Viral Video: ಹೋಟೆಲ್ ಸಿಬ್ಬಂದಿ ಎಡವಟ್ಟು, ಮೌತ್ ಫ್ರೆಶ್ನರ್ ಬದಲಿಗೆ  ಡ್ರೈ ಐಸ್ ಸೇವಿಸಿ  ಅಸ್ವಸ್ಥರಾದ ಐವರು 

Dry ice as ‘mouth freshener’: ಹೋಟೆಲ್​​​ಗಳಲ್ಲಿ ಊಟದ ನಂತರ ಮೌತ್ ಫ್ರೆಶ್ನರ್  ನೀಡಲಾಗುತ್ತದೆ. ಆದರೆ ಇನ್ನು ಮುಂದೆ ಇದು ನಿಜವಾಗಿಯೂ ಮೌತ್ ಫ್ರೆಶ್ನರ್ ಆಗಿದೆಯೇ ಎಂದು ಪರಿಶೀಲಿಸಬೇಕಾದಂತಹ ಸ್ಥಿತಿ ಎದುರಾಗಿದೆ. ಏಕೆಂದರೆ ಇಲ್ಲೊಂದು ರೆಸ್ಟೋರೆಂಟ್ ಸಿಬ್ಬಂದಿಯ ಎಡವಟ್ಟಿನಿಂದ ಮೌತ್ ಫ್ರೆಶ್ನರ್ ಬದಲಿಗೆ ಡ್ರೈ ಐಸ್ ಸೇವಿಸಿದ ಐವರು ಸ್ನೇಹಿತರು  ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದಂತಹ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. 

Viral Video: ಹೋಟೆಲ್ ಸಿಬ್ಬಂದಿ ಎಡವಟ್ಟು, ಮೌತ್ ಫ್ರೆಶ್ನರ್ ಬದಲಿಗೆ  ಡ್ರೈ ಐಸ್ ಸೇವಿಸಿ  ಅಸ್ವಸ್ಥರಾದ ಐವರು 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 05, 2024 | 3:04 PM

ಭರ್ಜರಿ ಭೋಜನದ ನಂತರ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಗ್ರಾಹಕರಿಗೆ ಮೌತ್ ಫ್ರೆಶ್ನರ್ ಗಳನ್ನು ನೀಡಲಾಗುತ್ತದೆ. ಇದೀಗ ಅದೇ ರೀತಿ  ಹೋಟೆಲ್ ಸಿಬ್ಬಂದಿ ನೀಡಿದ ಮೌತ್ ಫ್ರೆಶ್ನರ್ ಸೇವಿಸಿದ ಸ್ನೇಹಿತರ ಗುಂಪೊಂದು  ರಕ್ತ ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದ್ದು, ಇಲ್ಲಿನ  ಸೆಕ್ಟೆರ್ 90 ರಲ್ಲಿರುವ ಲಾಫೋರೆಸ್ಟಾ ಕೆಫೆಗೆ ಖುಷಿ ಖುಷಿಯಾಗಿ ಊಟಕ್ಕೆ ಹೋಗಿದ್ದ ಸ್ನೇಹಿತರ ಗುಂಪೊಂದು  ಹೋಟೇಲ್ ಸಿಬ್ಬಂದಿಯ ಎಡವಟ್ಟಿನಿಂದ ಮೌತ್ ಫ್ರೆಶ್ನರ್ ಬದಲಿಗೆ ಡ್ರೈ ಐಸ್ ಸೇವಿಸಿ ಅಸ್ವಸ್ಥರಾಗಿದ್ದಾರೆ.

ನಿಖರವಾಗಿ ಏನಾಯಿತು:

ನೋಯ್ಡಾದ ಅಂಕಿತ್ ಕುಮಾರ್, ಎಂಬವರು   ಶನಿವಾರ ರಾತ್ರಿ (ಮಾರ್ಚ್ 02)  ತನ್ನ ಪತ್ನಿ ಮತ್ತು ಸ್ನೇಹಿತರೊಂದಿಗೆ  ಗುರುಗ್ರಾಮದ  ಸೆಕ್ಟರ್ 90ರಲ್ಲಿರುವ ಲಾಫೋರೆಸ್ಟಾ ಕೆಫೆಗೆ ತೆರಳಿದ್ದರು. ಅಲ್ಲಿ ಊಟದ ಬಳಿಕ ಸಿಬ್ಬಂದಿ ಕೊಟ್ಟಂತಹ ಮೌತ್ ಫ್ರೆಶ್ನರ್ ಅನ್ನು ಅಂಕಿತ್ ಅವರ ಸ್ನೇಹಿತರು ಸೇವನೆ ಮಾಡಿದ್ದಾರೆ.  ಇದನ್ನು ಸೇವಿಸಿದ ಸ್ವಲ್ಪ ಹೊತ್ತಿನ  ಬಳಿಕ ಅವರೆಲ್ಲರಿಗೂ ಬಾಯಲ್ಲಿ ಉರಿಯುಂಟಾಗಿದ್ದು ಮಾತ್ರವಲ್ಲದೆ,  ಬಾಯಿ ಸಂಪೂರ್ಣವಾಗಿ ಸುಟ್ಟು ಹೋಗಿ  ರಕ್ತ ಕಾರಿದ್ದಾರೆ. ಅವರ ಸ್ಥಿತಿ ಗಂಭೀರವಾಗುತ್ತಿದ್ದಂತೆ ತಕ್ಷಣ  ಅವರೆಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಅವರ ಸೇವಿಸಿದಂತಹ ಮೌತ್ ಫ್ರೆಶ್ನರ್  ಅನ್ನು ಪರಿಶೀಲಿಸಿದ ವೈದ್ಯರು ಇದು ಮೌತ್ ಫ್ರೆಶ್ನರ್ ಅಲ್ಲ, ಇದು ಡ್ರೈ ಐಸ್ ಆಗಿದ್ದು, ಇದರಲ್ಲಿ ಸಾವಿಗೆ ಕಾರಣವಾಗುವಂತಹ ಒಂದು ರೀತಿಯ ಆಸಿಡ್ ಕೂಡಾ ಇದೆ ಎಂಬ ಆಘಾತಕಾರಿ ಮಾಹಿತಿಯನ್ನು ತಿಳಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತು ಅಂಕಿತ್ ಕುಮಾರ್ ಪೊಲೀಸರಿಗೆ ದೂರನ್ನು ನೀಡಿದ್ದು, ಅವರ ಸ್ಥಿತಿ ಹದಗೆಟ್ಟಿದ್ದರೂ ರೆಸ್ಟೋರೆಂಟ್ ಆಡಳಿತ ಮಂಡಳಿ ನಮ್ಮ ಸಹಾಯಕ್ಕೆ ಬಾರದೆ ಬೇಜವಾಬ್ದಾರಿತನವನ್ನು ತೋರಿಸಿದ್ದಾರೆ ಎಂದು ಅಂಕಿತ್ ಕುಮಾರ್ ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ ಭಾನುವಾರ ಖೇರ್ಕಿ ದೌಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 328 ಮತ್ತು 120-ಬಿ ಅಡಿಯಲ್ಲಿ  ಎಫ್.ಐ.ಆರ್  ದಾಖಲಿಸಿದ್ದು, ಹೋಟೇಲ್ ಸಿಬ್ಬಂದಿ  ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿದೆ ಫೇಮಸ್ ಹೋಮ್ ಮೇಡ್ ಐಸ್ಕ್ರೀಮ್, ಇದು ಕಾಲೇಜು ಮಕ್ಕಳ ಫೇವರೇಟ್ ಸ್ಪಾಟ್

ಅಷ್ಟಕ್ಕೂ ಈ ಡ್ರೈ ಐಸ್ ಎಂದರೇನು?

ಡ್ರೈ ಐಸ್ ಅನ್ನು ಹೋಟೆಲ್, ರೆಸ್ಟೋರೆಂಟ್ ಮತ್ತು ಬಾರ್ ಗಳಲ್ಲಿ ಆಹಾರ  ಪದಾರ್ಥಗಳ ಸಂರಕ್ಷಣೆಗಾಗಿ ಹೆಚ್ಚಾಗಿ ಬಳಸಲಾಗುತ್ತದೆ.  ಘನ ರೂಪದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಅನ್ನು ಡ್ರೈ ಐಸ್ ಎಂದು ಕರೆಯುತ್ತಾರೆ.  ಕಾರ್ಬನ್ ಡೈ ಆಕ್ಸೈಡ್ ಅನ್ನು ದ್ರವ ರೂಪಕ್ಕೆ ತಂದು  -70 ಡಿಗ್ರಿ ಸೆಲ್ಸಿಯಸ್ ಅಲ್ಲಿ ತಂಪು ಮಾಡಿದಾಗ ಇದು ಘನ ರೂಪಕ್ಕೆ ಬಂದು ಡ್ರೈ ಐಸ್ ಆಗುತ್ತದೆ.  ಇದರ ತಾಮಮಾನವು -78.5 ಡಿಗ್ರಿ ಸೆಲ್ಸಿಯಸ್ ಇದ್ದು, ಇದನ್ನೇನಾದರೂ ಬರಿಗೈಯಲ್ಲಿ ಮುಟ್ಟಿದ್ರೆ, ನಮ್ಮ ಚರ್ಮವೇ ಸುಟ್ಟು ಹೋಗುತ್ತದೆ. ಇದು ಕರಗದ ಅದರ ವಿಶಿಷ್ಟ ಗುಣಲಕ್ಷಣಕ್ಕಾಗಿ ಹೆಸರುವಾಸಿಯಾಗಿದೆ.

ಈ ಘಟನೆಯ ಕುರಿತ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಡ್ರೈ ಐಸ್ ತಿಂದಂತಹ ಅಂಕಿತ್ ಸ್ನೇಹಿತರು ಬಾಯಿಯಲ್ಲಿನ ಸುಟ್ಟ ಗಾಯಗಳ ನೋವನ್ನು ತಡೆಯಲಾರದೆ ಜೋರಾಗಿ ಅಳುತ್ತಿರುವ  ಹಾಗೂ ರಕ್ತ ವಾಂತಿ ಮಾಡುತ್ತಿರುವಂತಹ ಹೃದಯವಿದ್ರಾವಕ ದೃಶ್ಯವನ್ನು ಕಾಣಬಹುದು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ