Video: ಲಿಪ್ಸ್ಟಿಕ್ ಅನ್ನು ಬ್ಲಶ್ ಆಗಿ ಬಳಸುವ ಅಭ್ಯಾಸ ನಿಮಗಿದೆಯಾ?
ಲಿಪ್ಸ್ಟಿಕ್ ಉತ್ಪನ್ನಗಳು ಕಾಮೆಡೋಜೆನಿಕ್ ಅಂಶಗಳನ್ನು ಒಳಗೊಂಡಿರುತ್ತವೆ, ಅದು ಚರ್ಮದ ರಂಧ್ರಗಳನ್ನು ಮುಚ್ಚಿ ಮೊಡವೆ ಅಥವಾ ಒಡೆಯುವಿಕೆಗೆ ಕಾರಣವಾಗಬಹುದು. ಎಸ್ಜಿಮಾ ಅಥವಾ ಕೆಲ ಚರ್ಮದ ಸಮಸ್ಯೆಗಳನ್ನು ಹೊಂದಿರುವ ಜನರು ಲಿಪ್ಸ್ಟಿಕ್ ಅನ್ನು ಬ್ಲಶ್ ಆಗಿ ಬಳಸುವ ಅಭ್ಯಾಸವನ್ನು ಇಂದೇ ಬಿಟ್ಟು ಬಿಡಿ ಎಂದು ತಜ್ಞರು ಎಚ್ಚರಿಸುತ್ತಾರೆ.
ಸಾಕಷ್ಟು ಜನರು ಮೇಕಪ್ ಮಾಡಿದ ಬಳಿಕ ಕೆನ್ನೆ ಹೊಳೆಯುವಂತೆ ಮಾಡಲು ಲಿಪ್ಸ್ಟಿಕ್ ಅನ್ನು ಬ್ಲಶ್ ಆಗಿ ಬಳಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ಅಭ್ಯಾಸ ನಿಮ್ಮ ಚರ್ಮದ ಮೇಲೆ ಹಾನಿಕಾರಕ ಪರಿಣಾಮವನ್ನುಂಟು ಮಾಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. “ತುಟಿಗೆ ಬಳಸುವ ಉತ್ಪನ್ನಗಳನ್ನು ಬ್ಲಶ್ ಅಥವಾ ಐಶ್ಯಾಡೋ ಆಗಿ ಬಳಸುವಾಗ ನೀವು ಜಾಗರೂಕರಾಗಿರಬೇಕು” ಎಂದು ಬೆಂಗಳೂರಿನ ಪ್ರಾಮ್‌ಮೆಡ್ ಎಸ್ತಟಿಕ್ಸ್ ನ ಸಂಸ್ಥಾಪಕರಾದ ಚರ್ಮರೋಗ ತಜ್ಞ ಡಾ ಆಕಾಂಕ್ಷಾ ಸಿಂಗ್ ಹೇಳುತ್ತಾರೆ.
ತುಟಿಗೆ ಬಳಸುವ ಲಿಪ್ಸ್ಟಿಕ್ಗಳಂತಹ ಉತ್ಪನ್ನಗಳಲ್ಲಿರುವ ಪದಾರ್ಥಗಳು, ಸುಗಂಧ ಅಥವಾ ಕೆಲವು ಬಣ್ಣಗಳು, ಕಣ್ಣುಗಳು ಅಥವಾ ಕೆನ್ನೆಗಳಂತಹ ಹೆಚ್ಚು ಸೂಕ್ಷ್ಮ ಪ್ರದೇಶಗಳನ್ನು ಕೆರಳಿಸಬಹುದು ಮತ್ತು ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು, ಇದರ ಪರಿಣಾಮವಾಗಿ ಚರ್ಮ ಕೆಂಪಾಗುವುದು, ತುರಿಕೆ ಅಥವಾ ಊತ ಉಂಟಾಗಬಹುದು.
View this post on Instagram
ಇದನ್ನೂ ಓದಿ: ಈ ಹೆಡ್ ಪೋನ್ ಬೆಲೆ ಕೇಳಿದ್ರೆ ನೀವು ಶಾಕ್ ಆಗುವುದಂತೂ ಖಂಡಿತಾ
ಕೆಲವು ಲಿಪ್ಸ್ಟಿಕ್ ಉತ್ಪನ್ನಗಳು ಕಾಮೆಡೋಜೆನಿಕ್ ಅಂಶಗಳನ್ನು ಒಳಗೊಂಡಿರುತ್ತವೆ, ಅದು ಚರ್ಮದ ರಂಧ್ರಗಳನ್ನು ಮುಚ್ಚಿಮತ್ತು ಎಣ್ಣೆ ಗ್ರಂಥಿಗಳಿರುವ ಪ್ರದೇಶಗಳಿಗೆ ಅನ್ವಯಿಸಿದಾಗ ಮೊಡವೆ ಅಥವಾ ಒಡೆಯುವಿಕೆಗೆ ಕಾರಣವಾಗಬಹುದು. ಜೊತೆಗೆ ಇದು ಶುಷ್ಕತೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಎಸ್ಜಿಮಾ ಅಥವಾ ಕೆಲ ಚರ್ಮದ ಸಮಸ್ಯೆಗಳನ್ನು ಹೊಂದಿರುವ ಜನರು ಲಿಪ್ಸ್ಟಿಕ್ ಅನ್ನು ಬ್ಲಶ್ ಆಗಿ ಬಳಸುವ ಅಭ್ಯಾಸವನ್ನು ಇಂದೇ ಬಿಟ್ಟು ಬಿಡಿ ಎಂದು ತಜ್ಞರು ಎಚ್ಚರಿಸುತ್ತಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ