟತನ, ನಗು ಇವೆಲ್ಲವನ್ನೂ ನೋಡಿದಾಗ ಮನಸ್ಸಿನ ಭಾರವೆಲ್ಲ ಕಳೆದುಹೋಗುತ್ತದೆ. ಹೀಗೆ ಪ್ರತಿಯೊಬ್ಬ ದಂಪತಿಯೂ ಮಗುವನ್ನು ಪಡೆಯುವ ಬಯಕೆಯನ್ನು ಹೊಂದಿರುತ್ತಾರೆ. ಆದರೆ ಸಂತಾನ ಭಾಗ್ಯ  ಇಲ್ಲದ ದಂಪತಿಗಳು ಮಕ್ಕಳಿಲ್ಲದ ಕೊರಗನ್ನು ನೀಗಿಸಲು ಮಕ್ಕಳನ್ನು ದತ್ತು ಪಡೆಯುವ ನಿರ್ಧಾರಕ್ಕೆ ಬರುತ್ತಾರೆ. ದಂಪತಿಗಳು ಮಾತ್ರವಲ್ಲದೇ ಸಿಂಗಲ್ ಪೇರೆಂಟ್ಸ್ ಕೂಡಾ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಾರೆ. ನೀವು ಕೂಡಾ ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕು ಎಂಬ ಯೋಚನೆಯಲ್ಲಿದ್ದರೆ, ಅದಕ್ಕಾಗಿ ಇರುವ ಕಠಿಣ  ನಿಯಮಗಳನ್ನು ತಿಳಿದುಕೊಳ್ಳಿ.

ಭಾರತದಲ್ಲಿ ದತ್ತು ಪಡೆಯುವ ಪ್ರಕ್ರಿಯೆ:

ಭಾರತದಲ್ಲಿ ಮಗುವನ್ನು ದತ್ತು ಪಡೆಯುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಈ ಪ್ರಕ್ರಿಯೆಯು ಸ್ವಲ್ಪ ಕಷ್ಟದಿಂದ ಕೂಡಿದೆ ಅಂತಾನೇ ಹೇಳಬಹುದು. ಭಾರತದಲ್ಲಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಸರ್ಕಾರವು ಒಂದು ಪ್ರಾಧಿಕಾರವನ್ನು ರಚಿಸಿದೆ. ಇದರ ಹೆಸರು ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿ (CARA). ಇದು ಕೇಂದ್ರದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಭಾರತದಲ್ಲಿ ಒಬ್ಬ ವ್ಯಕ್ತಿ ಮಗುವನ್ನು ದತ್ತು ತೆಗೆದುಕೊಳ್ಳಬೇಕಾದರೆ ಈ ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿಯ ನಿಯಮಗಳನ್ನು ಪಾಲಿಸಬೇಕು,  ಆ ನಿಮಮಗಳೇನೆಂದರೆ:

• ದಂಪತಿಗಳು ಮಗುವನ್ನು ದತ್ತು ತೆಗೆದುಕೊಳ್ಳುತ್ತಿದ್ದರೆ, ಅವರು ಮದುವೆಯಾದ  ಎರಡು ವರ್ಷಗಳ ಬಳಿಕವಷ್ಟೇ ದತ್ತು ತೆಗೆದುಕೊಳ್ಳಲು ಸಾಧ್ಯ.

• ದತ್ತು ಪಡೆದ ಮಗು ಮತ್ತು ಪೋಷಕರ ನಡುವೆ ಕನಿಷ್ಠ 25 ವರ್ಷಗಳ ವಯಸ್ಸಿನ ಅಂತರವಿರಬೇಕು.

• ದತ್ತು ಪಡೆಯುವ ಮಗುವಿನ ಪೋಷಕರಗೆ  ಯಾವುದೇ ಮಾರಣಾಂತಿಕ ಕಾಯಿಲೆ ಇರಬಾರದು.

• ಮಗುವನ್ನು ದತ್ತು ತೆಗೆದುಕೊಳ್ಳಲು ದಂಪತಿಗಳಿಬ್ಬರಿಗೂ ಸಂಪೂರ್ಣ ಒಪ್ಪಿಗೆ ಇರಬೇಕು.

• ಸಿಂಗಲ್ ಪೇರೆಂಟ್ ಮಹಿಳೆಯೊಬ್ಬಳು ಮಗುವನ್ನು ದತ್ತು ಪಡೆಯಲು ಬಯಸಿದರೆ, ಆಕೆ ಸುಲಭವಾಗಿ ಗಂಡು ಅಥವಾ ಹೆಣ್ಣು  ಮಗುವನ್ನು ದತ್ತು ಪಡೆಯಬಹುದು. ಆದರೆ ಪುರುಷ ಕೇವಲ ಗಂಡು ಮಗುವನ್ನು  ಮಾತ್ರ ದತ್ತು ಪಡೆಯಲು ಸಾಧ್ಯ.

• ಮಗುವನ್ನು ದತ್ತು ತೆಗೆದುಕೊಳ್ಳುವ ಸಮಯದಲ್ಲಿ ಪೋಷಕರ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು.

• ನಾಲ್ಕು ವರ್ಷದೊಳಗಿನ ಮಗುವನ್ನು ದತ್ತು ಪಡೆಯುತ್ತಿದ್ದರೆ, ದಂಪತಿಗಳಿಬ್ಬರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು.

• ಈಗಾಗಲೇ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಜನರು ದತ್ತು ಪಡೆಯಲು ಅರ್ಹರಲ್ಲ.

ಮಗುವನ್ನು ದತ್ತು ತೆಗೆದುಕೊಳ್ಳಲು ಈ ಪ್ರಮುಖ ಡಾಕ್ಯುಮೆಂಟ್ಗಳ  ಅಗತ್ಯವಿದೆ: • ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸುವ  ದಂಪತಿಗಳ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ

• ದಂಪತಿಗಳಿಬ್ಬರ  ಜನನ ಪ್ರಮಾಣ ಪತ್ರ

• ನಿವಾಸ ಪುರಾವೆ, ಆಧಾರ್ ಕಾರ್ಡ್, ಪಾನ್ ಕಾರ್ಡ್,  ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್,  ಇತ್ತೀಚಿನ ವಿದ್ಯುತ್ ಬಿಲ್  ಇತ್ಯಾದಿಗಳನ್ನು ಸಲ್ಲಿಸಬಹದು.

• ಆ ವರ್ಷದ ಆದಾಯ ತೆರಿಗೆ ರಿಟರ್ನ್ ಪ್ರಮಾಣೀಕೃತ ಪ್ರತಿ

• ವಿವಾಹಿತ ದಂಪತಿಗಳಿಗೆ ಮದುವೆ  ಪ್ರಮಾಣ ಪತ್ರ

• ವಿಚ್ಛೇದನ ಪಡೆದ ವ್ಯಕ್ತಿ ಮಗುವನ್ನು ದತ್ತು ತೆಗೆದುಕೊಳ್ಳುತ್ತಿದ್ದರೆ  ವಿಚ್ಛೇದನ ಪಡೆದ  ಪ್ರಮಾಣ ಪತ್ರ ಬೇಕಾಗುತ್ತವೆ.

• ದತ್ತು ಪಡೆಯುವ ವ್ಯಕ್ತಿಗೆ ಸಂಬಂಧಿಸಿದ ಇಬ್ಬರು ವ್ಯಕ್ತಿಗಳ ಹೇಳಿಕೆ

• ಯಾವುದೇ ಗಂಭೀರ ಸಮಸ್ಯೆಗಳಿಲ್ಲ ಎಂಬ  ವೈದ್ಯಕೀಯ ದೃಢೀಕರಣ   ಪತ್ರ.

ಇದನ್ನೂ ಓದಿ: ನಿಮಗಿದು ಗೊತ್ತೆ? ಸುಟ್ಟ ಗಾಯಗಳಿಗೆ ರಾಮ ಬಾಣ ಈ ವಿಶೇಷ ಮೀನಿನ ಚರ್ಮ!

ಮಗವನ್ನು ದತ್ತು ಪಡೆಯಲು ಇರುವ  ಪ್ರಕ್ರಿಯೆ:

ಮಗುವನ್ನು ದತ್ತು ಪಡೆಯಲು ಮೊದಲನೆಯದಾಗಿ ಪೋಷಕರು www.cara.nic.in  ವೆಬ್ಸೈಟ್ ಅಲ್ಲಿ ಅರ್ಜಿಯನ್ನು   ನೋಂದಾಯಿಸಿಕೊಳ್ಳಬೇಕು. ಇದರ ಹೊರತಾಗಿ ಮಾನ್ಯತೆ ಪಡೆದ ಭಾರತೀಯ ಪ್ಲೇಸ್ ಮೆಂಟ್ ಏಜೆನ್ಸಿಗಳಲ್ಲಿ ಮಗುವನ್ನು ದತ್ತು ಪಡೆದುಕೊಳ್ಳಲು ಪೋಷಕರು ಅರ್ಜಿ ಸಲ್ಲಿಸಬಹುದು. ಇದರ ನಂತರ ಅವರು ಕೇಳಿರುವ   ಎಲ್ಲಾ ದಾಖಲೆಗಳನ್ನು 30 ದಿನಗಳ ಒಳಗೆ  ಸಲ್ಲಿಸಬೇಕು. ಇದಾದ ನಂತರ ಮನೆ ಭೇಟಿಗಾಗಿ ಏಜೆನ್ಸಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆ ಸಂಸ್ಥೆ ತನಿಖೆಗಾಗಿ ದತ್ತು ಪಡೆಯಬೇಕೆಂದಿರುವ ಪೋಷಕರ ಮನೆಗೆ ಭೇಟಿ ನೀಡುತ್ತಾರೆ. ತನಿಖೆ ಪೂರ್ಣಗೊಂಡಾಗ, ಕಾಯುವ ಅವಧಿಯು ಪ್ರಾರಂಭವಾಗುತ್ತದೆ. ಇದು ಎರಡರಿಂದ ಮೂರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ದಂಪತಿಗಳ ಸರದಿ ಬಂದಾಗ  ಜಿಲ್ಲಾ ಮ್ಯಾಜಿಸ್ಟ್ರೇಟ್ ಕಛೇರಿಯಿಂದ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗುತ್ತದೆ, ಮಗುವಿನ ಜನನ ಪ್ರಮಾಣ ಪತ್ರವನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಅದನ್ನು ದತ್ತು ಪಡೆಯುವಂತಹ ಪೋಷಕರಿಗೆ ನೀಡಲಾಗುತ್ತದೆ. ಹೀಗೆ ಎಲ್ಲಾ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ನಂತರ, ಮಗುವನ್ನು ಪೋಷಕರಿಗೆ  ಹಸ್ತಾಂತರಿಸಲಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..