Viral Video: ನಿಮಗಿದು ಗೊತ್ತೆ? ಸುಟ್ಟ ಗಾಯಗಳಿಗೆ ರಾಮ ಬಾಣ ಈ ವಿಶೇಷ ಮೀನಿನ ಚರ್ಮ!

ದುರಾದೃಷ್ಟವಶಾತ್ ಅಡುಗೆ ಮಾಡುವಾಗಲೋ, ಪಟಾಕಿ ಸಿಡಿಸುವಾಗಲೋ ಅಥವಾ ಭಾರೀ ಪ್ರಮಾಣದ ಬೆಂಕಿ ಅವಘಡವಾದಂತಹ ಸಂದರ್ಭದಲ್ಲಿ ಕೆಲವೊಬ್ಬರು ಈ ಅಪಘಾತಕ್ಕೆ ತುತ್ತಾಗಿ ಅವರ ಮೈ ಮೇಲೆ ಸುಟ್ಟ ಗಾಯಗಳಾಗುತ್ತವೆ. ಈ ಸುಟ್ಟ ಗಾಯಗಳಿಗೆ ಹಾಗೂ ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುವ  ಪಾದದ ಹುಣ್ಣು ಸಮಸ್ಯೆಗಳಿಗೆ ಟಿಲಾಪಿಯಾ ಮೀನಿನ ಚರ್ಮವನ್ನು ಬಳಸಿ ಚಿಕಿತ್ಸೆ ನೀಡಿದರೆ ಸುಟ್ಟ ಗಾಯಗಳು ಬಹುಬೇಗನೇ ನಿವಾರಣೆಯಾಗುತ್ತವೆಯಂತೆ. ಈ ಕುರಿತ ಇಂಟೆರೆಸ್ಟಿಂಗ್ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್  ಆಗುತ್ತಿದೆ.  

Viral Video: ನಿಮಗಿದು ಗೊತ್ತೆ? ಸುಟ್ಟ ಗಾಯಗಳಿಗೆ ರಾಮ ಬಾಣ ಈ ವಿಶೇಷ ಮೀನಿನ ಚರ್ಮ!
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 04, 2024 | 5:42 PM

ವೈದ್ಯಕೀಯ  ಕ್ಷೇತ್ರದಲ್ಲಿ ಪ್ರತಿನಿತ್ಯ ಹಲವಾರು ಸಂಶೋಧನೆಗಳು ನಡೆಯುತ್ತಿರುತ್ತವೆ. ಹಂದಿ ಹೃದಯ ಕಸಿಯಿಂದ ಹಿಡಿದು ಪ್ರಣಾಳ ಶಿಶುವಿನ ಜನನದ ವರೆಗೂ ಹಲವಾರು ಸಂಶೋಧನೆಗಳನ್ನು ಇದಾಗಲೇ ನಡೆಸಲಾಗಿದೆ. ಇದೀಗ ಅದೇ ರೀತಿ ಸುಟ್ಟ ಗಾಯಗಳಿಗೆ ಟಿಲಾಪಿಯಾ ಮೀನಿನ ಚರ್ಮದಿಂದ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಬಹುದು ಎಂಬುದನ್ನು ಸಂಶೋಧಕರು ತಿಳಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮೊದಲ ಬಾರಿಗೆ  ಬ್ರೆಜಿಲ್ ದೇಶದ  ವೈದ್ಯರು ಸುಟ್ಟ ಗಾಯಗಳನ್ನು ಗುಣಪಡಿಸಲು ಈ ವಿಶೇಷ ಚಿಕಿತ್ಸಾ ವಿಧಾನವನ್ನು ಬಳಸಿದರು. ಅವರು ಈ ವಿಶೇಷ ಮೀನಿನ ಚರ್ಮವನ್ನು ಸುಟ್ಟ ಗಾಯಗಳ ಮೇಲೆ ಬ್ಯಾಂಡೆಜ್ ರೀತಿಯಲ್ಲಿ ಸುತ್ತಿ ಚಿಕಿತ್ಸೆ ನೀಡುತ್ತಾರೆ.  ಈ ವಿಧಾನದ ಚಿಕಿತ್ಸೆಯಿಂದ  ರೋಗಿಗೆ ಹಲವು ಪ್ರಯೋಜನಗಳು ದೊರೆಯುತ್ತವೆ  ಎಂದು ವೈದ್ಯರು  ಹೇಳುತ್ತಾರೆ. ಹೌದು ಟಿಲಾಪಿಯಾ  ಮೀನಿನ ಚರ್ಮವು  ಸುಟ್ಟ ಗಾಯದ  ನೋವನ್ನು ನಿಯಂತ್ರಿಸುತ್ತದೆ ಮತ್ತು ಗಾಯಗಳನ್ನು ತ್ವರಿತವಾಗಿ ಗುಣಪಡಿಸುತ್ತದೆ ಅಷ್ಟೇ ಅಲ್ಲದೆ  ಸೋಂಕುಗಳಿಂದ ಚರ್ಮವನ್ನು  ರಕ್ಷಿಸುತ್ತದೆ.

ಈ ಮೀನಿನ ಚರ್ಮವನ್ನು  ಮೊದಲ ಬಾರಿಗೆ  2016 ರಲ್ಲಿ ಗಾಯಗಳನ್ನು ಗುಣಪಡಿಸಲು ಬಳಸಲಾಯಿತು. ಮರಿಯಾ ಇನೆಸ್ ಕ್ಯಾಂಡಿಯೊ ಎಂಬ ಮಹಿಳೆ ಟಿಲಾಪಿಯಾ ಮೀನಿನ ಚರ್ಮದ  ಚಿಕಿತ್ಸೆಯನ್ನು  ಪಡೆದ ಮೊದಲ  ಮಹಿಳೆಯಾಗಿದ್ದಾರೆ.

ಈ ಚಿಕಿತ್ಸೆ ಹೇಗೆ ಕಾರ್ಯನಿರ್ವಹಿಸುತ್ತದೆ?

ಟಿಲಾಪಿಯಾ ಮೀನು  ಸಿಹಿ ನೀರಿನಲ್ಲಿ ವಾಸಿಸುವ ಮೀನು.  ಈ ಮೀನಿನ ಚರ್ಮದಲ್ಲಿ ಹೆಚ್ಚಿನ ಮಟ್ಟದ ಕಾಲಜನ್ ಮತ್ತು ಉತ್ತಮ ಪ್ರಮಾಣದ ತೇವಾಂಶವೂ ಇದೆ. ಇದರಿಂದಾಗಿ ಈ ಮೀನಿನ ಚರ್ಮವು ಒಣಗಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ. ಇದು ಗಾಯಗಳನ್ನು ತ್ವರಿತವಾಗಿ ಗುಣಪಡಿಸುತ್ತದೆ ಮತ್ತು ಸುಟ್ಟ ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ. ಅಲ್ಲದೆ ಇದು ಸೋಂಕಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಈ ಕುರಿತ ಇಂಟರೆಸ್ಟಿಂಗ್ ವಿಡಿಯೋವೊಂದನ್ನು @Rainmaker1973 ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ನಿಮಗಿದು ಗೊತ್ತೆ? ಮೀನಿನ ಚರ್ಮವು ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಸುಟ್ಟ ಗಾಯಗಳು ಮತ್ತು ಮಧುಮೇಹದ ಕಾರಣದಿಂದ ಉಂಟಾಗುವ ಪಾದದ ಹುಣ್ಣುಗಳು ಸೇರಿದಂತೆ ವಿವಿಧ ಗಾಯಗಳನ್ನು ಗುಣಪಡಿಸಲು ಪರಿಣಾಮಕಾರಿ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುತ್ತದೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಸುಟ್ಟ ಗಾಯಗಳು ಸೇರಿದಂತೆ ಇತರೆ ಗಾಯಗಳಿಗೆ ಟಿಲಾಪಿಯಾ  ಮೀನಿನ ಚರ್ಮವನ್ನು ಬಳಸಿ ಹೇಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮತ್ತು ಈ ಚಿಕಿತ್ಸೆ ಹೇಗೆ ಪರಿಣಾಯಕಾರಿಯಾಗಿ ಕಾರ್ಯನಿರ್ವಹಿಸುತ್ತದೆ  ಎಂಬ ದೃಶ್ಯಾವಳಿಯನ್ನು ಕಾಣಬಹುದು.

ಇದನ್ನೂ ಓದಿ: ರಜನಿಕಾಂತ್ ಅಭಿಯಾನದ ಮುತ್ತು ಚಿತ್ರದ ʼಒರುವನ್ ಒರುವನ್ʼ ಹಾಡನ್ನು ಹಾಡಿದ 77ರ ವಿದೇಶಿ ವೃದ್ಧ 

ಮಾರ್ಚ್ 03 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 44 ಸಾವಿರಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ.  ಹಲವಾರು ಕಾಮೆಟ್ಸ್ಗಳೂ  ಹರಿದು ಬಂದಿವೆ. ಒಬ್ಬ ಬಳಕೆದಾರರು ʼಬ್ರೆಜಿಲಿಯನ್ ವೈದ್ಯಕೀಯ ಸಂಶೋಧನೆಯನ್ನು ಮೆಚ್ಚಲೇಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼವಾವ್ಹ್ ಇಂತಹ ಸಂಶೋಧನೆಗಳಿಂದ ರೋಗಿಗಳು ಗುಣಮಟ್ಟದ ಚಿಕಿತ್ಸೆಯನ್ನು ಪಡೆಯಲು ಸಹಾಯಕವಾಗಿದೆʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ