AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Burger Love Story: ಬರ್ಗರ್ ಕೊಟ್ಟು 20 ವರ್ಷದ ಯುವತಿಯನ್ನು ಮದುವೆಯಾದ ವ್ಯಕ್ತಿ

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಚಿತ್ರ ವಿಚಿತ್ರ ವಿಡಿಯೋಗಳು ಹರಿದಾಡತ್ತಿರುತ್ತವೆ. ಇಂತಹ ಕೆಲವೊಂದು ಸುದ್ದಿಗಳನ್ನು ನೋಡಿದಾಗ ಶಾಕ್ ಆಗುತ್ತದೆ. ಜೊತೆಗೆ ಅಂತಹ ಸುದ್ದಿಗಳು ನಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಸದ್ಯ ಅಂತಹದೊಂದು ವಿಡಿಯೋ ಇದೀಗ ಹರಿದಾಡುತ್ತಿದ್ದು, ಬರ್ಗರ್ ತಂದು ಕೊಟ್ಟ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದು, ಪಾಕಿಸ್ತಾನದ ಯುವತಿಯೊಬ್ಬಳು ತನಗಿಂತ 20 ವರ್ಷ ಹಿರಿಯ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ. ಈ ವಿಶಿಷ್ಟ ಪ್ರೇಮಕಥೆಯನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

Burger Love Story: ಬರ್ಗರ್ ಕೊಟ್ಟು 20 ವರ್ಷದ ಯುವತಿಯನ್ನು ಮದುವೆಯಾದ ವ್ಯಕ್ತಿ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Mar 05, 2024 | 10:50 AM

Share

ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕುರುಡು ಎಂಬೆಲ್ಲಾ ಮಾತಿದೆ. ಇದು ಆಗಾಗ್ಗೆ ವಿಚಿತ್ರ ಲವ್ ಸ್ಟೋರಿ, ಮದುವೆಗಳ ಮೂಲಕ ಸಾಬೀತಾಗುತ್ತಿರುತ್ತವೆ. ಹೌದು ಎಷ್ಟೇ ಪ್ರಾಯದವರರೂ ಕೂಡಾ ಪ್ರೀತಿ ಎಂಬ ಬಲೆಗೆ ಬೀಳುತ್ತಾರೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಯುವತಿಯೊಬ್ಬಳು ತನಗಿಂತ 20 ವರ್ಷ ಹಿರಿಯನನ್ನು ಪ್ರೇಮ ವಿವಾಹವಾಗಿದ್ದಾಳೆ. ಅದರಲ್ಲೂ ಇವರ ಲವ್ ಸ್ಟೋರಿಯಂತೂ ತುಂಬಾನೇ ಸ್ವಾರಸ್ಯಕರವಾಗಿದೆ. ಈ ಒಂದು ವಿಚಿತ್ರ ಲವ್ಸ್ಟೋರಿ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಸೋದರ ಸಂಬಂಧಿ ತಂದುಕೊಟ್ಟ ಬರ್ಗರ್ ತಿಂದು ಯುವತಿಯೊಬ್ಬಳಿಗೆ ಆತನ ಮೇಲೆ ಲವ್ ಆಗಿ ತನಗಿಂತ 20 ವರ್ಷ ದೊಡ್ಡವನಾದರೂ ಆತನನ್ನೇ ಮದುವೆಯಾಗಿದ್ದಾಳೆ. ಈ ಬರ್ಗರ್ ಪ್ರೇಮ ಕಥೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು @fadi_wri8s_ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “1 ಶವರ್ಮಾ+ ಝಿಂಗರ್ ಬರ್ಗರ್= ಲವ್” ಎಂಬ ತಮಾಷೆಯ ಶೀರ್ಷಿಕೆಯನ್ನು ಬರದುಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ;

View this post on Instagram

A post shared by Fahad Khan (@fadi_wri8s_)

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪಾಕಿಸ್ತಾನಿ ಯುವತಿಯೊಬ್ಬಳು ತನ್ನ ಸ್ವಾರಸ್ಯಕರ ಲವ್ ಸ್ಟೋರಿ ಬಗ್ಗೆ ವಿವರಿಸುತ್ತಿರು ದೃಶ್ಯವನ್ನು ಕಾಣಬಹುದು. ಆಕೆ ಹೇಳುತ್ತಾಳೆ, ಅವರು ನನ್ನ ಮನೆಗೆ ಬಂದಾಗ, ನಾನು ಅವರನ್ನು ಅಣ್ಣ ಎಂದು ಕರೆದಿದ್ದೆ. ಅವರು ನನ್ನ ಸೋದರ ಸಂಬಂಧಿ ಹಾಗಾಗಿ ನಾನು ಅವರನ್ನು ಖುರ್ರಾಂ ಭಾಯ್ ಖುರ್ರಾಂ ಭಾಯ್ ಎಂದು ಅವರನ್ನು ಕರೆಯುತ್ತಿದೆ. ಆದರೆ ಆ ಸಂದರ್ಭದಲ್ಲಿಅವರು ನನ್ನನ್ನು ನೀನು ಅಣ್ಣಾ ಎಂದು ಕರೆಯಬೇಡ ಎಂದು ಹೇಳಿದ್ದರು. ಜೊತೆಗೆ ನಿನಗೆ ಏನಾದರೂ ಬೇಕಿದ್ರೆ ನನ್ನ ಬಳಿ ಹೇಳು, ನಾನು ತಂದುಕೊಡುತ್ತೇನೆ ಎಂದು ಸಹ ಹೇಳಿದ್ದರು. ಆ ಬಳಿಕ ಒಂದು ದಿನ ಮನೆಯಲ್ಲಿ ಯಾರು ಇರಲಿಲ್ಲ, ತುಂಬಾ ಹಸಿವಾಗುತ್ತಿತ್ತು, ಆ ಸಮಯದಲ್ಲಿ ಅವರಿಗೆ ಫೋನ್ ಮಾಡಿ ನಾನು ಶವರ್ಮಾ ತರುವಂತೆ ಹೇಳಿದ್ದೆ. ಅವರು ಶವರ್ಮಾ ಮಾತ್ರವಲ್ಲದೆ ಝಿಂಗರ್ ಬರ್ಗರ್ ಅನ್ನು ಕೂಡಾ ತಂದು ಕೊಟ್ಟಿದ್ದರು. ಈ ಬರ್ಗರ್ ಎಷ್ಟು ರುಚಿಯಾಗಿತ್ತೆಂದರೆ, ಇದರಿಂದ ಖುಷಿಯಾಗಿ ಅವರಿಗೆ ನನ್ನ ಹೃದಯವನ್ನೇ ಕೊಟ್ಟೆ ಎಂದು ಯುವತಿ ತನ್ನ ಸ್ವಾರಸ್ಯಕರ ಲವ್ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ನಿಮಗಿದು ಗೊತ್ತೆ? ಸುಟ್ಟ ಗಾಯಗಳಿಗೆ ರಾಮ ಬಾಣ ಈ ವಿಶೇಷ ಮೀನಿನ ಚರ್ಮ!

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.9 ಮಿಲಿಯನ್ ವೀಕ್ಷಣೆಗಳನ್ನು 59 ಸಾವಿರಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಾಮೆಂಟ್ಸ್ಗಳೂ ಹರಿದುಬಂದಿವೆ. ʼಒಬ್ಬ ಬಳಕೆದಾರರು ಝಿಂಗರ್ ಬರ್ಗರ್ ನ ಶಕ್ತಿಯನ್ನು ಅಂಡರೆಸ್ಟಿಮೇಟ್ ಮಾಡಬೇಡಿʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಒಬ್ಬ ಬಳಕೆದಾರರು ʼಅಗ್ಗದ ಪ್ರೇಮಕಥೆʼ ಎಂಬ ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ವಿಶಿಷ್ಟ ಪ್ರೇಮಕಥೆಯನ್ನು ಕಂಡು ನಕ್ಕು ನಕ್ಕು ಸುಸ್ತಾಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:46 am, Tue, 5 March 24