Holiday Destination: ಮಳೆಗಾಲದಲ್ಲಿ ಗೋವಾದ ಈ 7 ಸುಂದರ ಕಡಲತೀರಗಳಿಗೆ ಭೇಟಿ ನೀಡಿ

ಸಾಮಾನ್ಯವಾಗಿ ಗೋವಾ ಎಂದಾಕ್ಷಣ ಬೇಸಿಗೆಯಲ್ಲಿ ಪ್ರಯಾಣ ಬೆಳೆಸಲು ಇಷ್ಟ ಪಡುತ್ತಾರೆ. ಆದರೆ ಮಳೆಗಾಲದಲ್ಲಿ ಗೋವಾ ನೋಡುವುದೇ ಒಂದು ಚಂದ. ನಿಮ್ಮ ಮುಂದಿನ ರಜಾದಿನಗಳಲ್ಲಿ ಭೇಟಿ ನೀಡಲು ಗೋವಾದ ಟಾಪ್ ಬೀಚ್‌ಗಳು ಇಲ್ಲಿವೆ.

Holiday Destination: ಮಳೆಗಾಲದಲ್ಲಿ ಗೋವಾದ ಈ 7 ಸುಂದರ ಕಡಲತೀರಗಳಿಗೆ ಭೇಟಿ ನೀಡಿ
Beaches In Goa
Follow us
ಅಕ್ಷತಾ ವರ್ಕಾಡಿ
|

Updated on: Jul 15, 2023 | 2:25 PM

ಮಾನ್ಸೂನ್ ಪ್ರವಾಸಿಗರಿಗಂತೂ ಸಖತ್​​​ ಫೇವರೇಟ್​​​. ಮಳೆಯೊಂದಿಗೆ ಸುಂದರ ಹಚ್ಚಹಸಿರಿನೊಂದಿಗೆ ಕಾಲ ಕಳೆಯುವುದಂತೂ ಅದ್ಭುತ ಅನುಭವ. ಆದ್ದರಿಂದ ಈ ಮಳೆಗಾಲದಲ್ಲಿ ನೀವು ಪ್ರವಾಸ ಕೈಗೊಳ್ಳಲು ಬಯಸಿದರೆ ಗೋವಾ ಉತ್ತಮ ಆಯ್ಕೆಯ ತಾಣವಾಗಿದೆ. ಗೋವಾವು ಉತ್ತರದಿಂದ ದಕ್ಷಿಣಕ್ಕೆ ಸುಂದರವಾದ ಕಡಲತೀರಗಳಿಂದ ಆವೃತವಾಗಿದೆ. ಬಿಳಿ ಮರಳಿನ ಕಡಲತೀರದಲ್ಲಿ ಸುಂದ ಸಮಯ ಕಳೆಯಬಹುದು. ಸಾಮಾನ್ಯವಾಗಿ ಗೋವಾ ಎಂದಾಕ್ಷಣ ಬೇಸಿಗೆಯಲ್ಲಿ ಪ್ರಯಾಣ ಬೆಳೆಸಲು ಇಷ್ಟ ಪಡುತ್ತಾರೆ. ಆದರೆ ಮಳೆಗಾಲದಲ್ಲಿ ಗೋವಾ ನೋಡುವುದೇ ಒಂದು ಚಂದ.

ನಿಮ್ಮ ಮುಂದಿನ ರಜಾದಿನಗಳಲ್ಲಿ ಭೇಟಿ ನೀಡಲು ಗೋವಾದ ಟಾಪ್ ಬೀಚ್‌ಗಳು:

1. ಮೊರ್ಜಿಮ್:

ಈ ಸುಂದರವಾದ ಕಡಲತೀರವು ರಾಜ್ಯದ ಉತ್ತರದಲ್ಲಿದೆ ಮತ್ತು ಬಿಳಿ ಮರಳಿನ ದೊಡ್ಡ ವಿಸ್ತಾರವನ್ನು ಹೊಂದಿದೆ. ಈ ಕಡಲತೀರವು ಗೋವಾದ ಇತರ ಬೀಚ್‌ಗಳಂತೆ ಹಲವಾರು ಬೀಚ್ ಬಾರ್‌ಗಳನ್ನು ಹೊಂದಿದೆ. ಆದರೆ ಈ ಕಡಲತೀರವು ಇತರ ಗೋವಾದ ಕಡಲತೀರಗಳಿಗಿಂತ ಕಡಿಮೆ ಜನಸಂದಣಿಯನ್ನು ಹೊಂದಿದ್ದು, ಇದು ಆಲಿವ್ ರಿಡ್ಲಿ ಸಮುದ್ರ ಆಮೆಗಳ ಸಂತಾನೋತ್ಪತ್ತಿಯ ಸ್ಥಳವಾಗಿದೆ.

2. ಅರಂಬೋಲ್:

ನೀವಿಲ್ಲಿ ಸಂಗೀತ ಮತ್ತು ರುಚಿಕರವಾದ ಆಹಾರವನ್ನು ಆನಂದಿಸಬಹುದು. ಹತ್ತಿರದಲ್ಲಿರುವ ದಟ್ಟವಾದ ಅರಣ್ಯದಿಂದಾಗಿ ಇದು ಗೋವಾದ ಹಸಿರು ಬೀಚ್‌ಗಳಲ್ಲಿ ಒಂದಾಗಿದೆ.

3. ಸಿಂಕ್ವೆರಿಮ್:

ತಾಳೆ ಮರಗಳು, ಸುಂದರವಾದ ಸ್ಪಷ್ಟವಾದ ನೀರು ಮತ್ತು ಮರಳನ್ನು ಹೊಡೆಯುವ ಅಲೆಗಳ ಮಾಂತ್ರಿಕ ಶಬ್ದವು ನಿಮ್ಮನ್ನು ಸಂಪೂರ್ಣವಾಗಿ ಬೇರೆ ಲೋಕಕ್ಕೆ ಕೊಂಡೊಯ್ಯುತ್ತದೆ.

ಇದನ್ನೂ ಓದಿ: ಇನ್ನು ಮುಂದೆ ಸಿಂಗಲ್​​ ಎಂಬ ಚಿಂತೆ ಬಿಟ್ಟು ಬಿಡಿ; ಈ ರಿಂಗ್​​​ ಧರಿಸಿದರೆ ನೀವು ಮಿಂಗಲ್​​ ಆಗುವುದಂತೂ ಫಿಕ್ಸ್​​

4. ಬಾಗಾ:

ಗೋವಾದ ಅತ್ಯಂತ ಜನಪ್ರಿಯ ಮತ್ತು ಜನನಿಬಿಡ ಬೀಚ್​​. ರುಚಿಕರವಾದ ಸಮುದ್ರಾಹಾರ, ಜಲ ಕ್ರೀಡೆಗಳು ಮತ್ತು ಉತ್ತಮ ಸಂಗೀತವನ್ನು ನೀವಿಲ್ಲಿ ಆನಂದಿಸಬಹುದು.

5. ಪಲೋಲೆಮ್:

ಈ ಕಡಲತೀರವು ಗೋವಾದ ದಕ್ಷಿಣ ಭಾಗದಲ್ಲಿರುವ ಬೀಚ್ ಹಳ್ಳಿಯ ಪಕ್ಕದಲ್ಲಿದೆ. ಪ್ರಶಾಂತವಾದ ನೀರು, ಬಿದಿರಿನ ಗುಡಿಸಲುಗಳು ವಿದೇಶಿ ಪ್ರವಾಸಿಗರನ್ನು ಹೆಚ್ಚಿ ಆಕರ್ಷಿತರಾಗುವಂತೆ ಮಾಡುತ್ತದೆ.

6. ಬೆನೌಲಿಮ್:

ಈ ಕಡಲತೀರದಲ್ಲಿ ನೀವು ಸೂರ್ಯಾಸ್ತಮಾನದ ಪರಿಪೂರ್ಣ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಪಕ್ಕದಲ್ಲಿರುವ ಸೇಂಟ್ ಜಾನ್ಸ್ ಚರ್ಚ್ ಕೂಡ ಈ ಕಡಲತೀರದ ಸಮೀಪವಿರುವ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.

7. ವರ್ಕಾ:

ಈ ಕಡಲತೀರವು ಗೋವಾದ ದಕ್ಷಿಣ ಭಾಗದಲ್ಲಿದೆ. ಇಲ್ಲಿ ಕಡಿಮೆ ಜನಸಂದಣಿಯನ್ನು ಹೊಂದಿದ್ದು, ಏಕಾಂತವನ್ನು ಬಯಸುವವರಿಗೆ ಉತ್ತಮ ತಾಣವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್