Viral Video: ಬೆಂಗಳೂರಿನಲ್ಲಿದೆ ಫೇಮಸ್ ಹೋಮ್ ಮೇಡ್  ಐಸ್ಕ್ರೀಮ್, ಇದು ಕಾಲೇಜು ಮಕ್ಕಳ ಫೇವರೇಟ್ ಸ್ಪಾಟ್ 

ಅಬ್ಬಬ್ಬಾ ಈ ಸುಡು ಬೇಸಿಗೆಯಲ್ಲಿ ಐಸ್ಕ್ರೀಮ್ ಜೀವಕ್ಕೆ ನೆಮ್ಮದಿ ನೀಡುತ್ತದೆ ಎಂದು ಈ ಋತುವಿನಲ್ಲಿ ಹೆಚ್ಚಿನವರು ಪ್ರತಿನಿತ್ಯ ಊಟದ ನಂತರ ಐಸ್ಕ್ರೀಮ್ ತಿನ್ನುತ್ತಾರೆ. ನೀವು ಕೂಡಾ ಹಲವಾರು ಬಗೆಯ ಐಸ್ಕ್ರೀಮ್ಗಳನ್ನು ತಿಂದಿರುತ್ತೀರಿ ಅಲ್ವಾ. ಆದ್ರೆ ಇಂತಹ ಸಂಶ್ಲೇಷಿತ ರುಚಿ, ಘನೀಕರಿಸಿದ ಐಸ್ಕ್ರೀಮ್ ಗಳನ್ನು ಸವಿದು ಸಾಕಾಗಿದೆ. ಈ ಬೇಸಿಗೆಯಲ್ಲಿ ನೈಸರ್ಗಿಕ ಪದಾರ್ಥಗಳೊಂದಿಗೆ ಹಾಲಿನಿಂದ ತಯಾರಿಸಿದಂತಹ ಆರೋಗ್ಯಕರ ಐಸ್ಕ್ರೀಮ್ ಸವಿಯಬೇಕು ಅಂತಿದ್ದರೆ, ಬೆಂಗಳೂರಿನ ಈ ಹೋಮ್ಮೇಡ್ ಐಸ್ಕ್ರೀಮ್ ಪಾರ್ಲರ್ಗೆ ಭೇಟಿ ನೀಡಬಹುದು.  

Viral Video: ಬೆಂಗಳೂರಿನಲ್ಲಿದೆ ಫೇಮಸ್ ಹೋಮ್ ಮೇಡ್  ಐಸ್ಕ್ರೀಮ್, ಇದು ಕಾಲೇಜು ಮಕ್ಕಳ ಫೇವರೇಟ್ ಸ್ಪಾಟ್ 
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 05, 2024 | 12:51 PM

ಐಸ್ ಕ್ರೀಮ್ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ, ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವವರವರೆಗೂ ಎಲ್ಲರೂ ಇಷ್ಟಪಡುತ್ತಾರೆ. ಇನ್ನೂ ಈ ಬೇಸಿಗೆಯಲ್ಲಂತೂ ಐಸ್ ಕ್ರೀಮ್ ಎಷ್ಟು ತಿಂದ್ರೂ ಸಾಕಗಲ್ಲ ಅಂತ ಹಲವರು ಹೇಳುತ್ತಿರುತ್ತಾರೆ. ನೀವು ಕೂಡಾ ಹಲವಾರು ಫ್ಲೇವರ್​​​ಗಳು, ವಿಭಿನ್ನ ರುಚಿಯ ಬೇರೆ ಬೇರೆ ಕಂಪೆನಿಗಳ ಐಸ್ಕ್ರೀಮ್​​​​ಗಳನ್ನು ಸವಿದಿರುತ್ತೀರಿ ಅಲ್ವಾ. ಆದ್ರೆ ನೀವು ಎಂದಾದರೂ ನಮ್ಮ  ಬೆಂಗಳೂರಿನಲ್ಲಿಯೇ ಸಿಗುವಂತಹ ಈ ಒಂದು ಹೋಮ್ಮೇಡ್  ಐಸ್ಕ್ರೀಮ್ ಅನ್ನು ಸವಿದಿದ್ದೀರಾ?  ಯಾವುದಪ್ಪಾ ಈ ಐಸ್ಕ್ರೀಮ್ ಅಂತ ಯೋಚ್ನೆ ಮಾಡ್ತಿದ್ದೀರಾ, ಈ ಕುರಿತ ಮಾಹಿತಿ ಇಲ್ಲಿದೆ.

ಈ ಫೇಮಸ್  ಹೋಮ್ ಮೇಡ್  ಐಸ್ಕ್ರೀಮ್ ಹೆಸರು ʼಅಮೃತ್ ಐಸ್ ಕ್ರೀಮ್ʼ. ಮಲ್ಲೇಶ್ವರದಲ್ಲಿರುವ ಈ ಐಸ್ಕ್ರೀಮ್ ಪಾರ್ಲರ್ ಶಾಲಾ ಹಾಗೂ ಕಾಲೇಜು ಮಕ್ಕಳ ಫೇವರೇಟ್ ಸ್ಪಾಟ್ ಅಂತಾನೇ ಹೇಳಬಹುದು. ಈ  ಫೇಮಸ್ ಐಸ್ಕ್ರೀಮ್ ಫ್ಯಾಕ್ಟರಿಯ ಸ್ಥಾಪಕರು ಎಂ.ಎನ್ ಸಾರಥಿ.  ನ್ಯಾಷನಲ್  ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ಅಲ್ಲಿ ಕಾರ್ಯನಿವರ್ಹಿಸಿದಂತಹ ಎಂ.ಎನ್ ಸಾರಥಿಯವರು ಡೆನ್ಮಾರ್ಕ್ ಗೆ ಹೋಗಿ ಅಲ್ಲಿ ಐಸ್ಕ್ರೀಮ್ ತಯಾರಿಸುವಂತಹ ಕಲೆಯನ್ನು ಕಲಿತು 1993ರಲ್ಲಿ ಮಲ್ಲೇಶ್ವರದಲ್ಲಿ ಹೋಮ್ಮೇಡ್ ಐಸ್ಕ್ರೀಮ್ ಶಾಪ್ ಅನ್ನು ತೆರೆಯುತ್ತಾರೆ. ಅಷ್ಟೇ ಅಲ್ಲದೇ ಈ ಕಲೆಯನ್ನು ತಮ್ಮ ಮಗನಾದ ಎಂ.ಎನ್ ರಾಮ ಪ್ರಿಯಮ್ ಅವರಿಗೂ ಕಲಿಸಿಕೊಡುತ್ತಾರೆ. ಪ್ರಸ್ತುತ ರಾಮಪ್ರಿಯಮ್ ಅವರು ಈ ಒಂದು ಐಸ್ ಕ್ರೀಮ್ ಫ್ಯಾಕ್ಟರಿಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಇಲ್ಲಿನ ಇನ್ನೊಂದು ವಿಶೇಷವೆಂದರೆ  ಯಾವುದೇ ಸ್ಟೇಬಿಲೈಸರ್ ಸೇರಿಸದರೆ ಹಾಲು ಮತ್ತು ಹಾಲಿನ ಕೊಬ್ಬನ್ನು ಬಳಸಿ ಸಾಂದ್ರದಾಯಿಕ ಶೈಲಿಯಲ್ಲಿ ಆರೋಗ್ಯಕ  ಐಸ್ಕ್ರೀಮ್ ತಯಾರಿಸುತ್ತಾರೆ. ಅಷ್ಟೇ ಅಲ್ಲದೆ ಬರೀ ಕುಟುಂಬ ಸದಸ್ಯರೇ ಸೇರಿ ಪ್ರತಿನಿತ್ಯ ಫ್ರೆಶ್ ಐಸ್ಕ್ರೀಮ್ ತಯಾರು ಮಾಡುತ್ತಾರೆ.

ಈ ವಿಶೇಷ  ಐಸ್ಕ್ರೀಮ್ ಶಾಪ್ ಕುರಿತ ವಿಡಿಯೋವನ್ನು    ಬ್ಲಾಗರ್  ಕಿರಣ್ ಕೆ.ಆರ್ (@mix_media_kannada) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಅಮೃತ್ ಐಸ್ಕ್ರೀಮ್ ಓನರ್ ರಾಮ್ ಪ್ರಿಯಮ್ ಅವರು ತಮ್ಮ ಐಸ್ಕ್ರೀಮ್ ಫ್ಯಾಕ್ಟರಿಯ ಬಗ್ಗೆ ತಿಳಿಸಿಕೊಡುತ್ತಿರುವ ದೃಶ್ಯವನ್ನು ಕಾಣಬಹುದು. ಅವರು ಹೇಳುತ್ತಾರೆ, ನಮ್ಮ ತಂದೆಯವರು ಡೆನ್ಮಾರ್ಕ್ ನಲ್ಲಿ ಐಸ್ಕ್ರೀಮ್ ತಯಾರಿಸುವ ಕಲೆಯನ್ನು ಕಲಿತು, ಬೆಂಗಳೂರಿನಲ್ಲಿ ಐಸ್ ಕ್ರೀಮ್ ಫ್ಯಾಕ್ಟರಿಯನ್ನು ಶುರು ಮಾಡಿದ್ರು, ಜೊತೆಗೆ ನನಗೂ ಈ ಕಲೆಯನ್ನು ಕಲಿಸಿದ್ರು. ಇಂದಿಗೂ ನಾವು ಕುಟುಂಬ ಸದಸ್ಯರೇ ಸೇರಿ ಐಸ್ ಕ್ರೀಮ್ ತಯಾರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಪ್ರತಿನಿತ್ಯ ಫ್ರೆಶ್ ಐಸ್ಕ್ರೀಮ್ ತಯಾರು ಮಾಡುತ್ತೇವೆ. ಮತ್ತು ಯಾವುದೇ ಸ್ಟೇಬಿಲೈಸರ್  ಸೇರಿಸದೆ ಬರೀ ಹಾಲು ಮತ್ತು ಹಾಲಿನ ಕೊಬ್ಬನ್ನು ಬಳಸಿ ಆರೋಗ್ಯಕರ ಆವೃತ್ತಿಯ ಐಸ್ಕ್ರೀಮ್   ತಯಾರಿಸುತ್ತೇವೆ. ವೈದ್ಯರೂ  ಕೂಡಾ ಶೀತ, ಕೆಮ್ಮಿನ ಸಂದರ್ಭದಲ್ಲಿ ನಮ್ಮ  ಐಸ್ಕ್ರೀಮ್   ತಿನ್ನಬಹುದು ಎಂದು ರೆಕಮೆಂಡ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇದು ಆಲ್ ಓವರ್ ವರ್ಲ್ಡ್ ಫೇಮಸ್ ಆಗಿದ್ದು,  ಅಮೇರಿಕಾ ಇಂಗ್ಲೇಂಡಿನಿಂದ ಬಂದೂ ಇಲ್ಲಿ ಐಸ್ ಕ್ರೀಮ್ ತಿನ್ನುತ್ತಾರೆ ಎಂಬ ವಿಚಾರವನ್ನು ತಿಳಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಬರ್ಗರ್ ಕೊಟ್ಟು 20 ವರ್ಷದ ಯುವತಿಯನ್ನು ಮದುವೆಯಾದ ವ್ಯಕ್ತಿ

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಒಂದುವರೆ ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಾಮೆಂಟ್ಸ್ಗಳೂ ಹರಿದುಬಂದಿವೆ. ʼಒಬ್ಬ ಬಳಕೆದಾರರು ನನ್ನ ಶಾಲಾ ದಿನಗಳಲ್ಲಂತೂ ಇಲ್ಲಿ ಪ್ರತಿನಿತ್ಯ ಐಸ್ ಕ್ರೀಮ್ ತಿನ್ನುತ್ತಿದೆ” ಎಂದು ಹೇಳಿದ್ದಾರೆ. ಕೆಲವರು ಐಸ್ ಕ್ರೀಮ್ ಟೇಸ್ಟ್ ಅಂತೂ ತುಂಬಾ ಅದ್ಭುತವಾಗಿದೆ ಎಂದು ಹೇಳಿದರೆ, ಇನ್ನೂ ಕೆಲವರು ಐಸ್ ಕ್ರೀಮ್ ಪ್ಲೇವರ್ಸ್ ಅಷ್ಟೇನೂ ಚೆನ್ನಾಗಿಲ್ಲ ಅಂತ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ