Plastic Surgery Day 2023: ಪ್ಲಾಸ್ಟಿಕ್ ಸರ್ಜರಿ ದಿನ, ಪ್ಲಾಸಿಕ್ ಸರ್ಜರಿಯ ಕೆಲವೊಂದು ಮಿಥ್ಯ, ಸತ್ಯಗಳೇನು?

2011 ರಲ್ಲಿ ಮೊದಲ ಬಾರಿಗೆ ಭಾರತದ ಪ್ಲಾಸ್ಟಿಕ್ ಸರ್ಜನ ಗಳ ಸಂಘದ ಅದ್ಯಕ್ಷರಾದ ಡಾ. ಎಸ್. ರಾಜಾ ಸಬಾಪತಿ ಅವರು ರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. ರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿಯ ಈ ದಿನದಂದು ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಇರುವ ಕೆಲವು ಮಿಥ್ಯ ಹಾಗೂ ಅದರ ಸತ್ಯಾಂಶಗಳು ಏನೆಂಬುದರ ಬಗ್ಗೆ ತಿಳಿದುಕೊಳ್ಳೋಣ.

Plastic Surgery Day 2023: ಪ್ಲಾಸ್ಟಿಕ್ ಸರ್ಜರಿ ದಿನ, ಪ್ಲಾಸಿಕ್ ಸರ್ಜರಿಯ ಕೆಲವೊಂದು ಮಿಥ್ಯ, ಸತ್ಯಗಳೇನು?
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 15, 2023 | 4:52 PM

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಸರ್ಜರಿಯ ಪ್ರವೃತ್ತಿಯು ಬಹಳಷ್ಟು ಹೆಚ್ಚಾಗಿದೆ. ಅಲ್ಲದೆ ಪ್ಲಾಸ್ಟಿಕ್ ಸರ್ಜರಿಯು ಭಾರತದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ. ಏಕೆಂದರೆ ಈ ಪರಿಕಲ್ಪನೆ ಮೊದಲು ಹುಟ್ಟಿಕೊಂಡದ್ದು ಭಾರತದಲ್ಲಿ. ಪ್ರಾಚೀನ ವೈದ್ಯ ಮತ್ತು ಶಸ್ತ್ರಚಿಕಿತ್ಸಕ ಸುಶ್ರುತರನ್ನು ಪ್ಲಾಸ್ಟಿಕ್ ಸರ್ಜರಿಯ ಪಿತಾಮಹ ಎಂದು ಕರೆಯಲಾಗುತ್ತದೆ. ಜುಲೈ 15 ಅಂದರೆ ಇಂದು ಭಾರತದಲ್ಲಿ ರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿ ದಿನವನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ಪ್ಲಾಸ್ಟಿಕ್ ಸರ್ಜನ್ ಗಳ ಪಾತ್ರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಪ್ಲಾಸ್ಟಿಕ್ ಸರ್ಜರಿಯು ವಿಶೇಷ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ಅದು ಅಪಘಾತ ಅಥವಾ ಕಾಯಿಲೆಯಿಂದ ಹಾನಿಗೊಳಗಾದ ಅಂಗಗಳನ್ನು ಸರಿಪಡಿಸುವ ಅಂಶವನ್ನು ಒಳಗೊಂಡಿರುತ್ತದೆ.

ಪ್ಲಾಸ್ಟಿಕ್ ಸರ್ಜರಿ ದಿನದ ಇತಿಹಾಸ:

ಭಾರತದ ಪ್ಲಾಸ್ಟಿಕ್ ಸರ್ಜನ್​​ಗಳ ಸಂಘದ ಅಧ್ಯಕ್ಷರಾದ ಡಾ. ರಾಜಾ ಸಬಾಪತಿ ಅವರು 2011 ರಲ್ಲಿ ಭಾರತದಲ್ಲಿ ರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿಯ ದಿನದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. ಇದಾದ ನಂತರ 2021 ರಲ್ಲಿ ಮೊದಲ ಬಾರಿಗೆ ಜುಲೈ 15 ರಂದು ರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿಯ ದಿನವನ್ನು ಆಚರಿಸಲಾಯಿತು. 2022 ರಲ್ಲಿ ಜುಲೈ 15 ರಂದು ಪ್ರಪಂಚದಾದ್ಯಂತ ಪ್ಲಾಸ್ಟಿಕ್ ಸರ್ಜರಿಯ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು.

ಪ್ಲಾಸ್ಟಿಕ್ ಸರ್ಜರಿ ದಿನದ ಆಚರಣೆಯ ಮಹತ್ವ:

ಹೆಚ್ಚಿನ ಜನರು, ಪ್ಲಾಸ್ಟಿಕ್ ಸರ್ಜರಿಯು ಕಾಸ್ಮೆಟಿಕ್ ಸರ್ಜರಿಯಾಗಿದೆ ಮತ್ತು ಜನರು ಪ್ಲಾಸ್ಟಿಕ್ ಸರ್ಜನ್ ಗಳನ್ನು ಮುಖ್ಯವಾಗಿ ಕಾಸ್ಮೆಟಿಕ್ ಸರ್ಜನ್ ಗಳು ಎಂದು ಪರಿಗಣಿಸುತ್ತಾರೆ. ಹಾಗಾಗಿ ಈ ಗೊಂದಲವನ್ನು ನಿವಾರಿಸಲು ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಸಮಾಜದಲ್ಲಿ ಪ್ಲಾಸ್ಟಿಕ್ ಸರ್ಜನ್ ಗಳ ಪಾತ್ರ ಹಾಗೂ ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಸರ್ಜರಿಯನ್ನು ಕಡಿಮೆ ಪ್ರಾಮುಖ್ಯತೆಯ ವಿಷಯವೆಂದು ಪರಿಗಣಿಸಲಾಗಿದೆ. ಆದ್ದರಿಂದ ಪ್ಲಾಸ್ಟಿಕ್ ಸರ್ಜರಿಯ ಮಹತ್ವವನ್ನು ಇಡೀ ಜಗತ್ತಿಗೆ ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಪ್ಲಾಸ್ಟಿಕ್ ಸರ್ಜರಿಯ ಬಗೆಗಿನ ಕೆಲವೊಂದು ಮಿಥ್ಯಗಳು:

ಪ್ಲಾಸ್ಟಿಕ್ ಸರ್ಜರಿಗೆ ಸಂಬಂಧಿಸಿದಂತೆ ಜನರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಕೇವಲ ರೂಪದರ್ಶಿಗಳು ಅಥವಾ ತಾರೆಯರು ಮಾತ್ರ ಪ್ಲಾಸ್ಟಿಕ್ ಸರ್ಜರಿ ಮಾಡುತ್ತಾರೆ ಎಂದು ಕೆಲವು ಜನರು ಭಾವಿಸುತ್ತಾರೆ ನಿಜ ಹೇಳಬೇಕೆಂದರೆ ಇದು ಕಾಸ್ಮೆಟಿಕ್ ಸರ್ಜರಿಯಾಗಿದೆ. ಮತ್ತು ಅಪಘಾತ ಅಥವಾ ಕಾಯಿಲೆಯಿಂದ ಹಾನಿಗೊಳಗಾದ ಅಂಗಗಳನ್ನು ಸರಿಪಡಿಸಲು ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಲಾಗುತ್ತದೆ. ಪ್ಲಾಸ್ಟಿಕ್ ಸರ್ಜರಿಗೆ ಸಂಬಂಧಿಸಿದ ಕೆಲವು ಮಿಥ್ಯ ಹಾಗೂ ಅದರ ನಿಜವಾದ ಸತ್ಯಾಂಶ ಏನೆಂಬುದನ್ನು ತಿಳಿಯೋಣ.

ಇದನ್ನೂ ಓದಿ: ವಿಶ್ವ ಯುವ ಕೌಶಲ್ಯ ದಿನವನ್ನು ಏಕೆ ಆಚರಿಸಲಾಗುತ್ತದೆ? ಇದರ ಇತಿಹಾಸ ಮಹತ್ವ ಇಲ್ಲಿದೆ

ಪ್ಲಾಸ್ಟಿಕ್ ಸರ್ಜರಿಯಲ್ಲಿ ಪ್ಲಾಸ್ಟಿಕ್​​ನ್ನು ಬಳಸಲಾಗುತ್ತದೆ:

ಪ್ಲಾಸ್ಟಿಕ್ ಸರ್ಜರಿಯಲ್ಲಿ ಪ್ಲಾಸ್ಟಿಕ್ ಎಂಬ ಪದ ಬಳಕೆ ಇರುವ ಕಾರಣ ಈ ಚಿಕಿತ್ಸೆಯಲ್ಲಿ ಪ್ಲಾಸ್ಟಿಕ್ ಅಥವಾ ಯಾವುದೇ ಕೃತಕ ವಸ್ತುಗಳನ್ನು ಬಳಸಲಾಗುತ್ತದೆ ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ಅದು ತಪ್ಪು ಕಲ್ಪನೆ. ಪ್ಲಾಸ್ಟಿಕ್ ಸರ್ಜರಿಯಲ್ಲಿನ ಪ್ಲಾಸ್ಟಿಕ್ ಎಂಬ ಪದವು ಗ್ರೀಕ್ ಪದವಾದ ಪ್ಲಾಸ್ಟಿಕೋಸ್ ಎಂಬ ಪದದಿಂದ ಬಂದಿದೆ. ಇದರರ್ಥ ಅಚ್ಚು. ಈ ಶಸ್ತ್ರಚಿಕಿತ್ಸೆಯಲ್ಲಿ ಹಾನಿಗೊಳಗಾದ ದೇಹದ ಭಾಗಗಳಿಗೆ ಮತ್ತೆ ಸರಿಯಾದ ಆಕಾರವನ್ನು ನೀಡಲಾಗುತ್ತದೆ. ಆದ್ದರಿಂದ ಇದನ್ನು ಪ್ಲಾಸ್ಟಿಕ್ ಸರ್ಜರಿ ಎಂದು ಕರೆಯಲಾಗುತ್ತದೆ.

ಪ್ಲಾಸ್ಟಿಕ್ ಸರ್ಜರಿ ಗಾಯಮುಕ್ತ:

ಪ್ಲಾಸ್ಟಿಕ್ ಸರ್ಜರಿಯ ಸಮಯದಲ್ಲಿ ಹಾನಿಗೊಳದಾದ ದೇಹದ ಭಾಗಗಳನ್ನು ಕತ್ತರಿಸುವುದಾದಲಿ ಅಥವಾ ಅದನ್ನು ಹೊಲಿಯುವುದಾಗಲಿ ಮಾಡುವುದಿಲ್ಲ ಹಾಗೂ ಹೊಲಿಗೆಗಳ ಗುರುತು ಇರುವುದಿಲ್ಲ ಎಂದು ಜನರು ಭಾವಿಸುತ್ತಾರೆ. ಆದರೆ ಸತ್ಯವೆಂದರೆ ಶಸ್ತ್ರಚಿಕಿತ್ಸಕರು ಹಾನಿಗೊಳಗಾದ ದೇಹದ ಭಾಗವನ್ನು ಕತ್ತರಿಸಿ, ಸರ್ಜರಿ ಮಾಡಿ ಹೊಲಿಗೆ ಹಾಕುತ್ತಾರೆ ಆದರೆ ಅದು ಕಡಿಮೆ ಗೋಚರಿಸುತ್ತದೆ. ಮತ್ತು ಅಲ್ಲಿ ಉದ್ದವಾದ ಹೊಲಿಗೆಗಳನ್ನು ಬಳಸುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಒಂದು ವರ್ಷಗಳವರೆಗೆ ಇದನ್ನು ಕಾಣಬಹುದು.

ಪ್ಲಾಸ್ಟಿಕ್ ಸರ್ಜರಿಯು ಇನ್ನೊಬ್ಬ ವ್ಯಕ್ತಿಯ ರೂಪವನ್ನು ನೀಡುತ್ತದೆ:

ಪ್ಲಾಸ್ಟಿಕ್ ಸರ್ಜರಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ರೂಪವನ್ನು ಪಡೆಯುತ್ತಾನೆ ಎಂದು ಚಲನಚಿತ್ರಗಳಲ್ಲಿ ಹೆಚ್ಚಾಗಿ ತೋರಿಸಲಾಗುತ್ತದೆ, ಆದರೆ ಸತ್ಯವೆಂದರೆ ಅಲ್ಲಿ ನಿಮ್ಮ ರೂಪವನ್ನು ಬದಲಿಸಲಾಗುವುದಿಲ್ಲ.

ಸೌಂದರ್ಯವನ್ನು ಹೆಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಲಾಗುತ್ತದೆ:

ನೀವು ಭಾವಿಸಿದಂತೆ ಇದು ನಿಜವಲ್ಲ. ಹೆಚ್ಚಿನ ಸಂದಭ‍‍್ದದಲ್ಲಿ ಹಾನಿಗೊಳಗಾದ ದೇಹದ ಭಾಗಗಳು ಅಥವಾ ಅಪಘಾತದಲ್ಲಿ ವಿರೂಪಗೊಂಡಂತಹ ಮುಖದಂತಹದ ಭಾಗಗಳನ್ನು ಸರಿಪಡಿಸಲು ಅಗತ್ಯಕ್ಕೆ ತಕ್ಕ ಚಿಕಿತ್ಸೆ ನೀಡಲಾಗುತ್ತದೆ.

ಪ್ಲಾಸ್ಟಿಕ್ ಸರ್ಜರಿ ಮತ್ತು ಕಾಸ್ಮೆಟಿಕ್ ಸರ್ಜರಿ ಎರಡು ಒಂದೇ ಅಲ್ಲ:

ಹೆಚ್ಚಿನ ಜನರು ಪ್ಲಾಸ್ಟಿಕ್ ಸರ್ಜರಿ ಮತ್ತು ಕಾಸ್ಮೆಟಿಕ್ ಸರ್ಜರಿ ಎರಡೂ ಒಂದೇ ಎಂದು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ. ಪ್ಲಾಸ್ಟಿಕ್ ಸರ್ಜರಿಯು ಸುಟ್ಟ ಗಾಯ, ಸೀಳು ತುಟಿ ಅಥವಾ ಕ್ಯಾನ್ಸರ್ ನಂತಹ ಕಾಯಿಲೆಗಳಿಂದ ದೇಹದಲ್ಲಿ ಉಂಟಾಗವ ವಿಕಾರಗಳನ್ನು ಸರಿಪಡಿಸುವ ಚಿಕಿತ್ಸೆಯಾಗಿದೆ. ಆದರೆ ಕಾಸ್ಮೆಟಿಕ್ ಸರ್ಜರಿಯು ಪ್ಲಾಸ್ಟಿಕ್ ಸರ್ಜರಿಯ ಒಂದು ಭಾಗವಾಗಿದೆ. ಇದು ಮುಖ್ಯವಾಗಿ ಮೂಗು ಅಥವಾ ತುಟಿಗಳ ತಿದ್ದುಪಡಿಯ ಮೇಲೆ ಕೇಂದ್ರೀಕರಿಸುತ್ತದೆ. ಮತ್ತು ಮುಖದ ಸೌಂದರ್ಯ ಮತ್ತು ದೇಹದ ಆಕಾರವನ್ನು ಹೆಚ್ಚಿಸಲು ಕಾಸ್ಮೆಟಿಕ್ ಸರ್ಜರಿಯನ್ನು ಮಾಡಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 4:48 pm, Sat, 15 July 23

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು