ಅಂದ ಹೆಚ್ಚಿಸಲು ಬರೋಬ್ಬರಿ 100 ಪ್ಲಾಸ್ಟಿಕ್​ ಸರ್ಜರಿ ಮಾಡಿಸಿದ 18ರ ಯುವತಿ

ಪೂರ್ವ ಚೀನಾದ ಝೌ ಚುನಾ ಎಂಬ ಹುಡುಗಿ 13 ನೇ ವಯಸ್ಸಿನಿಂದ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಬಂದಿದ್ದಾಳೆ. ಅಂದರೆ ಈಗ ಈಕೆಗೆ 18 ವರ್ಷ. ಆಕೆ ತನ್ನ ನೆಚ್ಚಿನ ನಟಿ ಎಥೆಲ್ ಯು ಅವರಂತೆ ಸುಂದರವಾಗಿ ಕಾಣಲು ಇಲ್ಲಿಯವರೆಗೆ 100 ಸರ್ಜರಿಗಳನ್ನು ಮಾಡಿಸಿದ್ದಾಳೆ.

ಅಂದ ಹೆಚ್ಚಿಸಲು ಬರೋಬ್ಬರಿ 100 ಪ್ಲಾಸ್ಟಿಕ್​ ಸರ್ಜರಿ ಮಾಡಿಸಿದ 18ರ ಯುವತಿ
100 ಪ್ಲಾಸ್ಟಿಕ್​ ಸರ್ಜರಿ ಮಾಡಿಸಿದ 18ರ ಯುವತಿ
Follow us
ಅಕ್ಷತಾ ವರ್ಕಾಡಿ
|

Updated on:Mar 05, 2024 | 11:01 AM

ನೈಸರ್ಗಿಕ ಸೌಂದಯಕ್ಕಿಂತ ತಮ್ಮ ಇಚ್ಛೆಗೆ ತಕ್ಕಂತೆ ಮುಖದ ಅಥವಾ ದೇಹದ ಆಕಾರವನ್ನು ಬದಲಾಯಿಸಲು ಇತ್ತೀಚೆಗೆ ಹೆಚ್ಚಿನ ಜನರು ಪ್ಲಾಸ್ಟಿಕ್​​ ಸರ್ಜರಿ (Plastic surgery) ಮಾಡಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬಳು ಬಾಲಕಿ ತನ್ನ 13 ನೇ ವಯಸ್ಸಿಗೆ ಪ್ಲಾಸ್ಟಿಕ್​​ ಸರ್ಜರಿಯ ಆಕರ್ಷಣೆಗೆ ಒಳಗಾಗಿದ್ದು, ಇದೀಗಾಗಲೇ 5ವರ್ಷದಲ್ಲಿ 100 ಪ್ಲಾಸ್ಟಿಕ್​ ಸರ್ಜರಿ ಮಾಡಿಸಿದ್ದಾಳೆ. ಇದಕ್ಕಾಗಿ ಈವರೆಗೆ 563,000 ಡಾಲರ್ ಅಂದರೆ ಸುಮಾರು 4 ಕೋಟಿಗಳಷ್ಟು ಹಣವನ್ನು ಖರ್ಚು ಮಾಡಿದ್ದಾಳೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ನಿವಾಸಿ ಝೌ ಚುನಾ ಎಂಬ ಈ ಹುಡುಗಿ 13 ನೇ ವಯಸ್ಸಿನಿಂದ ಪ್ಲಾಸ್ಟಿಕ್ ಸರ್ಜರಿಗೆ ವ್ಯಸನಿಯಾಗಿದ್ದಳು. ಅಂದರೆ ಈಗ ಈಕೆಗೆ 18 ವರ್ಷ. ಆಕೆ ತನ್ನ ನೆಚ್ಚಿನ ನಟಿ ಎಥೆಲ್ ಯು ಅವರಂತೆ ಸುಂದರವಾಗಿ ಕಾಣಲು ಇಲ್ಲಿಯವರೆಗೆ 100 ಸರ್ಜರಿಗಳನ್ನು ಮಾಡಿಸಿದ್ದಾಳೆ ಎಂಬುದು ತಿಳಿದುಬಂದಿದೆ.

ಝೌ ಚುನಾ

ಝೌ ಇಂಟರ್ನ್ಯಾಷನಲ್ ಸ್ಕೂಲ್ ಆಫ್ ಶಾಂಘೈನಲ್ಲಿ ವ್ಯಾಸಂಗ ಮಾಡುತ್ತಿರುವ ದಿನದಿಂದ ತನ್ನ ತರಗತಿಯಲ್ಲಿ ತನಗಿಂತ ಸುಂದರವಾಗಿ ಯಾರು ಕೂಡ ಇರಬಾರದು ಎಂದು ಮುಖದ ಆಕಾರವನ್ನು ಬದಲಾಯಿಸಲು ಪ್ಲಾಸ್ಟಿಕ್​​ ಸರ್ಜರಿ ಮಾಡಿಸುತ್ತಾ ಬಂದಿದ್ದಾಳೆ.

ಇದನ್ನೂ ಓದಿ: ನಿಮಗಿದು ಗೊತ್ತೆ? ಸುಟ್ಟ ಗಾಯಗಳಿಗೆ ರಾಮ ಬಾಣ ಈ ವಿಶೇಷ ಮೀನಿನ ಚರ್ಮ!

ಈಗಾಗಲೇ ಕಣ್ಣುಗಳ ಆಕಾರ ಬದಲಾಯಿಸಲು 10 ಬಾರಿ ಸರ್ಜರಿಗಳನ್ನು ಮಾಡಿಸಿದ್ದಾಳೆ. ಇದಲ್ಲದೇ ಗುಂಡು ಮುಖವನ್ನು ಬದಲಾಯಿಸಲು ಬೋನ್​​ ಶೇವಿಂಗ್​​​ ಕೂಡ ಮಾಡಿಸಿಕೊಂಡಿದ್ದು, ಇದು ಅತ್ಯಂತ ನೋವಿನ ಶಸ್ತ್ರ ಚಿಕಿತ್ಸೆ ಎಂದು ಝೌ ಚುನಾ ಹೇಳಿಕೊಂಡಿದ್ದಾಳೆ. ಕೇವಲ 15 ವರ್ಷದಲ್ಲೇ ಬೋನ್​​ ಶೇವಿಂಗ್ ಶಸ್ತ್ರಕ್ರಿಯೆಗೆ ಒಳಗಾಗಿದ್ದ ಈಕೆ 10 ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ 15 ದಿನಗಳ ಕಾಲ ಹಾಸಿಗೆಯಲ್ಲಿಯೇ ಇದ್ದಳು ಎಂದು ತಿಳಿದುಬಂದಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:00 am, Tue, 5 March 24

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ